»   » ನಟ ಪ್ರಕಾಶ್ ರೈ ಪಾಲಿನ 'ದೇವತೆ' ಈಕೆಯೇ.!

ನಟ ಪ್ರಕಾಶ್ ರೈ ಪಾಲಿನ 'ದೇವತೆ' ಈಕೆಯೇ.!

Posted by:
Subscribe to Filmibeat Kannada

ಸ್ಯಾಂಡಲ್ ವುಡ್, ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಬಹು ಬೇಡಿಕೆಯ ನಟನಾಗಿರುವ ಪ್ರಕಾಶ್ ರೈ ಇಂದು ಅನೇಕರಿಗೆ ರೋಲ್ ಮಾಡೆಲ್ ಆಗಿರಬಹುದು. ಆದ್ರೆ, ನಟ ಪ್ರಕಾಶ್ ರೈ ರವರ ಪಾಲಿನ 'ರಿಯಲ್ ಹೀರೋ' ಯಾರು ಅಂತ ನಿಮಗೆ ಗೊತ್ತಾ.?

ನಟ ಪ್ರಕಾಶ್ ರೈ ರವರ ಪಾಲಿನ 'ರಿಯಲ್ ಹೀರೋ' ಹಾಗೂ 'ದೇವತೆ' ಎಂದರೆ ಅವರ ತಾಯಿಯೇ. ಅನಾಥಾಶ್ರಮದಲ್ಲಿ ಬೆಳೆದ ಪ್ರಕಾಶ್ ರೈ ರವರ ತಾಯಿ ಸ್ವರ್ಣಲತಾ ರೈ, ನರ್ಸ್ ಆಗಿ ಕಷ್ಟದಲ್ಲಿ ಜೀವನ ಸಾಗಿಸಿದವರು. ಇಂದು ಪ್ರಕಾಶ್ ರೈ ದೊಡ್ಡ ಕಲಾವಿದ ಆಗಿದ್ದಾರೆ ಅಂದ್ರೆ ಅದರ ಕ್ರೆಡಿಟ್ ಸಲ್ಲಬೇಕಾಗಿರುವುದು ಅವರ ಅಮ್ಮನಿಗೆ.![ನಟ ಪ್ರಕಾಶ್ ರೈ ಮಾಡಿರುವ ಸಾಧನೆ ಎಂಥದ್ದು ಅಂತೀರಾ.?]

'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ತಮ್ಮ ಅಮ್ಮನ ಬಗ್ಗೆ ನಟ ಪ್ರಕಾಶ್ ರೈ ಏನೆಲ್ಲ ಹೇಳಿದರು ಅಂತ ಅವರ ಮಾತುಗಳಲ್ಲೇ ಓದಿರಿ....

'ಕಲಾವಿದರೇ..' ಎನ್ನುತ್ತಿದ್ದರು ಅಪ್ಪ

'ಕಲಾವಿದರೇ..' ಎನ್ನುತ್ತಿದ್ದರು ಅಪ್ಪ

''ನಾನು ದೊಡ್ಡ ಮನುಷ್ಯ ಆಗ್ತೀನಿ. ದೊಡ್ಡ ಕಲಾವಿದ ಆಗ್ತೀನಿ ಅಂತ ಅಪ್ಪ ಯಾವಾಗಲೂ ಹೇಳೋರು. ಅದಕ್ಕೆ ''ಕಲಾವಿದರೇ..'' ಅಂತ ನನ್ನನ್ನ ಕರೆಯುತ್ತಿದ್ದರು'' - ಪ್ರಕಾಶ್ ರೈ, ನಟ

ಅನಾಥಾಶ್ರಮದಲ್ಲಿ ಅಮ್ಮ ಬೆಳೆದದ್ದು

ಅನಾಥಾಶ್ರಮದಲ್ಲಿ ಅಮ್ಮ ಬೆಳೆದದ್ದು

''ನನಗೆ ನನ್ನ ತಾಯಿಯೇ ಹೀರೋ. ಆಕೆ ಅನಾಥಾಶ್ರಮದಲ್ಲಿ ಬೆಳೆದ ಹೆಣ್ಣುಮಗಳು. ಹನ್ನೆರಡು ವರ್ಷ ಇರುವಾಗಲೇ ಅವರ ತಾಯಿ ತೀರಿಕೊಂಡುಬಿಟ್ಟರು. ಅನಾಥಾಶ್ರಮದಲ್ಲಿ ಬೆಳೆದು ನರ್ಸ್ ಆದರು ನನ್ನ ತಾಯಿ'' - ಪ್ರಕಾಶ್ ರೈ, ನಟ

ಕಷ್ಟದ ಜೀವನ

ಕಷ್ಟದ ಜೀವನ

''1965 ನನಗೆ ಗಂಡು ಮಗು ಆಯ್ತು. ಪ್ರಕಾಶ್ ಬಹಳ ಮುದ್ದಾಗಿ ಇದ್ದ. ಕರ್ಲಿ ಹೇರ್ ಇತ್ತು. ಮಗು ನೋಡಿ ನನಗೆ ಬಹಳ ಖುಷಿ ಆಗಿತ್ತು. ತಂದೆ ತರಹನೇ ಇದ್ದ. ನನಗೆ ಬರುತ್ತಿದ್ದ ಸಂಬಳದಲ್ಲಿಯೇ ನಾನು ಎಲ್ಲರನ್ನೂ ಸಾಕಬೇಕಿತ್ತು'' - ಸ್ವರ್ಣಲತಾ ರೈ, ಪ್ರಕಾಶ್ ರೈ ತಾಯಿ

ಇಂತಹ ಮಗನನ್ನ ಪಡೆದಿರುವುದೇ ಪುಣ್ಯ

ಇಂತಹ ಮಗನನ್ನ ಪಡೆದಿರುವುದೇ ಪುಣ್ಯ

''ಇಂದು ನನ್ನನ್ನ ನನ್ನ ಮಗ ದೇವತೆ ತರಹ ನೋಡಿಕೊಳ್ಳುತ್ತಾನೆ. ತಾಯಿಗಿಂತ ಅವನಿಗೆ ಹೆಚ್ಚು ಏನೂ ಇಲ್ಲ. ನಾನು ಪುಣ್ಯವಂತೆ ಇಂತಹ ಮಗನನ್ನು ಪಡೆದಿರುವುದು'' - ಸ್ವರ್ಣಲತಾ ರೈ, ಪ್ರಕಾಶ್ ರೈ ತಾಯಿ

ತಂದೆಗೆ ಜವಾಬ್ದಾರಿ ಇರಲಿಲ್ಲ

ತಂದೆಗೆ ಜವಾಬ್ದಾರಿ ಇರಲಿಲ್ಲ

''ನನ್ನ ತಾಯಿ ದೇವತೆ. ನನ್ನ ತಂದೆ ಸೋಮಾರಿ. ಅವರು ದುಡಿಯಲಿಲ್ಲ. ಅವರಿಗೆ ಜವಾಬ್ದಾರಿ ಇರಲಿಲ್ಲ. ನಮ್ಮನ್ನೆಲ್ಲ ಸಾಕಿದ್ದು ನನ್ನ ತಾಯಿ. ಆ ಬಡತನದಲ್ಲಿಯೂ ಇವತ್ತಿಗೂ ನಾನು ಆರೋಗ್ಯವಾಗಿದ್ದೇನೆ ಅಂದ್ರೆ ಅವತ್ತು ಅವರು ಮಾಡಿಸಿದ ಊಟ ಕಾರಣ. ನಮಗಾಗಿ ಹಗಲು ರಾತ್ರಿ ಅಮ್ಮ ಕೆಲಸ ಮಾಡುತ್ತಿದ್ದರು. ನಮಗೋಸ್ಕರ ಅವರ ಆರೋಗ್ಯ ಹಾಳಾಗಿದೆ''- ಪ್ರಕಾಶ್ ರೈ, ನಟ

ಸಹೋದರನ ಮಾತು

ಸಹೋದರನ ಮಾತು

''ಚಿಕ್ಕವಯಸ್ಸಿಂದಲೂ ತಂದೆ ಸ್ಥಾನದಲ್ಲಿ ನಿಂತುಕೊಂಡು ನಮಗೆ ಬಹಳ ಸಪೋರ್ಟ್ ಮಾಡಿದ್ದಾನೆ. ಈಗ ನಾವು ಚೆನ್ನಾಗಿದ್ದೇವೆ ಅಂದ್ರೆ ಅದಕ್ಕೆ ಅಣ್ಣ ಕಾರಣ'' - ಪ್ರಸಾದ್ ರೈ, ಪ್ರಕಾಶ್ ರೈ ಸಹೋದರ

English summary
Multilingual Actor Prakash Rai became emotional while speaking about his Mother in 'Weekend With Ramesh-3'
Please Wait while comments are loading...

Kannada Photos

Go to : More Photos