By: Filmibeat Kannada Video Team
Published : April 21, 2017, 08:46

ಕಟ್ಟಪನ ಸತ್ಯರಾಜ ಹೇಳಿಕೆಗೆ , ನಾಳೆ ಕಾಣದ ಜನತೆ ನಿರ್ಧಾರ ಮಾಡಲಿದೆ .

Subscribe to Filmibeat Kannada

ಕಡೆಗೂ ಕನ್ನಡಿಗರ ಆಕ್ರೋಶ ತಮಿಳು ನಟ ಸತ್ಯರಾಜ್ ರವರಿಗೆ ಕೇಳಿಸಿದೆ. ಕನ್ನಡಗರ ಹೃದಯದಲ್ಲಿ ಹೊತ್ತಿ ಉರಿಯುತ್ತಿದ್ದ ರೋಷಾಗ್ನಿ ಕಟ್ಟಪ್ಪನಿಗೆ ತಾಗಿದೆ. ಹೀಗಾಗಿ ಇಂದು ಕನ್ನಡಿಗರಿಗೆ ಸತ್ಯರಾಜ್ ಒಂದು ವಿಡಿಯೋ ಸಂದೇಶ ಕಳುಹಿಸಿದ್ದಾರೆ. ''ಒಂಬತ್ತು ವರ್ಷಗಳ ಹಿಂದೆ ಆವೇಶದಲ್ಲಿ ನಾನು ಕನ್ನಡಿಗರ ವಿರುದ್ಧ ಮಾತನಾಡಿದ್ದೇನೆ. ಆದ್ರೆ, ನಾನು ಕನ್ನಡ ಮತ್ತು ಕರ್ನಾಟಕದ ವಿರೋಧಿ ಅಲ್ಲ. ಅಂದಿನ ಹೇಳಿಕೆಯನ್ನ ಇಟ್ಟುಕೊಂಡು ಇಂದು 'ಬಾಹುಬಲಿ-2' ಸಿನಿಮಾ ಬಿಡುಗಡೆಗೆ ಅಡ್ಡಿ ಮಾಡಬೇಡಿ'' ಎಂದು ಸತ್ಯರಾಜ್ ತಮಿಳಿನಲ್ಲಿ ಕನ್ನಡಿಗರನ್ನ ಕೇಳಿಕೊಂಡಿದ್ದಾರೆ. ಕನ್ನಡಿಗರನ್ನ ಉದ್ದೇಶಿಸಿ ಸತ್ಯರಾಜ್ ಆಡಿರುವ ಮಾತುಗಳನ್ನ ಕನ್ನಡ ಪರ ಹೋರಾಟಗಾರ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಇನ್ನೂ ಕೇಳಿಲ್ಲ. ಆದ್ರೆ, ''ಸತ್ಯರಾಜ್ ಕ್ಷಮೆ ಕೇಳಿದ್ದಾರೆ'' ಎಂದು ಮಾಧ್ಯಮಗಳಲ್ಲಿ ಬಿತ್ತರವಾದ ಬ್ರೇಕಿಂಗ್ ನ್ಯೂಸ್ ನೋಡಿ ಸಾ.ರಾ.ಗೋವಿಂದು ನೀಡಿರುವ ಪ್ರತಿಕ್ರಿಯೆ ಇದು.

Please Wait while comments are loading...
ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !