twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಕಿರುತೆರೆ ಇತಿಹಾಸದಲ್ಲಿ ಜೀ ಕನ್ನಡ ಹೊಸ ಮೈಲಿಗಲ್ಲು.!

    By Harshitha
    |

    ಕನ್ನಡ ಕಿರುತೆರೆ ದುನಿಯಾದಲ್ಲಿ ಹತ್ತು ವರ್ಷಗಳನ್ನು ಪೂರೈಸಿರುವ ಜೀ ಕನ್ನಡ ವಾಹಿನಿ ಹೊಸ ಇತಿಹಾಸ ಸೃಷ್ಟಿಸಿದೆ.

    ಟಿ.ಆರ್.ಪಿ ರೇಟಿಂಗ್ ನಲ್ಲಿ ದಾಪುಗಾಲು ಹಾಕುತ್ತಿರುವ ಜೀ ಕನ್ನಡ ವಾಹಿನಿ ನಂಬರ್ 5 ನೇ ಸ್ಥಾನದಿಂದ ನೇರವಾಗಿ ನಂಬರ್ 2ನೇ ಸ್ಥಾನಕ್ಕೆ ಜಿಗಿದಿದೆ. ['ಜೀ ಕನ್ನಡ' ಸಕ್ಸಸ್ ಸೂತ್ರಧಾರ ರಾಘವೇಂದ್ರ ಹುಣಸೂರು ಎಕ್ಸ್ ಕ್ಲೂಸಿವ್ ಸಂದರ್ಶನ]

    ಲೋ ಬಜೆಟ್ ನಲ್ಲಿ ಕಾರ್ಯಕ್ರಮ ನಡೆಸುತ್ತಿದ್ದರೂ, ಕೋಟಿಗಟ್ಟಲೆ ಆದಾಯ ಮಾಡುವಲ್ಲಿ ಜೀ ಕನ್ನಡ ವಾಹಿನಿ ಯಶಸ್ವಿ ಆಗಿದೆ. ಮುಂದೆ ಓದಿ....

    ಜೀ ಕನ್ನಡ ಮಾಡಿರುವ ಹೊಸ ದಾಖಲೆ....

    ಜೀ ಕನ್ನಡ ಮಾಡಿರುವ ಹೊಸ ದಾಖಲೆ....

    'ಜೀ ಕನ್ನಡ ವಾಹಿನಿ'ಯ ದಶಕದ ಸಂಭ್ರಮ ಕಾರ್ಯಕ್ರಮ ಕಳೆದ ವಾರ ಪ್ರಸಾರವಾಗಿತ್ತು. ಅದಕ್ಕೆ ಸಿಕ್ಕಿರುವ ರೇಟಿಂಗ್ 8.1 TVR (Avg) ಎರಡೂ ದಿನ (ಶನಿವಾರ, ಭಾನುವಾರ). ಕಿರುತೆರೆ ಇತಿಹಾಸದಲ್ಲೇ ಯಾವುದೇ ಶೋನ ಗ್ರ್ಯಾಂಡ್ ಫಿನಾಲೆ ಮತ್ತು ಈವೆಂಟ್ ಬಿಟ್ಟರೆ, 'ಜೀ ದಶಕದ ಸಂಭ್ರಮ' ಕಾರ್ಯಕ್ರಮಕ್ಕೆ ಈ 'ಭಾರಿ' ರೇಟಿಂಗ್ ಸಿಕ್ಕಿರುವುದು.

    ಹತ್ತು ವರ್ಷದಲ್ಲಿ ಮಾಡಿದ ಸಾಧನೆ....

    ಹತ್ತು ವರ್ಷದಲ್ಲಿ ಮಾಡಿದ ಸಾಧನೆ....

    2006 ರಲ್ಲಿ ಜೀ ಕನ್ನಡ ವಾಹಿನಿ ಶುರು ಆಗಿದ್ದು. ಆಗ 20 GRP ಯಲ್ಲಿ ಇದ್ದ ವಾಹಿನಿ ಕಳೆದ ಎರಡು ವರ್ಷಗಳಲ್ಲಿ 295 GRP ಗೆ ಜಿಗಿದಿದೆ.

    ಎಂಟು ವಾರಗಳಲ್ಲಿ...

    ಎಂಟು ವಾರಗಳಲ್ಲಿ...

    ಈ ವರ್ಷ 388 GRP ಯಲ್ಲಿರುವ ಜೀ ಕನ್ನಡ ವಾಹಿನಿ ಕಳೆದ ಎಂಟು ವಾರಗಳಲ್ಲಿ Avg 430 GRP ಗೆ ಹೈಕ್ ಆಗಿದೆ.

    ನಂಬರ್ 1 ಚಾನೆಲ್ ಗೆ ಪೈಪೋಟಿ

    ನಂಬರ್ 1 ಚಾನೆಲ್ ಗೆ ಪೈಪೋಟಿ

    Urban Market ನಲ್ಲಿ ನಂಬರ್ 1 ಸ್ಥಾನದಿಂದ ಜೀ ಕನ್ನಡ ಕೇವಲ 85 GRP ಅಷ್ಟು ದೂರದಲ್ಲಿ ಇದೆ. Total Market ನಲ್ಲಿ ಕಲರ್ಸ್ ವಾಹಿನಿಗಿಂತ 180 GRP ಹಿಂದೆ ಇದೆ ಜೀ ಕನ್ನಡ ವಾಹಿನಿ.

    ಆದಾಯದಲ್ಲೂ ದಾಖಲೆ

    ಆದಾಯದಲ್ಲೂ ದಾಖಲೆ

    2006 ರಲ್ಲಿ ಜೀ ಕನ್ನಡ ಮಾಡಿದ್ದು ಕೇವಲ 3 ಕೋಟಿ ಆದಾಯ. ಆದ್ರೆ ಈ ವರ್ಷ ಜೀ ಕನ್ನಡ ವಾಹಿನಿಗೆ 80 ಕೋಟಿ ರೆವೆನ್ಯೂ ಲಭಿಸಿದೆ.

    ಆಗಿರುವ ಲಾಭ ಎಷ್ಟು?

    ಆಗಿರುವ ಲಾಭ ಎಷ್ಟು?

    ಕಳೆದ ವರ್ಷ ಜೀ ಕನ್ನಡ ವಾಹಿನಿ ಲಾಭ ಮಾಡಿದ್ದು ಬರೋಬ್ಬರಿ 97 ಕೋಟಿ. ಈ ವರ್ಷ ಆಗಲೇ 68 ಕೋಟಿ ಲಾಭ ಮಾಡಿದೆ.

    ಚಾನೆಲ್ ಬಜೆಟ್....

    ಚಾನೆಲ್ ಬಜೆಟ್....

    ಖರ್ಚಿನ ವಿಷಯಕ್ಕೆ ಬಂದ್ರೆ, ಇಡೀ ಕನ್ನಡ ಮಾಧ್ಯಮದಲ್ಲಿ ಕಸ್ತೂರಿ ಟಿವಿ ಬಿಟ್ಟರೆ, ಕಡಿಮೆ ಖರ್ಚು ಮಾಡುವ ಚಾನೆಲ್ ಜೀ ಕನ್ನಡ ವಾಹಿನಿ.

    ಎಲ್ಲಾ 'ಡ್ರಾಮಾ ಜ್ಯೂನಿಯರ್ಸ್' ವರ

    ಎಲ್ಲಾ 'ಡ್ರಾಮಾ ಜ್ಯೂನಿಯರ್ಸ್' ವರ

    'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ 38 ಎಪಿಸೋಡ್ ನಲ್ಲಿ 7.8 TVR (AVG 8.1) ದಾಖಲಿಸಿದೆ. ಕರ್ನಾಟಕ ಮಾತ್ರ ಅಲ್ಲ, ಇಡೀ ದಕ್ಷಿಣ ಭಾರತದ ಯಾವುದೇ ರಿಯಾಲಿಟಿ ಶೋಗಳಿಗೂ ಇಷ್ಟು ರೇಟಿಂಗ್ ಬಂದಿಲ್ಲ. ಅಲ್ಲಿಗೆ, 'ಡ್ರಾಮಾ ಜ್ಯೂನಿಯರ್ಸ್' ಕೂಡ ಹೊಸ ಹಿಸ್ಟ್ರಿ ಕ್ರಿಯೇಟ್ ಮಾಡಿದೆ ಅಂತರ್ಥ. [ಜೀ ಕನ್ನಡ ಟಿ.ಆರ್.ಪಿ ಉಡೀಸ್; ಎಲ್ಲಾ 'ಡ್ರಾಮಾ' ಮಾಡಿದ್ದಕ್ಕೆ.!]

    English summary
    Polpular Kannada Channel Zee Kannada has created a new record in terms of Rating and Revenue in Small Screen History.
    Monday, September 12, 2016, 15:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X