»   » 'ಸೂಪರ್ ಜೋಡಿ' ಯಲ್ಲಿ 'ತ್ರಿವೇಣಿಸಂಗಮ': ಟ್ವಿಸ್ಟ್ ಜೊತೆ ಸಖತ್ ಕಾಮಿಡಿ

'ಸೂಪರ್ ಜೋಡಿ' ಯಲ್ಲಿ 'ತ್ರಿವೇಣಿಸಂಗಮ': ಟ್ವಿಸ್ಟ್ ಜೊತೆ ಸಖತ್ ಕಾಮಿಡಿ

Posted by:
Subscribe to Filmibeat Kannada

ಸ್ಟಾರ್ ಸುವರ್ಣ ವಾಹಿನಿಯ ಯಶಸ್ವಿ ರಿಯಾಲಿಟಿ ಶೋ 'ಸೂಪರ್ ಜೋಡಿ-2' ನ, ಇದೇ ಶನಿವಾರ (ಫೆ.4) ಮತ್ತು ಭಾನುವಾರ (ಫೆ.5) ರಾತ್ರಿ 8 ಕ್ಕೆ ಪ್ರಸಾರವಾಗಲಿರುವ ಸಂಚಿಕೆಯಲ್ಲಿ 'ತ್ರಿವೇಣಿಸಂಗಮ' ಧಾರವಾಹಿಯ ತಂಡದವರು ಸೇರಲಿದ್ದು, ಸಖತ್ ಎಂಟರ್ ಟೈನ್‌ ಮೆಂಟ್ ಆಗಿರಲಿದೆಯಂತೆ.[ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಸೂಪರ್ ಜೋಡಿ-2' ರಿಯಾಲಿಟಿ ಶೋ]

'ಬರೀ ದಿಲ್ ಇದ್ದರೆ ಸಾಲದು ಧಮ್ ಬೇಕು' ಅನ್ನೋ ಹಾಗೆ ಈ ವಾರದ ಸಂಚಿಕೆಯ ಸೂಪರ್ ಜೋಡಿ ಅಖಾಡ ಸಿದ್ದವಾಗಿದ್ದು, ಹಲವು ವಿಶೇ‍ಷತೆಗಳಿಂದ ಕೂಡಿದೆಯಂತೆ. ಹಾಗಿದ್ರೆ ಬನ್ನಿ, ಈ ವಾರದ ಸೂಪರ್ ಜೋಡಿ ಸಂಚಿಕೆಯ ಸ್ಪೆಷಾಲಿಟಿ ಏನು ತಿಳಿಯೋಣ.

ಬೈಕ್ ರೇಸ್ ಸವಾಲ್

ಬೈಕ್ ರೇಸ್ ಸವಾಲ್

'ಸೂಪರ್ ಜೋಡಿ-2' ನ ಈ ವಾರದ ಸಂಚಿಕೆಯಲ್ಲಿ ಸೂಪರ್ ಜೋಡಿಗಳು ಬೈಕ್ ರೇಸ್ ಸವಾಲ್ ಅನ್ನು ಹೇಗೆ ನಿಭಾಯಿಸಿದರು ಎಂಬ ಕುತೂಹಲಕಾರಿ ಟ್ವಿಸ್ಟ್‌ ಜೊತೆಗೆ, ಪಕ್ಕಾ ಎಂಟರ್ ಟೈನ್ ಮೆಂಟ್ ಇದೆಯಂತೆ.[ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಸೂಪರ್ ಜೋಡಿ-2' ರಿಯಾಲಿಟಿ ಶೋ]

ಮದುವೆ ಪರೀಕ್ಷೆ ಟಾಸ್ಕ್

ಮದುವೆ ಪರೀಕ್ಷೆ ಟಾಸ್ಕ್

ಸೂಪರ್ ಜೋಡಿಗಳಿಗೆ ಮದುವೆಯ ಸಾಂಪ್ರದಾಯಿಕ ಶಾಸ್ತ್ರ ಪದ್ಧತಿ, ಮಹತ್ವಗಳ ಬಗೆಗಿನ ವಿಶೇಷ ಟಾಸ್ಕ್ ಅನ್ನು ನೀಡಲಾಗಿದ್ದು. ಈ ವಿಶೇಷ ಟಾಸ್ಕ್ ಅನ್ನು ಸೂಪರ್ ಜೋಡಿಗಳು ಸೂಪರ್ ಆಗಿ ಮಾಡಿದ್ರಾ? ಎಂಬ ಪ್ರಶ್ನೆಯ ಉತ್ತರಕ್ಕಾಗಿ ಈ ವಾರದ ಸಂಚಿಕೆ ನೋಡಿ.

ಸೂಪರ್ ಜೋಡಿಯಲ್ಲಿ ಮದುವೆಯ ವಾತಾವರಣ

ಸೂಪರ್ ಜೋಡಿಯಲ್ಲಿ ಮದುವೆಯ ವಾತಾವರಣ

ಸೂಪರ್ ಜೋಡಿ ಸೀಸನ್ 2 ನಲ್ಲಿ ನೀಡಲಾಗಿದ್ದ ಮದುವೆ ಟಾಸ್ಕ್ ಸಂದರ್ಭದಲ್ಲಿ 'ತ್ರಿವೇಣಿಸಂಗಮ' ಧಾರಾವಾಹಿಯ ತಂಡದ ಸ್ಯಾಂಡಲ್ ವುಡ್ ನಟಿ ಅನುಪ್ರಭಾಕರ್ ಮುಖರ್ಜಿ ಮತ್ತು ರಾಜೇಶ್ ನಟರಂಗ್ ಆಗಮಿಸಿ, ವಿಶೇಷ ಹಾಡಿಗೆ ಹೆಜ್ಜೆಹಾಕಿದ್ದಾರೆ.

ಎಲಿಮಿನೇಷನ್

ಎಲಿಮಿನೇಷನ್

ಮೇಲಿನ ಎಲ್ಲಾ ವಿಶೇಷತೆಗಳ ಜೊತೆಗೆ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿರುವ ವಿಶೇಷ ಸಂಚಿಕೆಯಲ್ಲಿ ಒಂದು ಸೂಪರ್ ಜೋಡಿಯ ಎಲಿಮಿನೇಷನ್ ಸಹ ಇದೆಯಂತೆ. ಈ ಡಬಲ್ ಧಮಾಕ, ಡಬಲ್ ಎಂಟರ್ ಟೈನ್ ಮೆಂಟ್ ಅನ್ನು ಸ್ಟಾರ್ ಸುವರ್ಣ ವಾಹಿನಿಯಲ್ಲಿ ವೀಕ್ಷಿಸಬಹುದು.

English summary
Star Suvarna's 'Super Jodi 2' Reality Show Special Episode have been brodcasting this saturday (Feb.4) and sunday(Feb.5)
Please Wait while comments are loading...

Kannada Photos

Go to : More Photos