»   » ಇದ್ದಕ್ಕಿದ್ದಂತೆ ಕಾಣೆಯಾದ್ರು ಸ್ಪೆಷಲ್ ಡೈರೆಕ್ಟರ್ ಗುರುಪ್ರಸಾದ್

ಇದ್ದಕ್ಕಿದ್ದಂತೆ ಕಾಣೆಯಾದ್ರು ಸ್ಪೆಷಲ್ ಡೈರೆಕ್ಟರ್ ಗುರುಪ್ರಸಾದ್

Written by: ಜೀವನರಸಿಕ
Subscribe to Filmibeat Kannada

ಇತ್ತೀಚೆಗೆ ಒಂದು ದಿನ ಪುಟಾಣಿ ಪಂಟ್ರು ಶೂಟಿಂಗ್ಗೆ ಮನೆಯಿಂದ ಹೊರಟ 'ಡೈರೆಕ್ಟರ್ಸ್ ಸ್ಪೆಷಲ್' ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಇದ್ದಕ್ಕಿದ್ದಂತೆ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಸದ್ದಿಲ್ಲದಂತೆ ಕಾಣೆಯಾದ ಗುರುಪ್ರಸಾದ್ಗಾಗಿ ಸುವರ್ಣವಾಹಿನಿಯ ಪುಟಾಣಿಪಂಟ್ರು ತಂಡ ಹುಡುಕಾಡಿದೆ.

ಆದ್ರೆ ಮನೆಯಿಂದ ಹೊರಟ ಗುರುಪ್ರಸಾದ್ ಕೆಂಗೇರಿಯ ಬಳಿ ಇರೋ ಶೂಟಿಂಗ್ ಸೆಟ್ಗೂ ಬಾರದೇ ಇದ್ದಿದ್ದು ಮತ್ತು ಯಾರ ಸಂಪರ್ಕಕ್ಕೂ ಸಿಗದೇ ಇದ್ದಿದ್ದು ವಾಹಿನಿಯನ್ನ ಚಿಂತೆಗೀಡು ಮಾಡಿದೆ. ಅವರ ಪತ್ನಿಗೆ ಕರೆ ಮಾಡಿದ್ರೆ ಮನೆಯಿಂದ ಹೊರಟು ಬಂದಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಆದ್ರೆ ಸಂಜೆಯಾದ್ರೂ ಗುರುಪ್ರಸಾದ್ ನಾಪತ್ತೆ![ಲೈಫ್ ಸೂಪರ್ ಗುರೂನಿಂದ ಅರ್ಜುನ್ ವಾಕ್ ಔಟ್]

ಆದ್ರೆ ಸತ್ಯ ಈಗ ಗೊತ್ತಾಗಿದೆ.. ಗುರುಪ್ರಸಾದ್ ಪುಟಾಣಿ ಪಂಟ್ರು ಶೋನ ಜಡ್ಜ್ ಸ್ಥಾನದಿಂದ ಹೊರಬಂದಿದ್ದಾರೆ. ಈ ಹಿಂದೆ ಕೂಡ ಜೀ ಕನ್ನಡ ವಾಹಿನಿಯಲ್ಲಿ ಲೈಫ್ ಸೂಪರ್ ಗುರು ಅಂದಾಗಲೂ ಗುರುಪ್ರಸಾದ್ ಸದಾ ಸಣ್ಣ ಪುಟ್ಟ ವಿವಾದ ಮಾಡಿಕೊಳ್ತಿದ್ರು ಅಂತಿದೆ ಜೀ ಕನ್ನಡ ವಾಹಿನಿ ಮೂಲ.

ಸುವರ್ಣವಾಹಿನಿಯಲ್ಲಿ ಕಾಂಬಿನೇಷನ್ನಲ್ಲಿ ಮಿಂಚ್ತಿದ್ದ ಕ್ರೇಜೀಕ್ವೀನ್ ರಕ್ಷಿತಾ ಮತ್ತು ಲಾಜಿಕ್ ಡೈರೆಕ್ಟರ್ ಗುರುಪ್ರಸಾದ್ ಕಾಂಬಿನೇಷನ್ನ ಪುಟಾಣಿಪಂಟ್ರು ಪ್ರೇಕ್ಷಕರ ಮನಸೆಳೆದಿತ್ತು. ಆ್ಯಂಕರ್ ನಿರಂಜನ್ -ಗುರುಪ್ರಸಾದ್ ಶೋನಲ್ಲಿ ಪ್ರೇಕ್ಷಕರನ್ನ ರಂಜಿಸ್ತಿದ್ರು.[ಗುರುಪ್ರಸಾದ್, ಯೋಗೇಶ್ ಹೊಸ ರಿಯಾಲಿಟಿ ಶೋ]

ಆದ್ರೆ ಈಗ ಗುರುಪ್ರಸಾದ್ ಪುಟಾಣಿ ಪಂಟ್ರು ಶೋನಿಂದ ಔಟ್ ಆಗಿದ್ದಾರೆ. ಕ್ರೇಜೀಕ್ವೀನ್ ರಕ್ಷಿತಾ ಮತ್ತು ಮೂಗೂರು ಸುಂದರಂ ಮಾಸ್ಟರ್ ಕಾಂಬಿನೇಷನ್ ಜೊತೆ ಮೂರನೇ ಜಡ್ಜ್ ಈಗ ಇಲ್ಲ. ಸ್ವಯಂಕೃತ ವಿವಾದದಿಂದ ಗುರುಪ್ರಸಾದ್ ಹೊರ ಬಂದ್ರಾ? ಅಥವಾ ಮತ್ತೇನಾದ್ರೂ ಇತ್ತಾ? ಗೊತ್ತಿಲ್ಲ...

English summary
Why did director Guruprasad came out of Putani Pantru Kannada reality show on Suvarna TV channel? Guruprasad was one of the judges of this dancing reality show along with actress Rakshitha and senior choreographer Mugur Sundar.
Please Wait while comments are loading...

Kannada Photos

Go to : More Photos