twitter
    For Quick Alerts
    ALLOW NOTIFICATIONS  
    For Daily Alerts

    ಈ 'ವೀಕೆಂಡ್'ನಲ್ಲಿ ಸಾಧಕರ ಸೀಟ್ ಮೇಲೆ ಎಚ್.ಡಿ.ದೇವೇಗೌಡ: ಮಿಸ್ ಮಾಡ್ಬೇಡಿ

    By Harshitha
    |

    ಈವರೆಗೆ ಹಲವಾರು ವಿಭಿನ್ನ ಶೈಲಿಯ ಧಾರಾವಾಹಿಗಳು, ಟಾಕ್ ಶೋ, ರಿಯಾಲಿಟಿ ಶೋ ಸೇರಿದಂತೆ ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ತನ್ನ ವೀಕ್ಷಕರಿಗಾಗಿ ನೀಡುತ್ತಾ ಬಂದಿರುವ ಜೀ ಕನ್ನಡ ವಾಹಿನಿ ಇತ್ತೀಚೆಗಷ್ಟೆ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮವನ್ನು ಆರಂಭಿಸಿತ್ತು.

    ನ್ಯಾ.ಸಂತೋಷ್ ಹೆಗ್ಡೆ, ನಟ ವಿಜಯ್ ರಾಘವೇಂದ್ರ, ಅರ್ಜುನ್ ಜನ್ಯ, ಪ್ರಿಯಾಮಣಿ, ರಕ್ಷಿತ್ ಶೆಟ್ಟಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ವೇದಿಕೆಗೆ ಕರೆತಂದು, ಅವರು ನಡೆದು ಬಂದ ಹಾದಿಯನ್ನು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅನಾವರಣ ಮಾಡಿತ್ತು.

    ಬ್ರೇಕಿಂಗ್ ನ್ಯೂಸ್: ಸಾಧಕರ ಸೀಟ್ ಮೇಲೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ.!ಬ್ರೇಕಿಂಗ್ ನ್ಯೂಸ್: ಸಾಧಕರ ಸೀಟ್ ಮೇಲೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ.!

    ಈಗ ಹಿರಿಯ ರಾಜಕಾರಣಿ, ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರನ್ನು ಸಾಧಕರ ಸೀಟ್ ನಲ್ಲಿ ಕೂರಿಸಿ, ಅವರ ಜೀವನ ಚರಿತ್ರೆಯನ್ನ 'ವೀಕೆಂಡ್ ಟೆಂಟ್' ಮೇಲೆ ಜೀ ಕನ್ನಡ ವಾಹಿನಿ ಜಗಜ್ಜಾಹೀರು ಮಾಡಲಿದೆ.

    ಈಗ ಕಾಲ ಕೂಡಿ ಬಂತು

    ಈಗ ಕಾಲ ಕೂಡಿ ಬಂತು

    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರವರನ್ನು ಸಾಧಕರ ಸೀಟ್ ಮೇಲೆ ಕೂರಿಸಬೇಕೆಂದು ಮೊದಲ ಸೀಸನ್ ನಿಂದಲೇ ಜೀ ಕನ್ನಡ ವಾಹಿನಿ ಪ್ರಯತ್ನ ಪಟ್ಟಿತ್ತಂತೆ. ಆದ್ರೆ, ಈಗ ಕಾಲ ಕೂಡಿ ಬಂದಿದೆ.

    ಎಲ್ಲರೂ ಸ್ಫೂರ್ತಿದಾಯಕ

    ಎಲ್ಲರೂ ಸ್ಫೂರ್ತಿದಾಯಕ

    ಒಬ್ಬ ಕನ್ನಡಿಗನಾಗಿ ಹಳ್ಳಿಯಿಂದ ದಿಲ್ಲಿ ವರೆಗೆ ಸಾಗಿ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದ ಎಚ್.ಡಿ.ದೇವೇಗೌಡ ರವರ ಜೀವನ ಚರಿತ್ರೆ ಎಲ್ಲರಿಗೂ ಖಂಡಿತ ಸ್ಫೂರ್ತಿದಾಯಕ.

    ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿಗಳು

    ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿಗಳು

    ಎಚ್.ಡಿ.ದೇವೇಗೌಡ ರವರ ನೆನಪಿನ ಶಕ್ತಿ ಅಗಾಧವಾದದು. ಅವರ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಅದೆಷ್ಟೋ ವಿಷಯಗಳು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಹಿರಂಗವಾಗಲಿದೆ.

    ಈ 'ವೀಕೆಂಡ್' ಮಿಸ್ ಮಾಡ್ಬೇಡಿ

    ಈ 'ವೀಕೆಂಡ್' ಮಿಸ್ ಮಾಡ್ಬೇಡಿ

    'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಎಚ್.ಡಿ.ದೇವೇಗೌಡ ಭಾಗವಹಿಸಿರುವ ಸಂಚಿಕೆ ಇದೇ ಶನಿವಾರ(10) ಹಾಗೂ ಭಾನುವಾರ(11) ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ.

    English summary
    EX Prime Minister, Politician, JDS Leader, HD Devegowda takes part in Zee Kannada Channel's popular show 'Weekend With Ramesh 3'. Episode will telecast on Saturday (June 10th) and Sunday (June 11th) at 9 PM.
    Friday, June 9, 2017, 12:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X