»   » 'ವೀಕೆಂಡ್ ವಿತ್ ರಮೇಶ್' ಸಾಧಕರ ಆಯ್ಕೆ ಬಗ್ಗೆ ಯಾರಿಗೂ ತಿಳಿಯದ ವಿಷಯ..

'ವೀಕೆಂಡ್ ವಿತ್ ರಮೇಶ್' ಸಾಧಕರ ಆಯ್ಕೆ ಬಗ್ಗೆ ಯಾರಿಗೂ ತಿಳಿಯದ ವಿಷಯ..

Posted by:
Subscribe to Filmibeat Kannada

'ವೀಕೆಂಡ್ ವಿತ್ ರಮೇಶ್' ಮೊದಲನೇ ಸೀಸನ್ ನಲ್ಲಿ ಕ್ಯಾಪ್ಟನ್ ಗೋಪಿನಾಥ್ ಸೇರಿದಂತೆ ಹಲವು ಕ್ಷೇತ್ರದ ಸಾಧಕರನ್ನು ಜೀ ಕನ್ನಡ ವಾಹಿನಿ ಪರಿಚಯ ಮಾಡಿಕೊಟ್ಟಿತ್ತು. ಆದರೆ ಎರಡನೇ ಆವೃತ್ತಿಯಲ್ಲಿ ಸಿನಿಮಾ ಕ್ಷೇತ್ರ ಹೊರತು ಪಡಿಸಿ ಇತರೆ ಯಾವುದೇ ಕ್ಷೇತ್ರದ ಸಾಧಕರು 'ರಮೇಶ್ ಜೊತೆ ವೀಕೆಂಡ್' ನಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ವೀಕ್ಷಕರಲ್ಲಿ ಸಹಜವಾಗಿ ಕೊಂಚ ಬೇಸರವಾಗಿತ್ತು.['ವೀಕೆಂಡ್ ವಿತ್ ರಮೇಶ್'ಗೆ ಸಾಧಕರನ್ನು ಕರೆತರುವುದೇ ದೊಡ್ಡ ಚಾಲೆಂಜ್: ರಾಘವೇಂದ್ರ ಹುಣಸೂರು]

ಆದರೆ ಈ ಭಾರಿ 'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟ್ ನಲ್ಲಿ ಇತರೆ ಕ್ಷೇತ್ರದ ಹಲವರು ಕೂರಲಿದ್ದಾರೆ. ಕನ್ನಡಿಗರು ತಮ್ಮ ನಡುವಿನ ಹಲವು ಕಾಮನ್ ಮ್ಯಾನ್ (ಸಿನಿಮೇತರ) ಸಾಧಕರನ್ನು ನೋಡಬಹುದಾಗಿದೆ.['ವೀಕೆಂಡ್ ವಿತ್ ರಮೇಶ್-3' ಸಾಧಕರ ಪಟ್ಟಿ ಬಹಿರಂಗ ಪಡಿಸಿದ ಜೀ ಕನ್ನಡ ವಾಹಿನಿ ಮುಖ್ಯಸ್ಥ!]

ಇದೆಲ್ಲಾ ಓಕೆ. ಆದ್ರೆ ನಿಮಗೆನಾದ್ರು, 'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟ್ ಮೇಲೆ ಕೂರುವವರನ್ನು ಆಯ್ಕೆ ಮಾಡುವುದು ಯಾರು ಗೊತ್ತಾ? ಸಾಧಕರನ್ನ ಆಯ್ಕೆ ಮಾಡಲು ಯಾವ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ ಗೊತ್ತಾ? ಭಾಗಶಃ ಯಾರಿಗೂ ಈ ಸೀಕ್ರೇಟ್ ಗೊತ್ತಿರಲ್ಲ. ಆದ್ರೆ ಈ ಬಗ್ಗೆ ನಾವು ಕೇಳಿದ ಪ್ರಶ್ನೆಗೆ ಜೀ ಕನ್ನಡ ವಾಹಿನಿ ಕಾರ್ಯಕ್ರಮ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಕೊಟ್ಟ ಉತ್ತರ ಇಲ್ಲಿದೆ ನೋಡಿ.

ಸಾಧಕರನ್ನು ಆಯ್ಕೆ ಮಾಡಲು ಪರಿಗಣಿಸುವ ಮಾನದಂಡಗಳು ಯಾವುವು?

ಸಾಧಕರನ್ನು ಆಯ್ಕೆ ಮಾಡಲು ಪರಿಗಣಿಸುವ ಮಾನದಂಡಗಳು ಯಾವುವು?

- ಬೇಸಿಕಲಿ ಯಾರೇ ಸಾಧಕರನ್ನ ಕರೆದುಕೊಂಡು ಬಂದು ಕೂರಿಸಿದರು, ಪ್ರೇಕ್ಷಕರು ಅವರನ್ನ ಒಪ್ಪಿಕೊಳ್ಳುವಂತಿರಬೇಕು. ಅವರು ಖಂಡಿತ ಸಾಧನೆ ಮಾಡಿದ್ದಾರೆ ಅಂತ ಎಲ್ಲರೂ ಮನಪೂರ್ವಕವಾಗಿ ಮೆಚ್ಚಿಕೊಳ್ಳುವಂತಿರಬೇಕು.[ಬಹುನಿರೀಕ್ಷಿತ 'ವೀಕೆಂಡ್' ಆರಂಭ: ಮೊದಲ ಅತಿಥಿ ಬಹಿರಂಗ.!]

ಯಾವುದಾದರೂ ಕ್ಷೇತ್ರಕ್ಕೆ ಕೊಡುಗೆ ನೀಡಿರಬೇಕು..

ಯಾವುದಾದರೂ ಕ್ಷೇತ್ರಕ್ಕೆ ಕೊಡುಗೆ ನೀಡಿರಬೇಕು..

- ನಾನು ಇಂತದ್ದೇ ಕ್ಷೇತ್ರದಲ್ಲಿ ಬೆಳೆಯಬೇಕು ಎಂಬ ಗುರಿಯೊಂದಿಗೆ, ಮೊದಲಿನಿಂದಲೂ ಹಾರ್ಡ್ ವರ್ಕ್ ಮಾಡಿರಬೇಕು. ಜೊತೆಗೆ ಮುಖ್ಯವಾಗಿ ಸಾಧಕರು ಎಂಬ ಹೆಸರಿಗೆ ಅವರು ಅರ್ಹವಾಗಿರಬೇಕು. ಅಂತಹ ವ್ಯಕ್ತಿಗಳ ಮೇಲೆ ನಮ್ಮ ಕಣ್ಣು ಸದಾ ಇರುತ್ತದೆ.

ಸಾಧಕರ ವೇದಿಕೆಯಲ್ಲಿ ಕೂರುವವರು ಎಲ್ಲರಿಗೂ ಇನ್ಸ್ ಪೈಯರ್ ಆಗಬೇಕು..

ಸಾಧಕರ ವೇದಿಕೆಯಲ್ಲಿ ಕೂರುವವರು ಎಲ್ಲರಿಗೂ ಇನ್ಸ್ ಪೈಯರ್ ಆಗಬೇಕು..

- 'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟಿನಲ್ಲಿ ಕೂರುವವರ ಬದುಕು ನೋಡುಗರಿಗೆ ಸ್ಪೂರ್ತಿ ಆಗಬೇಕು. ಇತರರು ಅವರನ್ನು ನೋಡಿ ಪಾಠ ಕಲಿಯುವಂತಿರಬೇಕು. ಅಷ್ಟೇ ಮುಖ್ಯವಾಗಿ ಬದುಕಿನ ಶೈಲಿ ಜನರಿಗೆ ಇಷ್ಟ ಆಗುವಂತಹ ವ್ಯಕ್ತಿಗಳನ್ನು ನಾವು ಆಯ್ಕೆ ಮಾಡುತ್ತೇವೆ.

ಎಲ್ಲಾ ಅಂಶಗಳನ್ನು ಪರಿಶೀಲಿಸಿ ಆಯ್ಕೆ ಮಾಡುವುದು ಯಾರು?

ಎಲ್ಲಾ ಅಂಶಗಳನ್ನು ಪರಿಶೀಲಿಸಿ ಆಯ್ಕೆ ಮಾಡುವುದು ಯಾರು?

'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟ್ ಮೇಲೆ ಕೂರುವವರನ್ನು ಶಾರ್ಟ್ ಲಿಸ್ಟ್ ಮಾಡೋದು, ಜೀ ಕನ್ನಡ ವಾಹಿನಿಯನ್ನು ನಂಬರ್ ಒನ್ ಸ್ಥಾನಕ್ಕೆ ತಂದ ಪ್ರೋಗ್ರಾಮ್ ಮತ್ತು ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು.

ವಿಶೇಷ ರಿಸರ್ಚ್ ಟೀಮ್ ಸಹ ಇರುತ್ತೆ

ವಿಶೇಷ ರಿಸರ್ಚ್ ಟೀಮ್ ಸಹ ಇರುತ್ತೆ

ರಾಘವೇಂದ್ರ ಹುಣಸೂರು ಶಾರ್ಟ್ ಲಿಸ್ಟ್ ಮಾಡಿದ ಸಾಧಕರ ಬಗ್ಗೆ ಹೆಚ್ಚಿನ ರಿಸರ್ಚ್ ಮಾಡುವುದು ಅವರ ಟೀಮ್.

English summary
Zee Kannada Channel's popular 'Weekend with Ramesh 3' is about to start From March 25. Here is full information related to "Weekend With Ramesh' Achievers list selection.
Please Wait while comments are loading...

Kannada Photos

Go to : More Photos