twitter
    For Quick Alerts
    ALLOW NOTIFICATIONS  
    For Daily Alerts

    ಹೊಸ ಇತಿಹಾಸ ಸೃಷ್ಟಿಸಿದ ಜೀ ಕನ್ನಡ 'ರಾಧಾ ಕಲ್ಯಾಣ'

    By Rajendra
    |

    ಈಗಿರುವ ಫಾಸ್ಟ್ ದುನಿಯಾದಲ್ಲಿ ಟಿವಿ ಧಾರಾವಾಹಿಯೊಂದು 100, 200 ಕಂತುಗಳನ್ನು ಪೂರೈಸುವುದೇ ಸವಾಲಿನ ಕೆಲಸ. ಆದರೆ ಜೀ ಕನ್ನಡ ವಾಹಿನಿಯ ರಾಧಾ ಕಲ್ಯಾಣ ಧಾರಾವಾಹಿ 1000 ಕಂತುಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ.

    ಜೀ ಕನ್ನಡ ವಾಹಿನಿಯಲ್ಲಿ ಕಳೆದ ಮೂರುವರೆ ವರ್ಷಗಳಿಂದ ಪ್ರಸಾರವಾಗುತ್ತಿರುವ ಅಶು ಬೆದ್ರೆ ವೆಂಚರ್ ನಿರ್ಮಾಣದ 'ರಾಧಾ ಕಲ್ಯಾಣ' ಧಾರಾವಾಹಿ ಒಂದು ಸಾವಿರ ಕಂತುಗಳನ್ನು ಪೂರೈಸಿದೆ. [ಸಾವಿರ ಸಂಚಿಕೆಗಳತ್ತ ಜೀ ಕನ್ನದ ರಾಧಾ ಕಲ್ಯಾಣ]

    zee-kannada-radha-kalyana-completes-1000-episodes

    ಈ ಧಾರಾವಾಹಿ ಕಿರುತೆರೆ ಇತಿಹಾಸದಲ್ಲೊಂದು ಮೈಲಿಗಲ್ಲು. ಕನ್ನಡ ಧಾರಾವಾಹಿಯೊಂದನ್ನು ವಿದೇಶಿ ನೆಲದಲ್ಲಿ ಮೊದಲ ಬಾರಿಗೆ ಚಿತ್ರೀಕರಣ ಮಾಡಲ್ಪಟ್ಟ ದಾಖಲೆಯು ರಾಧಾ ಕಲ್ಯಾಣದ ಹೆಸರಿನಲ್ಲಿದೆ. ಇದಿಷ್ಟೇ ಅಲ್ಲದೆ ಗೋವಾ, ದೂದ್ ಸಾಗರ್, ಮಂಗಳೂರಿನ ಅನೇಕ ರಮಣೀಯ ತಾಣಗಳಲ್ಲಿ ವಿಶಿಷ್ಟ ಶೈಲಿಯಲ್ಲಿ ಚಿತ್ರೀಕರಿಸಿಚ ಹೆಗ್ಗಳಿಕೆ ರಾಧಾ ಕಲ್ಯಾಣ ಧಾರಾವಾಹಿಯದು.

    ಕನ್ನಡ ಧಾರಾವಾಹಿ ಲೋಕದಲ್ಲಿ ಮದುವೆ ದೃಶ್ಯಗಳನ್ನು ಅತ್ಯಂತ ಅದ್ದೂರಿಯಾಗಿ ಚಿತ್ರೀಕರಿಸಿದ್ದು ರಾಧಾ ಕಲ್ಯಾಣದಲ್ಲಿ. ಕಥೆಯಲ್ಲಾಗಲಿ, ಮೇಕಿಂಗ್ ವಿಚಾರದಲ್ಲಾಗಲಿ ಒಂದಿನಿತೂ ರಾಜಿ ಮಾಡಿಕೊಳ್ಳದೆ, ಹೆಲಿಕ್ಯಾಮ್ ಮುಂತಾದ ತಂತ್ರಜ್ಞಾನಗಳನ್ನು ಈ ಧಾರಾವಾಹಿಯಲ್ಲಿ ಬಳಸಿಕೊಳ್ಳಲಾಗಿದೆ.

    zee-kannada-radha-kalyana-completes-1000-episodes

    'ರಾಧಾ ಕಲ್ಯಾಣ' ಸಾವಿರ ಕಂತುಗಳನ್ನು ಪೂರೈಸಿದ ಸಂಭ್ರಮವನ್ನು ಹಂಚಿಕೊಳ್ಳುವ ಸಲುವಾದ ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ ಮಾ.17ರಂದು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು.

    ಈ ಪತ್ರಿಕಾಗೋಷ್ಠಿಯಲ್ಲಿ ಜೀ ಕನ್ನಡದ ಮುಖ್ಯಸ್ಥರಾದ ಶೀಜು ಪ್ರಭಾಕರನ್, ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ರಾಘವೇಂದ್ರ ಹುಣಸೂರು, ಕಥಾ ವಿಭಾಗದ ಮುಖ್ಯಸ್ಥ ಸುದನ್ಯ ದೇರಾಜೆ, ವ್ಯವಸ್ಥಾಪಕ ಪುನೀತ್ ಹೆಗ್ಡೆ, ಖ್ಯಾತ ಲೆಕ್ಕ ಪತ್ರಶೋಧಕ ಎಸ್ ಎಸ್ ನಾಯಕ್, ಧಾರಾವಾಹಿ ನಿರ್ಮಾಪಕ ಅಶು ಬೆದ್ರೆ, ನಿರ್ದೇಶಕ ಗಣೇಶ್ ಶಾಸ್ತ್ರಿ, ಛಾಯಾಗ್ರಾಹಕ ರುದ್ರಮುನಿ, ಕಲಾವಿದರಾದ ಕೃತ್ತಿಕಾ ರವೀಂದ್ರ, ಪ್ರವೀಣ್, ರಮೇಶ್ ಭಟ್, ಭವ್ಯಶ್ರೀ ರೈ ಮುಂತಾದವರು ಉಪಸ್ಥಿತರಿದ್ದರು. (ಫಿಲ್ಮಿಬೀಟ್ ಕನ್ನಡ)

    English summary
    Zee Kannada mega soap 'Radha Kalyna' creates history on Kannada small screen. The mega soap completes 1000 episodes. Ashu Bedra Ventures Ashu has taken up risks with passion to give wonderful treat to family viewers of the television serials.
    Thursday, March 19, 2015, 11:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X