»   » ಹುಚ್ಚ ವೆಂಕಟ್ ರನ್ನ ಗೇಲಿ ಮಾಡಿದ 'ಬಿಗ್ ಬಾಸ್'?

ಹುಚ್ಚ ವೆಂಕಟ್ ರನ್ನ ಗೇಲಿ ಮಾಡಿದ 'ಬಿಗ್ ಬಾಸ್'?

Written by: ಹರಾ
Subscribe to Filmibeat Kannada

''ಭಯ...ನೆಗೆಟಿವಿಟಿ ಇಲ್ಲ. ಮೊಂಡುತನ ಇಲ್ಲ. ಸುರ್...ಅಂತ ಟೀ ಸದ್ದು ಮಾಡೋದು ನಿಂತುಹೋಗಿದೆ. ಮನೆ ಹೊರಗೆ ಚಪ್ಪಲಿ ಸದ್ದು. ಮನೆ ಒಳಗಡೆ ಸಂತೋಷ, ನಗು, ಕೇಕೆ. ಈ ಮನೆ ಇಷ್ಟು ಸಂತೋಷವಾಗಿ ಹೀಗೆ ಇರೋಕೆ ಸಾಧ್ಯಾನಾ.?''

ಹೀಗೆನ್ನುವ ಅಶರೀರವಾಣಿ ಕೇಳಿ ಬಂದಿದ್ದು 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ.! 'ದೊಡ್ಮನೆ'ಯಿಂದ ಹುಚ್ಚ ವೆಂಕಟ್ ಹೊರ ನಡೆದ ಮಾರನೇ ದಿನದ ಎಪಿಸೋಡ್ ಗೆ 'ಬಿಗ್ ಬಾಸ್' ಶುಭಂ ಹಾಡಿದ್ದು ಈ ಮಾತುಗಳಿಂದಲೇ.!

ಮೇಲಿರುವ ಮಾತುಗಳನ್ನ ಸೂಕ್ಷ್ಮವಾಗಿ ಗಮನಿಸಿದರೆ, ಇದು ಹುಚ್ಚ ವೆಂಕಟ್ ಗೆ ಹೇಳಿದ್ದು ಅಂತ ಸ್ಪೆಷಲ್ ಆಗಿ ಹೇಳುವ ಅವಶ್ಯಕತೆ ಇಲ್ಲ. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಯಾರೊಬ್ಬರಿಂದಾಗಿ 'ಬಿಗ್ ಬಾಸ್' ಶೋ ನಡೆಯುತ್ತಿಲ್ಲ. ಯಾರೊಬ್ಬರಿಗಾಗಿಯೂ 'ಬಿಗ್ ಬಾಸ್' ಶೋ ಮಾಡುತ್ತಿಲ್ಲ ನಿಜ. ಆದ್ರೆ, ಒರ್ವ ಸ್ಪರ್ಧಿ ಬಗ್ಗೆ ಕಾರ್ಯಕ್ರಮದ ಆಯೋಜಕರೇ ಹೀಗೆ ಲೇವಡಿ ಮಾಡುವುದು ಎಷ್ಟರಮಟ್ಟಿಗೆ ಸರಿ ಅನ್ನೋದು ಈಗ ಭುಗಿಲೆದ್ದಿರುವ ಪ್ರಶ್ನೆ. ಮುಂದೆ ಓದಿ....

ವೀಕ್ಷಕರ ಒತ್ತಾಯದ ಮೇರೆಗೆ ಅಲ್ವೇ ಆಫರ್ ಕೊಟ್ಟಿದ್ದು.!

ವೀಕ್ಷಕರ ಒತ್ತಾಯದ ಮೇರೆಗೆ ಅಲ್ವೇ ಆಫರ್ ಕೊಟ್ಟಿದ್ದು.!

ವೀಕ್ಷಕರ ಒತ್ತಾಯದ ಮೇರೆಗೆ 'ಬಿಗ್ ಬಾಸ್-3' ಕಾರ್ಯಕ್ರಮಕ್ಕೆ ಹುಚ್ಚ ವೆಂಕಟ್ ಕಾಲಿಟ್ರು. ಅದ್ರಲ್ಲೂ 'ಬಿಗ್ ಬಾಸ್-3' ಕಾರ್ಯಕ್ರಮ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಜನಪ್ರಿಯತೆ ಗಳಿಸಿದ್ದು ಟಿ.ಆರ್.ಪಿ.ಕಿಂಗ್ ಹುಚ್ಚ ವೆಂಕಟ್ ರಿಂದಲೇ ಅನ್ನೋದು ಎಲ್ಲರೂ ಒಪ್ಪುವ ಮಾತು.! [ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?]

ಟಿ.ಆರ್.ಪಿ ಹೆಚ್ಚಾಯ್ತು ತಾನೆ?

ಟಿ.ಆರ್.ಪಿ ಹೆಚ್ಚಾಯ್ತು ತಾನೆ?

'ಬಿಗ್ ಬಾಸ್' ಕಾರ್ಯಕ್ರಮದಿಂದ ಹುಚ್ಚ ವೆಂಕಟ್ ಬದುಕಿಗೆ ಎಷ್ಟರಮಟ್ಟಿಗೆ ಸಹಾಯವಾಯ್ತೋ ಗೊತ್ತಿಲ್ಲ. ಆದ್ರೆ, ಹುಚ್ಚ ವೆಂಕಟ್ ರಿಂದಾಗಿ ಕಲರ್ಸ್ ಕನ್ನಡ ಹಾಗೂ ಎಲ್ಲಾ ಕನ್ನಡ ಸುದ್ದಿ ವಾಹಿನಿಗಳಿಗೆ ಟಿ.ಆರ್.ಪಿ ರೇಟಿಂಗ್ ಹೆಚ್ಚಾಗಿದೆ. [ಹುಚ್ಚ ವೆಂಕಟ್ ಅಭಿಮಾನಿಯಿಂದ ಸುದೀಪ್ ಗೆ ಖಡಕ್ ಪ್ರಶ್ನೆ]

ಕರೆತಂದಿದ್ದು ಯಾಕೆ?

ಕರೆತಂದಿದ್ದು ಯಾಕೆ?

ಹುಚ್ಚ ವೆಂಕಟ್ ಅಬ್ಬರಿಸಿ ಬೊಬ್ಬಿರಿಯುತ್ತಾರೆ ಅಂತ ಗೊತ್ತಿದ್ರೂ, 'ಬಿಗ್ ಬಾಸ್' ಕಾರ್ಯಕ್ರಮಕ್ಕಾಗಿ ಅವರಿಗೆ ಆಹ್ವಾನ ನೀಡಿದ್ರು. ಸುಖಾಸುಮ್ಮನೆ ಕೆಣಕಿದ್ದಕ್ಕೆ ಟೆಂಪರ್ ರೈಸ್ ಮಾಡಿಕೊಂಡ ಹುಚ್ಚ ವೆಂಕಟ್ ಗಾಯಕ ರವಿ ಮುರೂರುಗೆ ಗೂಸಾ ನೀಡಿ, 'ಬಿಗ್ ಬಾಸ್-3' ಶೋನಿಂದ ಹೊರಬಂದ್ರು. [ಹುಚ್ಚ ವೆಂಕಟ್ ಗೆ ಸುದೀಪ್ 'ಐ ಲವ್ ಯು' ಎಂದಾಗ...]

'ಬಿಗ್ ಬಾಸ್' ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ ಅಲ್ಲವೇ?

'ಬಿಗ್ ಬಾಸ್' ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ ಅಲ್ಲವೇ?

ಹುಚ್ಚ ವೆಂಕಟ್ ಕೈ ಎತ್ತಿ ತಪ್ಪು ಮಾಡಿದ್ದಾರೆ ನಿಜ. ಅದನ್ನ ಎಲ್ಲರೂ ಒಪ್ಪಿಕೊಳ್ತಾರೆ. ಆದ್ರೆ, ಮನುಷ್ಯರ ಮಾನಸಿಕ ವರ್ತನೆ ಕುರಿತು ಅಳೆದು-ತೂಗಿ ತೀರ್ಪು ನೀಡುವ 'ಬಿಗ್ ಬಾಸ್' ಒಬ್ಬ ಸ್ಪರ್ಧಿಗೆ ಇಂತಹ ಮಾತುಗಳಿಂದ ಅವಮಾನ ಮಾಡಬಹುದೇ.? [ಕೆಣಕಿದ ರವಿಗೆ ಮೊದಲೇ ವಾರ್ನಿಂಗ್ ಕೊಟ್ಟಿದ್ದ ಹುಚ್ಚ ವೆಂಕಟ್.!]

ಭೇದಭಾವ ಯಾಕೆ?

ಭೇದಭಾವ ಯಾಕೆ?

ಎಲ್ಲಾ ಸ್ಪರ್ಧಿಗಳು ಮನೆ ಒಳಗೆ ಹೋಗುವ ಮುನ್ನ ಅವರ ಸಂಬಂಧಿಕರನ್ನು ವೇದಿಕೆ ಮೇಲೆ ಕರೆಯಿಸಿ ಅವರೊಂದಿಗೆ ಸುದೀಪ್ ಹರಟಿದರು. ಆದ್ರೆ ಹುಚ್ಚ ವೆಂಕಟ್ ಗೆ ಹಾಗೆ ಆಗ್ಲಿಲ್ಲ. ಹುಚ್ಚ ವೆಂಕಟ್ ತಂದೆ ಕಾರ್ಯಕ್ರಮಕ್ಕೆ ಬಂದಿದ್ದರೂ, ಅವರ ಜೊತೆ ಮಾತನಾಡಿಸುವ ಗೋಜಿಗೂ ಸುದೀಪ್ ಹೋಗ್ಲಿಲ್ಲ. [ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಗೆ ಪೊಗರು ಎಷ್ಟಿರಬೇಕು?]

ಸುಣ್ಣ-ಬೆಣ್ಣೆ ಯಾಕೆ?

ಸುಣ್ಣ-ಬೆಣ್ಣೆ ಯಾಕೆ?

ಹುಚ್ಚ ವೆಂಕಟ್ ವಾಪಸ್ ಆದ ನಂತರವೂ ಉಳಿದ ಸ್ಪರ್ಧಿಗಳಂತೆ ಸ್ಪೆಷಲ್ ಎಪಿಸೋಡ್ ಶೂಟ್ ಮಾಡ್ಲಿಲ್ಲ.! ಇಂತಹ ಭೇದಭಾವವನ್ನು 'ಬಿಗ್ ಬಾಸ್' ಮಾಡಿದ್ದು ಯಾಕೆ? [ಹುಚ್ಚ ವೆಂಕಟ್ ರಿಂದ ಗೂಸಾ ತಿಂದ ರವಿ ಈ ಬಾರಿ ಔಟ್?]

ಹುಚ್ಚ ವೆಂಕಟ್ ಗೆ ನಿಯತ್ತಿದೆ.!

ಹುಚ್ಚ ವೆಂಕಟ್ ಗೆ ನಿಯತ್ತಿದೆ.!

'ಬಿಗ್ ಬಾಸ್' ಮನೆಯಿಂದ ಹೊರ ಬಂದಿದ್ದರೂ, ಅಲ್ಲಿ ಉಪ್ಪು ತಿಂದ ಋಣವನ್ನ ಹುಚ್ಚ ವೆಂಕಟ್ ಮರೆತಿಲ್ಲ. ''ಬಿಗ್ ಬಾಸ್' ನನಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. ಥ್ಯಾಂಕ್ಸ್ 'ಬಿಗ್ ಬಾಸ್'ಗೆ'' ಅಂತ ಟಿವಿ9 ವಾಹಿನಿಗೆ ಹುಚ್ಚ ವೆಂಕಟ್ ಹೇಳಿಕೆ ನೀಡಿದ್ದಾರೆ.

ಕಾಮೆಂಟ್ ಯಾಕೆ?

ಕಾಮೆಂಟ್ ಯಾಕೆ?

ಹೀಗಿದ್ದರೂ, ಜವಾಬ್ದಾರಿಯುತ ಸ್ಥಾನದಲ್ಲಿರುವ 'ಬಿಗ್ ಬಾಸ್' ಹೀಗೆ ಕಾಮೆಂಟ್ ಮಾಡಬಹುದೇ.? ನೀವೇ ಹೇಳಿ.....ನಿಮ್ಮ ಅಭಿಪ್ರಾಯವನ್ನ ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ ನಮಗೆ ತಿಳಿಸಿ.

English summary
After Huccha Venkat's eviction, 'Bigg Boss' made a comment on Huccha Venkat. Read the article to know bigg boss's words.
Please Wait while comments are loading...

Kannada Photos

Go to : More Photos