twitter
    For Quick Alerts
    ALLOW NOTIFICATIONS  
    For Daily Alerts

    ಖಡಕ್ ಖಳ ನಟ ರವಿಶಂಕರ್ ಗೆ ಅವಮಾನ ಮಾಡಿದವರು ಯಾರು?

    By Harshitha
    |

    ಇಂದು ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ಖಳನಾಯಕ ಯಾರು ಅಂದ್ರೆ, ಎಲ್ಲರಿಂದಲೂ ಬರುವ ಮೊಟ್ಟಮೊದಲ ಉತ್ತರ ರವಿಶಂಕರ್.! ಅಷ್ಟರಮಟ್ಟಿಗೆ ಜನಪ್ರಿಯತೆ ಪಡೆದಿದ್ದಾರೆ ನಟ ರವಿಶಂಕರ್.

    'ಕೆಂಪೇಗೌಡ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಖಡಕ್ ವಿಲನ್ ಆಗಿ ಅಬ್ಬರಿಸಲು ಶುರು ಮಾಡಿದ ರವಿಶಂಕರ್, ನೋಡ ನೋಡುತ್ತಲೇ ಕರ್ನಾಟಕದಲ್ಲಿ 'ಸ್ಟಾರ್' ಆಗ್ಬಿಟ್ಟರು. ಇಂತಹ ಒಂದು ಯಶಸ್ಸು ಪಡೆಯೋಕೆ ರವಿಶಂಕರ್ ಬರೋಬ್ಬರಿ 25 ವರ್ಷ ಕಾದಿದ್ರು ಅಂದ್ರೆ ಎಲ್ಲರೂ ನಂಬಲೇಬೇಕು.

    ದೊಡ್ಡ ಕಲಾವಿದನಾಗಬೇಕು ಅಂತ ಚಿತ್ರರಂಗಕ್ಕೆ ಕಾಲಿಟ್ಟ ರವಿಶಂಕರ್ ಗೆ ತೆಲುಗು ಸಿನಿ ಅಂಗಳದಲ್ಲಿ ತಂದೆ ಜೋಗೀಶ್ವರ್ ಶರ್ಮಾ, ಅಣ್ಣ ಸಾಯಿ ಕುಮಾರ್ ನಂತೆ ಕೇವಲ ಡಬ್ಬಿಂಗ್ ಆರ್ಟಿಸ್ಟ್ ಆಗುವುದಕ್ಕೆ ಮಾತ್ರ ಚಾನ್ಸ್ ಸಿಕ್ತು. [ನಟ ರವಿಶಂಕರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿಗಳು!]

    ಸಂಗೀತ, ನೃತ್ಯ, ನಟನೆ....ಎಲ್ಲಾ ಕಲಿತಿದ್ದರೂ, ಅವಕಾಶಗಳು ನೀಡದ ಟಾಲಿವುಡ್ ಬಗ್ಗೆ ರವಿಶಂಕರ್ ಗೆ ಸಿಕ್ಕಾಪಟ್ಟೆ ಕೋಪ ಇದೆ. ಅದ್ರಲ್ಲೂ, ಅವರನ್ನ ಅವಮಾನ ಮಾಡಿದ ಕೆಲ ತೆಲುಗು ನಿರ್ದೇಶಕರ ಬಗ್ಗೆ ಬೇಸರ ಇದೆ.

    ರವಿಶಂಕರ್ ರವರ 25 ವರ್ಷಗಳ ಕಷ್ಟದ ಜೀವನ, ದೊಡ್ಡ ನಿರ್ದೇಶಕರು ಹಾಗೂ ನಿರ್ಮಾಪಕರಿಂದ ಎದುರಿಸಿದ ಅವಮಾನವನ್ನ ಮುಚ್ಚು ಮರೆ ಇಲ್ಲದೆ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹೇಳಿದರು. ಅದೆಲ್ಲವನ್ನ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ....

    1986 ರಲ್ಲಿ ವೃತ್ತಿ ಜೀವನ ಆರಂಭ

    1986 ರಲ್ಲಿ ವೃತ್ತಿ ಜೀವನ ಆರಂಭ

    ''ನಾನು ನನ್ನ ಕೆರಿಯರ್ ನ 1986 ರಲ್ಲಿ ಶುರು ಮಾಡಿದ್ದು. ವಿಲನ್ ಕ್ಯಾರೆಕ್ಟರ್ ಗಳಿಗೆ ಡಬ್ಬಿಂಗ್ ಮಾಡ್ತಿದ್ದೆ. ಅದೇ ಸಮಯಕ್ಕೆ ಮದುವೆ ಆಯ್ತು. ನಟಿಸುವುದಕ್ಕೆ ಶುರು ಮಾಡಿದೆ. ಒಂದಷ್ಟು ಸಿನಿಮಾಗಳಲ್ಲಿ ನಟಿಸಿದೆ. ಆದ್ರೆ, ಯಾವುದೂ ಸರಿ ಹೋಗ್ಲಿಲ್ಲ. ನಂತರ ಅವಕಾಶಗಳೇ ಬರ್ಲಿಲ್ಲ'' - ರವಿಶಂಕರ್

    ಡಬ್ಬಿಂಗ್ ಮಾಡುವಾಗ Frustration!

    ಡಬ್ಬಿಂಗ್ ಮಾಡುವಾಗ Frustration!

    ''ನಾನು ಆಕ್ಟರ್ ಆಗ್ಬೇಕು ಅನ್ನೋ ಸಂಕಲ್ಪ ತುಂಬಾ ಗಟ್ಟಿಯಾಗಿತ್ತು. ಯಾರ್ಯಾರಿಗೋ ಚಾನ್ಸ್ ಕೊಡ್ತಾರೆ, ಬೇರೆ ಭಾಷೆಯಿಂದ ಕರ್ಕೊಂಡು ಬರ್ತಾರೆ, ನಮಗೆ ಭಾಷೆ ಬಂದು ಆಕ್ಟಿಂಗ್ ಬಂದರೂ ಅವಕಾಶ ಇಲ್ವಲ್ಲಾ ಅಂತ ಡಬ್ಬಿಂಗ್ ಮಾಡುವಾಗ ಎಷ್ಟೋ ಬಾರಿ Frustrate ಆಗ್ತಿತ್ತು'' - ರವಿಶಂಕರ್

    ಪರಿಚಯ ಇದ್ರೂ, ಚಾನ್ಸ್ ಇಲ್ಲ!

    ಪರಿಚಯ ಇದ್ರೂ, ಚಾನ್ಸ್ ಇಲ್ಲ!

    ''ನಮಗೆ ಕಾಂಟ್ಯಾಕ್ಟ್ ಕೂಡ ಇತ್ತು. ಎಷ್ಟೋ ದೊಡ್ಡ ದೊಡ್ಡ ಡೈರೆಕ್ಟರ್ ಗಳ ಜೊತೆ ಒಡನಾಟ ಇತ್ತು. ಆದರೆ ಯಾರೂ ಅವಕಾಶ ಕೊಡ್ಲಿಲ್ಲ. ಅದ್ಯಾಕೆ ಅಂತ ಗೊತ್ತಿಲ್ಲ'' - ರವಿಶಂಕರ್

    ರವಿತೇಜಾ ಜೊತೆಗಿನವರು!

    ರವಿತೇಜಾ ಜೊತೆಗಿನವರು!

    ''ನಾನು, ಶ್ರೀಹರಿ, ರವಿತೇಜಾ...ಎಲ್ಲಾ ಒಂದೇ ಟೈಮ್ ನಲ್ಲಿ ಎಂಟ್ರಿಕೊಟ್ಟಿದ್ದು. ಅವರೆಲ್ಲಾ ದೊಡ್ಡ ಹೀರೋ ಆಗ್ಬಿಟ್ಟರು. ಆದ್ರೆ, ನನಗೆ ಅವಕಾಶವೇ ಬರ್ಲಿಲ್ಲ'' - ರವಿಶಂಕರ್

    ಹೈದರಾಬಾದ್ ಗೆ ಹೋಗ್ಬೇಕು ಅಂದ್ರೆ ಹಿಂಸೆ!

    ಹೈದರಾಬಾದ್ ಗೆ ಹೋಗ್ಬೇಕು ಅಂದ್ರೆ ಹಿಂಸೆ!

    ''ನನಗೆ ಹೈದರಾಬಾದ್ ಗೆ ಹೋಗ್ಬೇಕು ಅಂದ್ರೆ ಹಿಂಸೆ. ಯಾಕಂದ್ರೆ, ಅಲ್ಲಿನ ಚಿತ್ರರಂಗ ನನಗೆ ಕೈ ಕೊಡ್ತು. 25 ವರ್ಷ ಸುಮ್ಮನೆ ಆ ಚಿತ್ರರಂಗದಲ್ಲಿ ಏನೂ ಇಲ್ಲದೆ ಕಳೆದು ಹೋದೆ. ಈಗ ಏನೇ ಮಾಡಿದರೂ, ನಾನು ಕಳೆದುಕೊಂಡ ಯೌವನ ನನಗೆ ವಾಪಸ್ ಸಿಗುವುದಿಲ್ಲ. ಹೀಗಾಗಿ ನನಗೆ ಅಲ್ಲಿನ ಬಗ್ಗೆ ತುಂಬಾ ಕೋಪ ಇದೆ'' - ರವಿಶಂಕರ್

    ದುಡ್ಡಿಗಾಗಿ ಡಬ್ಬಿಂಗ್!

    ದುಡ್ಡಿಗಾಗಿ ಡಬ್ಬಿಂಗ್!

    ''ಮದುವೆ ಆದ್ಮೇಲೆ ದುಡ್ಡಿಗಾಗಿ ಡಬ್ಬಿಂಗ್ ಮಾಡಲು ಶುರು ಮಾಡಿದೆ'' - ರವಿಶಂಕರ್

    ರವಿಶಂಕರ್ ಗೆ ಆದ ಅವಮಾನ....

    ರವಿಶಂಕರ್ ಗೆ ಆದ ಅವಮಾನ....

    ''ತೆಲುಗಿನಲ್ಲಿ ತುಂಬಾ ದೊಡ್ಡ ಡೈರೆಕ್ಟರ್ ಒಬ್ಬರು ಒಂದು ದಿನ ನನಗೆ ಫೋನ್ ಮಾಡಿ ತಕ್ಷಣ ಹೈದರಾಬಾದ್ ಗೆ ಬರ್ಬೇಕು ಅಂತ ಹೇಳಿದರು. ನಾನು ತಕ್ಷಣ ಗೂಗಲ್ ನಲ್ಲಿ ಸರ್ಚ್ ಮಾಡಿದೆ, ಅವರು ಯಾವ ಸಿನಿಮಾ ಮಾಡ್ತಿದ್ದಾರೆ ಅಂತ'' - ರವಿಶಂಕರ್

    ಫುಲ್ ಬಿಲ್ಡಪ್!

    ಫುಲ್ ಬಿಲ್ಡಪ್!

    ''ಹೀರೋ ಆಗಲೇ ಫಿಕ್ಸ್ ಆಗಿದ್ದಾರೆ ಅಂತ ಗೊತ್ತಾಯ್ತು. ವಿಲನ್ ಪಾತ್ರಕ್ಕಾಗಿ ಕರೆಯುತ್ತಿದ್ದಾರೆ ಅಂತ ಖುಷಿ ಪಟ್ಟೆ. ಏರ್ ಪೋರ್ಟ್ ಗೆ ಹೋದಾಗ ಮರ್ಸಿಡೀಸ್ ಕಾರ್ ಬಂತು. ಅಷ್ಟು ದುಬಾರಿ ಕಾರ್ ಕಳುಹಿಸಿದ್ದಾರೆ ಅಂದ್ರೆ, ಸಿನಿಮಾಗೆ ನಾನೇ ವಿಲನ್ ಪಕ್ಕಾ ಅಂದುಕೊಂಡೆ'' - ರವಿಶಂಕರ್

    ಮೂಡ್ ಔಟ್!

    ಮೂಡ್ ಔಟ್!

    ''ಸ್ಟೈಲ್ ಆಗಿ ಹೋದೆ, ಆಮೇಲೆ ಗೊತ್ತಾಗಿದ್ದು ವಿಲನ್ ಆಗಲೇ ಸೆಲೆಕ್ಟ್ ಆಗಿದ್ದಾರೆ ಅಂತ. ಅದು ಗೊತ್ತಾಗ್ತಿದ್ದಂತೆ ಮೂಡ್ ಔಟ್ ಆಯ್ತು'' - ರವಿಶಂಕರ್

    ಅವತ್ತು ನಡೆದದ್ದು ಒಂದು ಪ್ರಯೋಗ!

    ಅವತ್ತು ನಡೆದದ್ದು ಒಂದು ಪ್ರಯೋಗ!

    ''ಹೀರೋ ಇಲ್ಲ, ವಿಲನ್ ಇಲ್ಲ ಅಂದ್ಮೇಲೆ ನನಗೆ ಯಾಕೆ ಇಷ್ಟೊಂದು ಸೌಲಭ್ಯ ಕೊಡ್ತಿದ್ದಾರೆ ಅಂದ್ರೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿ ನನಗೆ ಒಂದು ಪ್ರಯೋಗ ಮಾಡೋಕೆ ಹೇಳಿದರು'' - ರವಿಶಂಕರ್

    ಆಕ್ಟಿಂಗ್ ಗಿಂತ ಮೊದಲು ಡಬ್ಬಿಂಗ್!

    ಆಕ್ಟಿಂಗ್ ಗಿಂತ ಮೊದಲು ಡಬ್ಬಿಂಗ್!

    ''ಅವರು ತಮಿಳಿನಲ್ಲಿ ದೊಡ್ಡ ನಟ. ಆದ್ರೆ, ತೆಲುಗಿನಲ್ಲಿ ಹಾಗೆ ಮಾಡೋಕೆ ಬರುತ್ತೋ, ಇಲ್ವೋ ಗೊತ್ತಿಲ್ಲ. ಅದಕ್ಕೆ ಮೊದಲು ನೀವು ಡಬ್ಬಿಂಗ್ ಮಾಡಿಬಿಡಿ. ನಿಮ್ಮ ವಾಯ್ಸ್ ಮೇಲೆ ಅವರು ಆಕ್ಟ್ ಮಾಡುತ್ತಾರೆ' ಅಂತ ಆ ದೊಡ್ಡ ಡೈರೆಕ್ಟರ್ ನನಗೆ ಹೇಳಿದರು'' - ರವಿಶಂಕರ್

    ಬೇರೆ ದಾರಿ ಇರ್ಲಿಲ್ಲ!

    ಬೇರೆ ದಾರಿ ಇರ್ಲಿಲ್ಲ!

    ''ಬೇರೆ ದಾರಿ ಇಲ್ಲದೆ ನಾನು ಡಬ್ಬಿಂಗ್ ಮಾಡಿಕೊಟ್ಟೆ. ಟೈಮಿಂಗ್ ಇಟ್ಟುಕೊಂಡು ನಾನು ವಾಯ್ಸ್ ಕೊಟ್ಟೆ. 12 ಪೇಜ್ ಡೈಲಾಗ್ ಮಾಡಿಕೊಟ್ಟೆ'' - ರವಿಶಂಕರ್

    ಆ ನಿರ್ದೇಶಕರು ಇವರೇ.....

    ಆ ನಿರ್ದೇಶಕರು ಇವರೇ.....

    ''ಆ ಸಿನಿಮಾ 'ವರುಡು'. ಗುಣಶೇಖರ್ ಅಂತ ನಿರ್ದೇಶಕ. ವಿಲನ್ ಬಂದು ಆರ್ಯ ಅಂತ ತಮಿಳು ನಟ. ಹೀರೋ ಅಲ್ಲು ಅರ್ಜುನ್'' - ರವಿಶಂಕರ್

    ಡೈರೆಕ್ಟರ್ ಹತ್ರ ಬಾಯ್ಬಿಟ್ಟು ಕೇಳಿದ್ದೇನೆ!

    ಡೈರೆಕ್ಟರ್ ಹತ್ರ ಬಾಯ್ಬಿಟ್ಟು ಕೇಳಿದ್ದೇನೆ!

    ''ಆಮೇಲೆ ಒಬ್ಬರು ದೊಡ್ಡ ಡೈರೆಕ್ಟರ್ ಹತ್ರ ನಾನೇ ಬಾಯಿಬಿಟ್ಟು ಕೇಳಿದೆ, 'ಯಾಕೆ ನಾವೆಲ್ಲಾ ನಿಮಗೆ ನೆನಪಿಗೆ ಬರೋದಿಲ್ವಾ, ಬರೀ ಡಬ್ಬಿಂಗ್ ಗೆ ಮಾತ್ರ ಕರೆಯುತ್ತೀರಾ, ನಟಿಸಲು ಚಾನ್ಸ್ ಕೊಡಲ್ವಾ ಅಂತ'' - ರವಿಶಂಕರ್

    ಆ ಡೈರೆಕ್ಟರ್ ಕೊಟ್ಟ ಉತ್ತರ...

    ಆ ಡೈರೆಕ್ಟರ್ ಕೊಟ್ಟ ಉತ್ತರ...

    ''ಅದಕ್ಕೆ ಅವರು ಹೇಳಿದ್ದು, ''ಸ್ಕ್ರಿಪ್ಟ್ ಮೇಕಿಂಗ್ ನಲ್ಲಿ ನೀವೆಲ್ಲಾ ನಮಗೆ ನೆನಪಿಗೆ ಬರೋಲ್ಲ. ಯಾವಾಗ ಡಬ್ಬಿಂಗ್ ಕದ ಮುಟ್ಟುತ್ತೇವೆ, ಆಗ ಮಾತ್ರ ನೆನಪಾಗ್ತೀರಾ'' ಅಂತ ಹೇಳ್ತಾರೆ'' - ರವಿಶಂಕರ್

    ಮಾಲಾಶ್ರೀ ಅಭಿನಯದ 'ದುರ್ಗಿ' ಚಿತ್ರಕ್ಕೆ ನಿರ್ದೇಶನ

    ಮಾಲಾಶ್ರೀ ಅಭಿನಯದ 'ದುರ್ಗಿ' ಚಿತ್ರಕ್ಕೆ ನಿರ್ದೇಶನ

    ''ದುರ್ಗಿ' ಸಿನಿಮಾ ನಿರ್ದೇಶನ ಮಾಡ್ದೆ. ಸಿನಿಮಾ ಹಿಟ್ ಆಯ್ತು. ನನಗೆ ಒಳ್ಳೆ ಹೆಸರು ಬಂತು. ನೋಡಿ, ನನಗೆ ನಿರ್ದೇಶನದ ಅವಕಾಶ ಕೊಟ್ಟಿದ್ದು 'ನಮ್ಮ ಕರ್ನಾಟಕ'' - ರವಿಶಂಕರ್

    'ದುರ್ಗಿ' ಚಿತ್ರ ತೆಲುಗಿಗೆ ಸೇಲ್ ಆಯ್ತು...

    'ದುರ್ಗಿ' ಚಿತ್ರ ತೆಲುಗಿಗೆ ಸೇಲ್ ಆಯ್ತು...

    ''ದುರ್ಗಿ' ಸಿನಿಮಾನ ತೆಲುಗಿನಲ್ಲಿ ಮಾಡಬೇಕು ಅಂತ ಚೆಂಗಲ್ ವೆಂಕಟ್ ರಾವ್ ಅಂತ ನಿರ್ಮಾಪಕರು ರೈಟ್ಸ್ ತೆಗೆದುಕೊಂಡರು. ಸಿನಿಮಾ ಕೊಂಡುಕೊಂಡಿದ್ದಾರೆ ಅಂದ್ರೆ, ಚಿತ್ರದ ಕಥೆ ಚೆನ್ನಾಗಿದೆ, ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಅಂತ ಅರ್ಥ ಅಲ್ವಾ'' - ರವಿಶಂಕರ್

    ತೆಲುಗಿನಲ್ಲಿ ಮತ್ತೆ ಅವಕಾಶ ಇಲ್ಲ!

    ತೆಲುಗಿನಲ್ಲಿ ಮತ್ತೆ ಅವಕಾಶ ಇಲ್ಲ!

    ''ಅವರು ಸಿನಿಮಾ ಕೊಂಡುಕೊಂಡು ಹೋದ ಮೇಲೆ ಅಲ್ಲಿಂದ ಫೋನ್ ಬಂತು. ಈ ಬಾರಿ ಸುವರ್ಣಾವಕಾಶ ಸಿಕ್ತು. ಮಿಸ್ ಇಲ್ಲ ಅಂತ ಫುಲ್ ಖುಷಿ ಇಂದ ಹೋದೆ. ಆದ್ರೆ, ಅಲ್ಲಿ ಆಗಿದ್ದೇ ಬೇರೆ'' - ರವಿಶಂಕರ್

    ನಿರ್ದೇಶಕರಿಗೆ ಅಸಿಸ್ಟ್ ಮಾಡ್ಬೇಕಂತೆ!

    ನಿರ್ದೇಶಕರಿಗೆ ಅಸಿಸ್ಟ್ ಮಾಡ್ಬೇಕಂತೆ!

    ''ನಿರ್ದೇಶಕ ಬಿ.ಗೋಪಾಲ್ ಮತ್ತು ಜೂ.ಎನ್.ಟಿ.ಆರ್ ಇದ್ದರು. ನನ್ನ ಸಿನಿಮಾ, ಡೈರೆಕ್ಷನ್ ಚಾನ್ಸ್ ನನಗೆ ಸಿಗುತ್ತೆ ಅಂತ ಭಾವಿಸಿದ್ದೆ. ಆದ್ರೆ, ಬಿ.ಗೋಪಾಲ್ ಡೈರೆಕ್ಟ್ ಮಾಡುತ್ತಾರೆ, ನೀವು ಅಸಿಸ್ಟ್ ಮಾಡಿ ಅಂತ ನನಗೆ ಹೇಳಿದರು'' - ರವಿಶಂಕರ್

    ರವಿಶಂಕರ್ ಪಟ್ಟ ಸಂಕಟ

    ರವಿಶಂಕರ್ ಪಟ್ಟ ಸಂಕಟ

    ''ನಾನು ಮಾಡಿರುವ ಚಿತ್ರಕ್ಕೆ, ನಾನೇ ಹೋಗಿ ಅಸಿಸ್ಟ್ ಮಾಡಿ ಅಂದ್ರೆ ನನಗೆ ಹೇಗೆ ಆಗಬೇಡ. ನನಗೆ ಅವತ್ತು ಕೂಡ ತುಂಬಾ ಬೇಜಾರಾಯ್ತು. ಆದರೂ, ನಾನು ಮಾಡಿದೆ'' - ರವಿಶಂಕರ್

    ಇಂತಹ ಅವಮಾನ ಎಷ್ಟೋ ಬಾರಿ...

    ಇಂತಹ ಅವಮಾನ ಎಷ್ಟೋ ಬಾರಿ...

    ''ಈ ತರಹ ಅವಮಾನ ಎಷ್ಟೋ ಬಾರಿ ಆಗಿದೆ. ಇವತ್ತು ನಾನು ಬಾಯಿ ಬಿಟ್ಟು ಹೇಳುತ್ತಿದ್ದೇನೆ. ನನ್ನ ಜೊತೆಗೆ ಇದ್ದ ದೊಡ್ಡ ಹೀರೋಗಳು ಕೂಡ ನನಗೆ ಸಪೋರ್ಟ್ ಮಾಡ್ಲಿಲ್ಲ'' - ರವಿಶಂಕರ್

    ಸರಸ್ವತಿ ಮೇಲೆ ನಂಬಿಕೆ

    ಸರಸ್ವತಿ ಮೇಲೆ ನಂಬಿಕೆ

    ''ನಾನು ಬೇರೆಯವರ ಮನೆ ಬಾಗಿಲಿಗೆ ಹೋಗಿ ಪಾತ್ರಗಳಿಗಾಗಿ ಬೇಡಿಕೊಳ್ಳಲಿಲ್ಲ. ಸರಸ್ವತಿ ಇದ್ದಾಳೆ, ಅವಕಾಶ ಬಂದೇ ಬರುತ್ತೆ ಅಂತ ಕಾಯುತ್ತಿದ್ದೆ'' - ರವಿಶಂಕರ್

    ಒಂದು ಯಶಸ್ಸಿಗೆ 25 ವರ್ಷ

    ಒಂದು ಯಶಸ್ಸಿಗೆ 25 ವರ್ಷ

    ''ನನಗೆ ನಿಜವಾದ ಯಶಸ್ಸು ಸಿಕ್ಕಿದ್ದು 'ಕೆಂಪೇಗೌಡ' ಚಿತ್ರದಲ್ಲಿ. ಒಂದು ಯಶಸ್ಸಿಗೆ 25 ವರ್ಷ ಕಾದಿದ್ದೇನೆ'' - ರವಿಶಂಕರ್

    English summary
    Kannada Actor cum Dubbing Artist Ravishankar's struggling life was revealed in Zee Kannada Channel's popular show Weekend With Ramesh season 2.
    Thursday, April 14, 2016, 13:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X