ಅಕ್ಷಯ್ ಕುಮಾರ್ ಕೇಸರಿ ಪೋಸ್ಟರ್ ಹೇಳುತ್ತಿದೆ ಸಿಖ್ಖರ ವೀರಕಥೆ


2018ರಲ್ಲಿ ನಟ ಅಕ್ಷಯ್ ಕುಮಾರ್ ಅಭಿನಯದ 'ಪ್ಯಾಡ್ ಮ್ಯಾನ್' ಮತ್ತು 'ಗೋಲ್ಡ್' ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಇನ್ನು ರಜನಿಕಾಂತ್ ಜೊತೆ ಕಾಣಿಸಿಕೊಂಡಿರುವ '2.0' ಸಿನಿಮಾದ ಟೀಸರ್ 13ನೇ ತಾರೀಖು ಬಿಡುಗಡೆಯಾಗುತ್ತಿದೆ.

ಇದೇ ಯಶಸ್ಸನ್ನ ಮುಂದುವರಿಸುವ ಸುಳಿವು ನೀಡಿದ ಅಕ್ಷಯ್ ಕುಮಾರ್ ಅವರ ಹೊಸ ಸಿನಿಮಾ 'ಕೇಸರಿ' ಚಿತ್ರದ ಪೋಸ್ಟರ್. ಹೌದು, 'ಕೇಸರಿ' ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಸಾರಗರ್ಹಿಯ ಹುತಾತ್ಮರಿಗೆ ಈ ಪೋಸ್ಟರ್ ಅರ್ಪಿಸಿದ್ದಾರೆ.

ಅಕ್ಷಯ್ ಕುಮಾರ್ ಅಭಿನಯದ 'ಕೇಸರಿ' ಸೆಟ್ ನಲ್ಲಿ ಅಗ್ನಿ ಅವಘಡ.!

'ಕೇಸರಿ' ಸಿನಿಮಾ ಐತಿಹಾಸಿಕ ಕಥೆಯಾಗಿದ್ದು, 1987ರಲ್ಲಿ ನಡೆದ ಸಾರಗರ್ಹಿ ಕದನದ ಕಥೆ ಹೊಂದಿದೆ. ಈ ಕದನದಲ್ಲಿ 21 ಸಿಖ್ಖರು, 10 ಸಾವಿರ ಅಫ್ಘಾನ್ ಗಳ ವಿರುದ್ಧ ಹೋರಾಡಿದ್ದರು. ಈ ಕಥೆಯನ್ನಿಟ್ಟು 'ಕೇಸರಿ' ಸಿನಿಮಾ ಮಾಡಲಾಗಿದೆ.

'ಕೇಸರಿ' ಫೋಟೋ ಎಡವಟ್ಟು: ಟ್ರೋಲ್ ಆದ ಕರಣ್ ಜೋಹರ್.!

ಹವಿಲ್ದಾರ್ ಇಷಾರ್ ಸಿಂಗ್ ಅವರ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ್ದಾರೆ. ಅಕ್ಷಯ್ ಜೊತೆ ಪರಿಣಿತಿ ಚೋಪ್ರಾ ನಾಯಕಿಯಾಗಿ ಸಾಥ್ ನೀಡಿದ್ದಾರೆ.

'ಕೇಸರಿ' ಚಿತ್ರವನ್ನ ಪಂಜಾಬಿಯ ಖ್ಯಾತ ನಿರ್ದೇಶಕ ಅನುರಾಗ್ ಸಿಂಗ್ ಡೈರೆಕ್ಟ್ ಮಾಡುತ್ತಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಹಾಗೂ ಕೇಪ್ ಆಫ್ ಗುಡ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಕೇಸರಿ ತೆರೆಗೆ ಬರಲಿದೆ.

Have a great day!
Read more...

English Summary

Akshay Kumar released the first look of his upcoming film Kesari. The film is based on the Battle of Saragarhi and is set to release on March 21, 2019.