twitter
    For Quick Alerts
    ALLOW NOTIFICATIONS  
    For Daily Alerts

    ಥಟ್ ಅಂತ ಹೇಳಿ ರಸಪ್ರಶ್ನೆ ಶೋಗೆ ಮತ್ತೊಂದು ಗರಿ

    By Rajendra
    |

    Quiz Master Dr Naa Someshwar
    ಈಗಾಗಲೆ ಲಿಮ್ಕಾ ಬುಕ್ ಆಫ್ ರೆಕರ್ಡ್ಸ್‌ನಲ್ಲಿ ಸ್ಥಾನ ಪಡೆದಿರುವ ದೂರದರ್ಶನ ಚಂದನ ವಾಹಿನಿಯ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ 'ಥಟ್ ಅಂತ ಹೇಳಿ' ಮತ್ತೊಂದು ದಾಖಲೆಗೆ ಪಾತ್ರವಾಗಿದೆ. ಇದುವರೆಗೂ 2000 ಸಂಚಿಕೆಗಳನ್ನು ಪೂರೈಸುವ ಮೂಲಕ ಭಾರತದ ದೂರದರ್ಶನದ ಇತಿಹಾಸದಲ್ಲೇ ಒಂದು ಹೊಸ ದಾಖಲೆಯನ್ನು ಸೃಷ್ಟಿಸಿದೆ.

    ಈ ಸವಿನೆನಪಿಗಾಗಿ ಬೆಂಗಳೂರು ದೂರದರ್ಶನ ಕೇಂದ್ರ, ಆಕಾಶವಾಣಿ ಮೈಸೂರು, ಮೈಸೂರಿನ ಅವದೂತ ದತ್ತಪೀಠದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ಕಾರ್ಯಕ್ರಮ ಜೂ.17, 2012ರಂದು ಮೈಸೂರಿನ ಸಚ್ಚಿದಾನಂದ ಗಣಪತಿ ಆಶ್ರಮ, ಮೈಸೂರಿನಲ್ಲಿ ನಡೆಯಲಿದೆ. ಸಮಯ ಬೆಳಗ್ಗೆ 10 ಗಂಟೆಗೆ.

    ಈ ಸಂದರ್ಭದಲ್ಲಿ 'ಥಟ್ ಅಂತ ಹೇಳಿ' ಕಾರ್ಯಕ್ರಮವನ್ನು ಅತ್ಯಂತ ಶಿಸ್ತುಬದ್ಧವಾಗಿ ನಡೆಸುಕೊಂಡು ಬರುತ್ತಿರುವ ಡಾ.ನಾ. ಸೋಮೇಶ್ವರ ಹಾಗೂ ಅವರ ತಂಡವನ್ನು ಗೌರವಿಸಲಾಗುತ್ತದೆ. ಈ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ನಾಡೋಜ ದೇ.ಜವರೇಗೌಡ ಉದ್ಘಾಟಿಸಲಿದ್ದಾರೆ.

    ಈ ಉತ್ಕೃಷ್ಟ ಕಾರ್ಯಕ್ರಮದ ವಿಶೇಷತೆಯೆಂದರೆ, ಕನ್ನಡನಾಡಿನ ಒಳ-ಹೊರೆಗುಗಳ, ಸುತ್ತಮುತ್ತಲಿನ ಜನಪದ ಪರಂಪರೆಯನ್ನು ಚೆನ್ನಾಗಿ ಉಳಿಸಿ-ಬೆಳಸುವ ನಿಟ್ಟಿನಲ್ಲಿ ಕನ್ನಡಿಗನೊಬ್ಬ ಹೇಗೆ ನಿರ್ವಹಿಸಬಹುದೆನ್ನುವುದನ್ನು ಎಲ್ಲರಿಗೂ ಮನದಟ್ಟುಮಾಡಿ ತೋರಿಸಿಕೊಟ್ಟಿದ್ದಾರೆ.

    ಈಗಾಗಲೇ ಹಿಂದಿ, ಇಂಗ್ಲೀಷ್, ಮುಂತಾದ ಭಾಷೆಗಳಲ್ಲಿ ರಸಪ್ರಶ್ನೆ ಕಾರ್ಯಕ್ರಮಗಳು ಅದೆಷ್ಟೋ ಬಂದು ಹೋಗಿವೆ. ಆದರೆ ಕನ್ನಡದಲ್ಲಿ ಅದು ನಿರಂತರವಾಗಿ ಸಾಗಿದೆ ಎಂಬ ಹಿಗ್ಗಿದೆ. ಅದನ್ನಾದರೂ ಡಾ. ನಾ. ಸೋಮೇಶ್ವರ ಎಷ್ಟೊಂದು ಅಚ್ಚುಕಟ್ಟಾಗಿ ಹುಟ್ಟುಹಾಕಿದ್ದಾರೆ. ಇದನ್ನು ಕನ್ನಡದ ಪ್ರಥಮ ರಸಪ್ರಶ್ನೆ ಕಾರ್ಯಕ್ರಮ ಎಂದು ಹೇಳಬಹುದು.

    ಕಾರ್ಯಕ್ರಮಕ್ಕೆ ಆಗಮಿಸುವ ಸಭಿಕರ ಹೆಸರುಗಳನ್ನು ಚೀಟಿಯಲ್ಲಿ ಬರೆದು ಮುಂದಿನ ರಸಪ್ರಶ್ನೆ ಕಾರ್ಯಕ್ರಮಕ್ಕೆ ಲಕ್ಕಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ. 'ಥಟ್ ಅಂತ ಹೇಳಿ' ಹಾಟ್ ಸೀಟ್‌ನಲ್ಲಿ ಕೂರುವ ಚಾನ್ಸ್ ನಿಮಗೂ ಸಿಗಬಹುದು.

    ಸೋಮವಾರದಿಂದ ಶುಕ್ರವಾರದವರೆಗೆ 'ಥಟ್ ಅಂತ ಹೇಳಿ' ಕಾರ್ಯಕ್ರಮ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. ರಾತ್ರಿ 10.30ರಿಂದ 11ರವರೆಗೆ ಪ್ರಸಾರವಾಗುವ ಈ ಕಾರ್ಯಕ್ರಮ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಈ ವಿಭಿನ್ನ ರಸಪ್ರಶ್ನೆ ಕಾರ್ಯಕ್ರಮ ಮೆಗಾ ಧಾರಾವಾಹಿಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ.

    ರಾತ್ರಿ ಕಾರ್ಯಕ್ರಮವನ್ನು ನೀವು ಮಿಸ್ ಮಾಡಿಕೊಂಡರೆ ಮಾರನೆ ದಿನ ಬೆಳಗ್ಗೆ 11ಕ್ಕೆ ಇದೇ ಕಾರ್ಯಕ್ರಮ ಮರುಪ್ರಸಾರವಾಗುತ್ತದೆ. ಮರುಪ್ರಸಾರದಲ್ಲಿ ಈ ಕಾರ್ಯಕ್ರಮವನ್ನು ನೋಡಿ ಆನಂದಿಸುವವರಿಗೂ ಕೊರತೆ ಇಲ್ಲ. ಒಟ್ಟಿನಲ್ಲಿ ಅಬಾಲವೃದ್ಧರಾಗಿ ಈ ಕಾರ್ಯಕ್ರಮ ಆಕರ್ಷಿಸುತ್ತಿದೆ.

    ಅಂದಹಾಗೆ ಥಟ್ ಅಂತ ಹೇಳಿ ಕಾರ್ಯಕ್ರಮ ಆರಂಭವಾಗಿದ್ದು ಜನವರಿ 4, 2002ರಂದು. ಕಾರ್ಯಕ್ರಮ ಇಷ್ಟೊಂದು ಅಚ್ಚುಕಟ್ಟಾಗಿ ಮೂಡಿಬರಲು ನಿಲಯದ ನಿರ್ದೇಶಕ ಮಹೇಶ್ ಜೋಶಿ ಅವರ ಪಾತ್ರ ದೊಡ್ಡದು. ಹಾಗೆಯೇ ವೃತ್ತಿಯಲ್ಲಿ ವೈದ್ಯರೂ ಪ್ರವೃತ್ತಿಯಲ್ಲಿ ಬರಹಗಾರರೂ ಆದ ಡಾ.ನಾ.ಸೋಮೇಶ್ವರ್ ಅವರ ಕಳಕಳಿ ಸಹ ಕಾರ್ಯಕ್ರಮ ಸೊಗಸಾಗಿ ಮೂಡಿಬರಲು ಕಾರಣವಾಗಿದೆ.

    ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿದ್ದ ಕೌನ್ ಬನೇಗ ಕರೋಡ್ ಪತಿ ಕಾರ್ಯಕ್ರಮದಂತೆ ಆರ್ಥಿಕ ಬಲವಿಲ್ಲದಿದ್ದರೂ ಥಟ್ ಅಂತ ಹೇಳಿ ಕಾರ್ಯಕ್ರಮ ಜನಪ್ರಿಯವಾಗಿರುವುದು ಹಲವರ ಹುಬ್ಬೇರಿಸಿದೆ. ಕಾರ್ಯಕ್ರಮದಲ್ಲಿ ನೀಡುವ ಉಪಯುಕ್ತ ಮಾಹಿತಿಗಳು, ಕನ್ನಡ ಪುಸ್ತಕಗಳು ಆಸಕ್ತರ ಜ್ಞಾನದಾಹದನ್ನು ತಣಿಸುತ್ತಿವೆ. ಮನೆಮಂದಿಯಲ್ಲಾ ಕುಳಿತು ನೋಡಬಹುದಾದ ಕಾರ್ಯಕ್ರಮ ಇದಾಗಿದೆ. (ಏಜೆನ್ಸೀಸ್)

    English summary
    DD Chandana TV channel's favourite quiz programme, after getting LIMCA book of records, is crossing the 2000th episode mile stone, creating a new record in the annals of Indian Television Quiz Programme.
    Tuesday, June 26, 2012, 12:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X