twitter
    For Quick Alerts
    ALLOW NOTIFICATIONS  
    For Daily Alerts

    ಯಶ್ ಸವಾಲಿಗೆ 'ಪ್ರಜಾ ಟಿವಿ' ಚೀಫ್ ಎಡಿಟರ್ ಕೊಟ್ಟ ಜವಾಬು ಏನು?

    By Harshitha
    |

    ''ಮತ್ತೊಮ್ಮೆ ಸವಾಲು ಹಾಕುತ್ತಿದ್ದೇನೆ. ಪಬ್ಲಿಕ್ ಟಿವಿ, ಟಿವಿ9, ಬಿಟಿವಿ, ಪ್ರಜಾ ಟಿವಿ...ಯಾವ ಟಿವಿ ಇದ್ಯೋ, ಎಲ್ಲರ ಜೊತೆ ಮಾತನಾಡಲು ನಾನು ರೆಡಿ ಇದ್ದೀನಿ. ರೈತರ ಬಗ್ಗೆ ಒಳ್ಳೆ ಕೆಲಸ ಮಾಡಲು ನೀವು ರೆಡಿ ಇದ್ರೆ, ರೈತರ ಕುರಿತು ಪ್ರೈಮ್ ಟೈಮ್ ನಲ್ಲಿ ಅಭಿಯಾನ ಮಾಡಬೇಕು'' ಅಂತ ತೊಡೆ ತಟ್ಟಿ ಯಶ್ ಹಾಕಿದ ಸವಾಲಿಗೆ 'ಪ್ರಜಾ ಟಿವಿ' ಸಜ್ಜಾಗಿದೆ.

    ''ಸಾಮಾಜಿಕ ಜವಾಬ್ದಾರಿ, ಕಳಕಳಿ ಬಗ್ಗೆ ನಮಗೂ ಅರಿವಿದೆ. ನಮಗೆ ಯಾವುದೇ ರೀತಿಯ ಮುಜುಗರವಿಲ್ಲ. ಯಾವುದೇ ಮುಲಾಜೂ ಇಲ್ಲ. ನೆಲ-ಜಲ, ಭಾಷೆ ವಿಚಾರದಲ್ಲಿ ನಾವು ಯಾವತ್ತೂ 'ಕಿರಾತಕ' ಬುದ್ಧಿ ತೋರಿಸಿಲ್ಲ. 'ಡ್ರಾಮಾ'ನೂ ಮಾಡಿಲ್ಲ. 'ರಾಜಾಹುಲಿ'ಯಂತೆ ನಿಖರ ಸುದ್ದಿಯನ್ನು ನೀಡಿದ್ದೇವೆ'' ಎಂಬ ಹೆಮ್ಮೆಯಿಂದ 'ಪ್ರಜಾ ಟಿವಿ' ಇಂದು ಸಂಜೆ 7 ಗಂಟೆಗೆ ರೈತರ ಸಮಸ್ಯೆ ಕುರಿತು ವಿಶೇಷ ಚರ್ಚಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ಪಾಲ್ಗೊಳ್ಳುವಂತೆ ನಟ ಯಶ್ ರವರಿಗೆ ಓಪನ್ ಲೆಟರ್ ಮೂಲಕ ಆಹ್ವಾನ ನೀಡಲಾಗಿದೆ. [ಸವಾಲಿಗೆ ಸೈ ಎಂದ 'ಪ್ರಜಾ ಟಿವಿ': ಸಂಜೆ 7ಕ್ಕೆ 'ಯಶ್'ಗೆ ಅಗ್ನಿಪರೀಕ್ಷೆ.!]

    'ಪ್ರಜಾ ಟಿವಿ' ಆಹ್ವಾನ ಸ್ವೀಕರಿಸಿ, ವಾಹಿನಿಯ ಸ್ಟುಡಿಯೋದಲ್ಲಿ ಇಂದು ಸಂಜೆ 7ಕ್ಕೆ ಯಶ್ ಹಾಜರ್ ಆಗುತ್ತಾರಾ ಎನ್ನುವುದು ಸದ್ಯಕ್ಕೆ ಉತ್ತರವಿಲ್ಲದ ಪ್ರಶ್ನೆ. ಹೀಗಿರುವಾಗಲೇ, 'ಪ್ರಜಾ ಟಿವಿ'ಯ ಪ್ರಧಾನ ಸಂಪಾದಕರಾದ ಮನೋಜ್ ರಾಚಪ್ಪ ರವರ ಜೊತೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಮಾತಿಗಿಳಿಯಿತು. ಯಶ್ ಹಾಕಿದ ಸವಾಲಿಗೆ 'ಪ್ರಜಾ ಟಿವಿ'ಯ ಪ್ರಧಾನ ಸಂಪಾದಕರು ಕೊಟ್ಟ ಜವಾಬು ಇಲ್ಲಿದೆ, ಓದಿರಿ....

    ಇಂದು ಸಂಜೆ 7ಕ್ಕೆ ಕಾರ್ಯಕ್ರಮ ಫಿಕ್ಸ್

    ಇಂದು ಸಂಜೆ 7ಕ್ಕೆ ಕಾರ್ಯಕ್ರಮ ಫಿಕ್ಸ್

    ''ಇವತ್ತು ಸಂಜೆ ಏಳು ಗಂಟೆಗೆ ಚರ್ಚಾ ಕಾರ್ಯಕ್ರಮ ಏರ್ಪಡಿಸಿದ್ದೇವೆ. ಯಶ್ ರವರಿಗೆ ಆಹ್ವಾನ ನೀಡಿದ್ದೇವೆ. ಇವತ್ತು ಆಗ್ಲಿಲ್ಲ ಅಂದ್ರೆ, ಮುಂದೆ ಯಾವತ್ತಾದರೂ, ಯಾವ ಸಮಯದಲ್ಲಾದರೂ ಬರಬಹುದು. ಆಗ ನಮ್ಮ ಯಾವುದೇ ಕಾರ್ಯಕ್ರಮ ಇದ್ದರೂ, ಅದನ್ನ ರದ್ದು ಪಡಿಸಿ, ಯಶ್ ರವರಿಗೆ ಅವಕಾಶ ನೀಡುತ್ತೇವೆ'' - ಮನೋಜ್ ರಾಚಪ್ಪ, ಪ್ರಧಾನ ಸಂಪಾದಕರು, ಪ್ರಜಾ ಟಿವಿ [ಖಾಸಗಿ ನ್ಯೂಸ್ ಚಾನೆಲ್ ವಿರುದ್ಧ ತೊಡೆ ತಟ್ಟಿ ನಿಂತ ಯಶ್]

    ನಾವು ರೆಡಿ.!

    ನಾವು ರೆಡಿ.!

    ''ಎಷ್ಟು ಹೊತ್ತು ಕೇಳಿದರೂ, ಎಷ್ಟು ದಿನ ಕೇಳಿದರೂ...ಅಷ್ಟು ದಿನ 'ಪ್ರಜಾ ಟಿವಿ'ಯಲ್ಲಿ ಸ್ಲಾಟ್ ಕೊಡಲು ನಾವು ರೆಡಿ ಇದ್ದೇವೆ. ಇದರಲ್ಲಿ ಡೌಟ್ ಬೇಡ'' - ಮನೋಜ್ ರಾಚಪ್ಪ, ಪ್ರಧಾನ ಸಂಪಾದಕರು, ಪ್ರಜಾ ಟಿವಿ [ಯಶ್ ವರ್ಸಸ್ ಕನ್ನಡ ಮಾಧ್ಯಮ: ಕಥೆ ಶುರು ಆಗಿದ್ದು ಎಲ್ಲಿಂದ?]

    ಯಶ್ 'ಥಂಬ್ಸ್ ಅಪ್'

    ಯಶ್ 'ಥಂಬ್ಸ್ ಅಪ್'

    ''ನಾವು ಯಶ್ ರವರಿಗೆ ಆಹ್ವಾನ ನೀಡಿದ್ದೇವೆ. ನಮ್ಮ ಪತ್ರದ ಪ್ರೋಮೋನ ಯಶ್ ರವರಿಗೆ 'ವಾಟ್ಸ್ ಆಪ್' ಮೂಲಕ ಕಳುಹಿಸಿದ್ದೇವೆ. ಅದನ್ನ ಯಶ್ ನೋಡಿದ್ದಾರೆ (ವಾಟ್ಸ್ ಆಪ್ ನಲ್ಲಿ ಬ್ಲೂ ಟಿಕ್ ತೋರಿಸಿದೆ). ಅದಕ್ಕೆ ಪ್ರತಿಕ್ರಿಯೆ ಆಗಿ 'ಥಂಬ್ಸ್ ಅಪ್' ಚಿಹ್ನೆ ಕಳುಹಿಸಿದ್ದಾರೆ'' - ಮನೋಜ್ ರಾಚಪ್ಪ, ಪ್ರಧಾನ ಸಂಪಾದಕರು, ಪ್ರಜಾ ಟಿವಿ

    'ಪ್ರಜಾ ಟಿವಿ' ಉದ್ಘಾಟನೆಗೆ ಯಶ್ ಬಂದಿದ್ದರು.!

    'ಪ್ರಜಾ ಟಿವಿ' ಉದ್ಘಾಟನೆಗೆ ಯಶ್ ಬಂದಿದ್ದರು.!

    ''ನಮ್ಮ 'ಪ್ರಜಾ ಟಿವಿ' ಚಾನೆಲ್ ಉದ್ಘಾಟನೆಗೆ ಯಶ್ ರವರೇ ಬಂದಿದ್ದರು. ಅವತ್ತಿನ ದಿನ ಕೂಡ ನಾವು ಮೊದಲು ಚರ್ಚಾ ಕಾರ್ಯಕ್ರಮ ಮಾಡಿದ್ದು 'ಕಬ್ಬು ಬೆಳೆಗಾರರ ಸಮಸ್ಯೆ' ಕುರಿತು. ಅಂದಿನಿಂದ ಇಂದಿನವರೆಗೂ ನಾವು ಸಾಮಾಜಿಕ ಬದ್ಧತೆಯನ್ನು ಉಳಿಸಿಕೊಂಡಿದ್ದೇವೆ. ರೈತರ ಪರ ಹಾಗೂ ಜನರ ಪರ 'ಪ್ರಜಾ ಟಿವಿ' ಸದಾ ದನಿಯಾಗಿದೆ'' - ಮನೋಜ್ ರಾಚಪ್ಪ, ಪ್ರಧಾನ ಸಂಪಾದಕರು, ಪ್ರಜಾ ಟಿವಿ

    ರೈತರ ಪರ ಹೋರಾಟಕ್ಕೆ ಸಿದ್ಧ

    ರೈತರ ಪರ ಹೋರಾಟಕ್ಕೆ ಸಿದ್ಧ

    ''ಯಶ್ ಬಂದ್ರೆ, ಇಂದಿನಿಂದ ಎಷ್ಟು ದಿನ ಬೇಕಾದರೂ ರೈತರ ಪರ ಹೋರಾಟ ಮಾಡಲು ನಾವು ಸಿದ್ಧ'' - ಮನೋಜ್ ರಾಚಪ್ಪ, ಪ್ರಧಾನ ಸಂಪಾದಕರು, ಪ್ರಜಾ ಟಿವಿ

    ನಮಗೆ ರೈತರು ಮುಖ್ಯ

    ನಮಗೆ ರೈತರು ಮುಖ್ಯ

    ''ಯಶ್ ರವರು ಬಂದು ಕೂತು, ನಾಡು, ನೆಲ, ಜಲದ ವಿಷಯದ ಕುರಿತು ಏನು ಮಾಡಬಹುದು ಅಂತ ಹೇಳಿದರೆ ನಾವು ಚರ್ಚೆ ಮಾಡಿ ಅವರು ಹೇಳಿದಂತೆ ಅಭಿಯಾನ ಮಾಡಲು ಸಿದ್ಧವಾಗಿದ್ದೇವೆ. ಯಶ್ ರವರು ಕಾಲ್ ಶೀಟ್ ಬಿಟ್ಟು ಬರುತ್ತೇನೆ ಅಂತಾದರೆ, ನಾವು ಕೆಲವೊಂದು ವಿಚಾರಗಳಲ್ಲಿ ಕಾಂಪ್ರೊಮೈಸ್ ಆಗಲು ಸಿದ್ಧವಾಗಿದ್ದೇವೆ. ನಮಗೆ ರೈತರು ಮುಖ್ಯ. ರೈತರ ಹಿತ ಕಾಪಾಡಲು ನಾವು ಸಿದ್ಧ'' - ಮನೋಜ್ ರಾಚಪ್ಪ, ಪ್ರಧಾನ ಸಂಪಾದಕರು, ಪ್ರಜಾ ಟಿವಿ

    English summary
    Popular Kannada News Channel Prajaa TV has accepted Kannada Actor Yash's challenge over conducting Programmes which will facilitate Farmers during Prime Time slot. Accordingly, Prajaa TV has invited Yash through open letter, to take part in Discussion today (20th October) at 7 PM. Here is the reaction of Prajaa TV Chief Editor Manoj Rachappa over Yash's Challenge. Take a look.
    Thursday, October 20, 2016, 16:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X