twitter
    For Quick Alerts
    ALLOW NOTIFICATIONS  
    For Daily Alerts

    ಜೀ ಕನ್ನಡ ಹೊಸ ಸೀರಿಯಲ್ ಜೊತೆ ಜೊತೆಯಲಿ

    By Rajendra
    |

    ಗಾಂಧೀಜಿಗೆ ಕಸ್ತೂರ್ ಬಾ, ಸಚಿನ್ ಗೆ ಅಂಜಲಿ, ಅಭಿಷೇಕ್ ಗೆ ಐಶ್ವರ್ಯಾ ಜೊತೆಯಾಗುವುದಾದರೆ ಅಭಯ್ ಗೆ ಶಾಲಿನಿ ಯಾಕೆ ಜೊತೆಯಾಗಬಾರದು ಅಂತ ಆರಂಭವಾಗ್ತಿರೋ ಕಥೆ ಇದು. ಓದು ಮುಗಿಸಿರೋ 26 ವರ್ಷದ ಅಭಯ್, ಟಿವಿ ರಿಪೋರ್ಟರ್ ಆಗೋ ಕನಸು ಕಾಣ್ತಿದಾನೆ.

    ಅಪ್ಪನ ಸಿಮೆಂಟ್ ಕಬ್ಬಿಣದ ದೊಡ್ಡ ವ್ಯಾಪಾರ ವಹಿವಾಟಿನಲ್ಲಿ ಆತನಿಗೆ ಎಳ್ಳಷ್ಟೂ ಆಸಕ್ತಿ ಇಲ್ಲ. ಆದರೆ ಆತನ ಅಮ್ಮ, ಮಗನಿಗೊಂದು ಮದುವೆ ಮಾಡಿಸಿ, ಅಪ್ಪನ ವ್ಯವಹಾರದಲ್ಲಿ ಮುಂದುವರಿಯುವಂತೆ ಮಾಡಬೇಕೆಂದು ಪಣ ತೊಟ್ಟಿದ್ದಾಳೆ. ತನ್ನ ಏಕೈಕ ಮಗನಿಗೆ ಪತ್ನಿಯಾಗಿ ಬರೋ ಹುಡುಗಿ ಬಗ್ಗೆ ನಾನಾ ಆಸೆ ಕನಸು ಕಂಡಿದ್ದಾಳೆ. ಬರೋ ಹುಡುಗಿಗೂ ಮಗನಿಗೂ ಕನಿಷ್ಠ 5 ವರ್ಷ ವ್ಯತ್ಯಾಸವಾದರೂ ಇರಬೇಕೆಂಬುದೂ ಅವಳ ಆಸೆಗಳಲ್ಲಿ ಒಂದು! ಆದರೆ..

    ಬಡ ಮಧ್ಯಮವರ್ಗದ ಹುಡುಗಿ ಶಾಲಿನಿ, ಇಬ್ಬರು ತಂಗಿಯಂದಿರಿಗೆ ಅಕ್ಕ. ಅಪ್ಪ ಮನೆ ಬಿಟ್ಟು ಹೋಗಿ ಹಲವು ವರ್ಷಗಳಾಗಿವೆ. ಅಮ್ಮ ಮನೆ ಎದುರು ಇಸ್ತ್ರಿ ಹಾಕೋ ಕೆಲಸ ಮಾಡುತ್ತಾರೆ. ಪ್ರೈಮರಿ ಸ್ಕೂಲ್ ಟೀಚರ್ ಆಗಿರೋ ಶಾಲಿನಿಯಿಂದಲೇ ಮನೆ ನಡೆಯಬೇಕು. ವಯಸ್ಸು 31 ಆಗಿದ್ದರೂ ಮದುವೆಯಾಗಿಲ್ಲ.

    ಬರಹಗಾರ-ತಂತ್ರಜ್ಞರು ತಂಡದ ಧಾರಾವಾಹಿ

    ಬರಹಗಾರ-ತಂತ್ರಜ್ಞರು ತಂಡದ ಧಾರಾವಾಹಿ

    ರಿಪೋರ್ಟರ್ ಆಗೋ ಹುಮ್ಮಸ್ಸಿನಲ್ಲಿರುವ ಅಭಯ್, ಹೇಗೆ ಈ ಶಾಲಿನಿಯ ಬದುಕಿಗೆ ರಿಪೋರ್ಟ್ ಮಾಡಿಕೊಳ್ತಾನೆ ಅನ್ನೋದು ಇಲ್ಲಿನ ಕತೆ. ಬರಹಗಾರ-ತಂತ್ರಜ್ಞರು ಸೇರಿ ಕಟ್ಟಿಕೊಂಡಿರುವ 'ದೃಶ್ಯ' ಎಂಬ ತಂಡವೊಂದು ಈ ಧಾರಾವಾಹಿಯ ನಿರ್ದೇಶನ-ನಿರ್ಮಾಣದ ಹೊಣೆ ಹೊತ್ತುಕೊಂಡಿದೆ.

    ಪಾತ್ರವರ್ಗದಲ್ಲಿ ಅನುಭವಿ ಕಲಾವಿದರು

    ಪಾತ್ರವರ್ಗದಲ್ಲಿ ಅನುಭವಿ ಕಲಾವಿದರು

    ಅಭಯ್-ಶಾಲಿನಿಯ ಪಾತ್ರದಲ್ಲಿ ಕಾರ್ತಿಕ್ ಮತ್ತು ಅಶಿತಾ ಎಂಬ ಇಬ್ಬರು ಹೊಸ ಕಲಾವಿದರು ಪರಿಚಯವಾಗುತ್ತಿದ್ದಾರೆ. ಇವರ ಜತೆಗೆ ಗಿರಿಜಾ ಲೋಕೇಶ್, ಡಿ.ವಿ.ರಾಜಾರಾಂ, ವಿದ್ಯಾಮೂರ್ತಿ, ಬಾಬು ಹಿರಣ್ಣಯ್ಯ, ಭಾರ್ಗವಿ ನಾರಾಯಣ್..ಹೀಗೆ ಹಿರಿಯ ಅನುಭವಿ ಕಲಾವಿದರಿದ್ದಾರೆ.

    ಎಲ್ಲ ವರ್ಗದ ವೀಕ್ಷಕರಿಗೆ ಇಷ್ಟವಾಗಲಿದೆ

    ಎಲ್ಲ ವರ್ಗದ ವೀಕ್ಷಕರಿಗೆ ಇಷ್ಟವಾಗಲಿದೆ

    'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಯಶಸ್ವಿಯಾಗಿರುವ ನಂತರ ನಾವು ಆರಂಭಿಸುತ್ತಿರೋ ಎರಡನೇ ಧಾರಾವಾಹಿ ಇದು. ಎಲ್ಲ ವಯೋಮಾನದ, ಎಲ್ಲ ವರ್ಗದ ವೀಕ್ಷಕರಿಗೆ ಈ ಕತೆ ಇಷ್ಟವಾಗಲಿದೆ ಎನ್ನುವ ಭರವಸೆ ನಮ್ಮದು" ಎನ್ನುತ್ತಾರೆ ಜೀ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಸಿಜು ಪ್ರಭಾಕರನ್.

    ಧಾರಾವಾಹಿಯಲ್ಲಿ ಬದುಕಿನ ಬೇರೆಬೇರೆ ನೋಟಗಳು

    ಧಾರಾವಾಹಿಯಲ್ಲಿ ಬದುಕಿನ ಬೇರೆಬೇರೆ ನೋಟಗಳು

    ಈ ಕತೆಯ ಮೂಲಕ ಎರಡು ಭಿನ್ನ ಮನಸ್ಸುಗಳ ಭಾವನೆಗಳನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅಪ್ಪ, ಅಮ್ಮ, ಅತ್ತೆ, ಮಾವ, ತಂಗಿಯಂದಿರು ಅಭಯ್ ಮತ್ತು ಶಾಲಿನಿಯ ಮುಖಾಂತರ ಬದುಕನ್ನು ನೋಡುವ ಬೇರೆ ಬೇರೆ ನೋಟಗಳು ಕೂಡಾ ಈ ಧಾರಾವಾಹಿಯಲ್ಲಿ ಅನಾವರಣಗೊಳ್ಳಲಿವೆ' ಎನ್ನುತ್ತಾರೆ ಜೀ ಕನ್ನಡ ವಾಹಿನಿಯ ಪ್ರೊಗ್ರಾಮಿಂಗ್ ಹೆಡ್ ರಾಘವೇಂದ್ರ ಹುಣಸೂರು.

    ಇಂದಿನಿಂದ ರಾತ್ರಿ 7.30ಕ್ಕೆ ತಪ್ಪದೆ ವೀಕ್ಷಿಸಿ

    ಇಂದಿನಿಂದ ರಾತ್ರಿ 7.30ಕ್ಕೆ ತಪ್ಪದೆ ವೀಕ್ಷಿಸಿ

    'ಜೊತೆಜೊತೆಯಲಿ' ಇದೇ ಅಕ್ಟೋಬರ್ 27 ರಿಂದ ಸೋಮವಾರದಿಂದ ಶನಿವಾರ ರಾತ್ರಿ 7.30ಕ್ಕೆ. 'ಮೇಘ ಮಯೂರಿ' ಬದಲಾದ ಸಮಯದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

    English summary
    Zee Kannada new daily soap 'Jothe Jotheyali' starts from 27th October, 2014. The serial starts at 7.30 pm from Monday to Saturday. It is the story of 31 year old Shalini and 26 year old Abhay. Shalini is from a lower middle class family who works as a school teacher and Abhay is a TV journalist.
    Monday, October 27, 2014, 13:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X