»   » ನಾಗತಿಹಳ್ಳಿ ಚಂದ್ರಶೇಖರ್ ರಿಜೆಕ್ಟ್ ಮಾಡಿದ ನಟ ಸುದೀಪ್.! ನಿಮ್ಗೊತ್ತಾ?

ನಾಗತಿಹಳ್ಳಿ ಚಂದ್ರಶೇಖರ್ ರಿಜೆಕ್ಟ್ ಮಾಡಿದ ನಟ ಸುದೀಪ್.! ನಿಮ್ಗೊತ್ತಾ?

Posted by:
Subscribe to Filmibeat Kannada

'ಅಮೆರಿಕಾ ಅಮೆರಿಕಾ', 'ಹೂಮಳೆ', 'ನನ್ನ ಪ್ರೀತಿಯ ಹುಡುಗಿ', 'ಅಮೃತಧಾರೆ' ಸೇರಿದಂತೆ ಅನೇಕ ಸದಭಿರುಚಿಯ ಸ್ವಮೇಕ್ ಚಿತ್ರಗಳನ್ನ ಕನ್ನಡಕ್ಕೆ ನೀಡಿರುವ ಪ್ರಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಕಿಚ್ಚ ಸುದೀಪ್ ರವರನ್ನ ತಮ್ಮ ಚಿತ್ರಕ್ಕೆ ರಿಜೆಕ್ಟ್ ಮಾಡಿದ್ರು ಅನ್ನೋದು ನಿಮ್ಗೆ ಗೊತ್ತಾ?

ಹೌದು, ರಮೇಶ್ ಅರವಿಂದ್ ನಟಿಸಿದ್ದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ 'ಅಮೇರಿಕಾ ಅಮೇರಿಕಾ' ಚಿತ್ರದಲ್ಲಿ ಸುದೀಪ್ ಕೂಡ ನಟಿಸಬೇಕಿತ್ತು. ಆದ್ರೆ, ಸುದೀಪ್ ರವರಿಗೆ ಅವಕಾಶ ನೀಡಲು ನಾಗತಿಹಳ್ಳಿ ಚಂದ್ರಶೇಖರ್ ಒಪ್ಪಿಕೊಳ್ಳಲಿಲ್ಲ. ಹೀಗಂತ ಖುದ್ದು ಸುದೀಪ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಾಯ್ಬಿಟ್ಟರು.[ಇಂದು 'ವೀಕೆಂಡ್ ವಿತ್ ರಮೇಶ್' ನಲ್ಲಿ ಸುದೀಪ್.! ಮಿಸ್ ಮಾಡಲ್ಲ ತಾನೆ?]

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಎಂಟ್ರಿಕೊಡುತ್ತಿದ್ದಂತೆಯೇ, 100 ಚಿತ್ರಗಳನ್ನ ಕನ್ನಡ ಚಿತ್ರರಂಗದಲ್ಲಿ ಪೂರೈಸಿರುವ ನಟ ರಮೇಶ್ ಅರವಿಂದ್ ರನ್ನ ಸಾಧಕರ ಸೀಟ್ ಮೇಲೆ ಕೂರಿಸಿ, ಅವರಿಗೆ ಗೌರವ ಸಲ್ಲಿಸಿದರು ಸುದೀಪ್. ಜೊತೆಗೆ 'ಅಮೇರಿಕಾ ಅಮೇರಿಕಾ' ಚಿತ್ರದಲ್ಲಿ ರಮೇಶ್ ಜೊತೆ ನಟಿಸುವ ಅವಕಾಶ ಮಿಸ್ ಆದ ಬಗ್ಗೆ ಮಾತನಾಡಿದರು.[ವಿಡಿಯೋ ನೋಡಿ; ನಟ ದರ್ಶನ್ ಕೋಪದ ಬಗ್ಗೆ ಸುದೀಪ್ ಕಾಮೆಂಟ್.!]

'ವೀಕೆಂಡ್ ವಿತ್ ರಮೇಶ್-2' ಗ್ರ್ಯಾಂಡ್ ಫಿನಾಲೆ ಸಂಚಿಕೆಯಲ್ಲಿ ರಮೇಶ್-ಸುದೀಪ್ ರವರ ಮಜವಾದ ಸಂಭಾಷಣೆ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿ.....

ಸಾಧಕರ ಕುರ್ಚಿ ಮೇಲೆ ನಾನು ಮೊದಲು ಕೂರಲ್ಲ!

ಸಾಧಕರ ಕುರ್ಚಿ ಮೇಲೆ ನಾನು ಮೊದಲು ಕೂರಲ್ಲ!

''ಕುರ್ಚಿ ಮೇಲೆ ನಾನು ಕೂರುವುದಿಲ್ಲ. ಮೊದಲು ನೀವು ಕೂತುಕೊಳ್ಳಿ. ನಾನು ನಿಂತುಕೊಳ್ಳುತ್ತೇನೆ'' ಅಂತ ನಟ ರಮೇಶ್ ಅರವಿಂದ್ ಗೆ ಹೇಳುವ ಮೂಲಕ, ಶೋಗೆ ಹೊಸ ಟ್ವಿಸ್ಟ್ ಕೊಟ್ಟರು ಕಿಚ್ಚ ಸುದೀಪ್.['ವೀಕೆಂಡ್ ವಿತ್ ರಮೇಶ್'ನಲ್ಲಿ ಕಿಚ್ಚ ಸುದೀಪ್; ವೀಕ್ಷಕರ ಅಭಿಪ್ರಾಯವೇನು?]

ಉಲ್ಟಾ ಮಾಡ್ತಿದ್ದಾರೆ.!

ಉಲ್ಟಾ ಮಾಡ್ತಿದ್ದಾರೆ.!

''ಸೀಸನ್ 1 ಮೊದಲನೇ ಎಪಿಸೋಡ್ ನಿಂದ ಕಿಚ್ಚ ಸುದೀಪ್ ರವರನ್ನ ಸಾಧಕರ ಸೀಟ್ ಮೇಲೆ ಕೂರಿಸಬೇಕು ಅಂತ ಕಾಯ್ತಿದ್ದೀವಿ. ಇಲ್ಲಿ ಇವರು ಬಂದು ಉಲ್ಟಾ ಮಾಡ್ತಿದ್ದಾರೆ'' - ರಮೇಶ್ ಅರವಿಂದ್

ಬೇಗ ಈಡೇರಿಸುವುದಕ್ಕೆ ಆಗುತ್ತಾ?

ಬೇಗ ಈಡೇರಿಸುವುದಕ್ಕೆ ಆಗುತ್ತಾ?

''ಕೂರಬೇಕು ಅಂತ ಕಾಯ್ತಿದ್ದನ್ನ ಅಷ್ಟು ಬೇಗ ಈಡೇರಿಸಿಬಿಟ್ಟರೆ ಹೇಗೆ? ಅವೆಲ್ಲಾ ಸಾಧ್ಯ ಇಲ್ಲ. ನಮಗೂ ಒಂದೆರಡು ಪ್ರಶ್ನೆ ಇದೆ'' - ಸುದೀಪ್

ರಮೇಶ್-ಸುದೀಪ್ ಸಂಭಾಷಣೆ

ರಮೇಶ್-ಸುದೀಪ್ ಸಂಭಾಷಣೆ

'ಥ್ಯಾಂಕ್ಯು ಫಾರ್ ದಿ ಲವ್' - ರಮೇಶ್ ಅರವಿಂದ್

'ಫಾರ್ ಎ ಚೇಂಜ್....ವೀಕೆಂಡ್ ವಿತ್ ಸುದೀಪ್ ಶೋ ಗೆ ಸ್ವಾಗತ ಸುಸ್ವಾಗತ...!' - ಸುದೀಪ್

ರಮೇಶ್ ಗೆ ಬೋರ್ ಆಗಿದ್ಯಾ?

ರಮೇಶ್ ಗೆ ಬೋರ್ ಆಗಿದ್ಯಾ?

''ಶೋ ನಲ್ಲಿ ಎಲ್ಲರ ಜೀವನ ಶೈಲಿ ನೋಡಿದ್ದೀರಾ. ಈ ಕುರ್ಚಿ ಮೇಲೆ ಕೂತುಕೊಂಡು ಎಲ್ಲರೂ ಭಾವನೆ ಹೇಳಿಕೊಂಡಿದ್ದಾರೆ. How bored are you?'' ಅಂತ ರಮೇಶ್ ಅರವಿಂದ್ ಗೆ ಸುದೀಪ್ ಪ್ರಶ್ನೆ ಮಾಡಿದರು.

ರಮೇಶ್ ಕೊಟ್ಟ ಉತ್ತರ

ರಮೇಶ್ ಕೊಟ್ಟ ಉತ್ತರ

''How bored am I? I'm not bored at all. ನಾನು ಕೇಳುವ ಪ್ರಶ್ನೆಗಳು ಒಂದೇ ಆಗಿದ್ದರೂ, ಅದರಿಂದ ಬರುವ ಉತ್ತರಗಳು ಬೇರೆ ಬೇರೆ ಆಗಿತ್ತು. ಯಾಕಂದ್ರೆ ಇಲ್ಲಿ ಕೂತಿದ್ದ ಒಬ್ಬೊಬ್ಬರದ್ದೂ ಬೇರೆ ಬೇರೆ ವ್ಯಕ್ತಿತ್ವ. ಹಾಗಾಗಿ ನನಗಂತೂ ಬೋರ್ ಆಗಿಲ್ಲ'' - ರಮೇಶ್ ಅರವಿಂದ್

ಸೀಟ್ ಮೇಲೆ ಮಿಸ್ ಮಾಡಿಕೊಂಡವರು?

ಸೀಟ್ ಮೇಲೆ ಮಿಸ್ ಮಾಡಿಕೊಂಡವರು?

''ಯಾರಾದರೂ ಒಬ್ಬರನ್ನ ಈ ಸೀಟ್ ಮೇಲೆ ಮಿಸ್ ಮಾಡಿಕೊಂಡಿದ್ದೀರಾ?'' - ಸುದೀಪ್

ಹಠ ಬಿಡ್ತಿಲ್ಲ!

ಹಠ ಬಿಡ್ತಿಲ್ಲ!

''ಆರು ಅಡಿ ಕಟೌಟ್ ಒಬ್ಬರು ಇದ್ದಾರೆ. ಅವರನ್ನ ಕೂರಿಸಬೇಕು ಅಂತ ಕಾಯ್ತಿದ್ದೀನಿ. ಅವರು ಕೂರಲ್ಲ, ನಿಂತುಕೊಳ್ಳುತ್ತೇನೆ ಅಂತ ಹಠ ಮಾಡುತ್ತಿದ್ದಾರೆ'' - ರಮೇಶ್ ಅರವಿಂದ್

ಕಷ್ಟ ಪಟ್ಟು ನಿಂತಿದ್ದೇನೆ.!

ಕಷ್ಟ ಪಟ್ಟು ನಿಂತಿದ್ದೇನೆ.!

''ಇಂಡಸ್ಟ್ರಿಯಲ್ಲಿ ಬಹಳ ಕಷ್ಟ ಪಟ್ಟು ನಿಂತಿದ್ದೇನೆ. ಈಗ ಕೂತುಕೊಳ್ಳಿ ಅಂದ್ರೆ ಹೇಗೆ'' ಅಂತ ಹೇಳ್ತಾ ನಟ ಸುದೀಪ್ ನಗೆ ಚಟಾಕಿ ಹಾರಿಸಿದರು.

ಯಾರೂ ಮಾಡದ ಕೆಲಸ!

ಯಾರೂ ಮಾಡದ ಕೆಲಸ!

''ಯಾರೂ ಮಾಡೋಕೆ ಆಗದೇ ಇರೋದನ್ನ ನಾನು ಮಾಡಿದ್ದೇನೆ. ನಿಮ್ಮನ್ನ ಸೀಟ್ ಮೇಲೆ ಕೂರಿಸಿದ್ದೇನೆ'' - ಸುದೀಪ್

ನಾಗತಿಹಳ್ಳಿ ಚಂದ್ರಶೇಖರ್ ರಿಜೆಕ್ಟ್ ಮಾಡಿದ್ರು!

ನಾಗತಿಹಳ್ಳಿ ಚಂದ್ರಶೇಖರ್ ರಿಜೆಕ್ಟ್ ಮಾಡಿದ್ರು!

''ನಾನು ಮೊದಲು 'ಅಮೇರಿಕಾ ಅಮೇರಿಕಾ' ಚಿತ್ರದಲ್ಲಿ ರಮೇಶ್ ಜೊತೆ ನಟಿಸಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ನನಗೆ ಅವಕಾಶ ಸಿಗ್ಲಿಲ್ಲ. ನಾಗತಿಹಳ್ಳಿ ಚಂದ್ರಶೇಖರ್ ರಿಜೆಕ್ಟ್ ಮಾಡಿದ್ದ ಆರ್ಟಿಸ್ಟ್ ನಾನು'' - ಸುದೀಪ್

ಆಮೇಲೆ 'ಪ್ರತ್ಯರ್ಥ'

ಆಮೇಲೆ 'ಪ್ರತ್ಯರ್ಥ'

''ಅದಾದ್ಮೇಲೆ 'ಪ್ರತ್ಯರ್ಥ' ಅನ್ನೋ ಸಿನಿಮಾದಲ್ಲಿ ಸುನೀಲ್ ಕುಮಾರ್ ದೇಸಾಯಿ ಅವರ ಜೊತೆ ಹಾಗೂ ರಮೇಶ್ ಅರವಿಂದ್ ಜೊತೆ ನಟಿಸುವ ಅವಕಾಶ ಸಿಕ್ತು'' - ಸುದೀಪ್

ರಮೇಶ್ ಗೆ ಶುಭಾಶಯ

ರಮೇಶ್ ಗೆ ಶುಭಾಶಯ

''ಕನ್ನಡ ಚಿತ್ರರಂಗದಲ್ಲಿ ರಮೇಶ್ ಅರವಿಂದ್ ಅವರು 100 ಚಿತ್ರಗಳನ್ನ ಕಂಪ್ಲೀಟ್ ಮಾಡಿದ್ದಾರೆ. ಆ ನೂರನೇ ಸಿನಿಮಾ 'ಪುಷ್ಪಕವಿಮಾನ'. ರಮೇಶ್ ಅರವಿಂದ್ ರವರಿಗೆ Congratulations'' ಅಂತ ಸುದೀಪ್ ಶುಭಹಾರೈಸಿದರು.

ರಮೇಶ್ ಅರವಿಂದ್ ಗೆ ಸರ್ ಪ್ರೈಸ್!

ರಮೇಶ್ ಅರವಿಂದ್ ಗೆ ಸರ್ ಪ್ರೈಸ್!

''ಶೋ ಮೂಲಕ ನಾನು ಎಲ್ಲರಿಗೂ ಸರ್ ಪ್ರೈಸ್ ಕೊಡುತ್ತಿದೆ. ಆದ್ರೆ, ಸುದೀಪ್ ಮೂಲಕ ನನಗೆ ಸರ್ ಪ್ರೈಸ್ ಸಿಕ್ಕಿದ್ದು ಬಹಳ ಖುಷಿ ಆಯ್ತು'' ಅಂತ ಸಂತಸ ಪಟ್ಟರು ರಮೇಶ್ ಅರವಿಂದ್.

English summary
By making Kannada Actor, Director Ramesh Aravind to sit on 'Achiever's seat' in Zee Kannada channel's popular show Weekend With Ramesh season2, Kiccha Sudeep surprised Ramesh Aravind.
Please Wait while comments are loading...

Kannada Photos

Go to : More Photos