»   » ಈಟಿವಿ ಕನ್ನಡ ಹೊಸ ಧಾರಾವಾಹಿ ಅವಳಿಜವಳಿ 'ಅಕ್ಕ'

ಈಟಿವಿ ಕನ್ನಡ ಹೊಸ ಧಾರಾವಾಹಿ ಅವಳಿಜವಳಿ 'ಅಕ್ಕ'

Posted by:
Subscribe to Filmibeat Kannada

Akka serial on Etv Kannada
ಬಹಳಷ್ಟು ನಿರೀಕ್ಷೆಗಳೊಂದಿಗೆ ಆರಂಭವಾದ ಈಟಿವಿ ಕನ್ನಡ 'ಇಂಡಿಯನ್' ರಿಯಾಲಿಟಿ ಶೋ ತೆರೆಬಿದ್ದಿದೆ. 'ಬಿಗ್ ಬಾಸ್' ಶೋನಂತೆ 'ಇಂಡಿಯನ್' ಅಷ್ಟಾಗಿ ಸದ್ದು ಮಾಡದಿದ್ದರೂ ಕಿರುತೆರೆ ವೀಕ್ಷಕ ಬಳಗಕ್ಕೆ ವಿಭಿನ್ನ ಮನರಂಜನೆಯನ್ನೂ ಕೊಟ್ಟ ತೃಪ್ತಿ ಇದೆ.

ಸರಿಸುಮಾರು 14 ವಾರಗಳ ಕಾಲ 'ಇಂಡಿಯನ್' ರಿಯಾಲಿಟಿ ಶೋ ಪ್ರಸಾರವಾಯಿತು. ಮೂರು ತಿಂಗಳಿಗೂ ಅಧಿಕ ಕಾಲ ದೇಶದ ಉದ್ದಗಲಕ್ಕೂ 7 ಬೇರೆ ಬೇರೆ ರಾಜ್ಯಗಳಲ್ಲಿ ಸಂಚರಿಸಿ ಕಿರುತೆರೆ ವೀಕ್ಷಕರಿಗೆ ವಿಭಿನ್ನ ಸಂಸ್ಕೃತಿ, ಸಂಪ್ರದಾಯಗಳನ್ನು ಪರಿಚಯಿಸಿತು. ಸೋಮವಾರದಿಂದ ಶುಕ್ರವಾರದ ತನಕ ರಾತ್ರಿ 8ರಿಂದ 9ರವರೆಗೂ ಪ್ರಸಾರವಾಯಿತು. 'ಇಂಡಿಯನ್' ವಿನ್ನರ್ ಆಗಿ ಸುನಾಮಿ ಕಿಟ್ಟಿ ಆಯ್ಕೆಯಾದರು.

ಈಗ ಅದೇ ಸ್ಲಾಟ್ ನಲ್ಲಿ ಈಟಿವಿ ಕನ್ನಡ ಎರಡು ಹೊಸ ಧಾರಾವಾಹಿಗಳನ್ನು ಆರಂಭಿಸುತ್ತಿದೆ. ಒಂದು 'ಅಕ್ಕ'. ಇದೊಂದು ಅವಳಿ ಜವಳಿ ಹೆಣ್ಣುಮಕ್ಕಳ ಕಥೆ ಎಂದು ಈಟಿವಿ ಕನ್ನಡ ತನ್ನ ಫೇಸ್ ಬುಕ್ ಫ್ಯಾನ್ ಪೇಜ್ ನಲ್ಲಿ ಹೇಳಿಕೊಂಡಿದೆ. ಇದಿಷ್ಟನ್ನು ಬಿಟ್ಟರೆ ಬೇರೇನು ವಿವರಗಳನ್ನು ನೀಡಿಲ್ಲ.

ಇನ್ನೊಂದು ಧಾರಾವಾಹಿ 'ಅಗಿಸಾಕ್ಷಿ'. ಈ ಧಾರಾವಾಹಿಯೂ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿದೆ. ನಿಧಿ ಮತ್ತು ಸಿದ್ಧಾರ್ಥ್ ಧಾರಾವಾಹಿಯ ಹೊಸ ಮುಖಗಳು. 'ಅಕ್ಕ' ಹಾಗೂ 'ಅಗ್ನಿಸಾಕ್ಷಿ' ಎರಡೂ ಧಾರಾವಾಹಿಗಳು ಡಿಸೆಂಬರ್ 2ರಿಂದ ಆರಂಭವಾಗಲಿವೆ. ಸಮಯ ರಾತ್ರಿ 8 ರಿಂದ 9. 'ಅಕ್ಕ' ಧಾರಾವಾಹಿಗೆ ಸಂಬಂಧಿಸಿದ ವಿಶೇಷಗಳನ್ನು ಒನ್ಇಂಡಿಯಾ ಕನ್ನಡದಲ್ಲಿ ನಿರೀಕ್ಷಿಸಿ. (ಒನ್ಇಂಡಿಯಾ ಕನ್ನಡ)

English summary
Etv Kannada all set to air two new serials 'Akka' and 'Agni Sakshi' from 2nd December, 2013. 'Akka' serial deals with twin ladies. What would you do if you had twins? Watch Etv Kannada new show Akka at 8 to 9 from 2nd December.
Please Wait while comments are loading...

Kannada Photos

Go to : More Photos