ಭಾರತದಲ್ಲಿ ಸದ್ಯ ಧರ್ಮಾಧಾರಿತ ವ್ಯವಸ್ಥೆಯಲ್ಲಿ ಜನ್ಮ ಸ್ಥಾನ ಮತ್ತು ಸಮಯದಿಂದ ಹಿಡಿದು ಸಾಯುವ ತನಕ ಜಾತಿ ಮತ್ತು ಧರ್ಮ ಎಲ್ಲವನ್ನೂ ನಿಭಾಯಿಸುತ್ತೆ. ಕೋಮುದ್ವೇಷದ ಖಾಯಿಲೆ ಬೇರೆ ಎಲ್ಲ ದೇಶಕ್ಕಿಂತ ಭಾರತವನ್ನು ಹೈರಾಣು ಮಾಡಿದೆ. ಕುಂತರು, ನಿಂತರು ತಪ್ಪೆನ್ನುವ ಒಂದು ವರ್ಗ ಹುಟ್ಟುಕೊಂಡಿದೆ. ಜಾತ್ಯಾತೀತ ತತ್ವದಲ್ಲಿ ನಂಬಿಕೆ ಹೊಂದಿರುವವರನ್ನು ಕೂಡ ಧಾರ್ಮಿಕ ಮತ್ತು ಜಾತಿ ಆಧಾರಿತ ವ್ಯವಸ್ಥೆ ಪ್ರಶ್ನೆ ಮಾಡುತ್ತೆ.
ಸಮಾನತೆಯ ತತ್ವದಡಿಯಲ್ಲಿ ಸೋಷಿಯಲಿಸ್ಟ್, ಸೆಕ್ಯುಲರ್ ಡೆಮಾಕ್ರೆಟಿಕ್, ರಿಪಬ್ಲಿಕ್ ಎಂದು ಭಾರತ ಹೇಳಿದರು ಕೂಡ ವ್ಯಕ್ತಿಯ ವೈಯಕ್ತಿಕ ನಂಬಿಕೆಗಳನ್ನು ಕೂಡ ಪ್ರಶ್ನೆ ಮಾಡಲಾಗುತ್ತೆ. ಅದರಲ್ಲಿಯೂ ಸೆಲೆಬ್ರಿಟಿಗಳು ಅಂತರಧರ್ಮೀಯ ಮದುವೆಯಾದರೆ ಮುಗಿದೇ ಹೋಯ್ತು.
ಮಾನಸಿಕ ಕಿರುಕುಳ ನೀಡುವ ಕಿಡಿಗೇಡಿಗಳು ಸೋಶಿಯಲ್ ಮೀಡಿಯಾಗೆ ದಾಂಗುಡಿ ಇಡುತ್ತಾರೆ. ನೈತಿಕತೆ ಮತ್ತು ಧರ್ಮನಿಷ್ಠೆಯನ್ನು ಪ್ರಶ್ನೆ ಮಾಡುತ್ತಾರೆ. ವೈಯಕ್ತಿಕ ಗುರುತು, ಸಂಪ್ರದಾಯ ಮತ್ತು ಸತ್ಯವನ್ನು ಅರಿಯದೇ ಸುಖಾಸುಮ್ಮನೆ ವದಂತಿಗಳನ್ನು ಹರಿಬಿಡುತ್ತಾರೆ. ಮತಾಂತರ ನಡೆದಿದೆ ಎಂದು ಹುಯಿಲೆಬ್ಬಿಸುತ್ತಾರೆ. ಆಮಿರ್ ಖಾನ್ ಮತ್ತು ಗೌರಿ ವಿಚಾರದಲ್ಲಿ ಸದ್ಯ ಇದೇ ಆಗುತ್ತಿದೆ. ಮೊನ್ನೆ ಅಂದರೆ ಜುಲೈ 5ರಂದು ತಮ್ಮ ಮನೆಯಲ್ಲಿ ಗೌರಿ ಸ್ಪ್ರ್ಯಾಟ್ ಜೊತೆ ಆಮಿರ್ ಖಾನ್ ಮೂರನೇ ಮದುವೆಯಾಗಿದ್ದೆ ತಡ, ಕೆಲವರು ಆಮಿರ್ ಖಾನ್ ಅವರನ್ನು ಮದುವೆಯಾಗಲು ಗೌರಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ಧಾರೆ ಎಂಬ ಸುದ್ದಿಯನ್ನು ಹಬ್ಬಿಸಿದ್ದಾರೆ. ಈ ಸುದ್ದಿಯ ಸತ್ಯಾಸತ್ಯತೆ ಅರಿಯದೇ ಹಲವರು ಈ ಸುದ್ದಿ ನಿಜಾ ಅಂದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಚರ್ಚೆ ಮಾಡುತ್ತಾ ತಮ್ಮ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಆಮಿರ್ ಖಾನ್ ಅವರಿಗೋಸ್ಕರ ಗೌರಿ ಸ್ಪ್ರ್ಯಾಟ್ ತಮ್ಮ ಧರ್ಮ ಬದಲಿಸಿಕೊಂಡಿದ್ಧಾರೆ ಎಂಬ ವಾದ ಪುಷ್ಠೀಕರಿಸುವಂತೆ ಯಾವ ಪುರಾವೆ ಕೂಡ ಸದ್ಯ ಲಭ್ಯ ಇಲ್ಲ. ಆಮಿರ್ ಖಾನ್ ಅವರಾಗಲಿ ಗೌರಿ ಅವರಾಗಲಿ ಈ ಕುರಿತು ಯಾವ ಮಾಹಿತಿಯನ್ನು ಕೂಡ ಹಂಚಿಕೊಂಡಿಲ್ಲ. ಇನ್ನು ಆಮಿರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಮದುವೆಯ ಬಂಧನಕ್ಕೊಳಗಾಗಿದ್ದು ವಿಶೇಷ ವಿವಾಹ ಕಾಯ್ದೆ ಅಡಿ. ಈ ಕಾಯ್ದೆಯಡಿ ಮದುವೆಯಾಗಲು ಧರ್ಮ ಬದಲಿಸುವ ಅಗತ್ಯ ಇಲ್ಲ. ಅದರ ಅವಶ್ಯಕತೆಯೂ ಇಲ್ಲ. ವಿವಿಧ ಧರ್ಮದ ವ್ಯಕ್ತಿಗಳು ತಮ್ಮ ಧರ್ಮ ಬದಲಿಸದೆ ಕಾನೂನುಬದ್ದವಾಗಿ ಮದುವೆಯಾಗಲು ಅವಕಾಶ ಇದೆ. ಬಹು ಸಂಸ್ಕ್ರತಿಯ ಕುಟುಂಬದಿಂದ ಬಂದವರು ಗೌರಿ ಸ್ಪ್ರ್ಯಾಟ್. ಇವರ ತಂದೆ ರಾಬರ್ಟ್ ಸ್ಪ್ರ್ಯಾಟ್ ತಮಿಳು-ಬ್ರಿಟಿಷ್ ಮೂಲದವರಾದರೆ, ಇವರ ತಾಯಿ ರೀಟಾ ಅವರದ್ದು ಪಂಜಾಬಿ-ಐರಿಶ್ ಹಿನ್ನೆಲೆ. ಇನ್ನು ಗೌರಿ ಅವರ ಅಜ್ಜ ಫಿಲಿಪ್ ಸ್ಪಾಟ್ ಬ್ರಿಟಿಷ್ ಮೂಲದವರು. ಆದರೆ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷದ ಸ್ಥಾಪಕರೂ ಹೌದು. ಮೀರತ್ ಪಿತೂರಿ ಪ್ರಕರಣದ ಆರೋಪಿಗಳಲ್ಲಿ ಇವರು ಒಬ್ಬರಾಗಿದ್ದರು. 1929 ರಲ್ಲಿ ಜೈಲು ವಾಸವನ್ನೂ ಅನುಭವಿಸಿದ್ದರು. ಈ ವಿವರಗಳನ್ನು ಹಿಂದೆ ಖುದ್ದು ಆಮಿರ್ ಖಾನ್ ಮಾಧ್ಯಮದವರ ಎದುರು ಹಂಚಿಕೊಂಡಿದ್ದರು. ಹೀಗೆ ಕ್ರಿಶ್ಚಿಯನ್, ಹಿಂದೂ ಮತ್ತು ಪಾಶ್ಚಿಮಾತ್ಯ ಸಂಸ್ಕ್ರತಿಗಳ ಸಮ್ಮಿಲನದಲ್ಲಿ ಬೆಳೆದ ಗೌರಿ, ಬೆಂಗಳೂರು ಮೂಲದ ಗೌರಿ ಸ್ಪ್ರಾಟ್ ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಾರೆ ಎಂದು Planet Ace ವರದಿ ಮಾಡಿದೆ. ಗೌರಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಪುಕಾರು ಹಬ್ಬಿಸುತ್ತಿರುವ ಕೀಬೋರ್ಡ್ ವೀರರು, ಆಮಿರ್ ಖಾನ್ ಅವರ ಹಿಂದಿನ ಎರಡು ಮದುವೆ ಇತಿಹಾಸ ಮರೆತಂತೆ ಇದೆ. ರೀನಾ ದತ್ತ : 1986ರಲ್ಲಿ ಆಮಿರ್ ಖಾನ್ ಜೊತೆ ರೀನಾ ದತ್ತಾ ಮದುವೆಯಾಗಿದ್ದರು. 16 ವರ್ಷ ಜೊತೆಯಲ್ಲಿ ಸಂಸಾರ ಕೂಡ ಮಾಡಿದರು. ಇವರಿಗೆ ಜುನೈದ್ ಎಂಬ ಮಗ ಇದ್ದಾನೆ. 16 ವರ್ಷ ಆಮಿರ್ ಖಾನ್ ಜೊತೆ ಒಂದೇ ಸೂರಿನಡಿ ವಾಸ ಮಾಡಿದರು ಕೂಡ ರೀನಾ ದತ್ತ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿಲ್ಲ. ಕಿರಣ್ ರಾವ್ : ರೀನಾ ಅವರಿಂದ ದೂರವಾದ ಆಮಿರ್ ಆ ನಂತರ 2005 ರಲ್ಲಿ ಕಿರಣ್ ರಾವ್ ಅವರನ್ನು ಮದುವೆಯಾದರು. ಇವರ ಜೊತೆ ಆಮಿರ್ ಖಾನ್ ಹೆಚ್ಚು ಕಡಿಮೆ 15-16 ವರ್ಷ ದಾಂಪತ್ಯ ಜೀವನ ನಡೆಸಿದರು. ಇವರಿಗೆ ಆಜಾದ್ ರಾವ್ ಖಾನ್ ಎಂಬ ಮಗ ಇದ್ದಾನೆ. 2021ರಲ್ಲಿ ಈ ಜೋಡಿ ದೂರ ಆಯ್ತು. ಕಿರಣ್ ಕೂಡ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿಲ್ಲ. ಮತಾಂತರಗೊಂಡಿದ್ದಾರೆ ಎನ್ನುವುದಕ್ಕೆ ಯಾವ ಪುರಾವೆಗಳಿಲ್ಲ. ಒಟ್ನಲ್ಲಿ ಗೌರಿ ಸ್ಪ್ರ್ಯಾಟ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ಧಾರೆ ಎನ್ನುವುದಕ್ಕೆ ಇಲ್ಲಿಯವರೆಗೆ ಯಾವುದೇ ಸಾಕ್ಷಿ ಲಭ್ಯ ಇಲ್ಲ. ಬದಲಿಗೆ ಇಬ್ಬರು ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಲು ತೀರ್ಮಾನ ಮಾಡಿದ್ದೇ ಯಾವುದೇ ಧರ್ಮ ಬದಲಾವಣೆಯ ಅಗತ್ಯವಿಲ್ಲದೆ ತಮ್ಮ ವೈಯಕ್ತಿಕ ನಂಬಿಕೆಗಳನ್ನು ಗೌರವಿಸಿ ಒಂದಾಗಲು ಎನ್ನುವ ಮಾತು ಮುಂಬೈನಲ್ಲಿ ಕೇಳಿ ಬರುತ್ತಿದೆ. ಈ ಎಲ್ಲ ಕಾರಣಗಳಿಮದ ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಮತಾಂತರದ ವದಂತಿಗಳು ಸಂಪೂರ್ಣವಾಗಿ ಸುಳ್ಳು ಮತ್ತು ಸತ್ಯಕ್ಕೆ ದೂರವಾಗಿವೆ.ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರಾ ಗೌರಿ ?
ನಿಜಾಂಶವೇನು..?
ಕಾನೂನುಬದ್ಧ ನೋಂದಾಯಿತ ವಿವಾಹ
ಗೌರಿ ಸ್ಪ್ರ್ಯಾಟ್ ಧರ್ಮ ಯಾವುದು..?ಆಮಿರ್ ಖಾನ್ ಹಿಂದಿನ ಮದುವೆಗಳ ಇತಿಹಾಸ
More Articles