»   » ದರ್ಶನ್ ಬಗ್ಗೆ ನಟ ಸೃಜನ್ ಮಾಡಿದ ಕಾಮೆಂಟ್ ಏನು?

ದರ್ಶನ್ ಬಗ್ಗೆ ನಟ ಸೃಜನ್ ಮಾಡಿದ ಕಾಮೆಂಟ್ ಏನು?

Posted by:
Subscribe to Filmibeat Kannada

'ಸ್ಮಾಲ್ ಸ್ಕ್ರೀನ್ ನ ಬಿಗ್ ಸ್ಟಾರ್' ಅಂತ್ಲೇ ನಟ ಸೃಜನ್ ಲೋಕೇಶ್ ಹೆಸರುವಾಸಿ. ಕಿರುತೆರೆಯಲ್ಲಿ ಇಂತಹ ಸಾಧನೆ ಮಾಡಿರುವ ಸೃಜನ್ ಲೋಕೇಶ್ ಬೆನ್ನ ಹಿಂದೆ ನಿಂತು ಸದಾ ಸಪೋರ್ಟ್ ಮಾಡುವವರು ಬೇರೆ ಯಾರೂ ಅಲ್ಲ, ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು 'ಮಜಾ ಸ್ಟಾರ್' ಸೃಜನ್ ಲೋಕೇಶ್ ಎಂತಹ ಕುಚ್ಚಿಕ್ಕು ಗೆಳೆಯರು ಅನ್ನೋದು ನಿಮಗೆ ಗೊತ್ತು. [ಸೃಜನ್ ಲೋಕೇಶ್ ನಗುವಿನ ಹಿಂದೆ ಇರುವ ಕಣ್ಣೀರ ಕಹಾನಿ ಬಯಲು]

'ನವಗ್ರಹ' ಚಿತ್ರದಲ್ಲಿ ದರ್ಶನ್ ಜೊತೆ ನಟಿಸಿದ ಸೃಜನ್ ಲೋಕೇಶ್ ಸದ್ಯ ದಚ್ಚು ಜೊತೆ 'ಜಗ್ಗು ದಾದಾ' ಮತ್ತು ಚಕ್ರವರ್ತಿ' ಸಿನಿಮಾದಲ್ಲಿ ಜೊತೆಯಾಗಲಿದ್ದಾರೆ.

ಮೊನ್ನೆಯಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಬಗ್ಗೆ ಸೃಜನ್ ಲೋಕೇಶ್ ಮಾತನಾಡಿದರು. ಮುಂದೆ ಓದಿ.....

'ನವಗ್ರಹ' ಚಿತ್ರದ ಬಗ್ಗೆ....

'ನವಗ್ರಹ' ಚಿತ್ರದ ಬಗ್ಗೆ....

''ನನ್ನ ಮಗ ಬಂದು ನೀನು ಜೀವನದಲ್ಲಿ ಏನು ಮಾಡಿದ್ದೀಯಾ ಅಂತ ಕೇಳಿದ್ರೆ, 'ನವಗ್ರಹ' ಸಿನಿಮಾ ನೋಡು ಅಂತ ತೋರಿಸ್ತೀನಿ. ಅಂತಹ ಒಂದು ಅದ್ಭುತವಾದ ಸಿನಿಮಾ ಅದು. ಎಲ್ಲಾ ಕ್ರೆಡಿಟ್ ಹೋಗುವುದು ತೂಗುದೀಪ ಫ್ಯಾಮಿಲಿಗೆ'' - ಸೃಜನ್ ಲೋಕೇಶ್ [ಸಾವಿನಲ್ಲೂ ಸಾರ್ಥಕತೆ ಮೆರೆದ ದಿ.ಲೋಕೇಶ್ ಕುರಿತು ಕೆಲ ಸತ್ಯ ಸಂಗತಿಗಳು]

ಚಿಕ್ಕವಯಸ್ಸಿಂದ ಫ್ರೆಂಡ್ಸ್

ಚಿಕ್ಕವಯಸ್ಸಿಂದ ಫ್ರೆಂಡ್ಸ್

''ನಾನು ಮತ್ತು ದರ್ಶನ್ ಚಿಕ್ಕವಯಸ್ಸಿಂದ ಫ್ರೆಂಡ್ಸ್. ಅವರ ತೋಟಕ್ಕೆ ಹೋದರೆ ಚಾಪೆ ಹಾಸ್ಕೊಂಡು ಮಲ್ಕೊಂತೀವಿ. ಅಂತಹ ಸಿಂಪಲ್ ಫ್ರೆಂಡ್ಸ್ ನಾವು. 'ಜಗ್ಗು ದಾದಾ' ಸಿನಿಮಾ ಮಾಡ್ತಿದ್ದೀವಿ, 'ಚಕ್ರವರ್ತಿ' ಸಿನಿಮಾ ಕೂಡ ಜೊತೆಗೆ ಮಾಡ್ತಿದ್ದೀವಿ. ಜೊತೆಗೆ ಇರ್ತೀವಿ ನಾವು'' - ಸೃಜನ್ ಲೋಕೇಶ್

ದರ್ಶನ್ ಹೇಗೆ ಅಂದ್ರೆ....

ದರ್ಶನ್ ಹೇಗೆ ಅಂದ್ರೆ....

''ನನಗೆ ದರ್ಶನ್ is not just good friend, but good human being'' - ಸೃಜನ್ ಲೋಕೇಶ್

ದರ್ಶನ್ ಲೋಕೇಶ್!

ದರ್ಶನ್ ಲೋಕೇಶ್!

''ಮಂಗಳೂರಿನಲ್ಲಿ ಒಂದು ಫಂಕ್ಷನ್ ಗೆ ಹೋಗಿದ್ವಿ. ಅಲ್ಲಿ ಪರಿಚಯ ಮಾಡುವಾಗ, ಸೃಜನ್ ತೂಗುದೀಪ, ದರ್ಶನ್ ಲೋಕೇಶ್ ಅಂತ ಕರೆದ್ರು. ಆಮೇಲೆ ಕ್ಷಮಿಸಿ ಅಂದ್ರು. ಅದಕ್ಕೆ ನಾವು ಇರ್ಲಿ ಪರ್ವಾಗಿಲ್ಲ. ನಾವೆಲ್ಲಾ ಒಂದೇ ಕುಟುಂಬದವರು. ಪರ್ವಾಗಿಲ್ಲ ಅಂದ್ವಿ. ಅಂತಹ ಫ್ರೆಂಡ್ಸ್ ನಾವು'' - ದರ್ಶನ್, ನಟ

ಸೃಜನ್ ಮೊಬೈಲ್ ನಲ್ಲಿ ಏನಿದೆ

ಸೃಜನ್ ಮೊಬೈಲ್ ನಲ್ಲಿ ಏನಿದೆ

''ನನ್ನ ಮೊಬೈಲ್ ನಲ್ಲಿ ಇವತ್ತಿಗೂ ಹಾಕೊಂಡಿರೋದು D ಲೋಕೇಶ್ ಅಂತಲೇ..'' - ಸೃಜನ್ ಲೋಕೇಶ್

ದರ್ಶನ್ ಏನಂತಾರೆ?

ದರ್ಶನ್ ಏನಂತಾರೆ?

''ನಾನು ಸೃಜನ್ ಗೆ ಯಾವಾಗಲೂ ಹೇಳ್ತಾ ಇರ್ತೀನಿ. ಸೃಜನ್ ಗೆ ವಾಲ್ಯೂ ಇಲ್ಲ. ಆದ್ರೆ, ಅದರ ಪಕ್ಕದಲ್ಲಿ ಇರುವ ಲೋಕೇಶ್ ಗೆ ತುಂಬಾ ವಾಲ್ಯೂ ಇದೆ. ದಯವಿಟ್ಟು ಅದನ್ನ ಮಾತ್ರ ಕಾಪಾಡಿಕೋ ಅಂತ. ಹಾಗೇ, ಕಾಪಾಡಿಕೊಂಡಿದ್ದಾನೆ'' - ದರ್ಶನ್, ನಟ

ಮಜಾ ಇರೋದು ಎಲ್ಲಿ?

ಮಜಾ ಇರೋದು ಎಲ್ಲಿ?

''ಸೃಜ ಜೊತೆಗೆ ಗಜ ಇಲ್ಲ ಅಂದ್ರೆ ಮಜಾನೇ ಬರಲ್ಲ'' - ದರ್ಶನ್, ನಟ

ಎಲ್ಲದಕ್ಕೂ ದರ್ಶನ್ ಕಾರಣ

ಎಲ್ಲದಕ್ಕೂ ದರ್ಶನ್ ಕಾರಣ

''ನನ್ನ ಈ ಬಾಡಿ ಟ್ರ್ಯಾನ್ಸ್ ಫಾರ್ಮೇಷನ್ ಗೆ ದರ್ಶನ್ ಕಾರಣ. 'ಬಿಗ್ ಬಾಸ್' ಕಾರ್ಯಕ್ರಮದಿಂದ ಬಂದಮೇಲೆ ವರ್ಕೌಟ್ ಮಾಡ್ತೀನಿ ಅಂದೆ. ಅವನು ಗೈಡ್ ಮಾಡ್ತೀನಿ ಅಂದ. ಒಂಚೂರು ಏರು ಪೇರು ಆದರೂ ಹೇಳ್ತಾನೆ'' - ಸೃಜನ್ ಲೋಕೇಶ್

ಪ್ಯಾಂಟ್ ಸೈಜ್ ಒಂದೇ!

ಪ್ಯಾಂಟ್ ಸೈಜ್ ಒಂದೇ!

''ಯಾವಾಗಲೂ ಫಿಟ್ ಆಗಿರ್ಬೇಕು. ಯಾಕಂದ್ರೆ ಇಬ್ಬರ ಪ್ಯಾಂಟ್ ಸೈಜ್ ಒಂದೇ'' - ದರ್ಶನ್, ನಟ

ದರ್ಶನ್ ಗೆ ಎಲ್ಲಾ ಗೊತ್ತು!

ದರ್ಶನ್ ಗೆ ಎಲ್ಲಾ ಗೊತ್ತು!

''ಇವನು ಏನೂ ನಮ್ಮ ಹತ್ರ ಶೇರ್ ಮಾಡಿಕೊಳ್ತಿರ್ಲಿಲ್ಲ. ಇವನಿಗೆ ಎಷ್ಟು ಜನ ಅವಮಾನ ಮಾಡಿದ್ದಾರೋ, ನನಗೆ ಗೊತ್ತಿಲ್ಲ. ಆದ್ರೆ, ಎಲ್ಲವೂ ದರ್ಶನ್ ಗೆ ಗೊತ್ತಿರುತ್ತೆ'' - ಗಿರಿಜಾ ಲೋಕೇಶ್, ತಾಯಿ

ಧಾರಾವಾಹಿಯಿಂದ ಹೊರಗೆ ಕರೆತಂದಿದ್ದು ದರ್ಶನ್!

ಧಾರಾವಾಹಿಯಿಂದ ಹೊರಗೆ ಕರೆತಂದಿದ್ದು ದರ್ಶನ್!

''ನಾನು ಧಾರಾವಾಹಿಯಲ್ಲಿ ನಟಿಸುವುದು ನಿಲ್ಲಿಸುವುದಕ್ಕೆ ಕಾರಣ ದರ್ಶನ್. ಹೀಗೆ ಇದ್ದರೆ, ಹೀಗೆ ಇರ್ತೀಯಾ. ಆಚೆ ಬಾ ಅಂತ ಕರ್ಕೊಂಡು ಬಂದಿದ್ದು ದರ್ಶನ್. ಆಗ ತಿಂಗಳಿಗೆ ದುಡ್ಡು ನಿಲ್ತು. ನಂತರ ನನಗೆ ಕೆಲವು ಶೋಗಳಲ್ಲಿ ಸ್ಪರ್ಧಿಗಳಾಗುವುದಕ್ಕೆ ಕರೆದರು'' - ಸೃಜನ್ ಲೋಕೇಶ್

ಹಿಂದಿರುಗಿ ನೋಡಲಿಲ್ಲ!

ಹಿಂದಿರುಗಿ ನೋಡಲಿಲ್ಲ!

''ನನಗೆ ಆಂಕರಿಂಗ್ ನಲ್ಲಿ ಇಂಟ್ರೆಸ್ಟ್ ಇತ್ತು. ಸ್ಪರ್ಧಿ ಆಗಲು ಒಪ್ಪಿಕೊಳ್ಳಲಿಲ್ಲ. ಆಂಕರಿಂಗ್ ನಲ್ಲಿ ಹೊಸ ಪ್ರಯತ್ನ ಮಾಡಬೇಕು ಅಂತ ಇದ್ದೆ. ಚಾನ್ಸ್ ಸಿಕ್ತು. ಒಪ್ಪಿಕೊಂಡೆ. ಅಲ್ಲಿಂದ ಹಿಂದಿರುಗಿ ನೋಡಿಲ್ಲ'' - ಸೃಜನ್ ಲೋಕೇಶ್

English summary
Kannada Actor Srujan Lokesh spoke about Kannada Actor Challenging Star Darshan in Zee Kannada Channel's popular show Weekend With Ramesh.
Please Wait while comments are loading...

Kannada Photos

Go to : More Photos