»   » ಅಕ್ಟೋಬರ್ 18 ರಂದು ಜೀ ಕುಟುಂಬ ಅವಾರ್ಡ್ಸ್-2015

ಅಕ್ಟೋಬರ್ 18 ರಂದು ಜೀ ಕುಟುಂಬ ಅವಾರ್ಡ್ಸ್-2015

Posted by:
Subscribe to Filmibeat Kannada

ಕನ್ನಡಿಗರೆಲ್ಲರೂ ಒಂದೇ ಕುಟುಂಬವಾಗಿ ಸಂಭ್ರಮಿಸಲು ಜೀ ಕನ್ನಡ ವಾಹಿನಿ ತನ್ನ ಬಳಗವನ್ನು ಕರೆದು ಅಕ್ಟೋಬರ್ 18 ರಂದು 2015 ರ 'ಜೀ ಕನ್ನಡ ಕುಟುಂಬ ಅವಾರ್ಡ್ಸ್' ಮೂಲಕ ಪುರಸ್ಕರಿಸುತ್ತಿದೆ. ಇದಕ್ಕಾಗಿ ಜೀ ವಾಹಿನಿ ಪ್ರೇಕ್ಷಕರೆಲ್ಲರೂ ಒಂದೇ ಕಡೆ ಸೇರಿ ಸಂಭ್ರಮಿಸಲಿದ್ದಾರೆ.

ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು ರವಿಶಂಕರ್, ಭಾರತಿ ವಿಷ್ಣುವರ್ಧನ್ ಮತ್ತು ತಾರಾ ರವರನ್ನು ಜ್ಯೂರಿಗಳಾಗಿ ಜೀ ಕನ್ನಡ ಆರಿಸಿದೆ.

Zee Kutumba Awards on October 18th

ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ತನ್ನ ಸಹಸ್ರ ಅಭಿಮಾನಿಗಳ ಜೊತೆ ಜೀ ತಾರಾಮೇಳವನ್ನು ಕಟ್ಟಿಕೊಂಡು ರಂಗೇರಲಿದೆ. ಅಂದಿನಿಂದ ಇಡೀ ಚಾನೆಲ್ ನ ಲುಕ್ ಮತ್ತು ಥೀಮ್ ನಲ್ಲಿ ಬದಲಾವಣೆ ಆಗಲಿದೆ.

ಮನರಂಜನೆಯ ಹೊಸ ಸಾಧ್ಯತೆಗಳಿಗೆ ಕುಟುಂಬ ಅವಾರ್ಡ್ಸ್ ನಾಂದಿಯಾಗಲಿದೆ ಎಂದು ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರ್ ಹೇಳುತ್ತಾರೆ.

ಒಟ್ಟು ಮೂವತ್ತಾರು ಕ್ಯಾಟಗೆರಿಗಳು ಕುಟುಂಬ ಅವಾರ್ಡ್ಸ್ ನಲ್ಲಿದ್ದು, ಐದು ಪ್ರಶಸ್ತಿಗಳನ್ನು ಜನರೇ ಆಯ್ಕೆ ಮಾಡಲಿದ್ದಾರೆ. ಇದಕ್ಕಾಗಿ ನಾವು ನೇಮಿಸಿದ ಅಭಿಮಾನಿ ಎಕ್ಸ್ ಪ್ರೆಸ್ ಮಂಡ್ಯದಿಂದ ಆರಂಭಿಸಿ ಮೈಸೂರು, ಮಂಗಳೂರು, ಹಾಸನ, ಹುಬ್ಬಳ್ಳಿ, ಧಾರವಾಡ, ಚಿತ್ರದುರ್ಗ, ತುಮಕೂರು, ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಸಂಚರಿಸಲಿದ್ದು ಜನರ ಮತಗಳನ್ನು ಸಂಗ್ರಹಿಸಲಿದೆ.

Zee Kutumba Awards on October 18th

ಇದಲ್ಲದೆ, ಜ್ಯೂರಿಗಳು 27 ಅವಾರ್ಡ್ಸ್ ಗೆ ಕಿರುತೆರೆ ತಾರೆಗಳನ್ನು ಆಯ್ಕೆ ಮಾಡಲಿದ್ದಾರೆ. ಜೊತೆಗೆ ತಾರೆಗಳ ಕುಣಿತ ಹೊಸ ಅನುಭವವನ್ನು ಈ ಬಾರಿ ನಾಲ್ಕನೇ ಕುಟುಂಬ ಅವಾರ್ಡ್ಸ್ ಕಟ್ಟಿಕೊಡಲಿದೆ. [ಮನಸೆಳೆವ ಸಂಗೀತದ ಮಧ್ಯೆ 'ಜೀ ಮ್ಯೂಸಿಕ್ ಅವಾರ್ಡ್ಸ್']

ಇದೇ ಮೊಟ್ಟಮೊದಲ ಬಾರಿಗೆ ಘಟಾನುಘಟಿಗಳು ಕುಟುಂಬ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ರಮೇಶ್ ಅರವಿಂದ್, ಅರುಣ್ ಸಾಗರ್, ಅನುಶ್ರೀ, ಶಾಲಿನಿ ನಿರೂಪಿಸಲಿದ್ದಾರೆ.

English summary
Zee Kannada Channel is presenting Zee Kutumba Awards on October 18th in National College Ground, Bengaluru
Please Wait while comments are loading...

Kannada Photos

Go to : More Photos