twitter
    For Quick Alerts
    ALLOW NOTIFICATIONS  
    For Daily Alerts

    ಅತಿಯಾಗಿ ಟಿವಿ ನೋಡಿದರೆ ಕಥೆ ಅಷ್ಟೇ ಕಣಣ್ಣೋ

    By ರವಿಕಿಶೋರ್
    |

    TV addiction boosts diabetes risk
    ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತಿಗೆ ಇಂಬು ನೀಡುವಂತಹ ಸಂಶೋಧನೆಯೊಂದನ್ನು ಆಸ್ಟ್ರೇಲಿಯಾದ ವಿಜ್ಞಾನಿಗಳು ಮಾಡಿದ್ದಾರೆ. ಅತಿಯಾಗಿ ಟಿವಿ ನೋಡಿದರೆ ಕಥೆ ಅಷ್ಟೇ ಎಂದು ವಯೋವೃದ್ಧರನ್ನು ಎಚ್ಚರಿಸಿದ್ದಾರೆ ವಿಜ್ಞಾನಿಗಳು.

    ದಿನಕ್ಕೆ ನಾಲ್ಕು ಗಂಟೆಗಳಿಗೂ ಅಧಿಕ ಸಮಯ ಟಿವಿ ನೋಡುವುದರಿಂದ ವೃದ್ಧರಲ್ಲಿ ಟೈಪ್ 2 ಮಧುಮೇಹ ಹೆಚ್ಚಾಗುತ್ತಿದೆ ಎಂದಿದ್ದಾರೆ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು.

    ಒಬ್ಬ ವ್ಯಕ್ತಿ ಟಿವಿ ನೋಡುತ್ತಾ ಕಳೆಯುವ ಪ್ರತಿಗಂಟೆಯಲ್ಲೂ ಆತನ ಚಯಾಪಚಯ ಕ್ರಿಯೆಗಳು ಕುಂಟಿತವಾಗುತ್ತವೆ. ಇದರಿಂದ ಹೃದಯಕ್ಕೂ ತೊಂದರೆ ತಪ್ಪಿದ್ದಲ್ಲ. ಬಳಿಕ ಟೈಪ್ 2 ಮಧುಮೇಹಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ.

    ಇದುವರೆಗೂ ನಡೆದ ಸಂಶೋಧನೆಗಳು ಟಿವಿಯಿಂದ ಮಕ್ಕಳ ಮೇಲೆ ಆಗಬಹುದಾದ ಅನಾಹುತಗಳ ಬಗ್ಗೆ ಬೆಳಕು ಚೆಲ್ಲಿದ್ದವು. ಆದರೆ ವೃದ್ಧರ ಮೇಲೆ ಟಿವಿಯಿಂದ ಆಗಬಹುದಾದ ದುಷ್ಪರಿಣಾಮಗಳ ಮೇಲೆ ಇದೇ ಮೊದಲ ಬಾರಿಗೆ ಸಂಶೋಧನೆ ಮಾಡಿರುವುದಾಗಿ ತಿಳಿಸಿದ್ದಾರೆ.

    ಆದರೆ ಟಿವಿ ನೋಡುತ್ತಾ ಸಣ್ಣಪುಟ್ಟ ಕೆಲಸಗಳನ್ನು ಮಾಡುವುದರಿಂದ, ನಿಯಮಿತ ವ್ಯಾಯಾಮ ಮಾಡುವುದರಿಂದ, ಮದ್ಯಪಾನ, ಧೂಮಪಾನ ಕಡಿಮೆ ಮಾಡಿಕೊಳ್ಳುವುದರಿಂದ ಟೈಪ್ 2 ಮಧುಮೇಹ ತಡೆಯಬಹುದು ಎಂದಿದ್ದಾರೆ.

    ಆಸ್ಟ್ರೇಲಿಯಾದ 2000 ವೃದ್ಧರ ಮೇಲೆ ನಡೆಸಿದ ಸಂಶೋಧನೆಯ ಫಲವಿದು. ಡಾ. ಪೌಲ್ ಗಾರ್ಡಿನರ್ ಅವರ ನೇತೃತ್ವದಲ್ಲಿ ಈ ಸಂಶೋಧನೆ ನಡೆದಿದೆ. ಕೆಲವರೇನೋ ಸಂಶೋಧನೆ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದರೆ ಇನ್ನೂ ಕೆಲವರು ಅಯ್ಯೋ ಅದೇ ಹಳೆ ಕಥೆ ಹೋಗ್ರಿ ಎಂದಿದ್ದಾರೆ.

    English summary
    Being glued to TV for four hours daily could boost the risk of developing type 2 diabetes, especially if you are aged 60 or above. The study surveyed 2000 elderly Australians.
    Friday, August 3, 2012, 15:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X