»   » ನಟಿ ಲಕ್ಷ್ಮಿ ಕೊಟ್ಟ 'ತೊಂದರೆ' ಬಗ್ಗೆ ರಾಜೇಂದ್ರ ಸಿಂಗ್ ಬಾಬು ಹೇಳಿದ ಸತ್ಯ

ನಟಿ ಲಕ್ಷ್ಮಿ ಕೊಟ್ಟ 'ತೊಂದರೆ' ಬಗ್ಗೆ ರಾಜೇಂದ್ರ ಸಿಂಗ್ ಬಾಬು ಹೇಳಿದ ಸತ್ಯ

Posted by:
Subscribe to Filmibeat Kannada

ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿನುಗಿರುವ ಪ್ರಖ್ಯಾತ ನಟಿ 'ಜ್ಯೂಲಿ' ಲಕ್ಷ್ಮಿ. 'ಜೀವನಾಂಶಂ' ಎಂಬ ತಮಿಳು ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ಲಕ್ಷ್ಮಿ 48 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯ.

ಒಂದ್ಕಾಲದಲ್ಲಿ ನಂಬರ್ 1 ನಟಿಯಾಗಿ ಪ್ರಕಾಶಮಾನವಾಗಿ ಬೆಳಗಿದ ಈ ತಾರೆ ಕೆಲ ನಿರ್ದೇಶಕರ ಪಾಲಿಗೆ 'ನಾರಿ ಮುನಿದರೆ ಮಾರಿ' ಇದ್ದ ಹಾಗೆ ಅಂದ್ರೆ ನೀವು ನಂಬಲೇಬೇಕು. [ಸ್ವಿಮ್ ಸೂಟ್ ಹಾಕ್ತೀಯಾ ಅಂದಿದ್ದಕ್ಕೆ, ಕಾಲು ತೋರಿಸಿಬಿಟ್ರು ನಟಿ ಲಕ್ಷ್ಮಿ!]

ಚಿತ್ರದ ಶೂಟಿಂಗ್ ಸರಾಗವಾಗಿ ಸಾಗ್ಬೇಕು ಅಂದ್ರೆ, ನಿರ್ದೇಶಕರು ನಟಿ ಲಕ್ಷ್ಮಿ ಇಡುತ್ತಿದ್ದ ಬೇಡಿಕೆಯನ್ನ ಪೂರೈಸಲೇಬೇಕಿತ್ತು. ಇಲ್ಲಾಂದ್ರೆ ಅಂದು 'ಪ್ಯಾಕಪ್' ಗ್ಯಾರೆಂಟಿ.

ನಟಿ ಲಕ್ಷ್ಮಿ ನೀಡುತ್ತಿದ್ದ 'ಕಿರಿಕಿರಿ' ಬಗ್ಗೆ ನಗುನಗುತ್ತಲೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಕನ್ನಡ ಚಿತ್ರ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಬಾಯ್ಬಿಟ್ಟರು. ಮುಂದೆ ಓದಿ...

ನಟಿ ಲಕ್ಷ್ಮಿ ರವರನ್ನ ರಾಜೇಂದ್ರ ಸಿಂಗ್ ಬಾಬು ಮೊದಲು ಭೇಟಿ ಮಾಡಿದ್ದು...

ನಟಿ ಲಕ್ಷ್ಮಿ ರವರನ್ನ ರಾಜೇಂದ್ರ ಸಿಂಗ್ ಬಾಬು ಮೊದಲು ಭೇಟಿ ಮಾಡಿದ್ದು...

''ಕಿಲಾಡಿ ಜೋಡಿ' ಸಿನಿಮಾಗಾಗಿ ಬುಕ್ ಮಾಡೋಕೆ ಅಂತ ಮೊದಲು ಲಕ್ಷ್ಮಿ ಮನೆಗೆ ಹೋಗಿದ್ವಿ. ಆಗ ಲಕ್ಷ್ಮಿ ನಂಬರ್ 1 ನಟಿ. ಅವರ ಮನೆಯಲ್ಲಿ ದೊಡ್ಡ ದೊಡ್ಡ ನಾಯಿಗಳಿದ್ವು. ಅದನ್ನ ನೋಡ್ತಿದ್ರೆ ಭಯ ಆಗೋದು'' - ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ನಿರ್ದೇಶಕ

ವಿಷ್ಣುವರ್ಧನ್ ರೇಗಿಸುತ್ತಿದ್ದರು!

ವಿಷ್ಣುವರ್ಧನ್ ರೇಗಿಸುತ್ತಿದ್ದರು!

''ಲಕ್ಷ್ಮಿ ಆಗ ಟಾಪ್ ಹೀರೋಯಿನ್. ಅದಕ್ಕೆ ವಿಷ್ಣುವರ್ಧನ್ ನನಗೆ ರೇಗಿಸುತ್ತಿದ್ದರು, ''ನೀನು ಆದಿವಾನಿ ಲಕ್ಷ್ಮಿ ಕರ್ಕೊಂಡು ಬರ್ತೀಯಾ. ಜ್ಯೂಲಿ ಲಕ್ಷ್ಮಿ ಕರ್ಕೊಂಡು ಬರಲ್ಲ'' ಅಂತ'' - ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ನಿರ್ದೇಶಕ

'ನಾರಿ ಮುನಿದರೆ ಮಾರಿ' ಹಾಗೆ ಲಕ್ಷ್ಮಿ!

'ನಾರಿ ಮುನಿದರೆ ಮಾರಿ' ಹಾಗೆ ಲಕ್ಷ್ಮಿ!

''ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಲಕ್ಷ್ಮಿ 'ನಾರಿ ಮುನಿದರೆ ಮಾರಿ' ಇದ್ದ ಹಾಗೆ. ಎಷ್ಟೋ ಸಲಿ ಅರ್ಧಕ್ಕೆ ಅವರು ವಿಗ್ ತೆಗೆದು, ಶೂಟಿಂಗ್ ನಿಂದ ಹೊರಟು ಹೋಗಿದ್ದಾರೆ'' - ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ನಿರ್ದೇಶಕ

ಮೊಸರು ಬರ್ಲಿಲ್ಲ ಅಂದ್ರೆ ಪ್ಯಾಕಪ್!

ಮೊಸರು ಬರ್ಲಿಲ್ಲ ಅಂದ್ರೆ ಪ್ಯಾಕಪ್!

''ಮಧ್ಯಾಹ್ನ ಕೆ.ಸಿ.ದಾಸ್ ದು ಮೊಸರು ಬರ್ಲಿಲ್ಲ ಅಂದ್ರೆ ಪ್ಯಾಕಪ್. ಮುಲಾಜೇ ಇಲ್ಲ. 12 ಗಂಟೆ ಆಗ್ತಿದ್ದ ಹಾಗೆ, 'ಮೊಸರು ಬಂತಾ' ಅಂತ ವಿಷ್ಣು ಕೇಳ್ತಿದ್ದ'' - ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ನಿರ್ದೇಶಕ

ಲಕ್ಷ್ಮಿ ಕೊಟ್ಟ ವಿವರಣೆ!

ಲಕ್ಷ್ಮಿ ಕೊಟ್ಟ ವಿವರಣೆ!

''ನಾನು ತಿಂತಿದ್ದದ್ದೇ ಮೊಸರನ್ನ. ಅದೇ ಇಲ್ಲ ಅಂದ್ರೆ ಹೇಗೆ. ಪ್ಯಾಕಪ್ ಮಾಡ್ತಿರ್ಲಿಲ್ಲ. ಮೊಸರನ್ನ ತರಲೇಬೇಕು ಅಂತಿದ್ದೆ'' - ಲಕ್ಷ್ಮಿ

'ಅಂತ' ಚಿತ್ರದ ಬಗ್ಗೆ

'ಅಂತ' ಚಿತ್ರದ ಬಗ್ಗೆ

'ಅಂತ' ಸಿನಿಮಾಗೆ 'ಲಕ್ಷ್ಮಿ' ಅವರನ್ನ ಫಿಕ್ಸ್ ಮಾಡಿದ್ದೆ. ಅದಕ್ಕೆ ರಜನಿಕಾಂತ್ ಹೀರೋ ಅಂತ ಹೇಳಿಬಿಟ್ಟಿದ್ದೆ. ಆದ್ರೆ, ಕಾರಣಾಂತರದಿಂದ ರಜನಿಕಾಂತ್ ಆಗ್ಲಿಲ್ಲ. ಇವರಿಗೆ ಹೀರೋ ಚೇಂಜ್ ಆಗಿರುವ ವಿಷಯ ಹೇಳ್ಬೇಕಿತ್ತು. ಅಂಬರೀಶ್ ಆಗ ಹೊಸಬರು. ಅವರ ಜೊತೆ ಲಕ್ಷ್ಮಿ ಆಕ್ಟ್ ಮಾಡ್ತಾರೋ, ಇಲ್ವೋ ಅನ್ನೋ ಭಯ ನನಗೆ. ಹೋಗಿ ಹೇಳಿದಾಗ 'ಮಾಡ್ತೀನಿ' ಅಂತ ಒಪ್ಪಿಕೊಂಡರು. ಅಂಬರೀಶ್ ಗೆ 'ಅಂತ' ಸಿನಿಮಾದಲ್ಲಿ ಸಪೋರ್ಟ್ ಮಾಡಿದವರು ಲಕ್ಷ್ಮಿ'' - ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ನಿರ್ದೇಶಕ

ಲಕ್ಷ್ಮಿ ತರಹ ನಟಿ ಮತ್ತೊಬ್ಬರಿಲ್ಲ!

ಲಕ್ಷ್ಮಿ ತರಹ ನಟಿ ಮತ್ತೊಬ್ಬರಿಲ್ಲ!

''ಪ್ರಗ್ನೆಂಟ್ ಸೀನ್ ಎಲ್ಲಾ ಭಾಷೆಯಲ್ಲೂ ಮಾಡಿದ್ದೀನಿ. ಆದ್ರೆ, ಲಕ್ಷ್ಮಿ ಮಾಡಿದ ಹಾಗೆ ಯಾರೂ ಮಾಡಿಲ್ಲ. ಅವರ ಆಕ್ಟಿಂಗ್ ತುಂಬಾ ಒರಿಜಿನಲ್'' - ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ನಿರ್ದೇಶಕ

ಕ್ಯಾಮರಾ ಹಿಂದೆ ತುಂಬಾ ತೊಂದರೆ!

ಕ್ಯಾಮರಾ ಹಿಂದೆ ತುಂಬಾ ತೊಂದರೆ!

''ಕ್ಯಾಮರಾ ಹಿಂದೆ ತುಂಬಾ ತೊಂದರೆ ಕೊಡ್ತಾರೆ. ನಾನು ಬಾಂಬೆ ಇಂದ ಬಟ್ಟೆ ತಂದಿದ್ರೆ, ಅದನ್ನ ನಾನು ಹಾಕೊಳ್ಬಾರದು ಅಂತ ನಾಯಿ ಸೆಂಟ್ ಹಾಕ್ಬಿಟ್ಟಿದ್ದರು. ಲಕ್ಷ್ಮಿ ಮತ್ತು ಅಂಬರೀಶ್'' - ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ನಿರ್ದೇಶಕ

ಲಕ್ಷ್ಮಿ ಏನು ಹೇಳ್ತಾರೆ?

ಲಕ್ಷ್ಮಿ ಏನು ಹೇಳ್ತಾರೆ?

''ಆ ವಯಸ್ಸಿನಲ್ಲಿ ಅದು ಫನ್. ಬಾಬುಗೆ ನಾಯಿ ಅಂದ್ರೆ ಆಗಲ್ಲ. 'ಗಂಡಭೇರುಂಡ' ಸಿನಿಮಾದಲ್ಲಿ ನಾಯಿ ಇದೆ. ಅದಕ್ಕೆ ಅಂತ ಸೆಂಟ್ ತಂದಿದ್ರು. ಅದನ್ನ ಅಂಬರೀಶ್ ಮತ್ತೆ ನಾನು ತೆಗೆದುಕೊಂಡು ಬಂದು ಬಾಬು ಬಟ್ಟೆಗೆ ಹಾಕ್ಬಿಟ್ವಿ. ತುಂಬಾ ಕೂಗಾಡಿದ್ದರು ಅವಾಗ'' - ಲಕ್ಷ್ಮಿ

ಭಾರ್ಗವ ಬಗ್ಗೆ ಲಕ್ಷ್ಮಿ ಕಾಮೆಂಟ್

ಭಾರ್ಗವ ಬಗ್ಗೆ ಲಕ್ಷ್ಮಿ ಕಾಮೆಂಟ್

''ಭಾರ್ಗವ ಅವರ ತರಹ ಅಸೋಸಿಯೇಟ್ ಡೈರೆಕ್ಟರ್ ಸಿಕ್ಬಿಟ್ರೆ, ಯಾರು ಬೇಕಾದರೂ ಕನ್ನಡ ಕಲಿಯಬಹುದು. 'ನಾ ನಿನ್ನ ಮರೆಯಲಾರೆ' ಶೂಟಿಂಗ್ ಟೈಮ್ ನಲ್ಲಿ ಪ್ರತಿದಿನ ಸಂಜೆ ಬಂದು ನನಗೆ ಕನ್ನಡ ಹೇಳಿಕೊಡುತ್ತಿದ್ದರು. ಹ್ಯಾಟ್ಸ್ ಆಫ್ ಟು ಹಿಮ್'' - ಲಕ್ಷ್ಮಿ

ಲಕ್ಷ್ಮಿ ಬಗ್ಗೆ ಭಾರ್ಗವ ಮಾತು

ಲಕ್ಷ್ಮಿ ಬಗ್ಗೆ ಭಾರ್ಗವ ಮಾತು

''ಲಕ್ಷ್ಮಿ ನಿರ್ಮಾಣ ಮಾಡಿದ ಚಿತ್ರದಲ್ಲಿ ನಿರ್ದೇಶನ ಮಾಡುವುದಕ್ಕೆ ನನಗೆ ಚಾನ್ಸ್ ಕೊಟ್ಟರು'' - ಭಾರ್ಗವ, ನಿರ್ದೇಶಕ

ಬಟ್ಟೆ ವಿಷಯದಲ್ಲಿ ಕಷ್ಟ ಕಷ್ಟ!

ಬಟ್ಟೆ ವಿಷಯದಲ್ಲಿ ಕಷ್ಟ ಕಷ್ಟ!

''ಸೀರೆ ಮತ್ತು ಬಟ್ಟೆ ವಿಷಯದಲ್ಲಿ ಲಕ್ಷ್ಮಿ ರವರನ್ನ ಒಪ್ಪಿಸುವುದು ಬಹಳ ಕಷ್ಟ. ಯಾಕಂದ್ರೆ ಅಷ್ಟು ಒಳ್ಳೊಳ್ಳೆ ಬಟ್ಟೆಗಳನ್ನ ಚಿತ್ರರಂಗದಕ್ಕೆ ತಂದವರು ಲಕ್ಷ್ಮಿ'' - ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ನಿರ್ದೇಶಕ

ನಮ್ಮ ಪುಣ್ಯ

ನಮ್ಮ ಪುಣ್ಯ

''ಇಂತಹ ಉತ್ತಮ ನಟಿ ಜೊತೆ ಕೆಲಸ ಮಾಡಿರುವುದು ನಮ್ಮ ಪುಣ್ಯ'' - ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ನಿರ್ದೇಶಕ

English summary
Director S.V.Rajendra Singh Babu spoke about Actress Lakshmi in Zee Kannada Channel's popular show Weekend With Ramesh season 2.
Please Wait while comments are loading...

Kannada Photos

Go to : More Photos