»   » 'ಹರ ಹರ ಮಹಾದೇವ': 'ಸತಿ ಸ್ವಯಂವರ'ದಲ್ಲಿ ರೋಚಕ ತಿರುವು

'ಹರ ಹರ ಮಹಾದೇವ': 'ಸತಿ ಸ್ವಯಂವರ'ದಲ್ಲಿ ರೋಚಕ ತಿರುವು

Posted by:
Subscribe to Filmibeat Kannada

ಪ್ರತೀ ವಾರವೂ 'ದೇವರ ದೇವ ಮಹಾದೇವ' ಶಿವನ ಲೀಲೆ ಹಾಗೂ ವಿಶೇಷ ಕಥೆಗಳನ್ನು ನೋಡುಗರಿಗೆ ನೀಡುತ್ತಿರುವ ಸ್ಟಾರ್ ಸುವರ್ಣ ವಾಹಿನಿ ಈ ವಾರ ಕೂಡ, ರೋಚಕ ಸನ್ನಿವೇಶಗಳನ್ನು ಹೊತ್ತು ತಂದಿದೆ.[ಗಣೇಶ ಚತುರ್ಥಿಗೆ "ದೇವರ ದೇವ ಮಹಾದೇವ ಚರಿತ್ರೆ"ಯ ರಸದೌತಣ]

ಸತಿಯನ್ನು ಶಿವ ದೇವನಿಂದ ದೂರ ಮಾಡುವ ಸಲುವಾಗಿ ದಕ್ಷ ಮಹಾರಾಜ, ಶತಭಿಷನ ಜೊತೆ ಸತಿಯ ವಿವಾಹವನ್ನು ನಿಶ್ಚಯ ಮಾಡುತ್ತಾರೆ. ಆದರೆ ಶತಭಿಷ ಕೋಪಗೊಂಡು ಸತಿಯನ್ನು ವರಿಸಲು ನಿರಾಕರಿಸಿದ ಪರಿಣಾಮ, ದಕ್ಷ ಮಹಾರಾಜ ಸತಿಗೆ 'ಸ್ವಯಂವರ' ಏರ್ಪಾಡು ಮಾಡುತ್ತಾರೆ. ಮುಂದೆ ಓದಿ....

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

ಸ್ವಯಂವರಕ್ಕೆ ಒಪ್ಪಿಕೊಂಡ ಸತಿ

ಸ್ವಯಂವರಕ್ಕೆ ಒಪ್ಪಿಕೊಂಡ ಸತಿ

ದಕ್ಷ ಮಹಾರಾಜನ ಆಜ್ಞೆ ಮೀರಿ ಶತಭಿಷನು ಸತಿಯನ್ನು ವರಿಸಲು ನಿರಾಕರಿಸಿದ ನಂತರ, ಕೋಪಗೊಂಡ ದಕ್ಷನು ಸತಿಯ ಸ್ವಯಂವರವನ್ನು ಏರ್ಪಡಿಸಲು ಮುಂದಾಗುತ್ತಾರೆ.[ಸೀರಿಯಲ್ ದುನಿಯಾ ಒಳಗೊಂದು ಸುತ್ತು: ಖರ್ಚೆಷ್ಟು, ಶ್ರಮವೆಷ್ಟು, ಕಥೆಯೇನು]

ಮಹಾದೇವನೆಡೆಗೆ ಸತಿಯ ಒಲವು

ಮಹಾದೇವನೆಡೆಗೆ ಸತಿಯ ಒಲವು

ಸತಿ, ಪ್ರಸೂತಿಯ ಬಳಿ ಮಹಾದೇವನೆಡೆಗೆ ಅವಳಿಗಿರುವ ನಂಬಿಕೆಯನ್ನು ಹೇಳುತ್ತಾಳೆ. ಸ್ವಯಂವರದಲ್ಲಿ ಸತಿ, ಶಿವನ ಪ್ರತಿಮೆಗೆ ಹಾರ ಹಾಕುವ ಮೂಲಕ ತನ್ನ ಪತಿಯಾಗಿ ಮಹಾದೇವನನ್ನೆ ಪಡೆಯಬೇಕೆಂಬ ಆಸೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹೊರಹಾಕುತ್ತಾಳೆ.[ಮಹಾ ಸಂಚಿಕೆ: ಕುತೂಹಲಕಾರಿ ತಿರುವು ಪಡೆದ 'ಅಮೃತವರ್ಷಿಣಿ']

ದಕ್ಷನಿಗೆ ಬ್ರಹ್ಮ-ವಿಷ್ಣು ಸಲಹೆ

ದಕ್ಷನಿಗೆ ಬ್ರಹ್ಮ-ವಿಷ್ಣು ಸಲಹೆ

ಬ್ರಹ್ಮ ಮತ್ತು ವಿಷ್ಣು ದೇವರು ದಕ್ಷ ಮಹಾರಾಜನ ಮುಂದೆ ಪ್ರತ್ಯಕ್ಷರಾಗಿ ಸತಿಯನ್ನು ಮಹಾದೇವನಿಗೆ ಕೊಟ್ಟು ವಿವಾಹ ಮಹೋತ್ಸವ ನೆರವೇರಿಸುವಂತೆ ಹೇಳುತ್ತಾರೆ.

ಸತಿಯ ವಿದಾಯಕ್ಕೆ ಸಿದ್ಧತೆ

ಸತಿಯ ವಿದಾಯಕ್ಕೆ ಸಿದ್ಧತೆ

ಸತಿಯ ವಿದಾಯಕ್ಕೆ, ವಿಜಯಾ ಸಮಾರಂಭವೊಂದನ್ನು ಏರ್ಪಾಡು ಮಾಡುತ್ತಾಳೆ. ತಾರಕಾಸುರ, 'ಚಕ್ರಿ' ಎಂಬ ಅಸುರನಿಗೆ ಸತಿ-ಮಹಾದೇವರ ವಿವಾಹ ಮಹೋತ್ಸವದ ಮೇಲೊಂದು ಕಣ್ಣನ್ನು ಇಡುವಂತೆ ಸೂಚಿಸುತ್ತಾನೆ.

ರೋಚಕ ಸನ್ನಿವೇಶಗಳು

ರೋಚಕ ಸನ್ನಿವೇಶಗಳು

ಸತಿ-ಮಹಾದೇವರ ವಿವಾಹ, ಸತಿಗೆ ವಿದಾಯ ಹೇಳಲು ವಿಜಯಾಳ ತಯಾರಿ, ಗಣ - ಪ್ರೇತರ ಗಲಾಟೆ ಮುಂತಾದ ರೋಚಕ ಸನ್ನಿವೇಶಗಳು ಮುಂದಿನ ವಾರದ ಹರ ಹರ ಮಹಾದೇವ ಧಾರಾವಾಹಿಯ ಪ್ರಮುಖ ಅಂಶಗಳು. ಇದೇ ಸೋಮವಾರದಿಂದ (12.09.2016) ರಾತ್ರಿ 7.30ಕ್ಕೆ, ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.

English summary
After Shathabhisha refuses to marry Sati, Daksha arranges for Sati’s swayamvara. Sati expressese her immense love and confidence on Mahadeva in front of Prasooti. Sati puts the garland to Mahadeva’s idol in Swayamvara and expresses her love towards Mahadeva. To know more story of Mahadeva, watch 'Hara Hara Mahadeva' Mon–Friday at 7.30 PM in Star Suvarna.
Please Wait while comments are loading...

Kannada Photos

Go to : More Photos