ಸುವರ್ಣದಲ್ಲಿ ಉಪೇಂದ್ರ 'ಅತಿ ಬುದ್ಧಿವಂತರ' ಚಿತ್ರ

Posted by:
Give your rating:

ಇದೇ ಮೊಟ್ಟ ಮೊದಲ ಬಾರಿಗೆ ರಿಯಲ್ ಸ್ಟಾರ್ ಉಪೇಂದ್ರ, ರಾಗಿಣಿ ಹಾಗೂ ಸದಾ ಅಭಿನಯದ ಹೊಚ್ಚ ಹೊಸ ಚಿತ್ರ 'ಅತಿ ಬುದ್ಧವಂತರಿಗೆ ಮಾತ್ರ' ಅರ್ಥವಾಗುವ 'ಆರಕ್ಷಕ' ಸುವರ್ಣ ವಾಹಿನಿಯಲ್ಲಿ ಇದೇ ಭಾನುವಾರ (ಸೆ.9) ಪ್ರಸಾರವಾಗುತ್ತಿದೆ. ಸಮಯ ಸಂಜೆ 6 ಗಂಟೆಗೆ.

ಪಿ.ವಾಸು ನಿರ್ದೇಶದ ಈ ಚಿತ್ರವನ್ನು ರು.4 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಬಾಕ್ಸಾಫೀಸಲ್ಲಿ ಈ ಚಿತ್ರ ರು.4.92 ಕೋಟಿ ಕಲೆಕ್ಷನ್ ಮಾಡುವ ಮೂಲಕ ನಿರ್ಮಾಪಕ ಕೃಷ್ಣ ಪ್ರಜ್ವಲ್ ಅವರಿಗೆ ಭಾರಿ ಹೊಡೆತ ಏನೂ ನೀಡಿರಲಿಲ್ಲ.

ಸೈಕಲಾಜಿಕಲ್ ಥ್ರಿಲ್ಲರ್ ಆದ ಈ ಚಿತ್ರಕ್ಕೆ ಹಾಲಿವುಡ್ ನ 'ಷಟರ್ ಐಲ್ಯಾಂಡ್' ಸ್ಫೂರ್ತಿ. ವಾಸು ಅವರ ಈ ಹಿಂದಿನ ಚಿತ್ರಗಳಾದ ಆಪ್ತಮಿತ್ರ, ಆಪ್ತರಕ್ಷಕದಂತೆ ಇಲ್ಲೂ ಸೈಕಾಲಜಿ, ರಹಸ್ಯ, ಸಸ್ಪೆನ್ಸ್ ಅಂಶಗಳನ್ನು ಒಳಗೊಂಡಿದೆ.

ಆರಕ್ಷಕ ಚಿತ್ರ ಉತ್ತಮ ವಿಮರ್ಶೆಗೆ ಪಾತ್ರವಾದರೂ ಬಾಕ್ಸಾಫೀಸಲ್ಲಿ ನಿರೀಕ್ಷಿಸಿದಷ್ಟು ಯಶಸ್ಸು ಗಳಿಸಲಿಲ್ಲ. ಚಿತ್ರ ಸೈಕಲಾಜಿಕಲ್ ಥ್ರಿಲ್ಲರ್ ಆದ ಕಾರಣ ಸಾಕಷ್ಟು ಗೊಂದಲಗಳು ಇದ್ದವು. ಚಿತ್ರದ ಕ್ಲೈಮ್ಯಾಕ್ಸ್ ಸರಿಯಾಗಿ ಅರ್ಥವಾಗುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.

ಈ ಬಗ್ಗೆ ವಿವರ ನೀಡಿದ್ದ ಉಪೇಂದ್ರ, ನನ್ನ ನಿರ್ದೇಶನದ 'ಎ'ಯಲ್ಲಿ ಬುದ್ಧಿವಂತರಿಗೆ ಮಾತ್ರ ಎಂಬ ಟ್ಯಾಗ್ ಲೈನ್ ಹಾಕಿಸಿದ್ದೆ. ನನ್ನ ಪ್ರಕಾರ 'ಆರಕ್ಷಕ' ಚಿತ್ರ ಅತಿ ಬುದ್ಧಿವಂತರಿಗೆ ಮಾತ್ರ" ಎಂದಿದ್ದರು. ಆರಕ್ಷಕ ಚಿತ್ರ ವಿಮರ್ಶೆ ಓದಿ.

"ಒಂದಿಷ್ಟು ಗೊಂದಲಗಳು ಸಾಮಾನ್ಯ ಪ್ರೇಕ್ಷಕರಲ್ಲಿ ಉಂಟಾಗಿರುವುದು ನಿಜ. ಆದರೆ ಅದು ಚಿತ್ರಕ್ಕೆ ಹಿನ್ನಡೆಯಲ್ಲ. ವಾಸು ಈ ಚಿತ್ರವನ್ನು ತುಂಬಾ ಚೆನ್ನಾಗಿ ನಿರ್ದೇಶಿಸಿದ್ದಾರೆ. ಅತಿ ಬುದ್ಧಿವಂತರು ಮೊದಲ ಬಾರಿಯೆ ಅರ್ಥಮಾಡಿಕೊಂಡು ಚೆನ್ನಾಗಿದೆ ಎನ್ನುತ್ತಿದ್ದಾರೆ" ಎಂದಿದ್ದರು. (ಒನ್ ಇಂಡಿಯಾ ಕನ್ನಡ)

Read more about: ಸುವರ್ಣ ವಾಹಿನಿ, ಉಪೇಂದ್ರ, ರಾಗಿಣಿ ದ್ವಿವೇದಿ, ಸದಾ, ಟಿವಿ, suvarna channel, upendra, ragini dwivedi, sada, tv

English summary
Aarakshaka, a Kannada Psychological thriller film starring Upendra, Sadha and Ragini Dwivedi in the lead roles. Now the movie airs on Asianet Suvarna Channel on 9th Sept, 2012 at 6 pm IST.
Please Wait while comments are loading...

Kannada Photos

Go to : More Photos
 
X

X
Skip Ad
Please wait for seconds

Bringing you the best live coverage @ Auto Expo 2016! Click here to get the latest updates from the show floor. And Don't forget to Bookmark the page — #2016AutoExpoLive