twitter
    For Quick Alerts
    ALLOW NOTIFICATIONS  
    For Daily Alerts

    ಮುಂಬೈನ ಮುಜುಗರದ ಶಾಲಾ ದಿನಗಳ ಬಗ್ಗೆ ಅನಂತ್ ಹೀಗಂದ್ರು?

    By Suneetha
    |

    ಕನ್ನಡದ ಗ್ರೇಟ್ ನಟ ಅನಂತ್ ನಾಗ್ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿ ಎಲ್ಲರ ಕೈಯಲ್ಲೂ ಸೈ ಎನಿಸಿಕೊಂಡರು ಕೂಡ ಶಾಲಾ ದಿನಗಳಲ್ಲಿ ಎಲ್ಲರಿಂದ ನಿಂದನೆಗೆ ಹಾಗೂ ಅವಮಾನಕ್ಕೆ ಒಳಗಾಗಿದ್ದರು ಎಂದರೆ ನೀವು ನಂಬುತ್ತೀರಾ?.

    ಹೌದು ಕಿರುತೆರೆಯಲ್ಲಿ 6 ಧಾರಾವಾಹಿಗಳಲ್ಲಿ ನಟಿಸಿ, ಕೇವಲ ನಟರಾಗಿ ಮಾತ್ರವಲ್ಲದೇ, ರಾಜಕೀಯ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಿರುವ ಅನಂತ್ ನಾಗ್ ಅವರು 1994ರಲ್ಲಿ ಮಲ್ಲೇಶ್ವರಂ ಕ್ಷೇತ್ರದಿಂದ ಗೆದ್ದು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ರಾಜ್ಯ ಸರ್ಕಾರದ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿರುವ ನಟ ಅನಂತ್ ನಾಗ್ ಅವರ ಸ್ಕೂಲ್ ದಿನಗಳು ಅಷ್ಟಾಗಿ ಚೆನ್ನಾಗಿರಲಿಲ್ಲವಂತೆ.[ಅನಂತ್ ಅವರ ಸ್ವರ್ಗೀಯವಾಗಿದ್ದ ಬಾಲ್ಯ ವೀಕೆಂಡ್ ನಲ್ಲಿ ಬಹಿರಂಗ]

    ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದಾಗ ಶೇ.95% ಅಂಕಗಳನ್ನು ಪಡೆಯುತ್ತಿದ್ದ ಅನಂತ್ ನಾಗ್ ಅವರನ್ನು ಇಂಗ್ಲೀಷ್ ಮಾಧ್ಯಮಕ್ಕೆ ಹಾಕಿದಾಗ ಅವರ ಪಾಡು ಹೇಗಾಗಿತ್ತು ಅನ್ನೋದನ್ನ ವೀಕೆಂಡ್ ನಲ್ಲಿ ಬಹಿರಂಗಪಡಿಸಿದ್ದಾರೆ. ಅದೇನೆಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

    ಬಾಂಬೆಗೆ ಪ್ರಯಾಣ

    ಬಾಂಬೆಗೆ ಪ್ರಯಾಣ

    ಹೊನ್ನಾವರದಲ್ಲಿ ಇರುವಾಗ 5ನೇ, 6ನೇ, 7ನೇ, 8ನೇ ತರಗತಿಯನ್ನು ನಾನು ಹೊನ್ನಾವರದಲ್ಲಿ ಕಳೆದ. ಆ ನನ್ನ ನಾಲ್ಕು ವರ್ಷದ ಹೊನ್ನಾವರದ ದಿನಗಳು ನನಗೆ ಹೊನ್ನಿನಷ್ಟೇ ಅಮೂಲ್ಯ. ಯಾಕೆಂದರೆ ಆ ದಿನಗಳಲ್ಲಿ ಸ್ವರ್ಗೀಯ ದಿನಗಳ ಅನುಭವ ಇತ್ತು. ಓದುವುದರಲ್ಲೂ ತುಂಬಾ ಮುಂದೆ ಇದ್ದೆ. ನನ್ನನ್ನು ಮಠದ ಗುರುಗಳು ಕೂಡ ಶಿಷ್ಯನಾಗಿ ಸ್ವೀಕಾರ ಮಾಡಿದ್ದರು. ಆವಾಗ ನನ್ನ ಬುದ್ಧಿವಂತಿಕೆ ನೋಡಿ ನನ್ನನ್ನು ಬಾಂಬೆಗೆ ಯಾಕೆ ಕಳುಹಿಸಬಾರದು ಅಂತ ಮಾತಾಡಿಕೊಂಡರು. - ಅನಂತ್

    ಮುಂಬೈನಲ್ಲಿ ಇಂಗ್ಲೀಷ್ ಮಾಧ್ಯಮ

    ಮುಂಬೈನಲ್ಲಿ ಇಂಗ್ಲೀಷ್ ಮಾಧ್ಯಮ

    ಹೊನ್ನಾವರದ ಕನ್ನಡ ಮಾಧ್ಯಮದಿಂದ ನನ್ನನ್ನು ಮುಂಬೈನ ಇಂಗ್ಲೀಷ್ ಮಾಧ್ಯಮಕ್ಕೆ ಕಳುಹಿಸಿಕೊಟ್ಟರು. ಅಲ್ಲಿ ನನಗೆ ಕನ್ನಡದಿಂದ ಇಂಗ್ಲೀಷ್ ಮಾಧ್ಯಮಕ್ಕೆ ಬದಲಾದಾಗ ಅದು ನನಗೆ ಬಹಳ ಕಷ್ಟ ಆಯಿತು. ಕನ್ನಡದಲ್ಲಿ ರ‍್ಯಾಂಕ್‌ ಸ್ಟೂಡೆಂಟ್ ಆಗಿದ್ದ ನನಗೆ ಅಲ್ಲಿ ಹೋಗಿ ತುಂಬಾ ಕಷ್ಟ ಆಯಿತು. ಅಲ್ಲಿ ಎಲ್ಲರೂ ತುಂಬಾ ಫಾಸ್ಟ್ ಆಗಿ ಮಾತನಾಡುತ್ತಿದ್ದರು. ಇಂಗ್ಲೀಷ್ ನಲ್ಲಿ ಎಲ್ಲವನ್ನೂ ಬರೆಯಬೇಕಾಗಿತ್ತು ಆಗ ನನಗೆ ಕಷ್ಟ ಆಗುತ್ತಿತ್ತು. - ಅನಂತ್

    9ನಲ್ಲಿ ಹೇಗೋ ಪಾಸ್ ಆಯ್ತು ಆದರೆ..

    9ನಲ್ಲಿ ಹೇಗೋ ಪಾಸ್ ಆಯ್ತು ಆದರೆ..

    ನನ್ನನ್ನು ಕನ್ನಡ ಮಾಧ್ಯಮದಿಂದ ಬಂದಿದ್ದಾನೆ ಸ್ವಲ್ಪ ಕಷ್ಟ ಆಗಬಹುದು ಮುಂದೆ ಕಲಿಯುತ್ತಾನೆ ಎಂದು ನನ್ನನ್ನು 9th ಪಾಸ್ ಮಾಡಿದ್ರು. ಆದರೆ ಹತ್ತನೇ ತರಗತಿಗೆ ಬಂದಾಗ ಇನ್ನೂ ಕಠಿಣವಾಗಲು ಶುರು ಆಯ್ತು. ನನಗೆ ಏನೂ ಅರ್ಥವಾಗದೇ ಇದ್ದಾಗ ನನ್ನ ಮನಸ್ಸುಗಳು ಶಿರಾಲಿ, ಹೊನ್ನಾವರ, ಅಂತ ಎಲ್ಲಾ ಕಡೆ ಸುತ್ತುತ್ತಿತ್ತು.

     ಬೆಂಚಿನ ಮೇಲೆ ನಿಲ್ಲಿಸುತ್ತಿದ್ದ ಶಿಕ್ಷಕರು

    ಬೆಂಚಿನ ಮೇಲೆ ನಿಲ್ಲಿಸುತ್ತಿದ್ದ ಶಿಕ್ಷಕರು

    ನಾನು ಹೊರಗಡೆ ಗಿಡ-ಮರ, ಮಳೆ, ಪಕ್ಷಿಗಳನ್ನು ನೋಡುತ್ತಿದ್ದರೆ, ಅವರು ನನಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ನಾನು ಸ್ವಲ್ಪ ಅರ್ಥ ಆಗಿ ಉತ್ತರ ಹೇಳೋಕೆ ಹೋದರೆ ಉಳಿದ ಹುಡುಗರು ನಗುತ್ತಿದ್ದರು. ಅದಕ್ಕೆ ನಾನು ಮಾತಾನಾಡುವುದನ್ನು ನಿಲ್ಲಿಸಿ ತಲೆತಗ್ಗಿಸಿ ನಿಲ್ಲುತ್ತಿದ್ದೆ. ಅದು ಮಾಸ್ತರಿಗೆ ಸಿಟ್ಟು ಬಂದು ನನ್ನನ್ನು ಬೆಂಚಿನ ಮೇಲೆ ನಿಲ್ಲಿಸುತ್ತಿದ್ದರು. ಆಮೇಲೆ ಮೊಣಕಾಲು ಹಾಕಿಸಿ ಕ್ಲಾಸ್ ರೂಮಿನ ಬಾಗಿಲ ಬಳಿ ನಿಲ್ಲಿಸುತ್ತಿದ್ದರು. ಹಾಗಾಗಿ ನಾನು 10th ನಲ್ಲಿ ನಾಪಾಸಾದೆ. ಆಮೇಲೆ ನನಗೆ ವಿದ್ಯಾಭ್ಯಾಸದಲ್ಲಿದ್ದ ಆಸಕ್ತಿ ಹೊರಟು ಹೋಯಿತು. - ಅನಂತ್

    ರೀಪೀಟ್ 10th ಕ್ಲಾಸ್ ನಲ್ಲಿ ಆದ ಮುಜುಗರ

    ರೀಪೀಟ್ 10th ಕ್ಲಾಸ್ ನಲ್ಲಿ ಆದ ಮುಜುಗರ

    ನಾನು ಫೇಲ್ ಆಗಿ ಮತ್ತೆ ಅದೇ ಹತ್ತನೇ ತರಗತಿಯಲ್ಲಿ ರಿಪೀಟ್ ಆದಾಗ ನನ್ನ ಜ್ಯೂನಿಯರ್ಸ್ ನನ್ನನ್ನು ಹಾಸ್ಯ ಮಾಡಿ ನಗುತ್ತಿದ್ದರು ಆಗ ನನಗೆ ತುಂಬಾ ಬೇಜಾರಾಗುತ್ತಿತ್ತು. ಮೆಟ್ರೋ ಥಿಯೇಟರ್ ನ 4ನೇ ಫ್ಲೋರ್ ನಲ್ಲಿ ನನ್ನ ಚಿಕ್ಕಪ್ಪನ ಆಫೀಸ್ ಇತ್ತು. ನಾನು ವಾರಕ್ಕೊಂದು 2 ಸಲ ಅವರನ್ನು ಭೇಟಿ ಮಾಡಲು ಆಫೀಸ್ ಗೆ ಹೋಗುತ್ತಿದ್ದೆ. ಹೀಗೆ ಒಂದು ಬಾರಿ ಹೋಗಿದ್ದಾಗ ಲಿಫ್ಟ್ ಕೆಟ್ಟು ಹೋಯಿತು ಅಂತ ಮಟ್ಟಿಲಿಳಿದು ಬರಬೇಕಾದರೆ, ಡೈಲಾಗ್ ಕೇಳಿಸಿತು ಇಣುಕಿ ನೋಡಿದರೆ, ಮೆಟ್ರೋ ಥಿಯೇಟರ್ ನಲ್ಲಿ ಸಿನಿಮಾ ಆಗ್ತಾ ಇತ್ತು. - ಅನಂತ್

    ಕದ್ದು ಸಿನಿಮಾ ನೋಡಿದ್ದು

    ಕದ್ದು ಸಿನಿಮಾ ನೋಡಿದ್ದು

    ಹಾಗೆ ಮೆಲ್ಲ ಪರದೆ ಸರಿಸಿ ನೋಡಿದರೆ ಸಿನಿಮಾ ಆಗ್ತಾ ಇತ್ತು. ಆ ಸಂದರ್ಭದಲ್ಲಿ ನನಗೆ ಹಣಕಾಸಿನ ತೊಂದರೆ ತುಂಬಾ ಇತ್ತು. ಹಾಗಾಗಿ ದುಡ್ಡು ಕೊಟ್ಟು ಸಿನಿಮಾ ನೋಡುವಷ್ಟು ಶ್ರೀಮಂತಿಕೆ ಇರಲಿಲ್ಲ. ಹಾಗೆ ನಾನು ಆಗಾಗ ಕ್ಲಾಸ್ ನಲ್ಲಿ ಹಾಜರಿ ಹಾಕಿಸಿಕೊಂಡು, ಅಲ್ಲಿಂದ ತಪ್ಪಿಸಿಕೊಂಡು ಬಂದು ಮೆಟ್ರೋ ಥಿಯೇಟರ್ ನಲ್ಲಿ ಕದ್ದು ಪರದೆ ಸಂದಿಯಲ್ಲಿ ನಿಂತು ಸಿನಿಮಾ ನೋಡಲು ಬರುತ್ತಿದ್ದೆ. ಸೋ ನಾನು ಸೆಕೆಂಡ್ 10th ನಲ್ಲಿ ಸುಮಾರು 60-70 ಇಂಗ್ಲೀಷ್ ಸಿನಿಮಾ ನೋಡಿದ್ದೇನೆ.- ಅನಂತ್

    ನಾಟಕಕ್ಕೆ ಕರೆ ಬಂತು

    ನಾಟಕಕ್ಕೆ ಕರೆ ಬಂತು

    ಇಂಗ್ಲೀಷ್ ಚಿತ್ರದಲ್ಲಿ ಅವರು ಮಾಡುವ ನ್ಯಾಚುರಲ್ ನಟನೆ ನನಗೆ ತುಂಬಾ ಹಿಡಿಸಿತು. ಯಾಕಂದ್ರೆ ನಮ್ಮವರು ಸ್ವಲ್ಪ ಓವರ್ ಅಗಿ ನಾಟಕೀಯವಾಗಿ ಮಾಡ್ತಾರೆ ಅಂತ ಅನಿಸಿತ್ತು. ಆಮೇಲೆ ಹತ್ತನೇ ತರಗತಿ ಆದ ಮೇಲೆ ನನಗೆ ನಾಟಕದಿಂದ ಕರೆ ಬಂತು ಅಲ್ಲಿ ನಾನು ಇಂಗ್ಲೀಷ್ ಸಿನಿಮಾದಲ್ಲಿ ನೋಡಿದ ನಟನೆಯನ್ನು ನನಗೆ ಕೊಟ್ಟ ಪಾತ್ರದಲ್ಲಿ ಅನುಕರಣೆ ಮಾಡಲು ಶುರು ಮಾಡಿದೆ. - ಅನಂತ್

    ಸೈನ್ಸ್ ನಿಂದ ಕಾಮರ್ಸ್ ಗೆ ಶಿಪ್ಟ್

    ಸೈನ್ಸ್ ನಿಂದ ಕಾಮರ್ಸ್ ಗೆ ಶಿಪ್ಟ್

    ನನ್ನ ತಂದೆಯವರು ನೋಡಿದ್ರು, ಮಗ ಇಂಜಿನಿಯರ್ ಆಗ್ಲಿ, ಡಾಕ್ಟರ್ ಆಗಲಿ, ಕಡೇ ಪಕ್ಷ ಲಾಯರ್ ಆದ್ರೂ ಆಗ್ಲಿ ಅಂತ. ಆದರೆ ನನಗೆ ಈ ಶಾಲೆಯ ಅನುಭವದಿಂದ ನಾನು ಈ ಎಲ್ಲಾ ಆಸೆಯಿಂದ ಮತ್ತು ವಿದ್ಯೆಯಿಂದ ವಿಮುಖನಾದೆ. ಆಮೇಲೆ ನನಗೆ ನಾಟಕದಲ್ಲಿ ಕರೆ ಬಂತು ನಾಟಕದಲ್ಲಿ ಅಭಿನಯಿಸಲು ಶುರು ಮಾಡಿದೆ. ಆ ಸಂದರ್ಭದಲ್ಲಿ ಅಪ್ಪ ಇಂಗ್ಲೀಷ್ ನಲ್ಲಿ ಪತ್ರ ಬರೀತಾ ಇದ್ರು. ಆದರೆ ನಾನು ಓದುತ್ತಾ ಇರ್ಲಿಲ್ಲ. ಸರಿಯಾಗಿ ಉತ್ತರ ಬರೀತಾನೂ ಇರ್ಲಿಲ್ಲ. ಎಲ್ಲರೂ ಆರ್ಟ್ಸ್, ಕಾಮರ್ಸ್, ಸೈನ್ಸ್ ಅಂತ ಆಯ್ಕೆ ಮಾಡಿಕೊಂಡಾಗ ನಾನು ಯಾವುದು ಎಂದು ಗೊತ್ತಾಗದೇ? ಸೈನ್ಸ್ ತಗೊಂಡೆ ಆದರೆ ಅದು ಕೈ ಹಿಡಿಯಲಿಲ್ಲ. ಆ ದಿನಗಳು ನನಗೆ ನರಕದ ಜೀವನ ಆಗಿತ್ತು

    ಕೈ ಕೊಟ್ಟ ಅಪ್ಪ

    ಕೈ ಕೊಟ್ಟ ಅಪ್ಪ

    ಇಷ್ಟೆಲ್ಲಾ ಆದಾಗ ಅಪ್ಪ ಹೇಳಿಬಿಟ್ರು, ನಿನಗೆ ನಾಟಕದಲ್ಲಿ ಜೀವನ ಆಗುತ್ತೆ ಅಂದ್ರೆ ನೀನೆ ಸಂಪಾದಿಸಿ ನೀನೇ ನಿನ್ನ ಕಾಲ ಮೇಲೆ ನಿಲ್ಲು. ನಾನು ನಿನಗಿನ್ನು ಖರ್ಚು ಮಾಡೋಕೆ ಆಗಲ್ಲ ಅಂದ್ರು. ಆವಾಗ ನಾನು ಸಂಪಾದನೆ ಮಾಡುವ ಬಗ್ಗೆ ಯೋಚನೆ ಮಾಡಿದೆ. ಆಗಿನ ಕಾಲದಲ್ಲಿ ಈ ನಾಟಕದಲ್ಲಿ ಅಭಿನಯ ಮಾಡೋರಿಗೆ, ಸ್ಪೋರ್ಟ್ಸ್ ನಲ್ಲಿ ಇರೋರಿಗೆ ಖಾಸಗಿ ಕಂಪೆನಿಗಳಲ್ಲಿ ಕೆಲಸ ಸಿಗುತ್ತಿತ್ತು. ಹಾಗೆ ನಾನು ಬ್ಯಾಂಕ್ ನಲ್ಲಿ ಕೆಲಸಕ್ಕೆ ಪ್ರಯತ್ನ ಪಟ್ಟೆ. ಹಾಗಾಗಿ ನಾನು ದತ್ತಾತ್ರೇಯ ಅನ್ನೋ ಒಬ್ಬ ಯೂನಿಯನ್ ಬ್ಯಾಂಕ್ ಮ್ಯಾನೇಜರಿಗೆ ನನ್ನ ನಾಟಕ ತೋರಿಸಿ ಅವರ ಕೈಯಿಂದ ಯೂನಿಯನ್ ಬ್ಯಾಂಕ್ ನಲ್ಲಿ ಕ್ಲರ್ಕ್ ಆಗಿ ಕೆಲಸ ಗಿಟ್ಟಿಸಿಕೊಂಡೆ.

    ರಂಗಭೂಮಿ ಬಗ್ಗೆ

    ರಂಗಭೂಮಿ ಬಗ್ಗೆ

    ನಾನು ಏನು? ಎತ್ತ? ಅಂತ ಅಯೋಮಯ ಸ್ಥಿತಿಯಲ್ಲಿ ಇದ್ದಾಗ ಕೊಂಕಣಿಯಲ್ಲಿ ನಾಟಕ ಬರೆಯುತ್ತಿದ್ದ ಪ್ರಭಾಕರ್ ಮುಧೂರ್ ಅವರು ಸಿಕ್ಕಿದಾಗ, ನೋಡೋಕೆ ಚೆನ್ನಾಗಿದ್ದೀಯ ನಾಟಕದಲ್ಲಿ ಪಾರ್ಟ್ ಮಾಡ್ತೀಯ ಅಂತ ಕೇಳಿದ್ರು. ನಾನು ಓಕೆ ಅಂದೆ. ಅವರು ನನ್ನನ್ನು ಕರೆದುಕೊಂಡು ಹೋಗಿ ಚೈತನ್ಯ ಮಹಾಪ್ರಭು ಅವರ ಮೇಲೆ ಕೊಂಕಣಿಯಲ್ಲಿ 'ಮೂರಂಕಿ ನಾಟಕ' ಮಾಡಿಸಿದ್ರು, ಅದೇ ನನ್ನ ಮೊದಲ ನಾಟಕ. ಆ ನಂತರ ನನಗೆ ಉತ್ತೇಜನ ಸಿಕ್ತು. ಆತ್ಮವಿಶ್ವಾಸ ಸಿಕ್ತು. ಮಾಡಬಲ್ಲೇ ಅನ್ನಿಸ್ತು. ಆಮೇಲೆ ಕನ್ನಡ, ಮರಾಠಿ ಮುಂತಾದ ಭಾಷೆಗಳಲ್ಲಿ ಮಾಡಿದೆ. ಸುಮಾರು 50 ನಾಟಕ ಮಾಡಿದೆ. ಅಮೇಲೆ ನಾನೇ ನಿರ್ಮಾಪಕ ನಾನೇ ನಿರ್ದೇಶಕ ನಾನೇ ನಟನಾಗಿ ಮಾಡಲು ಶುರು ಮಾಡಿದೆ.

    ಶಂಕರ್ ನಾಟಕದಲ್ಲಿ ಸಹಾಯ ಮಾಡ್ತಾ ಇದ್ರು

    ಶಂಕರ್ ನಾಟಕದಲ್ಲಿ ಸಹಾಯ ಮಾಡ್ತಾ ಇದ್ರು

    ನಾನು 22ನೇ ವಯಸ್ಸಿನಲ್ಲಿದ್ದರೆ, ಶಂಕರ್ ಸುಮಾರು 16 ವರ್ಷದವನಾಗಿದ್ದ, ನನಗೆ ಪರದೆಯ ಹಿಂಭಾಗದಲ್ಲಿ ಸಹಾಯ ಮಾಡ್ತಾ ಇದ್ದ, ನನ್ನ ಬಾಯಿ ಪಾಠ ಅವನು ತೆಗೆದುಕೊಳ್ಳುತ್ತಿದ್ದ. ಡೈಲಾಗ್ಸ್ ಹೇಳಿಕೊಡುತ್ತಿದ್ದ.

    ಶಾಮ್ ಬೆನಗಲ್ ಕನೆಕ್ಷನ್

    ಶಾಮ್ ಬೆನಗಲ್ ಕನೆಕ್ಷನ್

    ನಾಟಕಗಳಲ್ಲಿ ನಾನು ತುಂಬಾ ಹೆಸರು ಮಾಡಿದ್ದೇನೆ ಎಂಬುದು ಒಬ್ಬ ನಿರ್ದೇಶಕರ ಕಿವಿಗೆ ಬಿದ್ದಾಗ ಅವರು 'ಸಂಕಲ್ಪ' ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟರು. 1972 ರಲ್ಲಿ ಶೂಟಿಂಗ್ ಆಗಿ 73 ರಲ್ಲಿ 'ಸಂಕಲ್ಪ' ಸಿನಿಮಾ ಬಿಡುಗಡೆ ಆಯ್ತು. ಬ್ಲ್ಯಾಕ್ ಅಂಡ್ ವೈಟ್ ಸಿನಿಮಾ. ಆಮೇಲೆ ಸಂಕಲ್ಪ ನಿರ್ದೇಶಕರು ನನ್ನನ್ನು ಶಾಮ್ ಬೆನಗಲ್ ಹತ್ತಿರ ಕಳುಹಿಸಿಕೊಟ್ಟರು. ಅವರು ನನ್ನನ್ನು ನೋಡಿ ನಿನ್ನ ಫ್ರೊಫೈಲ್ ತೋರಿಸು ಅಂದ್ರು, ನೋಡಿದ ಕೂಡಲೇ ನೀನು ಸೆಲೆಕ್ಟ್ ಅಂದ್ರು ಮೊದಲ ಬಾರಿಗೆ ಅವರ ಜೊತೆ 'ಅಂಕುರ್' ಸಿನಿಮಾ ಮಾಡಿದೆ. ತದನಂತರ ಸುಮಾರು 6 ಸಿನಿಮಾ ಅವರೊಂದಿಗೆ ಮಾಡಿದೆ.

    ಕನ್ನಡ ಚಿತ್ರದಲ್ಲಿ ನಟಿಸಲು ಆಫರ್

    ಕನ್ನಡ ಚಿತ್ರದಲ್ಲಿ ನಟಿಸಲು ಆಫರ್

    ನನಗೆ ಒಮ್ಮೆ ಕನ್ನಡ ಸಿನಿಮಾದಲ್ಲಿ ನಟಿಸಲು ಆಫರ್ ಬಂತು. ಟ್ರೈನ್ ಹಿಡಿದುಕೊಂಡು ಬಾ ನಾವು ನಿನ್ನನ್ನು ಬೆಂಗಳೂರಿನಲ್ಲಿ ರಿಸೀವ್ ಮಾಡಿಕೊಳ್ಳುತ್ತೇವೆ ಅಂದ್ರು. ನಾನು ಆಯಿತು ಅಂತ ಹೇಳಿ ಟ್ರೈನ್ ಏರಿದ್ದು ಮಾತ್ರ ಗೊತ್ತು. ಆಮೇಲೆ ಸಿನಿಮಾದಲ್ಲಿ ನೆಕ್ಸ್ಟ್ ಕಟ್ ಅಂದ ಹಾಗೆ ನಾನು ಟ್ರೈನ್ ನಲ್ಲಿದ್ದವನು ಆಸ್ಪತ್ರೆಯಲ್ಲಿದ್ದೆ.

    ಅನಂತ್ ಅವರನ್ನು ನಡುಗಿಸಿದ ಜ್ವರ

    ಅನಂತ್ ಅವರನ್ನು ನಡುಗಿಸಿದ ಜ್ವರ

    ನನಗೆ ಆಶ್ಚರ್ಯ-ಭಯ ಎಲ್ಲವೂ ಒಟ್ಟಿಗೆ ಆಗಿತ್ತು ಸಡನ್ ಆಗಿ ಟ್ರೈನ್ ನಲ್ಲಿದ್ದವನು, ಆಸ್ಪತ್ರೆಯಲ್ಲಿ ಹೇಗೆ ಅಂತ ಕನ್ ಫ್ಯೂಶನ್ ಆಯಿತು. ಆಗ ಅಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದ ಡಾಕ್ಟರ್ ನಿಮಗೆ ಟೈಫಾಯ್ಡ್ ಆಗಿದೆ ನಿಮಗೆ ಈಗ ಮಾತನಾಡಲು ಆಗಲ್ಲ ಅಂದ್ರು. ನಾನು ಒಂದು ಕ್ಷಣ ನಡುಗಿಬಿಟ್ಟೆ. ನಟನಾಗಲು ಬಂದವನು ಏನೋ ಆಗಿ ಬಿಡ್ತಲ್ಲಾ ಅಂತ ಭಯ ಆಯ್ತು. ಆಮೇಲೆ ನಾನು ಆ ಡಾಕ್ಟರ್ ಸಹಾಯ ಪಡೆದುಕೊಂಡು ಆನಂದಾಶ್ರಮಕ್ಕೆ ಹೋಗಿ ಗುರುಗಳ ಆಶೀರ್ವಾದ ಪಡೆದುಕೊಂಡು ಮನೆಗೆ ವಾಪಸ್ ಬಂದವನು ಹಿಂತಿರುಗಿ ನೋಡಲಿಲ್ಲ. ಚಿತ್ರರಂಗದಲ್ಲೇ ಮುಂದುವರಿದೆ.

    ಅನಂತ್ ಚಿತ್ರ ಅಂದ್ರೆ ಹುಡುಗಿಯರು ಫಿದಾ

    ಅನಂತ್ ಚಿತ್ರ ಅಂದ್ರೆ ಹುಡುಗಿಯರು ಫಿದಾ

    'ಮುದುಡಿದ ತಾವರೆ ಅರಳಿತು' ಸಿನಿಮಾ ರಿಲೀಸ್ ಆಗಿದ್ದಾಗ ಥಿಯೇಟರ್ ನಲ್ಲಿ ಬರೀ ಮಹಾರಾಣಿ ಕಾಲೇಜಿನ ಹುಡುಗಿಯರೇ ತುಂಬಿ ತುಳುಕುತ್ತಿದ್ದರು. ಅನಂತ್ ನಾಗ್ ಚಿತ್ರ ಅಂದ್ರೆ ಬರೀ ಹುಡುಗಿಯರೇ ನೋಡುತ್ತಿದ್ದರು. ಅಷ್ಟರಮಟ್ಟಿಗೆ ಅನಂತ್ ನಾಗ್ ಅವರಿಗೆ ಹುಡುಗಿಯರು ಅಭಿಮಾನಿಗಳಿದ್ದರು.

    ಡ್ಯಾನ್ಸ್ ನೋ ಎನ್ನುತ್ತಿದ್ದ ಅನಂತ್

    ಡ್ಯಾನ್ಸ್ ನೋ ಎನ್ನುತ್ತಿದ್ದ ಅನಂತ್

    ನಟನೆಯಲ್ಲಿ ಎಲ್ಲರನ್ನೂ ಮೀರಿಸಬಲ್ಲ ಅನಂತ್ ನಾಗ್ ಅವರಿಗೆ ಡ್ಯಾನ್ಸ್ ಅಂದರೆ ಅಷ್ಟಕಷ್ಟೆ. ಯಾಕೆಂದರೆ ಅವರಿಗೆ ಡ್ಯಾನ್ಸ್ ಅಷ್ಟಾಗಿ ಬರುತ್ತಿರಲಿಲ್ಲವಂತೆ. ಹಾಗಾಗಿ ಅವರು ಶೂಟಿಂಗ್ ಸೆಟ್ ಗೆ ಹೋದ ತಕ್ಷಣ ನನಗೆ ಡ್ಯಾನ್ಸ್ ಮಾಡೋಕೆ ಹೇಳಬೇಡಿ. ಡ್ಯಾನ್ಸ್ ಇರೋ ರೋಲ್ ಕೊಡಬೇಡಿ ಅಂತ ಮೊದಲೇ ಹೇಳುತ್ತಿದ್ದರಂತೆ.

    English summary
    Kannada Actor Anant Nag's life story was revealed in Zee Kannada Channel's popular show Weekend With Ramesh.
    Monday, March 7, 2016, 13:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X