twitter
    For Quick Alerts
    ALLOW NOTIFICATIONS  
    For Daily Alerts

    'ವೀಕೆಂಡ್' ಕಾರ್ಯಕ್ರಮದಲ್ಲಿ ನಿಮ್ಮ ಮೆಚ್ಚಿನ ಸಾಧಕರು ಯಾಕಿಲ್ಲ ಎಂದರೆ 'ಸಮಸ್ಯೆ' ಖಂಡಿತ ಇದೆ.!

    |

    'ವೀಕೆಂಡ್ ವಿತ್ ರಮೇಶ್' ಕನ್ನಡ ಕಿರುತೆರೆಯಲ್ಲಿಯೇ ಅತ್ಯಂತ ಜನಪ್ರಿಯವಾದ ಕಾರ್ಯಕ್ರಮ. ಈ ಕಾರ್ಯಕ್ರಮ ನೋಡುವ ವೀಕ್ಷಕರು ಸಾಮಾನ್ಯವಾಗಿಯೇ ಸಾಧಕರ ಸೀಟ್ ನಲ್ಲಿ ತಮಗೆ ಇಷ್ಟವಾದ ಸಾಧಕರನ್ನ ನೋಡುವ ಆಸೆ ಇಟ್ಟುಕೊಂಡಿದ್ದಾರೆ.

    ಇನ್ಫೋಸಿಸ್ ನಾರಾಯಣ ಮೂರ್ತಿ, ಸುಧಾಮೂರ್ತಿ, ಎಸ್ ಎಲ್ ಭೈರಪ್ಪ, ಹಂಸಲೇಖ, ವೀರೇಂದ್ರ ಹೆಗಡೆ, ಅನಿಲ್ ಕುಂಬ್ಳೆ, ರಾಹುಲ್ ಡ್ರಾವಿಡ್ ಸಂತೋಷ್ ಹೆಗಡೆ, ದೇವೇಗೌಡ... ಹೀಗೆ ಈ ರೀತಿಯ ಸಾಧಕರು ಕಾರ್ಯಕ್ರಮಕ್ಕೆ ಬರಬೇಕು ಎಂಬುದು ಎಷ್ಟೊ ಜನರ ಬಯಕೆ.[ವೀಕೆಂಡ್' ಶೋಗೆ ಎಸ್.ಎಲ್.ಭೈರಪ್ಪ ಬರ್ತಾರಾ.? ರಾಘವೇಂದ್ರ ಹುಣಸೂರು ಏನಂದ್ರು.?]

    ತಮ್ಮ ಮೆಚ್ಚಿನ ಸಾಧಕರು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದಾಗ ಅನೇಕರು ಪ್ರಶ್ನಿಸಲು ಶುರು ಮಾಡಿದರು. ನಿಮಗೂ ಸಹ ನೀವಂದುಕೊಂಡ ಸಾಧಕರು ಇನ್ನೂ ಕಾರ್ಯಕ್ರಮಕ್ಕೆ ಯಾಕೆ ಬಂದಿಲ್ಲ ಎನ್ನುವ ಪ್ರಶ್ನೆ ಇರಬಹುದು. ಅದಕ್ಕೆ ಈಗ 'ಜೀ ಕನ್ನಡ' ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಉತ್ತರಿಸಿದ್ದಾರೆ. ಮುಂದೆ ಓದಿ.... ['ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟಿನಲ್ಲಿ 'ಮನ್ಮಥ ರಾಜ' ಕಾಶೀನಾಥ್]

    ರಾಘವೇಂದ್ರ ಹುಣಸೂರು ಸ್ಪಷ್ಟನೆ

    ರಾಘವೇಂದ್ರ ಹುಣಸೂರು ಸ್ಪಷ್ಟನೆ

    ಸಾಮಾಜಿಕ ಜಾಲತಾಣಗಳಲ್ಲಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಅಥಿತಿಗಳ ಬಗ್ಗೆ ನಡೆಯುತ್ತಿದ್ದ ಚರ್ಚೆಗಳಿಗೆ ಜೀ ವಾಹಿನಿಯ ಬಿಸಿನೆಸ್ ಹೆಡ್ 'ರಾಘವೇಂದ್ರ ಹುಣಸೂರು' ತಮ್ಮ ಫೇಸ್ ಬುಕ್ ಪುಟದಲ್ಲಿ ಉತ್ತರಿಸಿದ್ದಾರೆ.['ವೀಕೆಂಡ್' ಕಾರ್ಯಕ್ರಮಕ್ಕೆ ರಕ್ಷಿತ್ ಯಾಕೆ.? ಅಂತ ಕೇಳಿದವರಿಗೆ 'ಉತ್ತರ' ಸಿಕ್ಕಿದೆ.!]

    ನಿಮ್ಮ ಸಾಧಕರ ಹೆಸರು ನಮ್ಮ ಲಿಸ್ಟ್ ನಲ್ಲಿದೆ.!

    ನಿಮ್ಮ ಸಾಧಕರ ಹೆಸರು ನಮ್ಮ ಲಿಸ್ಟ್ ನಲ್ಲಿದೆ.!

    ''ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕಾಗಿ ಬರಿ ಸಿನಿಮಾ ಮಾತ್ರವಲ್ಲದೆ ಅನೇಕ ವಿಭಾಗಗಳಲ್ಲಿ ತಮ್ಮದೇ ಆದ ಸಾಧನೆ ಮಾಡಿರುವ ಸಾಧಕರ ಪಟ್ಟಿಯನ್ನು ನಾವು ಹೊಂದಿದ್ದೇವೆ. ಅಂತಹ ಸಾಧಕರು ನಿಮ್ಮ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿರುವ ಸಾಧಕರೇ ಆಗಿದ್ದಾರೆ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ವಾಹಿನಿ ಬಿಸಿನೆಸ್ ಹೆಡ್

    ಮಾತುಕಥೆ ನಡೆದಿದೆ

    ಮಾತುಕಥೆ ನಡೆದಿದೆ

    ''ನೀವು ಕಾರ್ಯಕ್ರಮದಲ್ಲಿ ನೋಡುವುದಕ್ಕೆ ಇಷ್ಟ ಪಡುವ ಸಾಧಕರ ಹೆಸರನ್ನು ಹೇಳುತ್ತಿದ್ದೀರಾ. ಆದರೆ ನಾವು ಈಗಾಗಲೇ ಅಂತಹ ಸಾಧಕರನ್ನ ಕಾರ್ಯಕ್ರಮಕ್ಕೆ ಕರೆ ತರುವುದಕ್ಕೆ ಅವರನ್ನ ಸಂಪರ್ಕ ಮಾಡಿದ್ದೇವೆ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ವಾಹಿನಿ ಬಿಸಿನೆಸ್ ಹೆಡ್

    54 ಸಾಧಕರು ಬಂದಿದ್ದಾರೆ

    54 ಸಾಧಕರು ಬಂದಿದ್ದಾರೆ

    ''ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಈಗ ಮೂರು ಸೀಸನ್ ನಡೆಯುತ್ತಿದೆ. ಈ ಮೂರು ಸೀಸನ್ ಗಳಲ್ಲಿ ವಿವಿಧ ಕ್ಷೇತ್ರದ ಒಟ್ಟು 54 ಸಾಧಕರನ್ನ ಕಾರ್ಯಕ್ರಮಕ್ಕೆ ಕರೆಸಿದ್ದೇವೆ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ವಾಹಿನಿ ಬಿಸಿನೆಸ್ ಹೆಡ್

    ಸುಲಭವಲ್ಲ

    ಸುಲಭವಲ್ಲ

    ''ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಶೈಲಿಯನ್ನ ನಿರ್ವಹಿಸುವುದು ಸುಲಭದ ಕೆಲಸ ಅಲ್ಲ. ಅಲ್ಲದೆ ಪ್ರತಿ ವಾರ ಸಹ ಒಬ್ಬ ಅಥವಾ ಇಬ್ಬರು ಸಾಧಕರನ್ನ ಕರೆಸುವುದು ಅಷ್ಟು ಸುಲಭದ ಮಾತಲ್ಲ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ವಾಹಿನಿ ಬಿಸಿನೆಸ್ ಹೆಡ್

    ಸಮಸ್ಯೆ ಏನಾಗಿದೆ...?

    ಸಮಸ್ಯೆ ಏನಾಗಿದೆ...?

    ''ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಮುಖ್ಯ ಸಮಸ್ಯೆ ಅಂದ್ರೆ ಸಾಧಕರ ಲಭ್ಯತೆ. ಅನೇಕ ದೊಡ್ಡ ಸಾಧಕರು ತಮ್ಮ ಕೆಲಸದ ಬಿಜಿ ಶೆಡ್ಯೂಲ್ ನಲ್ಲಿ ಇರುತ್ತಾರೆ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ವಾಹಿನಿ ಬಿಸಿನೆಸ್ ಹೆಡ್

    ನಿಮ್ಮ ಮೆಚ್ಚಿನ ಸಾಧಕರು ಯಾಕಿಲ್ಲ..?

    ನಿಮ್ಮ ಮೆಚ್ಚಿನ ಸಾಧಕರು ಯಾಕಿಲ್ಲ..?

    ''ನೀವು ಹೆಸರಿಸಿರುವ ಅನೇಕ ಸಾಧಕರನ್ನ ಹಿಂದೆಯೇ ಸಂಪರ್ಕ ಮಾಡಿದ್ದೇವೆ. ಆದರೆ ಅದರಲ್ಲಿ ಕೆಲ ಸಾಧಕರು ಕಾರ್ಯಕ್ರಮಕ್ಕೆ ಬರುವುದಕ್ಕೆ ನಿರಾಕರಿಸಿದ್ದಾರೆ. ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ವಾಹಿನಿ ಬಿಸಿನೆಸ್ ಹೆಡ್

    ಇನ್ನಷ್ಟು ಶ್ರಮಿಸುತ್ತೇವೆ

    ಇನ್ನಷ್ಟು ಶ್ರಮಿಸುತ್ತೇವೆ

    ''ನಿಮಗೆ ಬೇಸರವಾಗಿದ್ದರೆ ಕ್ಷಮಿಸಿ. ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದ. ನಿಮಗೆ ನಿರಾಸೆ ಮಾಡದ ನಿಟ್ಟಿನಲ್ಲಿ ನಾವು ಇನ್ನಷ್ಟು ಶ್ರಮಿಸುತ್ತೇವೆ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ವಾಹಿನಿ ಬಿಸಿನೆಸ್ ಹೆಡ್

    English summary
    Zee Kannada Channel head Raghavendra Hunsur has taken his Facebook account to express his opinion about Viewer's reaction with regard to 'Weekend With Ramesh'.
    Tuesday, May 9, 2017, 10:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X