»   » ಮೇನಕಾ ಚಿತ್ರಮಂದಿರದಲ್ಲಿ ಸುದೀಪ್ ಗಳಗಳನೇ ಅತ್ತಿದ್ದೇಕೆ?

ಮೇನಕಾ ಚಿತ್ರಮಂದಿರದಲ್ಲಿ ಸುದೀಪ್ ಗಳಗಳನೇ ಅತ್ತಿದ್ದೇಕೆ?

Posted by:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಸುದೀಪ್ ಅವರ ಹೆಸರಿನ ಮುಂದೆ 'ಕಿಚ್ಚ' ಅನ್ನೋ ಪದ ಸೇರಿಸಿದರೆ, ಸುದೀಪ್ ಹೆಸರಿಗೆ ಬರುವ ತೂಕವೇ ಬೇರೆ. 'ಕಿಚ್ಚ' ಅನ್ನೋ ಹೆಸರು ಸುದೀಪ್ ಅವರಿಗೆ ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಸಿಕ್ಕಿರುವ ಬಿರುದು.

ಅಂದಹಾಗೆ ಸುದೀಪ್ ಅವರಿಗೆ 'ಕಿಚ್ಚ' ಅನ್ನೋ ಹೆಸರನ್ನು ಇಟ್ಟವರು ಯಾರು ಎಂಬ ಮೂಲವನ್ನು ಹುಡುಕುತ್ತಾ ಹೊರಟರೆ ಇಂದಿಗೂ ಯಾರಿಗೂ ಉತ್ತರ ದೊರೆಯುವುದಿಲ್ಲ. ಆದರೆ ಆ ಹೆಸರು ಬಂದ ಕ್ಷಣವನ್ನು ಮಾತ್ರ ಸುದೀಪ್ ಅವರು ತಮ್ಮ ಜೀವನ ಪರ್ಯಂತ ಎಂದೂ ಮರೆಯೊಲ್ಲ ಎಂದಿದ್ದಾರೆ.['ಆಟೋಗ್ರಾಫ್'ನಲ್ಲಿ ಸುದೀಪ್ ತುಂಬಾ ಮಿಸ್ ಮಾಡಿಕೊಂಡಿದ್ದು ಯಾರನ್ನ.?]

ಅಷ್ಟಕ್ಕೂ ಸುದೀಪ್ ಅವರಿಗೆ 'ಕಿಚ್ಚ' ಎಂಬ 'ಬಿರುದು' ಸಿಕ್ಕಿದ್ದು, ಹಾಗೂ ಅವರಿಗೆ ಚಿತ್ರರಂಗದಲ್ಲಿ ಒಂದು ಬ್ರೇಕ್ ಸಿಗಲು ಪರದಾಡಿದ ಬಗೆಯನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಅದೇನೆಂಬುದನ್ನು ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ....

'ಸ್ಪರ್ಶ' ರಿಲೀಸ್ ಆದ ಮೇಲಿನ 'ಆ' ದಿನಗಳು

'ಸ್ಪರ್ಶ' ರಿಲೀಸ್ ಆದ ಮೇಲಿನ 'ಆ' ದಿನಗಳು

'ಸ್ಪರ್ಶ' ಚಿತ್ರ ರಿಲೀಸ್ ಆದ ಸಂದರ್ಭದಲ್ಲಿ ಡಾ.ರಾಜ್ ಕುಮಾರ್ ಅವರ ಅಪಹರಣ ಆಗಿತ್ತು. ಹಾಗಾಗಿ ನಾವು ಮೈಸೂರಿನಲ್ಲಿ ಎಲ್ಲರೂ ಸೇರಿ ಶಾಂತಿಯುತ ಮುಷ್ಕರ ಮಾಡಿದ್ವಿ. ನಾವೆಲ್ಲಾ ಗ್ರೌಂಡ್ ನಲ್ಲಿ ಇದ್ದಾಗ ನಾವೊಂದು ಲಾರಿ ಹತ್ತಬೇಕಾಗಿತ್ತು. ಆವಾಗ ಒಬ್ಬರು ನನ್ನನ್ನೇ ನೋಡುತ್ತಿದ್ದರು. ತಿರುಗಿ ತಿರುಗಿ ನೋಡುತ್ತಿದ್ದರು. ನಾನು ತಪ್ಪಿಸಿಕೊಂಡು ಸ್ವಲ್ಪ ಆ ಕಡೆ ಹೋದೆ. ಅಲ್ಲಿಗೂ ಬಂದ್ರು ಆಗ ನಾನೇ ಎದುರು ಬಂದು ಕೇಳಿದಾಗ ಅವರು ನೀವು ಆರ್ಟಿಸ್ಟ್ ಅಲ್ವಾ ಅಂದ್ರು.-ಸುದೀಪ್['ಪ್ರತ್ಯರ್ಥ' ಚಿತ್ರದಲ್ಲಾದ 'ಆ' ಘಟನೆ ಬಗ್ಗೆ ಸುದೀಪ್ ಬಿಚ್ಚಿಟ್ಟ ರಹಸ್ಯ!]

'ನಟ' ಅಂತ ಗುರುತಿಸಿದಾಗ ಆದ 'ಸಂಭ್ರಮ'

'ನಟ' ಅಂತ ಗುರುತಿಸಿದಾಗ ಆದ 'ಸಂಭ್ರಮ'

ಹೋ ಅಂತೂ ಕೊನೆಗೆ ಒಬ್ಬರಾದ್ರು ನನ್ನನ್ನು ನಟ ಅಂತ ಕರೆದ್ರಲ್ವಾ? ಅಂತ ತುಂಬಾನೇ ಖುಷಿ ಆಯ್ತು. ನಾನು ಹೌದು ಅಂದೆ, ಆವಾಗ ಅವರು 'ಸ್ಪರ್ಶ' ಸಿನಿಮಾ ಮಾಡಿದ್ದು ನೀವೇನಾ ಅಂದ್ರು. ನಾನು ಹೌದು ಅಂದೆ, ಹೋ ನೀವು ಇವಾಗ ಸ್ವಲ್ಪ ಮೀಸೆ ಬಿಟ್ಟಿದ್ದೀರಲ್ವಾ ಹಾಗೆ ನನಗೆ ಗುರುತು ಸಿಗಲಿಲ್ಲ ಅಂದ್ರು.-ಸುದೀಪ್

ಭಯಪಟ್ಟ ಸುದೀಪ್

ಭಯಪಟ್ಟ ಸುದೀಪ್

ನಾನು ನಿಮ್ಮ ಹತ್ತಿರ ಸ್ವಲ್ಪ ಮಾತಾಡ್ಬೇಕಿತ್ತು ಅಂದ್ರು. ಆವಾಗ ನನ್ನ ತಲೆಯಲ್ಲಿ ಬಂದ ಯೋಚನೆ ಜೊತೆಗೆ ಭಯ ಆಯ್ತು, ಈ ವ್ಯಕ್ತಿ ಹತ್ತಿರ ನಾನೇನಾದ್ರೂ ಸಾಲ ಪಡೆದಿದ್ದೇನಾ? ಅಂತ ಅಂದುಕೊಂಡೆ. ಈಗಾಗಲೇ ನನ್ನ ತಲೆ ಮೇಲೆ ತುಂಬಾ ಲೋನ್ ಇದೆ. ಈ ವ್ಯಕ್ತಿ ಯಾರು ಅಂತ ತಲೆ ಕೆಡಿಸಿಕೊಂಡೆ.-ಸುದೀಪ್

ಚಿತ್ರದಲ್ಲಿ ನಟಿಸಲು ಆಫರ್

ಚಿತ್ರದಲ್ಲಿ ನಟಿಸಲು ಆಫರ್

ಹೇಳಿ ಸರ್ ಏನ್ ವಿಷ್ಯಾ ಅಂದಾಗ ಬರ್ತೀನಿ ನೀವು ಎಲ್ಲಿ ಸಿಗ್ತೀರಾ ಅಂತ ಕೇಳಿದ್ರು. ನಿಮ್ಮ ಹತ್ರ ಒಂದು ಸಿನಿಮಾ ವಿಚಾರ ಮಾತಾಡ್ಬೇಕು ಅಂದ್ರು. ಆಗ ನಾನು ಸಿನಿಮಾ ವಿಚಾರನಾ ಅಂತ ಫುಲ್ ಎಕ್ಸೈಟ್ ಆಗಿ. ಹೇಳಿ ಸರ್, ಬನ್ನಿ ಸರ್, ಈಗ್ಲೇ ಮಾತಾಡೋಣ ಅಂತ ಅರ್ಜೆಂಟ್ ಮಾಡಿದೆ. ಅದಕ್ಕೆ ಅವರು ಇಲ್ಲ ನಾವು ಬರ್ತೀವಿ ನೀವು ಹೇಳಿ ಅಂದ್ರು.-ಸುದೀಪ್

ಸರೋವರ್ ಸ್ಟುಡಿಯೋದಲ್ಲಿ ಭೇಟಿ

ಸರೋವರ್ ಸ್ಟುಡಿಯೋದಲ್ಲಿ ಭೇಟಿ

ಆಮೇಲೆ ನಾನು ಅವರನ್ನು ಸರೋವರ್ ನಲ್ಲಿ ಭೇಟಿ ಮಾಡಿದೆ. ಅವರು ಹೀಗೊಂದು ತಮಿಳು ಸಿನಿಮಾ ಇದೆ ಮಾಡ್ತೀರಾ ಅಂದ್ರು. ನಾನು ಸರ್ ಖಂಡಿತ ಅಂತ ಹೇಳಿ ಒಪ್ಕೊಂಡೆ. ಅವರು ವಿ.ಹೆಚ್.ಎಸ್ ಕೊಟ್ರು ನಾನು ಮನೆಯಲ್ಲಿ ಹೋಗಿ ನೋಡಿದೆ ನನಗೆ ಸಿನಿಮಾ ಇಷ್ಟ ಆಯ್ತು.-ಸುದೀಪ್

ಓಂ.ಪ್ರಕಾಶ್ ಜೊತೆ ಸಿನಿಮಾ

ಓಂ.ಪ್ರಕಾಶ್ ಜೊತೆ ಸಿನಿಮಾ

ಆಮೇಲೆ ಅವರು 2-3 ದಿನ ಬಿಟ್ಟು ವಾಪಸ್ ಬಂದ್ರು, ಮಾತು-ಕತೆ ಆಗುವಾಗ ನಾನು ನಿರ್ದೇಶಕರ ಬಗ್ಗೆ ಮಾತಾಡಿದೆ, ಆ ಸಂದರ್ಭದಲ್ಲಿ ನಾನು ಓಂ ಪ್ರಕಾಶ್ ರಾವ್ ಅವರ ದೊಡ್ಡ ಅಭಿಮಾನಿಯಾಗಿದ್ದೆ. ಹಾಗಾಗಿ ನಾನು ಓಂ ಪ್ರಕಾಶ್ ರಾವ್ ಅವರು ನಿರ್ದೇಶಕರಾದ್ರೆ ಹೇಗಿರುತ್ತೆ ಅಂದೆ.-ಸುದೀಪ್

ಹೊರಟೇ ಹೋದರು..

ಹೊರಟೇ ಹೋದರು..

ಅದಕ್ಕೆ ಅವರು 'ಯಾರು ಓಂ ಪ್ರಕಾಶ್ ರಾವ್ ಅವರ', ನಮ್ಮನ್ನು ಏನು ಅಂತ ಮಾಡಿದ್ದೀರಾ? ನಾವೇನೋ ಸಿನಿಮಾ ಮಾಡೋಣ ಅಂತ ಬಂದ್ರೆ ನೀವು ಬೇರೆ, ಅಂತ ಕಾರು ಹತ್ಕೊಂಡು ಹೋಗೇ ಬಿಟ್ರು. ನಾನು ತುಂಬಾ ಕೇಳಿಕೊಂಡ್ರು ಅವರು ನಿಲ್ಲೋಕೆ ರೆಡಿ ಇಲ್ಲ. ಅವರು ಹಾಗೆ ಮಾಡಲು ಕಾರಣ ಓಂ ಪ್ರಕಾಶ್ ಅವರ ಕೆಲವು ಚಿತ್ರಗಳು ಆವಾಗ ಪ್ಲಾಪ್ ಆಗಿತ್ತು.-ಸುದೀಪ್

'ಕೈಗೆ ಬಂದ ತುತ್ತು ಬಾಯಿಗಿಲ್ಲ'

'ಕೈಗೆ ಬಂದ ತುತ್ತು ಬಾಯಿಗಿಲ್ಲ'

ನಾನು ಬೇರೆ ಅಯ್ಯೋ ಇದ್ಯಾವ ಟೈಮಪ್ಪಾ ನಂದು, 'ಕೈಗೆ ಬರುತ್ತೆ ಬಾಯಿಗೆ ಬರಲ್ಲ' ಅಲ್ವಾ? ಅಂತ. ಅಲ್ಲದೇ ಆಗ ನಾನಿದ್ದ ಸಂದರ್ಭದಲ್ಲಿ ಅಥವಾ ಆಗಿನ ಕಾಲದಲ್ಲಿ ಒಬ್ಬರನ್ನು ಹಿಡಿಬೇಕು, ಅವರನ್ನು ಸಂಪರ್ಕ ಮಾಡಬೇಕು ಅಂದ್ರೆ ಅಷ್ಟು ಸುಲಭ ಇರ್ಲಿಲ್ಲ.-ಸುದೀಪ್

ಚಿತ್ರದುರ್ಗಕ್ಕೆ ಪ್ರಯಾಣ

ಚಿತ್ರದುರ್ಗಕ್ಕೆ ಪ್ರಯಾಣ

ನನಗೆ ನನ್ನ ಗೆಳೆಯರೊಬ್ಬರಿಂದ ತಿಳಿಯಿತು ಅವರು ಚಿತ್ರದುರ್ಗದವರು ಅಂತ. ಆಮೇಲೆ ಮಗಾ ಸ್ವಲ್ಪ ದುಡ್ಡಿದಿಯೇನೋ, ಸ್ವಲ್ಪ ಕಾರಿಗೆ ಪೆಟ್ರೋಲೋ, ಡಿಸೇಲೋ ಹಾಕ್ಸು ಹೋಗೋಣ ಹುಡುಕಿಕೊಂಡು ಆ ವ್ಯಕ್ತಿನಾ ಅಂತ. -ಸುದೀಪ್

ಒಪ್ಪಿಕೊಂಡ ನಿರ್ಮಾಪಕರು

ಒಪ್ಪಿಕೊಂಡ ನಿರ್ಮಾಪಕರು

ಏನೋ ಗೊತ್ತಿಲ್ಲ ನಮಗೆ ಸುಲಭವಾಗಿ ಅವರ ಮನೆ ಸಿಕ್ತು, ಲಕ್ಕೀಲಿ ಅವರು ಮನೇಲೇ ಇದ್ರು. ನಾನು ಅಮೇಲೆ ಕ್ಷಮೆ ಬೇಡಿ ಬನ್ನಿ ಮಾಡೋಣ ಅಂದೆ. ಆದ್ರೂ ಅವರು ಇಲ್ಲಾ ಸುದೀಪ್ ಅದು ಹಾಗಲ್ಲ ಸುದೀಪ್ ಹೀಗಲ್ಲ ಅಂದ್ರು. ಆದ್ರೂ ನಾನು ಹೇಗೋ ಮಾಡಿ ಒಪ್ಪಿಸಿದೆ. -ಸುದೀಪ್

'ಹುಚ್ಚ' ಸಿನಿಮಾ ರೆಡಿ ಆಯ್ತು

'ಹುಚ್ಚ' ಸಿನಿಮಾ ರೆಡಿ ಆಯ್ತು

ಆಮೇಲೆ ಅವರು ಬರಲು ಒಪ್ಪಿಕೊಂಡ್ರು, 2-3 ದಿನದಲ್ಲಿ ಬಂದ್ರು, ಓಂ ಪ್ರಕಾಶ್ ರಾವ್ ಅವರೂ ಕೂಡ ಮಾಡ್ತೀನಿ ಅಂದ್ರು, ಅದು ತಮಿಳು ಸಿನಿಮಾ 'ಸೇತು' ದು ರೀಮೆಕ್ ಸಿನಿಮಾ. ಅದು 'ಹುಚ್ಚ' ಸಿನಿಮಾ ಆಯ್ತು. ಆ ಟೈಮಲ್ಲಿ ನನಗೆ ಆಕ್ಸಿಡೆಂಟ್ ಆಗಿ ಕಾಲು ಮುರಿದಿತ್ತು. ತುಂಬಾ ಕಷ್ಟಪಟ್ಟೆ, ಆದ್ರೂ 'ಹುಚ್ಚ' ಸಿನಿಮಾ ಕಂಪ್ಲೀಟ್ ಆಗಿ ರಿಲೀಸ್ ಗೆ ರೆಡಿ ಆಯ್ತು. -ಸುದೀಪ್

ಮೇನಕಾದಲ್ಲಿ ರಿಲೀಸ್

ಮೇನಕಾದಲ್ಲಿ ರಿಲೀಸ್

ಸಿನಿಮಾ ಫಸ್ಟ್ ಕಾಪಿ ನೋಡಿದಾಗ, ನನ್ನ ನಟನಾ ಶೈಲಿ ನೋಡಿ ನನಗೆ, ನಾನು ಅನುಭವಿಸಿದ ನೋವು, ಕಷ್ಟ ಎಲ್ಲಾ ಮರೆತು ಹೋಯ್ತು. ಯಾಕೆಂದರೆ ಸಿನಿಮಾ ಅಷ್ಟು ಸುಂದರವಾಗಿ ಮೂಡಿ ಬಂದಿತ್ತು. ಆಮೇಲೆ ಬಿಡುಗಡೆಗೆ ಮೇನಕಾ ಥಿಯೇಟರ್ ಅಂತ ಆಯ್ತು. ಆಗ ಸ್ವಲ್ಪ ಭಯ ಆಯ್ತು.-ಸುದೀಪ್

ಥಿಯೇಟರ್ ಕ್ಲೀನ್ ಮಾಡಿದ ಸುದೀಪ್

ಥಿಯೇಟರ್ ಕ್ಲೀನ್ ಮಾಡಿದ ಸುದೀಪ್

ಯಾಕಂದ್ರೆ ಮೇನಕಾ ಥಿಯೇಟರ್ ನಲ್ಲಿ ಯಾವುದೇ ದೊಡ್ಡ ಸಿನಿಮಾ ರಿಲೀಸ್ ಅಗ್ತಾ ಇರ್ಲಿಲ್ಲ. ಆಮೇಲೆ ಥಿಯೇಟರ್ ಮ್ಯಾನೇಜರ್ ಭೇಟಿ ಮಾಡಿದ್ವಿ, ಮಾತಾಡಿದ್ವಿ. ಅವರು ತುಂಬಾ ಒಳ್ಳೆ ಮನುಷ್ಯ ಸಹಾಯ ಮಾಡ್ತೀನಿ ಅಂದ್ರು. ಆಮೇಲೆ ನಾನು ರಾಜೇಶ್ ರಾಮನಾಥ್ ಸೇರಿ ನಾಲ್ಕು ಹುಡುಗರ ಕೈಯಲ್ಲಿ ನೀರು ಹಾಕಿ ದಿನಾ ಗುಡಿಸೋದು, ಆಮೇಲೆ ಊದುಬತ್ತಿ ಹಚ್ಚಿಡೋದು ಮಾಡ್ತಾ ಇದ್ದೆ.-ಸುದೀಪ್

ಗಳಗಳನೇ ಅತ್ತ ಸುದೀಪ್

ಗಳಗಳನೇ ಅತ್ತ ಸುದೀಪ್

ಮರುದಿನ ಸಿನಿಮಾ ರಿಲೀಸ್ ನಾನು ಥಿಯೇಟರ್ ಗೆ ಹೋದ್ರೆ, ಅಲ್ಲಿ ಬರೀ ನಾಲ್ಕು ಜನ ಇದ್ರು, ನನಗೆ ಭಯ ಆಯ್ತು. ಮೊದ್ಲೇ ನನ್ನ ಟೈಮ್ ಸರಿ ಇಲ್ಲ, ಬಂದ ತಕ್ಷಣ ಒಬ್ಬ ಹಾರ ಬೇರೆ ಹಾಕಿದ್ದಾನೆ. ಪಕ್ಕಾ ಈ ಬಾರಿ ಈ ಸಿನಿಮಾ ಕೂಡ ಪ್ಲಾಪ್ ಅಂತ ಒಳಗೆ ಹೋಗಿ ಕುತ್ಕೊಂಡೆ, ತುಂಬಾ ಹೊತ್ತಾದ್ರು ಯಾರು ಇಲ್ಲ. ನಾನು ಜೋರಾಗಿ ಅಳೋಕೆ ಶುರು ಮಾಡಿದೆ.-ಸುದೀಪ್

ಟಿಕೆಟ್ ಸೋಲ್ಡ್ ಔಟ್ ಆಗಿತ್ತು

ಟಿಕೆಟ್ ಸೋಲ್ಡ್ ಔಟ್ ಆಗಿತ್ತು

ಆವಾಗ ಕಾಫಿ ಕೋಡೋಕೆ ಬಂದ ಮ್ಯಾನೇಜರ್ ನಾನು ಅಳೋದು ನೋಡಿ, ಏನ್ರೀ, ಇವ್ರ್ಯಾಕೆ ಅಳ್ತಾ ಇದ್ದಾರೆ, ಖುಷಿ ಪಡಿ ಅಂದ್ರು. ಯಾಕೆಂದ್ರೆ ನನ್ನ ಶೋ ಆವಾಗ್ಲೇ ಎಲ್ಲಾ ಟಿಕೆಟ್ ಬುಕ್ ಆಗಿ ಸೋಲ್ಡ್ ಔಟ್ ಆಗಿ ಶೋ ಹೌಸ್ ಫುಲ್ ಆಗಿತ್ತು. ಆವಾಗ ನನಗೆ ಆದ ಖುಷಿ ಅಷ್ಟಿಷ್ಟಲ್ಲ. ನನ್ನ ಸಿನಿಮಾದ ಶೋ ಹೌಸ್ ಫುಲ್ ಆಯ್ತಾ ಅಂತ, ಮತ್ತೆ ಜೋರಾಗಿ ಅತ್ತೆ.-ಸುದೀಪ್

'ಹುಚ್ಚ' ಚಿತ್ರದ ನಂತರ ಸುದೀಪ್ 'ಕಿಚ್ಚ' ಆದ್ರು

'ಹುಚ್ಚ' ಚಿತ್ರದ ನಂತರ ಸುದೀಪ್ 'ಕಿಚ್ಚ' ಆದ್ರು

ಸಿನಿಮಾ ಶುರು ಆಯ್ತು, ಕ್ಲೈಮ್ಯಾಕ್ಸ್ ನಲ್ಲಿ ಎಲ್ಲರೂ ಸೈಲೆಂಟ್ ಆಗಿ ಕೂತಿದ್ದಾರೆ. ಸಿನಿಮಾ ಮುಗೀತು, ನನಗೆ ಅವರ ರಿಯಾಕ್ಷನ್ ನೋಡಿ ಮತ್ತೆ ಸಿನಿಮಾ ತೋಪೆದ್ದು ಹೋಯ್ತು ಅನ್ಕೊಂಡೆ. ಹಾಗೆ ಅವರ ಜೊತೆನೇ ಹೊರಗಡೆ ಬಂದೆ. ಯಾರೋ ಒಬ್ಬ ಗುರುತು ಹಿಡಿದ, ಆಮೇಲೆ ಎಲ್ಲಾ ಬಂದ್ರು, ನನ್ನನ್ನು ಎತ್ಕೊಂಡ್ರು, ಎಳೆದಾಡಿದ್ರು, ಏನೇನೋ ಮಾಡಿದ್ರು, ಇದೆಲ್ಲಾ ಫಸ್ಟ್ ಟೈಮ್ ಅನುಭವ, ಎಲ್ಲವೂ ಆವಾಗ ನನಗೆ ಸುಂದರವಾಗಿತ್ತು. ಆಮೇಲೆ ಅವರಿಗೆ ನನ್ನ ಹೆಸರು ಗೊತ್ತಿಲ್ಲ 'ಹುಚ್ಚ' ಸಿನಿಮಾದಲ್ಲಿ ಕಿಚ್ಚ ಅಂತ ನೋಡಿ 'ಕಿಚ್ಚ'ನಿಗೆ ಜೈ ಅಂದ್ರು', ಅದೇ ಹೆಸರು ಕೊನೇವರೆಗೂ ಉಳಿಯಿತು.

English summary
Kannada Actor, Director Kiccha Sudeep spoke about the Kannada movie 'Huchcha' in Zee Kannada channel's popular show Weekend With Ramesh season2.
Please Wait while comments are loading...

Kannada Photos

Go to : More Photos