»   » 'ಆಟೋಗ್ರಾಫ್'ನಲ್ಲಿ ಸುದೀಪ್ ತುಂಬಾ ಮಿಸ್ ಮಾಡಿಕೊಂಡಿದ್ದು ಯಾರನ್ನ.?

'ಆಟೋಗ್ರಾಫ್'ನಲ್ಲಿ ಸುದೀಪ್ ತುಂಬಾ ಮಿಸ್ ಮಾಡಿಕೊಂಡಿದ್ದು ಯಾರನ್ನ.?

Posted by:
Subscribe to Filmibeat Kannada

ನಟನೆಯಲ್ಲಿ ಸೈ ಎನಿಸಿಕೊಂಡಿದ್ದ ಕಿಚ್ಚ ಸುದೀಪ್ ಪ್ರಪ್ರಥಮ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು 'ಮೈ ಆಟೋಗ್ರಾಫ್' ಚಿತ್ರದ ಮೂಲಕ.

ಹಾಗ್ನೋಡಿದ್ರೆ, ನಿರ್ದೇಶಕ ಆಗ್ಬೇಕು ಅಂತ ಚಿತ್ರರಂಗಕ್ಕೆ ಕಾಲಿಟ್ಟ ಸುದೀಪ್, ವರ್ಷಗಳ ನಂತರ ತಮ್ಮ ಆಸೆಯನ್ನು ಈಡೇರಿಸಿಕೊಂಡರು.['ಪ್ರತ್ಯರ್ಥ' ಚಿತ್ರದಲ್ಲಾದ 'ಆ' ಘಟನೆ ಬಗ್ಗೆ ಸುದೀಪ್ ಬಿಚ್ಚಿಟ್ಟ ರಹಸ್ಯ!]

ತಮ್ಮ ಚೊಚ್ಚಲ ನಿರ್ದೇಶನದ ಪ್ರಯತ್ನ 'ಮೈ ಆಟೋಗ್ರಾಫ್' ಚಿತ್ರವನ್ನ ಒಬ್ಬರಿಗೆ ಮಾತ್ರ ಮೊದಲು ತೋರಿಸಬೇಕು ಅಂತ ಕಿಚ್ಚ ಸುದೀಪ್ ಅಂದುಕೊಂಡಿದ್ದರಂತೆ. ಆದ್ರೆ, ಅದು ಆಗಲೇ ಇಲ್ಲ.['ಅಭಿನಯ ಚಕ್ರವರ್ತಿ' ಸುದೀಪ್ ಗೆ 'ಐರನ್ ಲೆಗ್' ಎಂದವರು ಯಾರು?]

ಹಾಗಾದ್ರೆ, ಯಾರದು? ''ನಾನು ಅವರನ್ನ ಈಗಲೂ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ'' ಅಂತ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಸುದೀಪ್ ಹೇಳಿದ್ದು ಯಾರಿಗೆ? ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ, ನಿಮಗೆ ಗೊತ್ತಾಗುತ್ತೆ.....

ವಸುಂದರಾ ಟೀಚರ್ ನನ್ನ ಫೇವರಿಟ್.!

''ಕ್ರೈಸ್ತ್ ದಿ ಕಿಂಗ್ಸ್ ಸ್ಕೂಲ್ ನಲ್ಲಿ ಓದಿದ್ದು ನಾನು. ನಂತರ ಅದಕ್ಕೆ ವಾಸವಿ ವಿದ್ಯಾಲಯ ಅಂತ ಹೆಸರು ಬಂತು. ಅಲ್ಲಿ, ವಸುಂದರಾ ಟೀಚರ್ ನನಗೆ ತುಂಬಾ ಫೇವರಿಟ್. ಯಾಕಂದ್ರೆ, ಮೊದಲು ನನ್ನನ್ನ ಸ್ಟೇಜ್ ಹತ್ತಿಸಿ, ಕೋಲಾಟ, ಡ್ರಾಮಾ ಮಾಡಿಸಿದವರು ಅವರೇ'' - ಸುದೀಪ್ [ಸುದೀಪ್ ಜೀವನದ 'ಬೆಸ್ಟ್ ಫ್ರೆಂಡ್ಸ್' ಯಾರು ಅಂದ್ಕೊಂಡ್ರೀ.? 'ಇವರೇ'.!]

ನನಗಾಗಿ ಡ್ಯಾನ್ಸ್ ಮಾಡಿದ್ರು!

''ಕೋಲಾಟದಲ್ಲಿ ನನಗೆ ಕೃಷ್ಣನ ಪಾತ್ರ. ಆಗ ನನಗೆ ಟೆನ್ಷನ್ ನಲ್ಲಿ ಎಲ್ಲಾ ಮರೆತುಹೋಗ್ತಿತ್ತು. ಸೈಡ್ ನಲ್ಲಿ ನಿಂತುಕೊಂಡು ಅವರು ನನಗಾಗಿ ಡ್ಯಾನ್ಸ್ ಮಾಡಿದ್ರು. ಅವರನ್ನ ನೋಡಿಕೊಂಡು ನಾನು ಡ್ಯಾನ್ಸ್ ಮಾಡಿದ್ದೆ. ಅದೇ ನನ್ನ ಮೊದಲ ಪರ್ಫಾಮೆನ್ಸ್'' - ಸುದೀಪ್ ['ಬೆಂಗಳೂರಿಗರ ಮೆಚ್ಚಿನ ನಟ' ಪಟ್ಟ ಹೊತ್ತುಕೊಂಡ ಕಿಚ್ಚ ಸುದೀಪ್]

ಟೀಚರ್ ಗೆ ಮೊದಲು ಸಿನಿಮಾ ತೋರಿಸಬೇಕಿತ್ತು!

''ಮೈ ಆಟೋಗ್ರಾಫ್' ಸಿನಿಮಾ ಮಾಡಿದಾಗ, ನಾನು ಅವರನ್ನ ಭೇಟಿ ಮಾಡಿದ್ದೆ. ಆಗ ಅವರಿಗೆ ಹುಷಾರು ಇರ್ಲಿಲ್ಲ. ಒಂದು ದಿನ ಫೋನ್ ಮಾಡಿ, 'ಮೊದಲ ಪ್ರಿಂಟ್ ಬಂದಾಗ ನೀವು ನೋಡಲೇಬೇಕು. ನಿಮ್ಮ ಶಿಷ್ಯ ಮಾಡಿರುವ ಮೊದಲ ಪ್ರಯತ್ನ ಇದು' ಅಂತ ಹೇಳಿದ್ದೆ'' - ಸುದೀಪ್ [ಕಿಚ್ಚ ಸುದೀಪ್ ತಂದೆಗೆ ಅಮಿತಾಬ್ ಬಚ್ಚನ್ ಹೇಳಿದ ಮುತ್ತಿನಂಥ ಮಾತು]

ಅವರು ತೀರಿಕೊಂಡರು!

''ಆದ್ರೆ, ಪ್ರಿಂಟ್ ಬರುವ ಮೊದಲೇ ಅವರು ತೀರಿಕೊಂಡರು. ಅವರನ್ನ ನಾನು ಈಗಲೂ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ'' - ಸುದೀಪ್

English summary
Kannada Actor, Director Kiccha Sudeep spoke about his teacher Vasundhara in Zee Kannada channel's popular show Weekend With Ramesh season2.
Please Wait while comments are loading...

Kannada Photos

Go to : More Photos