»   » ಸುದೀಪ್ ಕಾಲು ಸಖತ್ತಾಗಿ ಎಳೆದ ಯೋಗರಾಜ್ ಭಟ್

ಸುದೀಪ್ ಕಾಲು ಸಖತ್ತಾಗಿ ಎಳೆದ ಯೋಗರಾಜ್ ಭಟ್

Written by: ಉದಯರವಿ
Subscribe to Filmibeat Kannada

ಈ ಭಾನುವಾರದ (ಆ.17) 'ಬಿಗ್ ಬಾಸ್' ಶೋ ಸಖತ್ ಇಂಟರೆಸ್ಟಿಂಗ್ ಆಗಿತ್ತು. ಕಾರಣ ಶೋನ ಮುಖ್ಯ ಸೆಲೆಬ್ರಿಟಿಯಾಗಿ ಬಂದಿದ್ದದ್ದು ನಿರ್ದೇಶಕ ಕಮ್ ಗೀತರಚನೆಕಾರ ಯೋಗರಾಜ್ ಭಟ್. 'ಬಿಗ್ ಬಾಸ್' ಶೀರ್ಷಿಕೆ ಗೀತೆ ಅವರ ಲೇಖನಿಯಲ್ಲೇ ಹೊರಹೊಮ್ಮಿರುವುದು.

ಬಿಗ್ ಬಾಸ್ ರಿಯಾಲಿಟಿ ಶೋ ಅರ್ಧ ಶತಕ ಪೂರೈಸಿದೆ. ಈ ಸಂದರ್ಭದಲ್ಲಿ ಯೋಗರಾಜ್ ಭಟ್ ಅವರನ್ನು ಕರೆಸಿ ಅವರೊಂದಿಗೆ ಟಪಾಂಗುಚಿ ಹಾಡಿದರು ಸುದೀಪ್. ಇಬ್ಬರೂ ಒಬ್ಬರಿಗೊಬ್ಬರು ಕಾಳೆಲೆಯುತ್ತಾ, ಕಿಚಾಯಿಸಿಕೊಳ್ಳುತ್ತಾ ಕಾರ್ಯಕ್ರಮಕ್ಕೆ ಹೊಸ ಮೆರುಗು ತಂದರು.

ಐವತ್ತನೇ ದಿನದ ಸಂಭ್ರಮದ ನೆನಪಿನ ಆಲ್ಬಂಗೆ ಹೆಚ್ಚಿನ ಸಮಯ ಮೀಸಲಾಗಿತ್ತು. ಹರ್ಷಿಕಾ ಅವರ ಎಲಿಮಿನೇಷನ್ ಅವರ ಅನುಭವಗಳನ್ನು ಕೇಳಿದ ಮೇಲೆ ವೇದಿಕೆಗೆ ಯೋಗರಾಜ್ ಭಟ್ ಅವರನ್ನು ಆಹ್ವಾನಿಸಲಾಯಿತು. ನನ್ನ ಪ್ರಕಾರ ಅವರೊಬ್ಬ ಒಬ್ಬ ವಿಕೆಡ್ ಕವಿ, ಕರ್ನಾಟಕದ ಒನ್ ಆಫ್ ಮೋಸ್ಟ್ ವಾಂಟೆಡ್ ಡೈರೆಕ್ಟರ್ ಎಂದರೆ ತಪ್ಪಾಗಲ್ಲ ಎಂದರು ಸುದೀಪ್.

ಭಟ್ಟರನ್ನು ಲೈಟಾಗಿ ಕಾಲೆಳೆದ ಸುದೀಪ್

ಭಟ್ಟರನ್ನು ಲೈಟಾಗಿ ಕಾಲೆಳೆದ ಸುದೀಪ್

ಹಾಡುಗಳನ್ನು ರಚನೆ ಮಾಡುವುದರಲ್ಲಿ ಒಂದು ಮಟ್ಟಕ್ಕೆ ಎತ್ತಿದ ಕೈ ಎಂದು ಹೇಳಲು ಖಂಡಿತವಾಗಿ ನಾನು ಇಷ್ಟಪಡ್ತೀನಿ ಎಂದು ಯೋಗರಾಜ್ ಬಗ್ಗೆ ವಿವರ ನೀಡುತ್ತಲೇ ಲೈಟಾಗಿ ಕಾಳೆದರು ಸುದೀಪ್. "ಡೋಂಟ್ ವರಿ ಭಾಮೈದಾ" ಎಂಬ ಹಾಡು ಶುರುವಾಯ್ತು. ಅದು ಹೇಗೆ ಎಂದು ಕೇಳಿದಾಗ.

ಭಟ್ಟರ ಮೆಚ್ಚಿನ ಪದ ಭಾಮೈದ

ಭಟ್ಟರ ಮೆಚ್ಚಿನ ಪದ ಭಾಮೈದ

ನಾನು ತುಂಬಾ ಇಷ್ಟಪಡೋ ಪದ ಭಾಮೈದ. ತಮಿಳಿನಲ್ಲಿ ಮಚ್ಚ ಅಂತಾರೆ, ಕನ್ನಡದಲ್ಲಿ ಮಾಮ ಅಂತಾರೆ. ಈಗ ಕೇವಲ ಗೆಳೆಯರಾಗಿ ಉಳಿಯಲ್ಲ ರಿಲೇಷನ್ ಶಿಪ್ ಬೆಳೆಯಲು ಅದೊಂದು ಪದ ಸಾಕು. ಇನ್ನೂ ಬಹಳ ಹೆಚ್ಚಾಗಿ ಇಷ್ಟವಾಗಿದ್ದು ತಮಾಷೇನೇ ಅಲ್ಲ ಎಂಬ ಪದ ಎಂದರು.

ಬಿಗ್ ಬಾಸ್ ಹಾಡು ಹುಟ್ಟಿದ ಸಮಯ

ಬಿಗ್ ಬಾಸ್ ಹಾಡು ಹುಟ್ಟಿದ ಸಮಯ

ಬಿಗ್ ಬಾಸ್ ಹಾಡು ಬರೆಯಬೇಕಾದರೆ ನಿಮ್ಮ ತಲೆಯಲ್ಲಿ ಏನು ವಿಶುಯಲ್ ಇಟ್ಟುಕೊಂಡು ಬರೆದಿರಿ ಹೇಳಿ ಎಂದು ಸುದೀಪ್ ಕೇಳಿದಾಗ. ಸತ್ಯವನ್ನೇ ಹೇಳುತ್ತೇನೆ ಸತ್ಯವನ್ನಲ್ಲದೆ ಬೇರೇನೂ ಹೇಳಲ್ಲ ಎಂದು ಅವರು ಪ್ರಮಾಣ ಮಾಡದಿದ್ದರು ಸತ್ಯವನ್ನೇ ಹೇಳಿದರು.

ಸುದೀಪ್ ಧ್ವನಿಗೆ ಭಯಬಿದ್ದು ಬರೆದದ್ದು

ಸುದೀಪ್ ಧ್ವನಿಗೆ ಭಯಬಿದ್ದು ಬರೆದದ್ದು

ಹಾಡು ಬರೆಯಲು ಹೇಳಿ ಮೂರು ನಾಲ್ಕು ದಿನ ಆಗಿತ್ತು. ಫ್ಲೈಟ್ ನಲ್ಲಿ ಕುಳಿತಿದ್ದೆ ಆಗ ನಿಮ್ಮ ಫೋನ್ ಬಂತು ಯಾಕ್ ಬರೆದಿಲ್ಲಾ ಅಂಥ. ಆಗ ಆ ಧ್ವನಿಗೆ ಭಯಬಿದ್ದು ಬರೆದೆ ಎಂದರು. ಬಳಿಕ ಹಾಡನ್ನು ಪ್ಲೇ ಮಾಡಲಾಯಿತು.

ಮಂದಿನೂ ಬ್ಯಾರೆ ಬಂಗಲೇನೂ ಬ್ಯಾರೆ

ಮಂದಿನೂ ಬ್ಯಾರೆ ಬಂಗಲೇನೂ ಬ್ಯಾರೆ

ಮಂದಿನೂ ಬ್ಯಾರೆ ಬಂಗಲೇನೂ ಬ್ಯಾರೆ...ನೋಡೋರು ಮಾತ್ರ ನೀವೇ ರೀ ನೀವೇ ರೀ. ಆ ಹೊತ್ತು ಅವರು ಈ ಹೊತ್ತು ಇವರು ಬಿಗ್ ಬಾಸು ಎಲ್ರಿಗೂ ಮಾವ ರೀ ಮಾವ ರೀ. ಹಳೆ ಮಾಲು ಕ್ಯಾನ್ಸಲ್ಲು...ನೋಡಯ್ಯ ಫ್ರೆಶಾಗಿ ಈಗ ಎಲ್ಲಾದೂ ಹೊಸಾದು ಹೊಸಾದು ಬಿಸ್ ಬಿಸೀದು ನೋಡಿ ಸ್ವಾಮಿ ಬಿಗ್ ಬಾಸ್ ಬಿಗ್ ಬಾಸ್...ತಮಾಷೇನೇ ಅಲ್ಲ.

ಪ್ಲಾನ್ ಮಾಡದೆ ವಿಕೆಟ್ ಬಿದ್ದಂಗೆ ಈ ಹಾಡು

ಪ್ಲಾನ್ ಮಾಡದೆ ವಿಕೆಟ್ ಬಿದ್ದಂಗೆ ಈ ಹಾಡು

ಒಂದೊಂದು ಸಲ ಪ್ಲಾನ್ ಮಾಡದೆ ವಿಕೆಟ್ ಬಿದ್ದು ಬಿಡುತ್ತದೆ. ಈ ಬೌಲರ್ ಬಾಲ್ ಸುಮ್ನೆ ಬಿಸಾಕಿರುತ್ತಾನೆ. ಕರೆಕ್ಟಾಗಿ ಲೆಗ್ ಸ್ಟಂಪ್ ಕಿತ್ತುಕೊಂಡು ಹೋಗಿಬಿಟ್ಟಿರುತ್ತದೆ. ಗೂಗ್ಲಿ ಆಗಿಬಿಟ್ಟಿರುತ್ತದೆ ಅದು. ಅವನಿಗೆ ಗೊತ್ತಿರಲಿಲ್ಲ ಅದು ಹೇಗಾಯ್ತು ಎಂದು. ಆಗ ಬೌಲರ್ ಗೆ ಶಾಕ್ ಆಗಿಬಿಡುತ್ತದೆ. ಆಮೇಲೆ ನಾನು ಪ್ಲಾನ್ ಮಾಡ್ದೆ ಎಂದು ಕೈ ಎತ್ತುತ್ತಾರೆ. ಈ ಹಾಡನ್ನೂ ಆ ರೀತಿ ಎಂದುಕೊಳ್ಳಬಹುದು ಎಂದರು.

ಹಾಡುಗಳ ಗುಟ್ಟು ಬಿಟ್ಟುಕೊಟ್ಟರು ಭಟ್ಟರು

ಹಾಡುಗಳ ಗುಟ್ಟು ಬಿಟ್ಟುಕೊಟ್ಟರು ಭಟ್ಟರು

ಒಮ್ಮೊಮ್ಮೆ ತುಂಬಾ ಪ್ಲಾನ್ ಮಾಡಿಯೂ ಆಗುತ್ತದೆ. ಒಟ್ಟಾರೆಯಾಗಿ ಈ ದಿನಬಳಕೆ ಪದಗಳೂ ಬಳಕೆಯಾಗುತ್ತವೆ. ಒಂದು ಹತ್ತು ನಿಮಿಷ ಟೀ ಕುಡಿದುಕೊಂಡು ಮಾತನಾಡಿದರೆ ಹತ್ತು ಲೈನ್ ನಮಗೇ ಗೊತ್ತಿಲ್ಲದಂತೆ ಬಂದಿರುತ್ತವೆ. ಅವನ್ನೇ ಇಟ್ಟುಕೊಂದು ಮತ್ತೊಬ್ಬರಿಗೆ ತಟ್ಟೋದು ಅಷ್ಟೇ ಎಂದು ತಮ್ಮ ಹಾಡುಗಳ ಗುಟ್ಟು ಬಿಟ್ಟುಕೊಟ್ಟರು ಭಟ್ಟರು.

ಮತ್ತೆ ಫೋನ್ ಮಾಡ್ತೀನಿ ಎಂದು ಕಿಚಾಯಿಸಿದ ಸುದೀಪ್

ಮತ್ತೆ ಫೋನ್ ಮಾಡ್ತೀನಿ ಎಂದು ಕಿಚಾಯಿಸಿದ ಸುದೀಪ್

ಅದೇನೋ ಸಾರ್ ಕೊನೆ ಮುವ್ ಮೆಂಟ್ ನಲ್ಲಿ ನೀವು ಫೋನ್ ಮಾಡ್ತೀರಲ್ಲಾ ಅದೇ ಪ್ರಾಬ್ಲಂ ಎಂದರು ಭಟ್ಟರು. ಹಾಗಿದ್ದರೆ ಇನ್ನು ಮುಂದೆ ಕೊನೆಕೊನೆಗೆ ಕರೆ ಮಾಡ್ತಿರ್ತೀವಿ ಎಂದು ಕಿಚಾಯಿಸಿದರು ಸುದೀಪ್.

ಸೃಜನ್ ಗೆ ತುಂಬಾ ಸೆನ್ಸ್ ಆಫ್ ಹ್ಯೂಮರ್ ಇದೆ

ಸೃಜನ್ ಗೆ ತುಂಬಾ ಸೆನ್ಸ್ ಆಫ್ ಹ್ಯೂಮರ್ ಇದೆ

ನನಗೆ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ತುಂಬಾ ಇಷ್ಟ ಆಗೋದು ಸೃಜನ್. ಆತನಿಗೆ ತುಂಬಾ ಸೆನ್ಸ್ ಆಫ್ ಹ್ಯೂಮರ್ ಇದೆ. ಮತ್ತೆ ಸರಳವಾಗಿ ಮಾತನಾಡುವುದು ಬರುತ್ತದೆ. ಸಂಕಟ ಇರಲಿ ಕೋಪ ಇರಲಿ ಸರಳವಾಗಿ ವ್ಯಕ್ತಪಡಿಸುತ್ತಾರೆ ಎಂದರು ಭಟ್ಟರು.

ಬಿಗ್ ಬಾಸ್ ಸ್ಫುರದ್ರೂಪಿ ಬೇರೆ, ಸಿಹಿಯಾದ ಕೊಬ್ಬಿದೆ

ಬಿಗ್ ಬಾಸ್ ಸ್ಫುರದ್ರೂಪಿ ಬೇರೆ, ಸಿಹಿಯಾದ ಕೊಬ್ಬಿದೆ

ನಿಮ್ಮ ಪ್ರಕಾರ ಬಿಗ್ ಬಾಸ್ ಹೇಗಿರ್ತಾರೆ ಅನ್ನಿಸುತ್ತದೆ? ಎಂದು ಸುದೀಪ್ ಕೇಳಿದಾಗ, ಸ್ಫುರದ್ರೂಪಿ ಬೇರೆ, ಸಿಹಿಯಾದ ಕೊಬ್ಬಿದೆ, ಎರಡು ವರ್ಷದಿಂದ ಬಿಗ್ ಬಾಸ್ ಎಂದ ಸೀಲನ್ನು ಹೊಡೆದುಕೊಂಡೇ ಬಂದಿದ್ದೀರಿ. ನಿಮ್ಮಂತೆಯೇ ಇರುತ್ತಾರೆ ಎಂದರು.

ಭಟ್ರೇ ಹೊಗಳಿ ಬರೆದದ್ದಾ ಬೈದು ಬರೆದದ್ದಾ?

ಭಟ್ರೇ ಹೊಗಳಿ ಬರೆದದ್ದಾ ಬೈದು ಬರೆದದ್ದಾ?

'ಮಾಣಿಕ್ಯ' ಚಿತ್ರದಲ್ಲಿನ ಒಂದು ಹಾಡು "ಹುಚ್ಚನಾ ಹುಚ್ಚನಾ" ನೆನಪಿಸಿಕೊಳ್ಳುತ್ತಾ ಈ ಹೊತ್ತಿಗೂ ಜನ ಕೇಳ್ತಾರೆ ಭಟ್ಟರು ಹೊಗಳ್ತಾರೋ ಬೈತಾವ್ರೋ ಗೊತ್ತಾಗ್ತಾಯಿಲ್ಲ ಎಂದರು. ಆ ಹಾಡಿನ ಸಾಹಿತ್ಯ ಈ ರೀತಿ ಇದೆ, "ಹಿಂಗಂದ್ರೆ ಹಂಗತಿ ಹಂಗದ್ರೆ ಹಿಂಗತಿ ಹುಚ್ಚನಾ ಹುಚ್ಚನಾ ಬಾ ಅಂದ್ರೆ ಹೋಗಂತಿ ಹೋಗು ಅಂದ್ರೆ ಓಡಿ ಬರ್ತಿ..." ನಿಜ ಹೇಳಿ ಬೈತಾ ಇದ್ದೀರಾ ಎಂದು ಕೇಳಿದರು ಸುದೀಪ್.

ನಾನು ಬೈದೆ ಎಂದುಕೊಂಡು ಬಿಟ್ರೆ ಹೆಂಗೆ ಸಾರ್

ನಾನು ಬೈದೆ ಎಂದುಕೊಂಡು ಬಿಟ್ರೆ ಹೆಂಗೆ ಸಾರ್

ನೋಡಿ ಸಾರ್ ಚಿಕ್ಕಮಕ್ಕಳಿರುತ್ತವೆ ಅವು ಬಾ ಅಂದ್ರೆ ಬರಲ್ಲ, ಪಪ್ಪಿ ಕೊಡು ಅಂದ್ರೆ ಕೊಡಲ್ಲ. ಆಗ ನಾವೇನು ಮಾಡ್ತೀವಿ ಅಂದ್ರೆ ಹತ್ರ ಬಂದರೆ ನೋಡು ಅಂತೀವಿ. ಅದು ಹತ್ತಿರ ಬಂದು ಏನ್ಮಾಡ್ತೀಯಾ ಅನ್ನುತ್ತದೆ. ನೋಡು ತೊಡೆ ಮೇಲೆ ಕೂತುಕೊಂಡ್ರೆ ಬೈತೀನಿ ಅಂದಾಗ ಕಾಲ್ ಮೇಲೆ ಕೂತುಕೊಳ್ಳುತ್ತದೆ. ಪಪ್ಪಿ ಕೊಟ್ರೆ ನೋಡೂ ಎಂದರೆ ಕೊಟ್ಟುಬಿಡುತ್ತೆ, ಏನ್ ಮಾಡ್ತೀಯಾ ಅನ್ನುತ್ತೆ. ಆ ಮಗು ಮನಸ್ಸು ಆ ಹುಚ್ಚುತನ ಎರಡೂ ಒಂದೇ. ನಾನು ಬೈದೆ ಎಂದುಕೊಂಡು ಬಿಟ್ರೆ ಹೆಂಗೆ ಸಾರ್ ಎಂದರು.

ನಿಮ್ಮ ಎಲ್ಲಾ ಹುಚ್ಚುತನಗಳನ್ನೂ ಇಷ್ಟಪಡ್ತೀನಿ ನಾನು

ನಿಮ್ಮ ಎಲ್ಲಾ ಹುಚ್ಚುತನಗಳನ್ನೂ ಇಷ್ಟಪಡ್ತೀನಿ ನಾನು

ನಿಮ್ಮ ಎಲ್ಲಾ ಹುಚ್ಚುತನಗಳನ್ನೂ ಇಷ್ಟಪಡ್ತೀನಿ ನಾನು. ಜೊತೆಗೆ ಹತ್ತಿರದಿಂದ ನೋಡಿದ್ದೀನಿ. ನಿಮ್ಮ ಜೊತೆಗೆ ಕೆಲಸ ಮಾಡಿದ್ದೀನಿ. ಅಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆನೋ ನಿಮ್ಮ ಒಳ್ಳೆತನ ನಿಮ್ಮ ನಟನೆ ಕೊಬ್ಬು ಎಲ್ಲವನ್ನೂ ಹತ್ತಿರದಿಂದ ನೋಡಿದಾಗ ಕೆಟ್ಟ ಪ್ರೀತಿ ಬರುತ್ತದೆ.

ಒಬ್ಬರಿಗೊಬ್ಬರು ಕಿಚಾಯಿಸಿ ಮನಸಾರೆ ನಕ್ಕಿ ನಲಿಸಿದರು

ಒಬ್ಬರಿಗೊಬ್ಬರು ಕಿಚಾಯಿಸಿ ಮನಸಾರೆ ನಕ್ಕಿ ನಲಿಸಿದರು

ಅದನ್ನೇ ಅಲ್ಲಲ್ಲಿ ಸೀದಾ ಹೇಳಿದ್ದೀನಿ. ಆದರೆ ಮೋಸ್ಟ್ ಆಫ್ ಟೈಮ್ ಒಳ್ಳೇದೇ ಹೇಳಿದ್ದೀನಿ ಬೇಕಿದ್ದರೆ ಇನ್ನೊಮ್ಮೆ ಕೇಳಿ ಎಂದರು ಭಟ್ಟರು. ಸಿಕ್ಕಾಪಟ್ಟೆ ಕೇಳಿ ಕೇಳಿ ಬಂದಿರೋ ಕನ್ ಕ್ಲೂಶನ್ ಭಟ್ರೇ ಇದು ಎಂದು ಸುದೀಪ್ ಹೇಳಿ ಮತ್ತೊಮ್ಮೆ ಇಬ್ಬರೂ ಮನಸಾರೆ ನಕ್ಕರು ಬಿಡಿ.

ನಾವೂ ನಿಮ್ಮ ಕೊಬ್ಬನ್ನು ಬಹಳ ಹತ್ತಿರದಿಂದಲೇ ನೋಡಿದ್ದೀವಿ

ನಾವೂ ನಿಮ್ಮ ಕೊಬ್ಬನ್ನು ಬಹಳ ಹತ್ತಿರದಿಂದಲೇ ನೋಡಿದ್ದೀವಿ

ಒಬ್ಬ ವ್ಯಕ್ತಿಗೆ ಏನೆಲ್ಲಾ ಪ್ರಚಾರ ಕೊಟ್ಟಿದ್ದೀರೋ ಅದನ್ನು ಚೆನ್ನಾಗಿಯೇ ಮಾಡಿದ್ದೀರಾ ಎಂದು ಹೊಗಳಿದ ಸುದೀಪ್ ಬಳಿಕ ನಾವೂ ನಿಮ್ಮ ಕೊಬ್ಬನ್ನು ಬಹಳ ಹತ್ತಿರದಿಂದಲೇ ನೋಡಿದ್ದೀವಿ ಸ್ವಾಮಿ. ಈ ಹೊತ್ತು ಚಿತ್ರರಂಗ ನೋಡಿರಬಹುದು ನಾವೂ ನೋಡಿಕೊಂಡೇ ಬರುತ್ತಿದ್ದೀವಿ ಎಂದರು.

English summary
The celebrity guest of the day was director Yogaraj Bhat. Sudeep quizzed him about what he thought about the show. He also asked the director to describe all the contestants briefly, in a line. Laughters ensued as he described each participant in his unique lyrical style. Bigg Boss Kannada 2: Sakkat Sunday 7 highlights.
Please Wait while comments are loading...

Kannada Photos

Go to : More Photos