ದಕ್ಷಿಣದ ಸಿನಿಮಾಗಳಲ್ಲಿ ನಟಿಯರ ಸೊಂಟ, ಹೊಕ್ಕುಳ ಮೇಲೆ ಬಹಳ ಫೋಕಸ್ ಮಾಡ್ತಾರೆ. ನಟಿಯರ ಹೊಕ್ಕುಳ ಮೇಲೆ ಹಣ್ಣಿನಿಂದ ಹೊಡೆದರೆ ಅವರಿಗೆ ಅದೇನು ಸಂತೋಷ ಸಿಗುತ್ತೋ ಗೊತ್ತಿಲ್ಲ ಎಂದು ಬಾಲಿವುಡ್ ನಟಿಯರು ಆಗಾಗ್ಗೆ ಕಾಮೆಂಟ್ ಮಾಡುತ್ತಾರೆ. ತಾಪ್ಸಿ ಪನ್ನು ಸೇರಿದಂತೆ ಉತ್ತರದ ಕೆಲ ನಟಿಯರು ಇಂತಹ ವಾದ ಮುಂದಿಡುತ್ತಾರೆ. ಮುಂಬೈ ಬೆಡಗಿ ಡೈಸಿ ಶಾ ಈಗ ಇಂಥದ್ದೇ ಕಾಮೆಂಟ್ ಮಾಡಿದ್ದಾರೆ.
ಕನ್ನಡದ 'ಭದ್ರ', 'ಬಾಡಿಗಾರ್ಡ್', 'ಗಜೇಂದ್ರ', 'ಬಚ್ಚನ್' ಸೇರಿ ಕೆಲ ಕನ್ನಡ ಸಿನಿಮಾಗಳಲ್ಲಿ ಡೈಸಿ ಶಾ ನಟಿಸಿದ್ದಾರೆ. ಕನ್ನಡ ನಟನೊಬ್ಬನ ಸಿನಿಮಾ ಹಾಡುಗಳನ್ನು ನೋಡಿ ನಾನು ಶಾಕ್ ಆಗಿದ್ದೆ. ಆತನ ಎಲ್ಲಾ ಹಾಡುಗಳಲ್ಲಿ ನಾಯಕಿಯ ಹೊಕ್ಕುಳ ಮೇಲೆ ಹಣ್ಣು, ತರಕಾರಿ ಹಾಕುವುದು ನೋಡಿ ವಿಚಿತ್ರ ಅನ್ನಿಸಿತ್ತು ಎಂದು ಆಕೆ ಹೇಳಿರುವುದು ವೈರಲ್ ಆಗ್ತಿದೆ. ಯಾರಪ್ಪಾ ಆ ನಟ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. Hauterrfly ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಡೈಸಿ ಶಾ ಈ ರೀತಿ ಹೇಳಿದ್ದರು.
ದಕ್ಷಿಣದ ಸಿನಿಮಾಗಳಲ್ಲಿ ನಾಯಕಿಯರ ಎದೆ ಹಾಗೂ ಹೊಕ್ಕುಳನ್ನು ಬಹಳ ಫೋಕಸ್ ಮಾಡ್ತಾರಂತಲ್ಲ. ನಿಮಗೂ ಅದೇ ರೀತಿ ಅನ್ನಿಸಿದ್ಯಾ ಎನ್ನುವ ಪ್ರಶ್ನೆಗೆ ಎದೆಯ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಹೊಕ್ಕುಳ ಬಗ್ಗೆ ಇಂತಹ ಗೀಳು ಇರುವಂತೆ ನನಗೆ ಅನ್ನಿಸಿತ್ತು ಎಂದು ಡೈಸಿ ಶಾ ನೆನಪಿಸಿಕೊಂಡಿದ್ದಾರೆ. ನಾನು ಒಂದು ಕನ್ನಡ ಚಿತ್ರದಲ್ಲಿ ನಟಿಸುವಾಗ ಅಲ್ಲಿಗೆ ಹೋಗಿದ್ದೆ. ಚಿತ್ರೀಕರಣ ಇಲ್ಲದೇ ಹೋಟೆಲ್ ರೂಮ್‌ನಲ್ಲಿ ಇದ್ದಾಗ ಟಿವಿ ಹಾಕಿದ್ದೆ. ಕನ್ನಡ ಚಾನಲ್ಸ್ ನೋಡುತ್ತಿದ್ದೆ. ಆಗ ಒಬ್ಬ ಕನ್ನಡ ನಟನ ಹಾಡುಗಳನ್ನು ಬಂತು. ಅದ್ರಲ್ಲಿ ಒಬ್ಬ ನಟ ಇದ್ದಾರೆ. ಆತನ ಎಲ್ಲಾ ಸಿನಿಮಾ ಹಾಡುಗಳಲ್ಲಿ ನಾಯಕಿ ಹೊಕ್ಕುಳ ಮೇಲೆ ಫ್ರೂಟ್ ಸಲಾಡ್, ತರಕಾರಿ ಸಲಾಡ್ ಹಾಕ್ತಿದ್ದಾರೆ, ಮೇಲೆಯಿಂದ ಹೊಕ್ಕುಳ ಮೇಲೆ ನೀರು ಸುರಿಯುತ್ತಾರೆ" ಎಂದು ನಕ್ಕಿದ್ದಾರೆ. ನೀವು ಮಾಡಿರುವ ಎಕ್ಸ್‌ಪೋಸ್‌ಗಿಂತ ಆ ಹಾಡುಗಳು ಕೆಟ್ಟದಾಗಿ ಇಲ್ಲ ಬಿಡಿ. ಹಿಂದಿಯಲ್ಲಿ ಬರುವ ಐಟಂ ಸಾಂಗ್ಸ್‌ಗಿಂತ ಕನ್ನಡ ಹಾಡುಗಳು ಎಷ್ಟೋ ವಾಸಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.More Articles