»   » ಪ್ರಕಾಶ್ ರೈ ಜೀವನದ ಅತ್ಯಂತ ಅವಿಸ್ಮರಣೀಯ ಕ್ಷಣ..

ಪ್ರಕಾಶ್ ರೈ ಜೀವನದ ಅತ್ಯಂತ ಅವಿಸ್ಮರಣೀಯ ಕ್ಷಣ..

Posted by:
Subscribe to Filmibeat Kannada

ಬಹುಭಾಷಾ ನಟ ಪ್ರಕಾಶ್ ರೈ ಅವರಿಗೆ ತಮಿಳಿನ 'ಇರುವರ್' ಚಿತ್ರದ ಪೋಷಕ ನಟ ಪಾತ್ರಕ್ಕೆ 1997 ರಲ್ಲಿ ರಾಷ್ಟ್ರ ಪ್ರಶಸ್ತಿ ಬಂತು. ಆದಾದ ನಂತರ 'ಕಾಂಚಿವರಂ' ಚಿತ್ರದ ಅಮೋಘ ಅಭಿನಯಕ್ಕೆ 2009 ರಲ್ಲಿ ರಾಷ್ಟ್ರ ಪ್ರಶಸ್ತಿಯು ಲಭಿಸಿತು. ವಿಶೇಷ ಅಂದ್ರೆ ಅದೇ ವರ್ಷ ಚಿತ್ರ 'ಟೊರೊಂಟೊ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್' ಗೆ ಆಯ್ಕೆ ಆಗಿತ್ತು.

'ಟೊರೊಂಟೊ' ಗ್ರೀನ್ ಕಾರ್ಪೆಟ್ ನಿಂದಲೇ ಆಸ್ಕರ್ ಗೆ 5 ಸಿನಿಮಾಗಳು ಆಯ್ಕೆ ಆದವು. ಆ ಚಿತ್ರಗಳಲ್ಲಿ ಪ್ರಕಾಶ್ ರೈ ಅವರ 'ಕಾಂಚಿವರಂ' ಚಿತ್ರವು ಒಂದಾಗಿತ್ತು. ಆ ವರ್ಷ 5 ಬೆಸ್ಟ್ ಆಕ್ಟರ್ ನಾಮಿನೀಸ್ ಗಳನ್ನ ಆಸ್ಕರ್ ವೇದಿಕೆಯಲ್ಲಿ ಒಬ್ಬ ಲೆಜೆಂಡ್ ಆಕ್ಟರ್ ಪರಿಚಯ ಮಾಡ್ತಿದ್ರು. ಆದರೆ ಪ್ರಕಾಶ್ ರಾಜ್ ರನ್ನು ಪರಿಚಯ ಮಾಡಬೇಕಾದ ಸ್ಥಳದಲ್ಲಿ ರಾಬರ್ಟ್ ಡಿನ್ನರ್ ಅವರನ್ನು ಪರಿಚಯ ಮಾಡಲಾಗಿತ್ತು. ಅಲ್ಲೇ ಇದ್ದ ಪ್ರಕಾಶ್ ರೈ ದುಖಃ ವ್ಯಕ್ತಪಡಿಸಿದ್ದರು. ಆದ್ರೆ ಆ ಅವಾರ್ಡ್ ಮಿಸ್ ಮಾಡಿಕೊಂಡ್ರು ಸಹ ಅದು ಬ್ಯೂಟಿಫುಲ್ ಆಗಿತ್ತು ಎಂದು ಪ್ರಕಾಶ್ ರೈ 'ವೀಕೆಂಡ್ ವಿತ್ ರಮೇಶ್ 3' ಸಾಧಕರ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ.

ಆದರೆ ಪ್ರಕಾಶ್ ರೈ ಅವರ ಜೀವನದ ಅತ್ಯಂತ ಅವಿಸ್ಮರಣೀಯ ಕ್ಷಣ ಯಾವುದೇ ಪ್ರಶಸ್ತಿಗಳನ್ನು ಪಡೆದಿರುವುದು ಅಲ್ಲ. ಬೇರೆಯೇ ಇದೆ. ಅದರ ಬಗ್ಗೆ ಅವರೇ ಹೇಳಿದ ಮಾತುಗಳಲ್ಲಿ ಕೆಳಗಿನ ಸ್ಲೈಡರ್ ನಲ್ಲಿ ಓದಿ. ಅಲ್ಲದೇ ಹಾಲಿವುಡ್ ನ ಶ್ರೇಷ್ಠ ನಿರ್ದೇಶಕ ಸ್ವೀವನ್ ಸ್ಪೀಲ್ ಬರ್ಗ್ ಪರಿಚಯ ಪ್ರಕಾಶ್ ರೈ ಗೆ ಹೇಗೆ? ಎಂಬ ಕುತೂಹಲಕಾರಿ ಕಹಾನಿಯೂ ಇಲ್ಲಿದೆ.

ನನ್ನ ಜೀವನದ ಅವಿಸ್ಮರಣೀಐ ಕ್ಷಣ 'ಕಾಂಚಿವರಂ'

ನನ್ನ ಜೀವನದ ಅವಿಸ್ಮರಣೀಐ ಕ್ಷಣ 'ಕಾಂಚಿವರಂ'

" 'ಟೊರೊಂಟೊ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್' ನಂತರ ಸ್ಟೀವನ್ ಸ್ಪೀಲ್ ಬರ್ಗ್ ಇಂಡಿಯಾಗೆ ಬಂದ್ರು. ಅವರು ಇಂಡಿಯನ್ ಆಕ್ಟರ್ ಮತ್ತು ಟೆಕ್ನಿಶಿಯನ್ ಗಳ ಜೊತೆ ಡಿನ್ನರ್ ಮಾಡಬೇಕಿತ್ತು. ಆ ಒಂದು ಈವೆಂಟ್ ಗೆ ಸೌತ್ ಇಂಡಿಯಾ ದಿಂದ ಕಮಲ್ ಹಾಸನ್ ಸರ್ ಮತ್ತು ನಾನು ಸೆಲೆಕ್ಟ್ ಆಗಿದ್ವಿ. ಅಂಬಾನಿ ಅವರ ಮನೆಯಲ್ಲಿ ಸ್ಟೀಲ್ ಬರ್ಗ್ ಬಂದತಕ್ಷಣ ಅಂಬಾನಿ ವೈಫ್ ನಿತಾ ಅಂಬಾನಿ, ಇವರೇ ನಮ್ಮ ಆಕ್ಟರ್. ಇವರು 'ಸಿಂಗಂ' ಚಿತ್ರದಲ್ಲಿ ನಟಿಸಿದ್ದಾರೆ ಎಂದು ಪರಿಚಯ ಮಾಡಿದ್ರು. ಇವರು ತುಂಬಾ ಕಾಮಿಡಿ ಆಕ್ಟರ್ ಸಹ ಅಂದ್ರು" - ಪ್ರಕಾಶ್ ರೈ, ನಟ

ನೀವು 'ವೀವರ್' ಅಲ್ವಾ..

ನೀವು 'ವೀವರ್' ಅಲ್ವಾ..

"ಸ್ಪೀಲ್ ಬರ್ಗ್ ನನ್ನ ಕಡೆ ನೋಡಿ, ನಿನ್ನ ಕಣ್ಣಲ್ಲಿ ತುಂಬಾ ನೋವು ಇದೆ. ನೀವು 'ವೀವರ್' ಎಂದರು. ನಿಮಗೆ ಹೇಗೆ ಗೊತ್ತು ಅಂದೆ. ಅದಿಕ್ಕೆ ನನಗೆ ಸಿನಿಮಾ ಹೆಸರು ಗೊತ್ತಿಲ್ಲ. ಆದ್ರೆ ಟೊರೊಂಟೊ ಬೆಸ್ಟ್ ಫಿಲ್ಮ್ ನನ್ನ ಹತ್ತಿರ ಬಂದಿತ್ತು. ಅದರಲ್ಲಿ ನೀವು 'ವೀವರ್' ಎಂಬ ಪಾತ್ರ ಮಾಡಿದ್ರಿ. ಆಗ ನನಗೆ ವರ್ಲ್ಡ್ ಸಿಟಿಜನ್ ಆಗಬೇಕು ಅನಿಸಿತು" - ಪ್ರಕಾಶ್ ರೈ, ನಟ

ತೀವ್ರವಾಗಿ ಬದುಕಿನ ಕ್ಷಣ

ತೀವ್ರವಾಗಿ ಬದುಕಿನ ಕ್ಷಣ

"ಒಂದು ಪಾತ್ರ. ಅದನ್ನ ಜಗತ್ತಿನ ಶ್ರೇ‍ಷ್ಠ ನಿರ್ದೇಶಕ ಭಾವ ಜಾಲವನ್ನ ಹಿಡಿದುಕೊಂಡು, ನಾನು ತೀವ್ರವಾಗಿ ಬದುಕಿದ ಒಂದು ಕ್ಷಣವನ್ನು ಅವರು ಹೇಳಿದ್ರು. ಅವರು 'ವೀವರ್' ಅಂದಿದ್ದು ನನಗೆ ಮೋಸ್ಟ್ ಬ್ಯೂಟಿಫುಲ್ ಈವೆಂಟ್. ಅವರು ಹೇಳಿದನ್ನ ನೆನಸಿಕೊಂಡು ಮುಂಬೈ ಸಮುದ್ರ ತೀರದಲ್ಲಿ ಅತ್ತಿದ್ದೇನೆ. ಅವರ ಸಿನಿಮಾದಲ್ಲಿ ಒಂದು ಸೀನ್ ಸಾಕು. ಅವರು ಒಬ್ಬ ಮೇಜೀಶಿಯನ್, ದೇವರು. ಒಂದಲ್ಲಾ ಒಂದು ದಿನ ಇದು ಸತ್ಯವಾಗುತ್ತೆ. ನನಗೆ ಆ ನಂಬಿಕೆ ಇದೆ" - ಪ್ರಕಾಶ್ ರೈ, ನಟ

ಪ್ರಕಾಶ್ ರೈ ಗೆ 52 ನೇ ಹುಟ್ಟು ಹಬ್ಬದ ಶುಭಾಶಯ

ಪ್ರಕಾಶ್ ರೈ ಗೆ 52 ನೇ ಹುಟ್ಟು ಹಬ್ಬದ ಶುಭಾಶಯ

"ನಾನು ಸ್ಪೀಲ್ ಬರ್ಗ್. ಈ ಒಂದು ಶುಭ ಸಂದರ್ಭದಲ್ಲಿ ಐ ವುಡ್ ವಿಶ್ ಟು ಪ್ರಕಾಶ್ ರಾಜ್ ವಂಡರ್ ಫುಲ್ 52nd ಬರ್ತ್ ಡೇ. ಅವರು ಇಲ್ಲಿಯ ವರೆಗೂ 30 ವರ್ಷಗಳ ಕಾಲ ಭಾರತೀಯ ಚಿತ್ರರಂದಲ್ಲಿ ತೊಡಗಿಕೊಂಡಿದ್ದಾರೆ. ಅಭಿನಂದಿಸುತ್ತೇನೆ. ಇದರೊಂದಿಗೆ ನನ್ನನ್ನ ಸೇರಿ ಲಕ್ಷಾಂತರ ಕೋಟ್ಯಾಂತರ ಅಭಿಮಾನಿಗಳಲ್ಲಿ ನೀವು ಈ ಜಾಗತಿಕ ಕಲಾರಂಗಕ್ಕೆ ನೀಡಿರುವ ಕೊಡುಗೆಯನ್ನು ಪ್ರಶಂಸಿಸುತ್ತಾರೆ. ಮೊತ್ತೊಮ್ಮೆತಮಗೆ ಹುಟ್ಟು ಹಬ್ಬದ ಶುಭಾಶಯಗಳು. ಐ ಹೋಪ್ ಸೀ ಯು ಅಗೈನ್ ಪರ್ಸನಲಿ" - ಸ್ಟೀವನ್ ಸ್ಟೀಲ್ ಬರ್ಗ್, ಹಾಲಿವುಡ್ ನಿರ್ದೇಶಕ

ಗ್ರೇಟ್ ಆರ್ಟಿಸ್ಟ್ ನನ್ನಲ್ಲಿ ನೋಡಿರುವುದು ಕಮಿಟ್ಮೆಂಟ್ ನ

ಗ್ರೇಟ್ ಆರ್ಟಿಸ್ಟ್ ನನ್ನಲ್ಲಿ ನೋಡಿರುವುದು ಕಮಿಟ್ಮೆಂಟ್ ನ

"ಗ್ರೇಟ್ ಆರ್ಟಿಸ್ಟ್ ಅವರು. ನನ್ನ ಅಭಿನಯ ಅಲ್ಲ ನೋಡಿರೋದು. ನನ್ನ ಕಮಿಟ್ ಮೆಂಟ್ ನ. ನನ್ನ ಸರೆಂಡರಿಯನ್ನ. ಅದು ಹಾರ್ಟ್ ಗೆ ಟಚ್ ಮಾಡುತ್ತೆ. ಅವರು ಇನ್ನು ಎಷ್ಟು ಪ್ಯೂರ್ ಆಗಿರಬಹುದು. ನಾವು ಈ ವಯಸ್ಸಿಗೆ ಒಬ್ಬನ ಎತ್ತರ, ಎಷ್ಟು ಕೋಟಿ ಫ್ಯಾನ್ ಬೇಸ್ ಇದೆ, ಸಂಪಾದನೆ ಎಷ್ಟು ಅಂತ ನೋಡ್ತೀವಿ. ಅವರು ನನ್ನ ಪ್ಯೂರ ವರ್ಕ್ ನೋಡಿದ್ದಾರೆ'- ಪ್ರಕಾಶ್ ರೈ, ನಟ

English summary
Multilingual Actor Prakash Rai revealed his life great moment in 'Weekend With Ramesh-3'.
Please Wait while comments are loading...

Kannada Photos

Go to : More Photos