»   » 'ಸೂಪರ್ ಜೋಡಿ' ಗ್ರ್ಯಾಂಡ್ ಫಿನಾಲೆ ಇಂದು! ಮಿಸ್ ಮಾಡ್ಬೇಡಿ

'ಸೂಪರ್ ಜೋಡಿ' ಗ್ರ್ಯಾಂಡ್ ಫಿನಾಲೆ ಇಂದು! ಮಿಸ್ ಮಾಡ್ಬೇಡಿ

Posted by:
Subscribe to Filmibeat Kannada

ಸುವರ್ಣ ವಾಹಿನಿಯಲ್ಲಿ ಕಳೆದ ವರ್ಷ ಪ್ರಾರಂಭವಾದ 'ಸೂಪರ್ ಜೋಡಿ' ಈಗ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದೆ. ಆರಂಭದಿಂದಲೂ ವಾರಾಂತ್ಯದಲ್ಲಿ ಒಂದೊಂದು ಜೋಡಿ ಎಲಿಮಿನೇಟ್ ಆಗುತ್ತಿದ್ದು ಈಗ ನಾಲ್ಕು ಜೋಡಿಗಳು ಮಾತ್ರ ಫೈನಲ್ ಪ್ರವೇಶಿಸಿವೆ.

ವಿನಯ್ ಗೌಡ ಮತ್ತು ಅಕ್ಷತಾ, ಮಧುಸಾಗರ್ ಮತ್ತು ಸುಚಿತಾ, ರಜತ್ ಮತ್ತು ಅಕ್ಷಿತಾ, ಆರ್ಯನ್ ಮತ್ತು ಇಳಾ ವಿಟ್ಲಾ ಜೋಡಿ ಫೈನಲ್ ನಲ್ಲಿ ಸೆಣಸಾಡಲಿದ್ದಾರೆ. ['ಸೂಪರ್ ಜೋಡಿ'ಯಲ್ಲಿ ಅಕುಲ್ ಬಾಲಾಜಿ ಹಾಡಿನ ಮೋಡಿ]

suvarna-channel-s-popular-show-super-jodi-grand-finale

ನಿರೂಪಕ ಅಕುಲ್ ಬಾಲಾಜಿ ದಂಪತಿ ರೋಮ್ಯಾಂಟಿಕ್ ನೃತ್ಯ ಮಾಡಿರುವುದು ಗ್ರ್ಯಾಂಡ್ ಫಿನಾಲೆ ಸಂಚಿಕೆ ವಿಶೇಷ.

ವಿನ್ನಿಂಗ್ ಕಪಲ್ ಹೊರತು ಪಡಿಸಿ 'ಸ್ಟ್ರಾಂಗೆಸ್ಟ್ ಕಪಲ್', 'ಫೇರ್ ಪ್ಲೇ ಕಪಲ್', 'ಎಂಟರ್ ಟೇನಿಂಗ್ ಕಪಲ್' ಮತ್ತು 'ಕಾಂಪಿಟೇಬಲ್ ಕಪನ್' ಎಂಬ ವಿಶೇಷ ಅವಾರ್ಡ್ ಗಳನ್ನೂ ಗ್ರ್ಯಾಂಡ್ ಫಿನಾಲೆಯಲ್ಲಿ ನೀಡಲಾಗುವುದು. [ಸುವರ್ಣ ವಾಹಿನಿಯಲ್ಲಿ 10 ಸೆಲೆಬ್ರಿಟಿ ದಂಪತಿಗಳ 'ಸೂಪರ್ ಜೋಡಿ']

ಹಲವು ವಿಶೇಷತೆಗಳು ಇರುವ 'ಸೂಪರ್ ಜೋಡಿ' ಗ್ರ್ಯಾಂಡ್ ಫಿನಾಲೆ ಸಂಚಿಕೆ ಇಂದು (ಶುಕ್ರವಾರ) ರಾತ್ರಿ 7.30ಕ್ಕೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

English summary
Suvarna Channel's popular show 'Super Jodi' grand finale episode will be aired on Jan 22nd at 7.30pm.
Please Wait while comments are loading...

Kannada Photos

Go to : More Photos