twitter
    For Quick Alerts
    ALLOW NOTIFICATIONS  
    For Daily Alerts

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅವಮಾನ ಮಾಡಿದವರು ಯಾರು?

    By Harshitha
    |

    ಚಾಲೆಂಜಿಂಗ್ ಸ್ಟಾರ್ ದರ್ಶನ್....ಇಂದು ಗಾಂಧಿನಗರದ ಗೆಲ್ಲುವ ಕುದುರೆ. 2020ನೇ ಇಸವಿ ವರೆಗೂ ದರ್ಶನ್ ರವರ ಕಾಲ್ ಶೀಟ್ ಬುಕ್ ಆಗಿದೆ. ದರ್ಶನ್ ಡೇಟ್ಸ್ ಬೇಕು ಅಂದ್ರೆ ನಿರ್ಮಾಪಕರು ದರ್ಶನ್ ಮನೆ ಬಾಗಿಲ ಮುಂದೆ ಕ್ಯೂ ನಿಲ್ಲಬೇಕು.

    ಖ್ಯಾತ ಛಾಯಾಗ್ರಹಕ ಬಿ.ಸಿ.ಗೌರಿಶಂಕರ್ ಜೊತೆ ಅಸಿಸ್ಟೆಂಟ್ ಆಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ದರ್ಶನ್, ಮೂರು ಧಾರಾವಾಹಿಗಳಲ್ಲಿ ನಟಿಸಿ, ಐದು ಸಿನಿಮಾಗಳಲ್ಲಿ ಪೋಷಕ ನಟನಾಗಿ ಅಭಿನಯಿಸಿ, ಚಾಲೆಂಜಿಂಗ್ ಸ್ಟಾರ್ ಆಗಿ ಬೆಳೆದ ರೀತಿಯೇ ರೋಚಕ. [ಪೈಸೆ-ಪೈಸೆಗೂ ಕಷ್ಟ ಪಟ್ಟ ದರ್ಶನ್ ಬದುಕಿನ ನೋವಿನ ಕಥೆ]

    ಅಂತಹ ರೋಚಕ ಕಥೆಯಲ್ಲಿ ದರ್ಶನ್ ಎದುರಿಸಿದ ಅವಮಾನ, ಪಟ್ಟಿರುವ ಕಷ್ಟದ ಬಗ್ಗೆ ದರ್ಶನ್ ಮನಬಿಚ್ಚಿ ಮಾತನಾಡಿದ್ದಾರೆ.

    ಜೀ ಕನ್ನಡದಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಹಂಚಿಕೊಂಡ ಸತ್ಯ ಸಂಗತಿಗಳೆಲ್ಲವನ್ನ ಅವರ ಮಾತುಗಳಲ್ಲೇ ಓದಿ ಕೆಳಗಿರುವ ಸ್ಲೈಡ್ ಗಳಲ್ಲಿ.....

    ತಂದೆಗೆ ಇಷ್ಟವಿರಲಿಲ್ಲ!

    ತಂದೆಗೆ ಇಷ್ಟವಿರಲಿಲ್ಲ!

    ''ನಮ್ಮ ತಂದೆಗೆ ನಾನು ಸಿನಿಮಾಗೆ ಬರುವುದೇ ಇಷ್ಟ ಇರ್ಲಿಲ್ಲ. ಯಾಕಂದ್ರೆ, ಅವರು ಇದ್ದಾಗಲೇ ಟ್ರೆಂಡ್ ಚೇಂಜ್ ಆಗ್ಹೋಗಿತ್ತು. ಮನಿ ಪವರ್ ಇದ್ದವರಿಗೆ ಮಾತ್ರ ಸಿನಿಮಾ ಅಂತಾಗಿತ್ತು. ಆದ್ರೆ, ಎಲ್ಲಾ ಜನತೆಗೂ ನಾನು ತುಂಬಾ ಥ್ಯಾಂಕ್ಸ್ ಹೇಳುವುದಕ್ಕೆ ಇಷ್ಟ ಪಡ್ತೀನಿ. ಅವರು ಕೊಟ್ಟಂತಹ ಭಿಕ್ಷೆ ನಾನು ಇವತ್ತು ಈ ಸ್ಥಾನದಲ್ಲಿ ಇದ್ದೀನಿ'' - ದರ್ಶನ್[ನೀವು ಕೇಳರಿಯದ ಸತ್ಯ ಸಂಗತಿಗಳ 'ದರ್ಶನ' ವೀಕೆಂಡ್ ನಲ್ಲಾಯ್ತು!]

    ನಟ ಆಗ್ಬೇಕು ಅಂತ ನಿರ್ಧರಿಸಿದ್ದು...

    ನಟ ಆಗ್ಬೇಕು ಅಂತ ನಿರ್ಧರಿಸಿದ್ದು...

    ''ನಾನು ನಟ ಆಗ್ಬೇಕು ಅಂತ ಡಿಸೈಡ್ ಮಾಡಿದ ದಿನ ನನ್ನ ತಂದೆ ತೀರಿಕೊಂಡ ದಿನ, ಅಕ್ಟೋಬರ್ 16. ಅವತ್ತು ಬಸ್ ಸ್ಟ್ರೈಕ್ ಇತ್ತು. ನಮ್ಮ ಮನೆ ಹತ್ರ ತುಂಬಾ ಜನ. ನಾನು ಹಿಂದೆ ತಿರುಗಿ ನೋಡಿದಾಗ, ನನ್ನ ಕಣ್ಣು ಎಲ್ಲಿವರೆಗೂ ಹೋಯ್ತೋ, ಅಲ್ಲಿವರೆಗೂ ಜನ ಇದ್ದರು. ಅವತ್ತು ಅಂದುಕೊಂಡೆ, ಒಂದು ದಿನ ನಾನು ಸತ್ರೆ ಆರ್ಟಿಸ್ಟ್ ಆಗಿ ಸಾಯುತ್ತೇನೆ ಅಂತ'' - ದರ್ಶನ್['ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಹೇಳಿರುವ ಸತ್ಯಗಳೇನು?]

    ಲೈಟ್ ಬಾಯ್ ಆಗಿ ಸೇರಿಕೊಂಡಿದ್ದು..

    ಲೈಟ್ ಬಾಯ್ ಆಗಿ ಸೇರಿಕೊಂಡಿದ್ದು..

    ''ನನಗೆ ಸಿನಿಮಾ ಇಂಡಸ್ಟ್ರಿ ಬಗ್ಗೆ ಗೊತ್ತಾಗಿದ್ದೇ ನನ್ನ ತಂದೆಯಿಂದ. ಎಲ್ಲೇ ಹೋದರೂ, ಚೇರ್ ಹಾಕೋರು. ಅವರಿಗೆ ಏನು ಕೊಡ್ತಿದ್ರೂ, ಅದನ್ನೇ ನನಗೂ ಕೊಡ್ತಿದ್ರು. ಅವರು ತೀರಿಕೊಂಡ ನಂತರ ಎರಡು ವರ್ಷ ನಮಗೂ ಕಷ್ಟ ಆಯ್ತು. ಎಲ್ಲೂ ಅವಕಾಶ ಸಿಗ್ಲಿಲ್ಲ. ನಾನು ಲೈಟ್ ಬಾಯ್ ಆಗಿ ಸೇರಿಕೊಂಡೆ, ಬಿ.ಸಿ.ಗೌರಿಶಂಕರ್ ಹತ್ತಿರ'' - ದರ್ಶನ್

    ಮೊದಲು ಅವಮಾನ ಎದುರಿಸಿದ್ದು...

    ಮೊದಲು ಅವಮಾನ ಎದುರಿಸಿದ್ದು...

    ''ಮೊದಲ ದಿನವೇ ತೂಗುದೀಪ ಶ್ರೀನಿವಾಸ್ ಮಗ ಅಂತ ಮಾತನಾಡಿಸುತ್ತಿದ್ದರು. ಎರಡನೇ ದಿನ ನಾನು ಕೂತುಕೊಳ್ಳುವ ಚೇರ್ ನೇ ಒದ್ದು ಬಿಟ್ಟರು. ಕೈಯಲ್ಲಿ ತಟ್ಟೆ ಹಿಡಿದುಕೊಂಡಿದ್ದೀನಿ. ಚೇರ್ ಒದ್ದು ಬಿಟ್ಟರು. ಅವತ್ತು ನನಗೆ ಹೇಗೆ ಅನಿಸ್ಬಿಡ್ತು ಅಂದ್ರೆ, ನಿಜವಾಗ್ಲೂ ಭೂಮಿ ಬಿರುಕು ಬಿಟ್ಟ ಹಾಗೆ ಆಯ್ತು. 'ಏನಿದು ಈ ತರಹನಾ' ಅಂತ. ಅವತ್ತು ಬಂದು ರಾತ್ರಿ ಇನ್ಮುಂದೆ ಈ ಕೆಲಸ ಮಾಡಲ್ಲ ಅಂದೆ ಅಮ್ಮನ ಬಳಿ'' - ದರ್ಶನ್

    ರಾತ್ರಿ ನಿರ್ಧಾರ ಮಾಡಿದ್ದು..

    ರಾತ್ರಿ ನಿರ್ಧಾರ ಮಾಡಿದ್ದು..

    ''ನಮ್ಮ ಅಪ್ಪನ ಹೆಸರಿಗೆ ಅವಮಾನ ಮಾಡುವುದು ನನಗೆ ಇಷ್ಟ ಇರ್ಲಿಲ್ಲ. ರಾತ್ರಿ ಪೂರ್ತಿ ನನಗೆ ನಿದ್ದೆ ಬರ್ಲಿಲ್ಲ. 12.30 ಅಷ್ಟೊತ್ತಿಗೆ ಅನಿಸಿದ್ದು ನನಗೆ 'ಅವರು ಇದ್ದಾಗ ಬೆಲೆ ಇತ್ತು. ಈಗ ಅವರು ಇಲ್ಲ. ಬಿಡು ನಾನು ಬೆಲೆ ಸಂಪಾದಿಸಿದರೆ ಆಯ್ತು' ಅಂತ. ಬೆಳಗ್ಗೆ ಒಬ್ಬ ಲೈಟ್ ಬಾಯ್ ಹೇಗೆ ಸೆಟ್ ಗೆ ಬರ್ತಾನೋ, ಹಾಗೆ ಕ್ಯೂ ನಲ್ಲಿ ನಿಂತುಕೊಂಡು ತಗೊಂಡು ಕೆಲಸ ಮಾಡಿದೆ'' - ದರ್ಶನ್

    ಹೀರೋ ಆಗಿದ್ದು!

    ಹೀರೋ ಆಗಿದ್ದು!

    ''ನಾನು ಓಪನ್ ಆಗಿ ಹೇಳ್ತೀನಿ. ನಾನು ಫ್ಲೂಕ್ ನಲ್ಲಿ ಹೀರೋ ಆದವನು. ನಿಜವಾಗಲೂ ನಾನು ಹೀರೋ ಆಗ್ತೀನಿ ಅಂದುಕೊಂಡಿರಲಿಲ್ಲ. ಒಬ್ಬ ಕಲಾವಿದ ಆಗ್ತೀನಿ ಅಂದುಕೊಂಡಿದ್ದೆ. ನಾಲ್ಕು ಏಟು ತಿಂದರೆ ವಿಲನ್ ಆಗ್ತೀನಿ ಅಂದುಕೊಂಡಿದ್ದೆ. ಒಟ್ನಲ್ಲಿ ಸಿನಿಮಾದಲ್ಲಿ ಇರ್ತೀನಿ. ಅದನ್ನ ಅಂದುಕೊಂಡು ಬಂದಿದ್ದು. ಆದರೆ ಎಲ್ಲಾ ಜನ ಹಾಕಿರುವ ಭಿಕ್ಷೆ ನನಗೆ. ಈ ಮಟ್ಟಕ್ಕೆ ಬಂದು ನಿಂತಿದ್ದೀನಿ'' - ದರ್ಶನ್

    ಸಾವಿರ ರೂಪಾಯಿ ನೋಟು

    ಸಾವಿರ ರೂಪಾಯಿ ನೋಟು

    ''ಎಸ್.ನಾರಾಯಣ್ ಗೆ ಥ್ಯಾಂಕ್ಸ್ ಹೇಳ್ಬೇಕು. ಮೊದಲು ನನಗೆ ಅವಕಾಶ ಕೊಟ್ಟಿದ್ದು ಅವರೇ. 'ಮಹಾಭಾರತ' ಸೀರಿಯಲ್ ನಲ್ಲಿ. ಚಂದ್ರಪ್ಪ ಅಂತ ಸಬ್ ಇನ್ಸ್ ಪೆಕ್ಟರ್ ಇದ್ದರು. ಅವರು 'ಡಿಟೆಕ್ಟೀವ್ ಚಂದ್ರಕಾಂತ್' ಅಂತ ಸೀರಿಯಲ್ ಮಾಡ್ತಿದ್ರು. ಅವತ್ತೆ ಮೊದಲ ಬಾರಿ ನಾನು 1000 ರೂಪಾಯಿ ನೋಟ್ ನೋಡಿದ್ದು. ದಿನಕ್ಕೆ ಸಾವಿರ ರೂಪಾಯಿ ಸಿಗೋದು. 6 ದಿನ ಶೂಟಿಂಗ್ ಇತ್ತು. ಅಲ್ಲಿ ಎಸ್.ನಾರಾಯಣ್ ನನ್ನನ್ನ ನೋಡಿ ಅವಕಾಶ ಕೊಟ್ರು'' - ದರ್ಶನ್

    ಕಾರ್ಟೂನ್ ಗಳಿಗೆ ಡಬ್ಬಿಂಗ್

    ಕಾರ್ಟೂನ್ ಗಳಿಗೆ ಡಬ್ಬಿಂಗ್

    ''ಮಧ್ಯದಲ್ಲಿ ಕಾರ್ಟೂನ್ ಗಳಿಗೆ ಡಬ್ಬಿಂಗ್ ಕೂಡ ಮಾಡ್ತಿದ್ದೆ. 500 ರೂಪಾಯಿ ಕೊಡ್ತಿದ್ರು ಡಬ್ಬಿಂಗ್ ಮಾಡಿದ್ರೆ. ಅವಾಗ ಒಂದು ತಮಿಳು ಸಿನಿಮಾದಲ್ಲಿ ಆಕ್ಟ್ ಮಾಡಿದ್ದೆ'' - ದರ್ಶನ್

    ಸಿನಿಮಾಗೆ ನುಗ್ಗಿದ್ದು...

    ಸಿನಿಮಾಗೆ ನುಗ್ಗಿದ್ದು...

    ''ಬ್ಯಾಂಕ್ ನಲ್ಲಿ ಸಾಲ ಮಾಡಿದ್ವಿ. ಹೇಗಾದರೂ ಮಾಡಿ 11 ಸಾವಿರ ರೂಪಾಯಿ ಬ್ಯಾಂಕ್ ಗೆ ಕಟ್ಟಲೇಬೇಕಿತ್ತು ತಿಂಗಳಿಗೆ. ಒಂದು ಧೈರ್ಯ ಮಾಡಿ ಸಿನಿಮಾಗೆ ನುಗ್ಗಿದೆ'' - ದರ್ಶನ್

    'ಮೆಜೆಸ್ಟಿಕ್' ಬಿಡುಗಡೆ ಆದ ದಿನ

    'ಮೆಜೆಸ್ಟಿಕ್' ಬಿಡುಗಡೆ ಆದ ದಿನ

    ''ಮೆಜೆಸ್ಟಿಕ್' ಬಿಡುಗಡೆ ದಿನ. ಬೆಳಗ್ಗೆ ಪೂಜೆ ಮಾಡಿಸ್ತಾಯಿದ್ದೀವಿ. ಒಬ್ಬರ ಮುಖದಲ್ಲೂ ಒಂದು ನಗು ಅಂತ ಇಲ್ಲ. ಟಿಫನ್ ಮಾಡುತ್ತಿರುವಾಗ 'ಮೇನಕಾ' ಥಿಯೇಟರ್ ನಲ್ಲಿ ಹೌಸ್ ಫುಲ್ ಅಂತ ಗೊತ್ತಾಯ್ತು. ಥಿಯೇಟರ್ ಹತ್ರ ಹೋದರೆ ಯಾರೂ ನನ್ನ ಗುರುತು ಹಿಡಿಯುತ್ತಲೇ ಇಲ್ಲ. ನಾನು ಆಗಲೇ 'ಕರಿಯಾ' ಹೇರ್ ಸ್ಟೈಲ್ ನಲ್ಲಿದ್ದೆ. ಆಮೇಲೆ ಕೊನೆಗೆ ನಾನೇ ದರ್ಶನ್ ಅಂತ ಹೇಳಿಕೊಂಡೆ'' - ದರ್ಶನ್

    ಹಿಗ್ಗಲಿಲ್ಲ...ಕುಗ್ಗಲಿಲ್ಲ

    ಹಿಗ್ಗಲಿಲ್ಲ...ಕುಗ್ಗಲಿಲ್ಲ

    ''ನಾನು ಯಾವತ್ತೂ ಹಿಟ್ ಆಯ್ತು ಅಂತ ಹಿಗ್ಗಲಿಲ್ಲ. ಫ್ಲಾಪ್ ಆಯ್ತು ಅಂತ ಕುಗ್ಗಲಿಲ್ಲ. 'ಮೆಜೆಸ್ಟಿಕ್' ಆದ್ಮೇಲೆ 10 ಸಿನಿಮಾಗಳಲ್ಲಿ ನಾನೊಂದು ಆಪ್ಷನ್ ಆಗೇ ಇದ್ದೆ. ಯಾವ್ದ್ಯಾದೋ ಸಿನಿಮಾ ಮಾಡಿದೆ. ನಾನು ಒಬ್ಬ ಆರ್ಟಿಸ್ಟ್ ಅಂತ ತೋರಿಸುವುದಕ್ಕಾಗಿ 'ನನ್ನ ಪ್ರೀತಿಯ ರಾಮು' ಸಿನಿಮಾ ಮಾಡಿದೆ'' - ದರ್ಶನ್

    'ಕಲಾಸಿಪಾಳ್ಯ' ಆದ್ಮೇಲೆ...

    'ಕಲಾಸಿಪಾಳ್ಯ' ಆದ್ಮೇಲೆ...

    ''ಕಲಾಸಿಪಾಳ್ಯ' ಆದ್ಮೇಲೆ ಒಂದು ಸಿನಿಮಾ ಕೂಡ ನನಗೆ ಇರ್ಲಿಲ್ಲ. ಅಷ್ಟೊತ್ತಿಗೆ ನಾನು ತುಂಬಾ ದಪ್ಪ ಆಗಿದ್ದೆ. ಟ್ರೆಂಡ್ ಕೇಳ್ತಿದ್ದಾರೆ ಅಂತ ಗೊತ್ತಾಗಿ ನಾನು ಆಮೇಲೆ ವರ್ಕ್ ಔಟ್ ಮಾಡುವುದಕ್ಕೆ ಶುರುಮಾಡಿದೆ'' - ದರ್ಶನ್

    'ನವಗ್ರಹ' ಶುರುವಾಗಿದ್ದು...

    'ನವಗ್ರಹ' ಶುರುವಾಗಿದ್ದು...

    ''ತೂಗುದೀಪ ಪ್ರೊಡಕ್ಷನ್' ಶುರುವಾಗುವುದಕ್ಕೆ ದಿನಕರ್ ಕಾರಣ. ಎಲ್ಲರೂ ಹೀರೋಗಳನ್ನ ಗುರುತಿಸುತ್ತಾರೆ. ವಿಲನ್ ಗಳನ್ನ ಅಲ್ಲ. ಇವತ್ತು ಅವರಿಗೊಂದು ಸ್ಟೇಟ್ ಅವಾರ್ಡ್ ಇಲ್ಲ. ಇದನ್ನ ಹೇಳಿದಾಗಲೂ ವಿವಾದ ಆಯ್ತು. ಯಾಕೆ ಈ ತರಹ. ನಾನು ನಾಲ್ಕು ಜನಕ್ಕೆ ಹೊಡೆದಾಗ ಮಾತ್ರ ಹೀರೋ ಆಗೋದು ಅಲ್ವಾ. ವಿಲನ್ ಗಳನ್ನ ಗುರುತಿಸಲಿ ಅಂತ 'ನವಗ್ರಹ' ಸಿನಿಮಾ ಮಾಡಿದ್ದು. ನನಗೂ ಹೀರೋ ಆಗಿ ಮರ ಸುತ್ತಿದ್ದು ಸಾಕು, ನೆಗೆಟಿವ್ ಶೇಡ್ ನಲ್ಲೇ ಮಾಡ್ತೀನಿ ಅಂತ ಮಾಡಿದೆ'' - ದರ್ಶನ್

    ಈಗ ಸ್ವಲ್ಪ ದುರಹಂಕಾರ

    ಈಗ ಸ್ವಲ್ಪ ದುರಹಂಕಾರ

    ''ಆಗ ತುಂಬಾ ಕಷ್ಟ ಪಟ್ಟಿದ್ದೀವಿ. ಈಗ ಸ್ವಲ್ಪ ದುರಹಂಕಾರ ಬಂದಿದೆ. ಹೌದು, ನಾನೂ ಒಪ್ಪಿಕೊಳ್ಳುತ್ತೇನೆ. ಈಗ 9 ಗಂಟೆಗೆ ಹೋದರೆ 4 ಗಂಟೆಗೆ ಬಿಟ್ಟುಬಿಡಿ ಅಂತ ಹೇಳ್ತೀನಿ. ಅವಾಗ ಬೇಡಿಕೊಳ್ಳುತ್ತಿದ್ದೆ 6.30 ವರೆಗೂ ಕೆಲಸ ಇರಲಿ ಅಂತ. ಯಾಕಂದ್ರೆ, 6 ಗಂಟೆ ಮೇಲೆ ಡಬಲ್ ಬಾಟಾ ಇರೋದು. 300 ರೂಪಾಯಿ ಸಿಗೋದು. ಅದರಲ್ಲಿ 250 ರೂಪಾಯಿ ಅಮ್ಮನಿಗೆ ಕೊಟ್ಟು, 50 ರೂಪಾಯಿಯಲ್ಲಿ ನೆಮ್ಮದಿ ಆಗಿ ಇರ್ತಿದ್ದೆ'' - ದರ್ಶನ್

    ಆಗಲೇ ನೆಮ್ಮದಿ

    ಆಗಲೇ ನೆಮ್ಮದಿ

    ''ನಿಜವಾಗಲೂ ಹೇಳ್ತೀನಿ, ಅವತ್ತು ಜೇಬಿನಲ್ಲಿ 100 ರೂಪಾಯಿ ಇದ್ದಾಗ ರಾಜನ ಹಾಗೆ ಇರ್ತಿದ್ದೆ. ಇವತ್ತು ಕೋಟಿಗಟ್ಟಲೆ ಜೇಬಿನಲ್ಲಿ ಇಟ್ಕೊಂಡ್ರೂ ನೆಮ್ಮದಿ ಇಲ್ಲ'' - ದರ್ಶನ್

    English summary
    Kannada Actor Darshan revealed his struggling days in Sandalwood in Zee Kannada Channel's popular show Weekend With Ramesh.
    Wednesday, February 3, 2016, 13:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X