»   » 'ಕರಾಟೆ ಕಿಂಗ್' ಶಂಕರ್ ನಾಗ್ ಬಗ್ಗೆ ಪ್ರಕಾಶ್ ರೈ ಮಾಡಿದ ಕಾಮೆಂಟ್ ಏನು.?

'ಕರಾಟೆ ಕಿಂಗ್' ಶಂಕರ್ ನಾಗ್ ಬಗ್ಗೆ ಪ್ರಕಾಶ್ ರೈ ಮಾಡಿದ ಕಾಮೆಂಟ್ ಏನು.?

Posted by:
Subscribe to Filmibeat Kannada

ನಟ ಶಂಕರ್ ನಾಗ್ ಅಂದ್ರೆ ಯಾರಿಗ್ತಾನೆ ಇಷ್ಟ ಇಲ್ಲ ಹೇಳಿ.? 80ರ ದಶಕದ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಶಂಕರ್ ನಾಗ್ ಅಂದ್ರೆ ಬಹುಭಾಷಾ ನಟ ಪ್ರಕಾಶ್ ರೈ ರವರಿಗೂ ಅಚ್ಚುಮೆಚ್ಚು.

'ಮಾಲ್ಗುಡಿ ಡೇಸ್' ಸಮಯದಲ್ಲಿ ಶಂಕರ್ ನಾಗ್ ರವರ ಜೊತೆ ಆತ್ಮೀಯರಾಗಿದ್ದ ಪ್ರಕಾಶ್ ರೈ, 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ 'ಆಟೋ ರಾಜ'ನ ಬಗ್ಗೆ ಪ್ರೀತಿಯಿಂದ ಕೆಲ ಮಾತುಗಳನ್ನಾಡಿದರು. ಅದನ್ನೆಲ್ಲ ಅವರ ಮಾತುಗಳಲ್ಲೇ ಓದಿರಿ....['ಶಂಕರಣ್ಣ'ನ ಬಗ್ಗೆ ನೀವು ಕೇಳರಿಯದ ಸಂಗತಿಗಳು]

ಶಂಕರ್ ನಾಗ್ ಎನರ್ಜಿ ಸ್ಫೂರ್ತಿ

ಶಂಕರ್ ನಾಗ್ ಎನರ್ಜಿ ಸ್ಫೂರ್ತಿ

''ಶಂಕರ್ ನಾಗ್ ಗೆ 'ನಾಗಮಂಡಲ' ಮಾಡಬೇಕು ಅಂತ ತುಂಬಾ ಆಸೆ ಇತ್ತು. 'ನಾಗಮಂಡಲ' ಮಾಡುವ ಅವಕಾಶ ನನಗೆ ಸಿಕ್ತು. ನನ್ನ ಎನರ್ಜಿಗೆ ಸ್ಫೂರ್ತಿ ಶಂಕರ್ ನಾಗ್'' - ಪ್ರಕಾಶ್ ರೈ, ನಟ[ಅಂದು ನಟ ಪ್ರಕಾಶ್ ರೈ ಅಂತರಾಳದಲ್ಲಿ ಕುದಿಯುತ್ತಿತ್ತು ಹತಾಶೆಯ ಬೇಗುದಿ]

ಟೈಮ್ ವೇಸ್ಟ್ ಮಾಡುತ್ತಿರಲಿಲ್ಲ

ಟೈಮ್ ವೇಸ್ಟ್ ಮಾಡುತ್ತಿರಲಿಲ್ಲ

''ಶಂಕರ್ ನಾಗ್ ಎರಡು ನಿಮಿಷ ಕೂಡ ವೇಸ್ಟ್ ಮಾಡುತ್ತಿರಲಿಲ್ಲ. ನಾವೆಲ್ಲ ಮಾಲ್ಗುಡಿ ಡೇಸ್ ಮಾಡುತ್ತಿದ್ದಾಗ ಸುಮ್ಮನೆ ಕೂರಲು ಬಿಡುತ್ತಿರಲಿಲ್ಲ'' - ಪ್ರಕಾಶ್ ರೈ, ನಟ[ನಟ ಪ್ರಕಾಶ್ ರೈ ಮಾಡಿರುವ ಸಾಧನೆ ಎಂಥದ್ದು ಅಂತೀರಾ.?]

ಶಂಕರ್ ನಾಗ್ ಇವತ್ತು ಇದಿದ್ರೆ...

ಶಂಕರ್ ನಾಗ್ ಇವತ್ತು ಇದಿದ್ರೆ...

''ಶಂಕರ್ ನಾಗ್ ಇವತ್ತು ಇದಿದ್ರೆ ಕನ್ನಡ ಚಿತ್ರರಂಗ ಬೇರ ಸ್ಥಾನದಲ್ಲಿ ಇರೋದು. ಕರ್ನಾಟಕದ ರಾಜಕೀಯ ಪರಿಸ್ಥಿತಿ ಬೇರೆ ತರಹ ಇರೋದು'' - ಪ್ರಕಾಶ್ ರೈ, ನಟ[ನಟ ಪ್ರಕಾಶ್ ರೈ ಪಾಲಿನ 'ದೇವತೆ' ಈಕೆಯೇ.!]

ನಾವೇ ಭಾಗ್ಯವಂತರು

ನಾವೇ ಭಾಗ್ಯವಂತರು

''ನಮ್ಮ ದುರಾದೃಷ್ಟ ಬಹಳ ಸಣ್ಣ ವಯಸ್ಸಿಗೆ ಹೋಗ್ಬಿಟ್ಟರು. ಅವರ ಗರಡಿಯಲ್ಲಿ, ಅವರ ಎನರ್ಜಿಯನ್ನ, ಅವರ ವಿಷನ್ ನ ನೋಡಿದ ನಾವು ಭಾಗ್ಯವಂತರು'' - ಪ್ರಕಾಶ್ ರೈ, ನಟ[ನಟ ಪ್ರಕಾಶ್ ರೈಗಿದ್ದ ಅಹಂಕಾರ ಮಟ್ಟ ಆಗಿದ್ದು ಹೇಗೆ ಗೊತ್ತಾ.?]

English summary
Multilingual Actor Prakash Rai spoke about Shankar Nag in 'Weekend With Ramesh-3'
Please Wait while comments are loading...

Kannada Photos

Go to : More Photos