»   » 'ವೀಕೆಂಡ್..' ಕಾರ್ಯಕ್ರಮಕ್ಕೆ ಸಾಧು ಕೋಕಿಲ ಪತ್ನಿ ಬರ್ಲಿಲ್ಲ! ಯಾಕ್ಗೊತ್ತಾ?

'ವೀಕೆಂಡ್..' ಕಾರ್ಯಕ್ರಮಕ್ಕೆ ಸಾಧು ಕೋಕಿಲ ಪತ್ನಿ ಬರ್ಲಿಲ್ಲ! ಯಾಕ್ಗೊತ್ತಾ?

Posted by:
Subscribe to Filmibeat Kannada

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ, ಸಂಗೀತ ನಿರ್ದೇಶಕ, ನಿರ್ದೇಶಕ ಸಾಧು ಕೋಕಿಲ ಪತ್ನಿ ಹೆಸರೇನು ಅಂತ ನಿಮಗೆ ಗೊತ್ತಾ? ಹೋಗಲಿ, ಅವರನ್ನ ನೀವು ಎಲ್ಲಾದರೂ ನೋಡಿದ್ದೀರಾ?

ಯಾವುದೇ ಪಾರ್ಟಿ ಆಗಲಿ, ಫಂಕ್ಷನ್ ಆಗಲಿ, ಟಿವಿ ಪ್ರೋಗ್ರಾಂ ಆಗಲಿ ಸಾಧು ಕೋಕಿಲ ಪತ್ನಿ ಕಾಣಿಸಿಕೊಳ್ಳುವುದೇ ಇಲ್ಲ.! ಯಾಕೆ? ಮೊನ್ನೆ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲೂ ಸಾಧು ಕೋಕಿಲ ಪತ್ನಿ ಭಾಗವಹಿಸಲಿಲ್ಲ. [ಆತ್ಮಹತ್ಯೆ ಮಾಡಿಕೊಳ್ಳಲು ಸಾಧು ಕೋಕಿಲ ನಿರ್ಧರಿಸಿದ್ದು ಯಾಕೆ?]

ಇದರ ಹಿಂದೆ ಇರುವ ಕಾರಣ ಒಂದೇ. ಪತ್ನಿ ಸೆಲೀನಾಗೆ ಸಾಧು ಕೋಕಿಲ ಬಗ್ಗೆ ಕೆಲವು ಕಂಪ್ಲೇಂಟ್ ಗಳಿವೆ. ಅವೆಲ್ಲವೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಹಿರಂಗವಾಯ್ತು. ಎಲ್ಲವನ್ನೂ ಸಾಧು ಕೋಕಿಲ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ.....

ಚರ್ಚ್ ನಲ್ಲೇ ಆಟ-ಪಾಠ-ಪ್ರೇಮ!

ಚರ್ಚ್ ನಲ್ಲೇ ಆಟ-ಪಾಠ-ಪ್ರೇಮ!

''ಸೇಂಟ್ ಜೋಸೆಫ್ ಚರ್ಚ್ ಸ್ಕೂಲ್ ನಲ್ಲಿ ಓದಿದ್ದು. ಇವತ್ತಿಗೂ ಅದೇ ಚರ್ಚ್ ಗೆ ಹೋಗ್ತೀನಿ. ಅದೇ ಚರ್ಚ್ ನಲ್ಲಿ ನೋಡಿದ ಹುಡುಗಿಯನ್ನೇ ಮದುವೆ ಆಗಿದ್ದು. ಅದೇ ಚರ್ಚ್ ನಲ್ಲಿರುವ ಮಾಸ್ಟರ್ ಹತ್ರನೇ ನಾನು ಮ್ಯೂಸಿಕ್ ಕಲಿತು ಕಂಪೋಸರ್ ಆಗಿದ್ದು'' - ಸಾಧು ಕೋಕಿಲ [ವೀಕೆಂಡ್ ನಲ್ಲಿ ಬಹಿರಂಗವಾದ ಸಾಧು ಕೋಕಿಲ ನಿಜ ಬದುಕಿನ ಕಷ್ಟ-ನಷ್ಟ]

ಐ ಲವ್ ಯು ಅಂತ ಹೇಳುವುದಕ್ಕೆ ಭಯ!

ಐ ಲವ್ ಯು ಅಂತ ಹೇಳುವುದಕ್ಕೆ ಭಯ!

''ನಾನು ಲವ್ ಮಾಡ್ತೀನಿ ಅಂತ ಅವಳಿಗೆ ಇವತ್ತಿನ ವರೆಗೂ ನಾನು ಹೇಳಿಲ್ಲ. ಅಷ್ಟು ಭಯ ನನಗೆ. ಅವಳು ಮಾಧುರಿ ದೀಕ್ಷಿತ್ ತರಹ ಇದ್ದಾಳೆ. ನಾನು ನೋಡಿದ್ರೆ ಹೀಗೆ ಇದ್ದೀನಿ! ಅದಕ್ಕೆ ಹೇಳೇ ಇಲ್ಲ. ನಾವು ಮದುವೆ ಆಗಿದ್ದೇ ಮಿರಾಕಲ್'' - ಸಾಧು ಕೋಕಿಲ [ಗಾಯಕ ಸಿ.ಅಶ್ವಥ್ ಬಗ್ಗೆ ಸಾಧು ಕೋಕಿಲ ಏನಂದ್ರು ಗೊತ್ತೇ?]

ಗುರುಕಿರಣ್ ಏನಂತಾರೆ?

ಗುರುಕಿರಣ್ ಏನಂತಾರೆ?

''ಸೆಲೀನಾ ತುಂಬಾ ಚಿಕ್ಕ ಹುಡುಗಿ. ಸ್ಕೂಲ್ ನಲ್ಲಿ ಇನ್ನೂ ಫ್ರಾಕ್ ಹಾಕೊಂಡು ಓಡಾಡುತ್ತಿದ್ದಳು. ನನಗೆ ಡೌಟ್ ಇತ್ತು ಇವನು ಅವಳನ್ನ ಮದುವೆ ಆಗ್ತಾನಾ ಅಂತ. ಆದ್ರೆ ಇವತ್ತು ಅವರದ್ದು ಲವ್ಲಿ ಫ್ಯಾಮಿಲಿ. ಹೀಗೇ ಖುಷಿಯಾಗಿರಲಿ ಅಂತ ಆಶಿಸುತ್ತೇನೆ'' - ಗುರುಕಿರಣ್, ಸಂಗೀತ ನಿರ್ದೇಶಕ

ತಂಗಿ ಉಷಾ ಸಿಕ್ಕಿಬಿದಿದ್ಲು!

ತಂಗಿ ಉಷಾ ಸಿಕ್ಕಿಬಿದಿದ್ಲು!

''ಇವರ ಲವ್ ಗೆ ನಾನು ಲವ್ ಲೆಟರ್ ಪಾಸ್ ಮಾಡ್ತಾ ಇದ್ದೆ. ಅವರ ಮನೆಯಲ್ಲಿ ಮ್ಯೂಸಿಶಿಯನ್ ಗೆ ಕೊಟ್ಟು ಮದುವೆ ಮಾಡಲು ಇಷ್ಟ ಇರ್ಲಿಲ್ಲ. ತುಂಬಾ ಫೈಟಿಂಗ್ ನಡೀತಾಯಿತ್ತು ಫ್ಯಾಮಿಲಿಯಲ್ಲಿ. ಒಂದು ದಿನ ಸೆಲೀನಾ ಒಂದು ಲೆಟರ್ ಬರೆದು ಕೊಟ್ಟಿದ್ದರು, 'ನೀನು ಇವತ್ತು ಸಿಕ್ಕಿಲ್ಲ ಅಂದ್ರೆ ನಾನು ವಿಷ ಕುಡಿದು ಸತ್ತು ಹೋಗ್ತೀನಿ' ಅಂತ'' - ಉಷಾ, ಸಾಧು ಕೋಕಿಲ ಸಹೋದರಿ

ತಂದೆ-ತಾಯಿಗೆ ಕಂಪ್ಲೇಂಟ್

ತಂದೆ-ತಾಯಿಗೆ ಕಂಪ್ಲೇಂಟ್

''ಆ ಲೆಟರ್ ಇಟ್ಕೊಂಡು ನಾನು ಸ್ಕೂಲ್ ಗೆ ಹೋಗಿದ್ದೀನಿ. ಅವತ್ತು ನಮ್ಮ ಕ್ಲಾಸ್ ನಲ್ಲಿ ಯಾರೋ ಕಳ್ಳತನ ಮಾಡಿದ್ದಾರೆ. ಎಲ್ಲರ ಜೇಬು ಚೆಕ್ ಮಾಡ್ತಿದ್ದಾರೆ. ಜೇಬಿನಲ್ಲಿ ಲವ್ ಲೆಟರ್ ಸಿಕ್ಕಿ ಹಾಕಿಕೊಳ್ತು. ಅದು ಹೆಚ್.ಎಂ ವರೆಗೂ ಹೋಗಿ ನಮ್ಮ ತಂದೆ-ತಾಯಿಗೆ ಕಂಪ್ಲೇಂಟ್ ಮಾಡಿದರು. ಆಮೇಲೆ ಅಮ್ಮ ಬಂದು 'ನಮ್ಮ ಸೊಸೆ ಬರೆದಿರುವುದು' ಅಂತ ಹೇಳಿದರು'' - ಉಷಾ, ಸಾಧು ಕೋಕಿಲ ಸಹೋದರಿ

ನನ್ನ ಹೆಂಡತಿ ಗ್ರೇಟ್!

ನನ್ನ ಹೆಂಡತಿ ಗ್ರೇಟ್!

''ಅವರ ಮನೆಯಲ್ಲಿ ಎಲ್ಲರೂ ಡಾಕ್ಟರೇಟ್ ತೆಗೆದುಕೊಂಡಿದ್ದಾರೆ. ಎಲ್ಲರೂ ಎಡ್ಜುಕೇಟೆಡ್. ತುಂಬಾ ದೊಡ್ಡ ಫ್ಯಾಮಿಲಿ. ನಾನು ಮ್ಯೂಸಿಶಿಯನ್ ಅಂತ ಮದುವೆ ಮಾಡಿಕೊಡುವುದಕ್ಕೆ ಅವರ ಫ್ಯಾಮಿಲಿ ಒಪ್ಪಲಿಲ್ಲ. ಆದ್ರೆ, ಇವತ್ತು ಈ ಸ್ಟೇಜ್ ಮೇಲೆ ಕೂರುವುದಕ್ಕೆ ಮೇಜರ್ ಕಾರಣ ನನ್ನ ಹೆಂಡತಿನೇ. ಅವಳು ನನಗೆ ತುಂಬಾ ಸಪೋರ್ಟ್ ಮಾಡಿದ್ದಾಳೆ'' - ಸಾಧು ಕೋಕಿಲ

ರಮೇಶ್ ಮತ್ತು ಸಾಧು ಕೋಕಿಲ ಸಂಭಾಷಣೆ

ರಮೇಶ್ ಮತ್ತು ಸಾಧು ಕೋಕಿಲ ಸಂಭಾಷಣೆ

ಸಾಧು ಕೋಕಿಲ - ''ಎಷ್ಟೋ ಜನ ಕೇಳ್ತಾರೆ, ಇವರು ನಿನ್ನ ಲವ್ ಮಾಡಿ ಮದುವೆ ಆದ್ರಾ? ಅಂತ. ಯಾಕಂದ್ರೆ ಅವಳು ಹಾಗೆ ಇದ್ದಾಳೆ. ಇವತ್ತಿಗೂ ಹಾಗೇ ಇದ್ದಾಳೆ''

ರಮೇಶ್ ಅರವಿಂದ್ - ''ನಿಮ್ಮ ಕಣ್ಣ ಮುಂದೆ ಬರಲ್ಲ ಅಂದ್ರು. ನಿಮ್ಮ ಮೇಲೆ ಸಿಕ್ಕಾಪಟ್ಟೆ ಕಂಪ್ಲೇಂಟ್ ಇದ್ಯಂತೆ. ಅದಕ್ಕೆ ಫೋನ್ ನಲ್ಲಿ ಸಿಕ್ಕಿದಾರೆ.''

ಪತ್ನಿ ಮಾಡಿರುವ ಕಂಪ್ಲೇಂಟ್

ಪತ್ನಿ ಮಾಡಿರುವ ಕಂಪ್ಲೇಂಟ್

''ಅವರು ಯಾವಾಗಲೂ ನಾಟ್ ರೀಚಬಲ್. ನಾಟ್ ರೀಚಬಲ್ ಆಗಿ ಇಪ್ಪತ್ತು ವರ್ಷ ಆಗೋಯ್ತು. ಮನೆ ಅಡ್ರೆಸ್ ಗೊತ್ತಾ ಅಂತ ಕೇಳಿ. ದಯವಿಟ್ಟು ಸಾಯಂಕಾಲ ಮನೆಗೆ ಬರೋಕೆ ಹೇಳಿ'' - ಸೆಲೀನಾ, ಸಾಧು ಕೋಕಿಲ ಪತ್ನಿ

ಸಾಧು ಕೋಕಿಲ ನೀಡಿದ ಉತ್ತರ

ಸಾಧು ಕೋಕಿಲ ನೀಡಿದ ಉತ್ತರ

''ನಾನು ನಾಟ್ ರೀಚಬಲ್ ಆಗುವುದಕ್ಕೆ ನನ್ನ ಫ್ಯಾಮಿಲಿ ಕಾರಣ. ನಾನು ಒಂದು ಸಿನಿಮಾ ಮಾಡಿದೆ. 'ನಂಬರ್ 1' ಅಂತ. ಆ ಸಿನಿಮಾಗೆ ನಾನೇ ಪ್ರೊಡ್ಯೂಸರ್. ಆ ಚಿತ್ರದಿಂದ ಇರೋ ಬರೋ ದುಡ್ಡೆಲ್ಲಾ ಹೋಯ್ತು. ಒಂದು ಚಪ್ಪಲಿ ಕೂಡ ಇಲ್ಲದೆ ರೋಡ್ ನಲ್ಲಿ ಓಡಾಡುವ ಹಾಗಾಯ್ತು'' - ಸಾಧು ಕೋಕಿಲ

ಆಕ್ಟ್ ಮಾಡುವುದು ಪತ್ನಿಗೆ ಇಷ್ಟವಿಲ್ಲ!

ಆಕ್ಟ್ ಮಾಡುವುದು ಪತ್ನಿಗೆ ಇಷ್ಟವಿಲ್ಲ!

''ಅದಕ್ಕೂ ಮುಂಚೆ ನನ್ನ ಹೆಂಡತಿ ನನ್ನ ಮದುವೆ ಆಗಿದ್ದು ಒಂದೇ ಕಾರಣಕ್ಕೆ ನಾನು ಮ್ಯೂಸಿಶಿಯನ್ ಅಂತ. ನಾನು ಆಕ್ಟಿಂಗ್ ಮಾಡುವುದು ಅವಳಿಗೆ ಇಷ್ಟ ಆಗ್ತಿರ್ಲಿಲ್ಲ. ಅದಕ್ಕೆ ನಾನು ಆಕ್ಟಿಂಗ್ ನಿಲ್ಲಿಸಿಬಿಟ್ಟೆ. ನಾನೇ 'ನಂಬರ್ 1' ಅಂತ ಸಿನಿಮಾ ಪ್ರೊಡ್ಯೂಸ್ ಮಾಡ್ದೆ. ಆದರೆ ಎಲ್ಲಾ ಲಾಸ್ ಆಯ್ತು'' - ಸಾಧು ಕೋಕಿಲ

ಸಾಲಗಾರ ಆದೆ!

ಸಾಲಗಾರ ಆದೆ!

''ದೊಡ್ಡ ಸಾಲಗಾರ ಆಗ್ಬಿಟ್ಟೆ ನಾನು. ಒಂದೊಂದು ರೂಪಾಯಿ ಕೂಡ ಸಂಪಾದನೆ ಮಾಡಿ, ಕೂಡಿಟ್ಟ ಹಣ ಎಲ್ಲಾ ಹೋಯ್ತು. ಲಾಸ್ ಆದ್ಮೇಲೆ ಮನೆ ಜಪ್ತಿ ಆಯ್ತು. ಇದ್ದ ಒಂದು ಗಾಡಿ ಕೂಡ ನಾನು ಮಾರಿಬಿಟ್ಟೆ. ಆ ಸ್ಟೇಜ್ ಗೆ ಬಂದು ಬಿಟ್ಟೆ'' - ಸಾಧು ಕೋಕಿಲ

'ನನ್ನ ಮರೆತುಬಿಡಿ'

'ನನ್ನ ಮರೆತುಬಿಡಿ'

ಆಗ ನಾನು ನನ್ನ ಹೆಂಡತಿ ಹತ್ತಿರ ಹೋಗಿ ಹೇಳ್ದೆ. ನಾನು ಸಾಲ ತೀರಿಸಬೇಕು. ಮಾರಿದ ಜಾಗವನ್ನ ವಾಪಸ್ ತೆಗೆದುಕೊಳ್ಳಬೇಕು. ಇದು ನನ್ನ ಜವಾಬ್ದಾರಿ. ಈಗ ನಾನು ಆಕ್ಟ್ ಮಾಡಲೇಬೇಕು. 'ಹಲೋ ಯಮ' ಅಂತ ಒಂದು ಸಿನಿಮಾ. ಅದರಲ್ಲಿ ನಾನೇ ಹೈಲೈಟ್. ನನ್ನ ಮರೆತುಬಿಡಿ ಅಂತ ಹೇಳಿ ಹೊರಟೆ. ಅವತ್ತಿನಿಂದ ಸರಿಯಾಗಿ ಮನೆ ಕಡೆ ಹೋಗಿಲ್ಲ. ನಿದ್ದೆ ಮಾಡಿಲ್ಲ. ಫ್ಯಾಮಿಲಿ ಕಡೆ ಟೈಮ್ ಕೊಟ್ಟಿಲ್ಲ. 20 ವರ್ಷದಿಂದ ಇವತ್ತಿನ ವರೆಗೂ ನಾನು ಹಾಗೇ ಇದ್ದೀನಿ.

ಫ್ಯಾಮಿಲಿಗೆ ಸಮಯ ಕೊಟ್ಟಿಲ್ಲ!

ಫ್ಯಾಮಿಲಿಗೆ ಸಮಯ ಕೊಟ್ಟಿಲ್ಲ!

''ನನ್ನ ಫ್ಯಾಮಿಲಿಗೆ, ಮಕ್ಕಳಿಗೆ ಟೈಮ್ ಕೊಟ್ಟೇ ಇಲ್ಲ. ಯಾವಾಗಲೋ ರಾತ್ರಿ ಮನೆಗೆ ಬಂದಾಗ ಮಗನನ್ನ ಎತ್ತುಕೊಂಡು ಹಾಡು ಹೇಳೋದು. ಅಷ್ಟು ಬಿಟ್ಟರೆ ಬೇರೇನೂ ಇಲ್ಲ'' - ಸಾಧು ಕೋಕಿಲ

ಐದು ವರ್ಷದಲ್ಲಿ ಸಾಲ ತೀರಿಸಿದೆ!

ಐದು ವರ್ಷದಲ್ಲಿ ಸಾಲ ತೀರಿಸಿದೆ!

''ಕರೆಕ್ಟ್ ಆಗಿ ಐದು ವರ್ಷದಲ್ಲಿ ನಾನು ಸಾಲ ತೀರಿಸಿದೆ. ಆಕ್ಟಿಂಗ್ ಮತ್ತು ಮ್ಯೂಸಿಕ್ ಎರಡೂ ಮಾಡ್ದೆ. ವಾಪಸ್ ಅದೇ ಜಾಗವನ್ನ ಕೊಂಡುಕೊಂಡು, ಅದೇ ಜಾಗದಲ್ಲಿ ಮನೆ ಕಟ್ಟಿ, ಅಲ್ಲೇ ನನ್ನ ಫ್ಯಾಮಿಲಿ ಇರ್ಸಿದ್ದೀನಿ. ಅವತ್ತಿಂದ ನಾಟ್ ರೀಚಬಲ್ ಯಾಕೆ ಅಂದ್ರೆ, ನಮ್ಮ ಫ್ಯಾಮಿಲಿ ಚೆನ್ನಾಗಿರಲಿ ಅಂತ ಇಷ್ಟೆಲ್ಲಾ ಮಾಡ್ದೆ'' - ಸಾಧು ಕೋಕಿಲ

English summary
Kannada Actor, Music Director, Director, Singer Sadhu Kokila's love life was revealed in Zee Kannada Channel's popular show Weekend With Ramesh.
Please Wait while comments are loading...

Kannada Photos

Go to : More Photos