»   » 'ಬಿಗ್ ಬಾಸ್ ಸೀಸನ್ 2' ಅಧಿಕೃತ ಲಾಂಛನ ಬಿಡುಗಡೆ

'ಬಿಗ್ ಬಾಸ್ ಸೀಸನ್ 2' ಅಧಿಕೃತ ಲಾಂಛನ ಬಿಡುಗಡೆ

Posted by:
Subscribe to Filmibeat Kannada

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಬಿಗ್ ಬಾಸ್ ಸೀಸನ್ 2' ತನ್ನ ಅಧಿಕೃತ ಲಾಂಛನವನ್ನು ಬಿಡುಗಡೆ ಮಾಡಿದ್ದು, ಇದು ಈ ವರ್ಷದ ಬೃಹತ್ ರಿಯಾಲಿಟಿ ಶೋ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ಬಿಗ್ ಬಾಸ್ ಮನೆ ಸೇರಲಿರುವವರ ಹೆಸರುಗಳ ಕುರಿತು ಈಗಾಗಲೇ ಬಹು ಕುತೂಹಲವನ್ನು ಕೆರಳಿಸಿರುವ ಈ ಆವೃತ್ತಿಯು ಸಾಕಷ್ಟು ಪ್ರಥಮಗಳಿಗೆ ಮುನ್ನುಡಿ ಬರೆಯಲಿದೆ.

ಮನರಂಜನೆಯ ಮಹಾಪೂರವನ್ನೇ ಹರಿಸಲಿರುವ 'ಬಿಗ್ ಬಾಸ್ ಸೀಸನ್ 2' ಕಾರ್ಯಕ್ರಮ ಪೂರ್ತಿ ವೀಕ್ಷಕರನ್ನು ತನ್ನತ್ತ ಸೆಳೆದುಕೊಳ್ಳಲಿದೆ. ದಕ್ಷಿಣ ಭಾರತದ ಸೂಪರ್ ಸ್ಟಾರ್ 'ಕಿಚ್ಚ ಸುದೀಪ್' ಈ ಕಾರ್ಯಕ್ರಮದ ನಿರೂಪಕರಾಗಿದ್ದು ತಮ್ಮ ಆಕರ್ಷಕ ಶೈಲಿ ಹಾಗೂ ತಮ್ಮ ಪ್ರಭಾವಿ ವ್ಯಕ್ತಿತ್ವದಿಂದ ಮನರಂಜನೆಗೆ ಮತ್ತೊಂದು ಆಯಾಮವನ್ನು ಸೃಷ್ಟಿಸಲಿದ್ದಾರೆ. ['ಬಿಗ್ ಬಾಸ್ 2' ಫಸ್ಟ್ ಲುಕ್ ಔಟ್, ಸುದೀಪ್ ರಾಕ್ಸ್]

Bigg Boss logo unveils

'ಬಿಗ್ ಬಾಸ್' ಕಾರ್ಯಕ್ರಮದ 2ನೇ ಆವೃತ್ತಿಯು ಕರ್ನಾಟಕದ ಪ್ರಮುಖ ಮನೋರಂಜನಾ ವಾಹಿನಿ ಸುವರ್ಣದಲ್ಲಿ ಪ್ರಸಾರವಾಗಲಿದ್ದು. ಮನೋರಂಜನಾ ಮೌಲ್ಯಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದರ ಮೂಲಕ ಮನರಂಜನೆಯ ಮಹಾಪೂರವನ್ನೇ ಹರಿಸುವ ಮತ್ತಷ್ಟು ಭರವಸೆಗಳನ್ನು ಪ್ರೇಕ್ಷಕನ ಮುಂದಿಡುತ್ತಿದೆ.

ಈ ಆವೃತ್ತಿಯಲ್ಲಿ ಬಿಗ್ ಬಾಸ್ ಮನೆ ಸೇರಲಿರುವವರ ಹೆಸರುಗಳ ಪಟ್ಟಿ ಅನಾವರಣಗೊಳ್ಳಬೇಕಿದೆ. ಆದರೂ ಈ ಕುರಿತು ಊಹಾಪೋಹಗಳ ವ್ಯಾಪಕ ಅಲೆ ಸೃಷ್ಟಿಯಾಗಿರುವುದು ಪ್ರೇಕ್ಷಕರಲ್ಲಿ ಮತ್ತಷ್ಟು ಆಸಕ್ತಿಯನ್ನು ಹುಟ್ಟಿಸಿದೆ. (ಒನ್ಇಂಡಿಯಾ ಕನ್ನಡ)

English summary
Bigg Boss season 2, which is to be aired on Suvarna TV, has finally unveiled it's official logo. The re-designed will have a swanky look thus bringing in a bigger and better show this year ! This season the Bigg Boss fans are to see interesting twists and turns on the most awaited reality show in Kannada which promises to be nothing less than a sizzling bouquet of entertainment that will have everyone glued to the show.
Please Wait while comments are loading...

Kannada Photos

Go to : More Photos