twitter
    For Quick Alerts
    ALLOW NOTIFICATIONS  
    For Daily Alerts

    ನಟ ಪ್ರಕಾಶ್ ರೈಗಿದ್ದ ಅಹಂಕಾರ ಮಟ್ಟ ಆಗಿದ್ದು ಹೇಗೆ ಗೊತ್ತಾ.?

    By Harshitha
    |

    ನಟ ಪ್ರಕಾಶ್ ರೈ ಆಗಿನ್ನೂ ಡಿಗ್ರಿ ಓದುತ್ತಿದ್ದ ಕಾಲ... ಆಗಲೇ, ''ನಾನು ಇಲ್ಲದೇ ನಾಟಕ ರಿಹರ್ಸಲ್ ನಡೆಯಲ್ಲ'' ಎಂಬ ಅಹಂಕಾರ ಅವರಿಗೆ ಇತ್ತಂತೆ. ಇದನ್ನ ಗಮನಿಸಿದ ಜಿ.ಕೆ.ಗೋವಿಂದರಾವ್ ಅಂದು ಪ್ರಕಾಶ್ ರೈಗೆ ಒಂದು ಬುದ್ಧಿ ಮಾತನ್ನ ಹೇಳಿದ್ದರು. ಆ ಮಾತು ಇವತ್ತಿಗೂ ಪ್ರಕಾಶ್ ರೈ ಕಿವಿಯಲ್ಲಿ ಗುಯ್ ಗುಟ್ಟುತ್ತಿದೆ.

    ಅಂದ್ಹಾಗೆ, ಈ ಇಂಟ್ರೆಸ್ಟಿಂಗ್ ಸಂಗತಿ ಬಯಲಾಗಿದ್ದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ... ತಮ್ಮ ಕಾಲೇಜು ದಿನಗಳು ಹಾಗೂ ರಂಗಭೂಮಿ ಆಸಕ್ತಿ ಬಗ್ಗೆ 'ವೀಕೆಂಡ್ ವಿತ್ ರಮೇಶ್-3' ಶೋನಲ್ಲಿ ಪ್ರಕಾಶ್ ರೈ ಹೇಳಿರುವ ಮಾತುಗಳು ಇವು...

    ಬಿ.ಎಸ್.ಸಿ ಬಿಟ್ಟು ಬಿ.ಕಾಂ ಸೇರಿಕೊಂಡ ನಟ

    ಬಿ.ಎಸ್.ಸಿ ಬಿಟ್ಟು ಬಿ.ಕಾಂ ಸೇರಿಕೊಂಡ ನಟ

    ''ಬಿ.ಎಸ್.ಸಿ ಬಿಟ್ಟು ಬಿ.ಕಾಂ ಸೇರಿಕೊಂಡೆ. ಆದ್ರೆ, ಕಾಮರ್ಸ್ ಓದಬೇಕು ಅಂತ ಬಿ.ಕಾಂಗೆ ಶಿಫ್ಟ್ ಆಗಲಿಲ್ಲ. ಅಲ್ಲಿ ಹೆ.ಎಸ್.ವೆಂಕಟೇಶ್ ಮೂರ್ತಿ ಹಾಗೂ ಜಿ.ಕೆ.ಗೋವಿಂದರಾವ್ ಇದ್ದರು. ನನಗೆ ಅಷ್ಟು ಇಂಗ್ಲೀಷ್ ಬರ್ತಿರ್ಲಿಲ್ಲ. ಬಿ.ಕಾಂನಲ್ಲಿ ಕನ್ನಡ ಸಂಘ ಇತ್ತು. ಹೀಗಾಗಿ ಬಿ.ಕಾಂಗೆ ಶಿಫ್ಟ್ ಆದೆ'' - ಪ್ರಕಾಶ್ ರೈ, ನಟ [ನಟ ಪ್ರಕಾಶ್ ರೈ ಮಾಡಿರುವ ಸಾಧನೆ ಎಂಥದ್ದು ಅಂತೀರಾ.?]

    ಸಾಹಿತ್ಯದ ಬಗ್ಗೆ ಒಲವು ಮೂಡಲು ಕಾರಣ...

    ಸಾಹಿತ್ಯದ ಬಗ್ಗೆ ಒಲವು ಮೂಡಲು ಕಾರಣ...

    ''ನನಗೆ ಸಾಹಿತ್ಯದ ಬಗ್ಗೆ ಇಂಟ್ರೆಸ್ಟ್ ಬರೋದಕ್ಕೆ ಹೆ.ಎಸ್.ವೆಂಕಟೇಶ್ ಮೂರ್ತಿ ಹಾಗೂ ಜಿ.ಕೆ.ಗೋವಿಂದರಾವ್ ಕಾರಣ. ನಾನು ಮೊದಲು ಸಾಹಿತ್ಯ, ಕಾವ್ಯ ಅಷ್ಟೊಂದು ಓದುತ್ತಿರಲಿಲ್ಲ. ಇವರಿಬ್ಬರು ನನಗೆ ಚೆನ್ನಾಗಿ ಹೇಳಿಕೊಟ್ಟರು'' - ಪ್ರಕಾಶ್ ರೈ, ನಟ [ನಟ ಪ್ರಕಾಶ್ ರೈ ಪಾಲಿನ 'ದೇವತೆ' ಈಕೆಯೇ.!]

    ಅಹಂಕಾರ ಮಟ್ಟ ಆಗಿದ್ದು...

    ಅಹಂಕಾರ ಮಟ್ಟ ಆಗಿದ್ದು...

    ''ನಾನು ಬಹಳ ಚೆನ್ನಾಗಿ ಕನ್ನಡ ಮಾತನಾಡುತ್ತಿದ್ದೆ. ಲಂಕೇಶ್ ರವರ 'ತೆರೆಗಳು' ನಾಟಕ ರಿಹರ್ಸಲ್ ಗೆ ಹೋಗಬೇಕಿತ್ತು. ನಾನು ರಿಹರ್ಸಲ್ ಗೆ ಹೋಗಲಿಲ್ಲ. ನಾನು ಇಲ್ಲದೇ ರಿಹರ್ಸಲ್ ಆಗಲ್ಲ ಅಂದುಕೊಂಡಿದ್ದೆ. ಆದ್ರೆ, ಬೇರೆಯವರು ಮಾಡುತ್ತಿದ್ದರು. ಆಗ ನನಗೆ ತುಂಬಾ ಕೋಪ ಬಂದಿತ್ತು. ಆಮೇಲೆ ಜಿ.ಕೆ.ಗೋವಿಂದರಾವ್ ರವರು ನನ್ನನ್ನ ಕರೆದು, ''ನೀನು ತುಂಬಾ ಒಳ್ಳೆಯ ನಟ. ಮುಂದೆ ಒಳ್ಳೆಯ ನಟನಾಗಿ ಬೆಳೆಯುತ್ತೀಯಾ. ಆದ್ರೆ, ನೀನು ಇಲ್ಲದೇ ರಂಗಭೂಮಿ ಇಲ್ಲ ಎಂಬ ಅಹಂಕಾರ ನಿನಗೆ ಬರಬಾರದು. ಅದಕ್ಕೋಸ್ಕರ ನೀನು ಇಲ್ಲದೇ ನಾಟಕ ಮಾಡಿಸಿದೆ'' ಅಂತ ಹೇಳಿದರು. ಅದು ನನಗೆ ದೊಡ್ಡ ಜ್ಞಾನೋದಯ'' - ಪ್ರಕಾಶ್ ರೈ, ನಟ

    ಜಿ.ಕೆ.ಗೋವಿಂದರಾವ್ ಮಾತು....

    ಜಿ.ಕೆ.ಗೋವಿಂದರಾವ್ ಮಾತು....

    ''ತೆರೆಗಳು' ನಾಟಕ ರಿಹರ್ಸಲ್ ಮಾಡಿಸಿದಾಗ ತುಂಬಾ ಚೆನ್ನಾಗಿ ಓದುತ್ತಿದ್ದ. ನನಗೆ ತುಂಬಾ ಸರ್ಪ್ರೈಸ್ ಆಗಿತ್ತು. ಆಗ ಹೇಳಿದ್ದೆ, ''ನೀವು ನಿಮ್ಮ ಟೈಮ್ ವೇಸ್ಟ್ ಮಾಡುತ್ತಿದ್ದೀರಾ. ನೀವು ಇರಬೇಕಾಗಿರುವ ಜಾಗ ಇದಲ್ಲ'' ಅಂತ. ಸ್ವಲ್ಪ ದಿನ ಆದ್ಮೇಲೆ ಅವನಿಗೆ ಈ ಮಾತು ಅರ್ಥ ಅಗಿರ್ಬೇಕು. ಅದಕ್ಕೆ ಇದಕ್ಕಿದ್ದಂತೆ ಮಾಯ ಆಗ್ಬಿಟ್ಟ'' - ಜಿ.ಕೆ.ಗೋವಿಂದರಾವ್

    ನನಗೆ ಹೆಮ್ಮೆ

    ನನಗೆ ಹೆಮ್ಮೆ

    ''ಇಂತಹ ಒಬ್ಬ ಹುಡುಗನಿಗೆ ಶಿಕ್ಷಕನಾಗಿದ್ದೆ ಎಂಬುದು ಇಷ್ಟು ವರ್ಷಗಳ ಅಧ್ಯಾಪಕ ವೃತ್ತಿಯಲ್ಲಿ ನನಗೆ ಹೆಮ್ಮೆ'' - ಜಿ.ಕೆ.ಗೋವಿಂದರಾವ್

    ಅಂದು ಬರೀ ಚಪ್ಪಾಳೆಗೆ ಮಾತ್ರ

    ಅಂದು ಬರೀ ಚಪ್ಪಾಳೆಗೆ ಮಾತ್ರ

    ''ಕಾಲೇಜಿನಲ್ಲಿ ನಾನು ನಾಟಕ ಮಾಡುತ್ತಿದ್ದದ್ದು ಬರೀ ಚಪ್ಪಾಳೆಗೆ ಮಾತ್ರ. ಯಾವಾಗ ನಾನು ಕನ್ನಡ ರಂಗಭೂಮಿಗೆ ಬಂದೆ ಆಗಲೇ ನಟನೆ ಬಗ್ಗೆ ಆಸಕ್ತಿ ಮೂಡಿದ್ದು'' - ಪ್ರಕಾಶ್ ರೈ, ನಟ

    ಬಿ.ಸುರೇಶ್ ಮಾತು

    ಬಿ.ಸುರೇಶ್ ಮಾತು

    ''ನನಗೆ ಪ್ರಕಾಶ್ ರೈ ಪರಿಚಯ ಮೊದಲನೇ ಸಲ ಆಗಿದ್ದು 1983 ರಲ್ಲಿ. ನಾನು ಆಗ 'ಅಭಿನಯ ತರಂಗ' ಎಂಬ ರಂಗಶಾಲೆಗೆ ಉಪ-ಪ್ರಾಂಶುಪಾಲ ಆಗಿದ್ದೆ. ಅವತ್ತು ಹೊಸ ವಿದ್ಯಾರ್ಥಿಗಳನ್ನ ರಂಗಭೂಮಿಯ ದಿಗ್ಗಜರು ಆಯ್ಕೆ ಮಾಡುತ್ತಿದ್ದರು. ಆಗ ಪ್ರಕಾಶ್ ಬಂದ'' - ಬಿ.ಸುರೇಶ್

    ಹುಚ್ಚನ ಪಾರ್ಟ್

    ಹುಚ್ಚನ ಪಾರ್ಟ್

    ''ನಾನು ಆಯ್ಕೆ ಆಗಿಲ್ಲ...ಆಯ್ಕೆ ಮಾಡಲೇಬೇಕು' ಅಂತ ಬಂದ. ಒಣಕ್ಕೊಂಡು, ಬಾಡ್ಹೋಗಿದ್ದ... ಊಟ ಮಾಡಿ ಎಷ್ಟು ದಿನ ಆಗಿದ್ಯೋ... ಅನ್ನೋ ತರಹ ಇದ್ದ. ಅವನ ಮುಖಕ್ಕಿಂತ ದೊಡ್ಡ ಸೈಝ್ ನ ಕನ್ನಡಕ ಹಾಕೊಂಡಿದ್ದ... ಏನು ಆಕ್ಟ್ ಮಾಡ್ತೀಯಾ ಅಂದ್ರೆ... ಹುಚ್ಚನ ಪಾರ್ಟ್ ಮಾಡಿದ. ಶಾಲೆಯ 17ನೇ ವಿದ್ಯಾರ್ಥಿ ಆಗಿ ಪ್ರಕಾಶ್ ರೈ ಸೇರ್ಕೊಂಡ'' - ಬಿ.ಸುರೇಶ್

    ಅಂದು ಅದ್ಭುತ ನಟನೆ

    ಅಂದು ಅದ್ಭುತ ನಟನೆ

    ''ನಮ್ ಬ್ರಾಹ್ಮಣಿಕೆ' ಅಂತ ಒಂದು ನಾಟಕ. ಅದರಲ್ಲಿ ಪ್ರಕಾಶ್ ಗೆ ಪ್ರಧಾನ ಪಾತ್ರ. ಇನ್ನೇನು ಒಂದು ವಾರ ಇದೆ ಶೋಗೆ ಅನ್ನೋವಾಗಲೇ ಪ್ರಕಾಶ್ ನಾಪತ್ತೆ. ಸಿದ್ದಾಪುರಕ್ಕೆ ಹುಡುಕೊಂಡು ಹೋದಾಗ ಹುಷಾರಿಲ್ಲ ಅಂತ ಗೊತ್ತಾಯ್ತು. ನನ್ನ ಟಿವಿಎಸ್50 ನಲ್ಲಿ ಅವನ್ನನ್ನ ಕರ್ಕೊಂಡು ಬಂದು ನಾಟಕ ಮಾಡಿಸಿದೆ. ಅವತ್ತು ಅದ್ಭುತವಾಗಿ ನಾಟಕ ಮಾಡಿದ್ದ. ಜ್ವರ ಇತ್ತು ಅಂತ ಯಾರಿಗೂ ಗೊತ್ತಿಲ್ಲದ ಹಾಗೆ ನಾಟಕ ಮಾಡಿದ್ದ'' - ಬಿ.ಸುರೇಶ್

    ವಿಜಯಮ್ಮ ಮಾತು

    ವಿಜಯಮ್ಮ ಮಾತು

    ''ನಮ್ಮ 'ಅಭಿನಯ ತರಂಗ'ದ ಒಬ್ಬ ವಿದ್ಯಾರ್ಥಿಯಾಗಿ ಬಂದವನು... ಆಮೇಲೆ ಪೂರ್ತಿ ನನ್ನ ಮನೆಯ ಹುಡುಗನಾಗಿ ಬೆಳೆದುಕೊಂಡು ಬಂದೆ. ನೀನು ಇಷ್ಟು ಎತ್ತರಕ್ಕೆ ಏರುತ್ತೀಯಾ ಅಂತ ಅವತ್ತು ನಾನು ಅಂದುಕೊಂಡಿರಲಿಲ್ಲ. ಇಂತಹ ಮಗು ನನ್ನ ಮನೆಯ ನೆರಳಿನಲ್ಲಿ ಸ್ವಲ್ಪ ದಿನ ಇತ್ತಲ್ಲಾ ಅನ್ನೋದೇ ನನಗೆ ಖುಷಿ'' - ವಿಜಯಮ್ಮ

    ನನ್ನ ಮತ್ತೊಬ್ಬ ತಾಯಿ

    ನನ್ನ ಮತ್ತೊಬ್ಬ ತಾಯಿ

    ''ವಿಜಯಮ್ಮ.. ನನ್ನ ಜೀವನದಲ್ಲಿ ಮತ್ತೊಬ್ಬ ತಾಯಿ. 'ಅಭಿನಯ ತರಂಗ'ದಲ್ಲಿ ನಾಟಕ ಮಾಡಬೇಕಾದರೆ, ಮಕ್ಕಳಿಗೆ ಪ್ರ್ಯಾಕ್ಟೀಸ್ ಮಾಡೋಕೆ 'ಸೂರು' ಇಲ್ಲ ಅಂತ ತಮ್ಮ ಕತ್ತಲ್ಲಿದ್ದ ಸರವನ್ನ ಮಾರಿ ಸೂರು ಮಾಡಿಕೊಟ್ಟರು. ವಿಜಯಮ್ಮ ನಮ್ಮನ್ನ ಕೈಹಿಡಿದುಕೊಂಡು ಬೆಳೆಸಿದವರು. ವಿಜಯಮ್ಮ ಬಿ.ಸುರೇಶ್ ಗೆ ಮಾತ್ರ ಅಮ್ಮ ಅಲ್ಲ. ನಮ್ಮೆಲ್ಲರಿಗೂ ಅಮ್ಮ. ಇವತ್ತಿಗೂ ವಿಜಯಮ್ಮ ಅಂದ್ರೆ ನಾನು ಎಲ್ಲೇ ಇದ್ದರೂ ಹೋಗಿ ಕಾಲಿಗೆ ಬೀಳುತ್ತೇನೆ'' - ಪ್ರಕಾಶ್ ರೈ, ನಟ

    English summary
    Multilingual Actor Prakash Rai revealed interesting facts about his college life in 'Weekend With Ramesh-3'
    Monday, March 27, 2017, 14:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X