»   » ಹೊಸ ಬಣ್ಣಗಳೊಂದಿಗೆ 'ಕಲರ್ಸ್ ಕನ್ನಡ' ಟಿವಿ ಆರಂಭ

ಹೊಸ ಬಣ್ಣಗಳೊಂದಿಗೆ 'ಕಲರ್ಸ್ ಕನ್ನಡ' ಟಿವಿ ಆರಂಭ

Posted by:
Subscribe to Filmibeat Kannada

ಇಂದು ಯಾವುದೇ ಒಂದು ಉದ್ಯಮವನ್ನು ಗಮನಿಸಿದರೂ ಹೆಜ್ಜೆಹೆಜ್ಜೆಗೂ ಸ್ಪರ್ಧೆ ತಪ್ಪಿದ್ದಲ್ಲ. ಈ ಸ್ಪರ್ಧಾತ್ಮಕ ಯುಗದಲ್ಲಿ ಗೆಲ್ಲಬೇಕಾದರೆ ಸದಾ ಹೊಸತನ, ವೈವಿಧ್ಯತೆ, ಜನರ ನಾಡಿಮಿಡಿತದ ಅರಿವಿರಬೇಕು. ಇಲ್ಲದಿದ್ದರೆ ಗೆಲುವು ದೂರವಾಗುತ್ತಾ ಹೋಗುತ್ತದೆ. ಈ ತಂತ್ರ ಡಿಜಿಟಲ್ ಕ್ಷೇತ್ರಕ್ಕೆ ಹೊಸದಲ್ಲ.

ಇಷ್ಟು ದಿನ ಕನ್ನಡ ಕುಲಕೋಟಿಯನ್ನು ರಂಜಿಸುತ್ತಿರುವ 'ಈಟಿವಿ ಕನ್ನಡ' ವಾಹಿನಿ ಇದೀಗ 'ಕಲರ್ಸ್ ಕನ್ನಡ' ಎಂದು ತನ್ನ ಬ್ಯ್ರಾಂಡ್ ಹೆಸರನ್ನು ಬದಲಾಯಿಸಿಕೊಂಡಿದೆ. ಇದಕ್ಕೆ ಮುಖ್ಯ ಕಾರಣವೂ ಇಲ್ಲದಿಲ್ಲ. ಹಳೆ ವೀಕ್ಷಕರನ್ನು ಉಳಿಸಿಕೊಂಡು ಹೊಸ ವೀಕ್ಷಕರನ್ನು ತನ್ನತ್ತ ಸೆಳೆಯುವುದೇ ರೀಬ್ರ್ಯಾಂಡಿಂಗ್ ಉದ್ದೇಶ. [ಜೀ ಕನ್ನಡ 'ಒಗ್ಗರಣೆ ಡಬ್ಬಿ' ಘಮಲಿಗೆ 500ರ ಸಂಭ್ರಮ]

'ವಯಕಾಮ್ 18' ಒಡೆತನದ ಐದು ಪ್ರಾದೇಶಿಕ ಭಾಷಾ ವಾಹಿನಿಗಳಾದ ಈಟಿವಿ ಕನ್ನಡ, ಈಟಿವಿ ಮರಾಠಿ, ಈಟಿವಿ ಬಾಂಗ್ಲಾ, ಈಟಿವಿ ಒರಿಯಾ ಹಾಗೂ ಈಟಿವಿ ಗುಜರಾತಿ ವಾಹಿನಿಗಳು ಈಗ 'ಕಲರ್ಸ್' ಎಂದಾಗಿದ್ದು ಪ್ರಾದೇಶಿಕ ಮಟ್ಟದಲ್ಲಿ ಎದುರಾಗಿರುವ ಸ್ಪರ್ಧೆಯಲ್ಲಿ ಹೊಸ ದಾಪುಗಾಲು ಹಾಕಲು ಸಜ್ಜಾಗಿವೆ.

ಕಲರ್ಸ್ ರೀಬ್ರ್ಯಾಂಡಿಂಗ್ ಬಗ್ಗೆ ಸಿಇಓ ಏನಂತಾರೆ?

ಕಲರ್ಸ್ ರೀಬ್ರ್ಯಾಂಡಿಂಗ್ ಬಗ್ಗೆ ಸಿಇಓ ಏನಂತಾರೆ?

ವಯೊಕಾಮ್ 18 ಮೀಡಿಯಾ ಗ್ರೂಪ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಂಶು ವತ್ಸ್ ಅವರ ಪ್ರಕಾರ, "ಭೌಗೋಳಿಕವಾಗಿ, ಪ್ರಾದೇಶಿಕವಾಗಿ ಹಾಗೂ ಭಾಷಾ ಪರವಾಗಿ ಆಲೋಚಿಸಿ ರೀಬ್ರ್ಯಾಂಡಿಂಗ್ ಮುಂದಾಗಿದ್ದೇವೆ" ಎನ್ನುತ್ತಾರೆ.

ಪ್ರಾದೇಶಿಕ ಮಟ್ಟದಲ್ಲಿ ಹೊಸ ಬದಲಾವಣೆ

ಪ್ರಾದೇಶಿಕ ಮಟ್ಟದಲ್ಲಿ ಹೊಸ ಬದಲಾವಣೆ

ಭಾರತದಲ್ಲಿ ಶೇ.59ರಷ್ಟು ಮಂದಿ ಪ್ರಾದೇಶಿಕ ಭಾಷೆಗಳಲ್ಲಿ ವ್ಯವಹರಿಸುತ್ತಿದ್ದು, ಉಳಿದ ಶೇ.41ರಷ್ಟು ಮಂದಿ ಹಿಂದಿ ಮಾತನಾಡುವವರಾಗಿದ್ದಾರೆ. ಪ್ರಾದೇಶಿಕ ಮಟ್ಟದಲ್ಲಿ ನಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಬೇಕಾಗಿದೆ. ಆಗಷ್ಟೇ ಪ್ರಾದೇಶಿಕ ಮಟ್ಟದಲ್ಲಿ ನಮ್ಮ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ವತ್ಸ್.

ಪ್ರಾದೇಶಿಕ ಸ್ಪರ್ಧೆಯನ್ನು ಎದುರಿಸಲು ಸಜ್ಜು

ಪ್ರಾದೇಶಿಕ ಸ್ಪರ್ಧೆಯನ್ನು ಎದುರಿಸಲು ಸಜ್ಜು

ವೀಕ್ಷಕರ ಸಂಖ್ಯೆಯ ಹೆಚ್ಚಳದ ಜೊತೆಗೆ ವಾಹಿನಿಗಳ ಆದಾಯವನ್ನು ಪ್ರಾದೇಶಿಕ ಮಟ್ಟದಲ್ಲಿ ಹೆಚ್ಚಿಸಿಕೊಳ್ಳುವ ದಿಶೆಯಲ್ಲಿ ಕಲರ್ಸ್ ಬಳಗ ಹೆಜ್ಜೆಹಾಕಿದೆ. ಈ ಹಾದಿಯಲ್ಲಿ ಮಹತ್ತರ ಬದಲಾವಣೆಗಳನ್ನು 'ವಯೋಕಾಮ್ 18' ಸಂಸ್ಥೆ ನಿರೀಕ್ಷಿಸಿದೆ.

ಕಲರ್ಸ್ ಬ್ರ್ಯಾಂಡ್ ಗೆ ಇನ್ನಷ್ಟು ಬಲ

ಕಲರ್ಸ್ ಬ್ರ್ಯಾಂಡ್ ಗೆ ಇನ್ನಷ್ಟು ಬಲ

2008ರಲ್ಲಿ ಆರಂಭವಾದ ಕಲರ್ಸ್ ವಾಹಿನಿ ಪ್ರಾದೇಶಿಕ ಮನರಂಜನಾ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಇದೀಗ ರೀಬ್ರ್ಯಾಂಡ್ ಮೂಲಕ ಪ್ರಾದೇಶಿಕ ಮಟ್ಟದಲ್ಲಿ ಇನ್ನಷ್ಟು ಬಲವನ್ನು ಗಳಿಸಿಕೊಂಡಂತಾಗಿದೆ.

ವಯೋಕಾಮ್ 18 ಒಡೆತನದಲ್ಲಿ 10 ವಾಹಿನಿಗಳು

ವಯೋಕಾಮ್ 18 ಒಡೆತನದಲ್ಲಿ 10 ವಾಹಿನಿಗಳು

ಪ್ರಸ್ತುತ ವಯೋಕಾಮ್ 18 ಒಡೆತನದಲ್ಲಿ ಹತ್ತು ವಾಹಿನಿಗಳಿದ್ದು 'ಪೆಪ್ಸಿ ಎಂಟಿವಿ ಇಂಡೀಸ್' ಇತ್ತೀಚೆಗಷ್ಟೇ ಸೇರ್ಪಡೆಯಾದ ಹೊಸ ವಾಹಿನಿಯಾಗಿದ್ದು, ಸಂಗೀತ, ಕಲೆ ಹಾಗೂ ಕಾಮಿಡಿ ಶೋಗಳ ಕಡೆಗೆ ತನ್ನ ದೃಷ್ಟಿ ಹರಿಸಿದೆ.

English summary
Viacom18 has decided to licence its existing brand name Colors to Prism TV, which runs the five regional general entertainment channels namely: ETV Marathi, ETV Bangla, ETV Oriya, ETV Kannada and ETV Gujarati. As part of this, the channels will not only shed the ETV name, thus donning the Colors identity, but will also see induction of new programming.
Please Wait while comments are loading...

Kannada Photos

Go to : More Photos