''ಮದುವೆ'' ಎಂಬ ಮೂರಕ್ಷರದ ನಂಟಿನ ಜತೆ ಎರಡು ಜೀವ ಬೆಸೆದುಕೊಳ್ಳಲು ಅಲ್ಲಲ್ಲಿ ಕೆಲವರು ಸರಳ ಮದುವೆಯನ್ನು ಮಾಡಿಕೊಳ್ಳುತ್ತಾರೆ. ಮಂತ್ರ ಮಾಂಗಲ್ಯ, ವಚನ ಮಾಂಗಲ್ಯ, ದೇಗುಲದಲ್ಲಿ ನಡೆಯುವ ಸರಳ ವಿವಾಹ, ರಿಜಿಸ್ಟರ್ಡ್ ಮದುವೆ, ಸಾಮೂಹಿಕ ವಿವಾಹ, ಗೋ ಗ್ರೀನ್ ಜಾಗೃತಿಯ ಪರಿಸರ ಮದುವೆಗಳು, ಹಳ್ಳಿಗಳಲ್ಲಿ ನಡೆಯುವ ಸರಳ ರೈತ ಮದುವೆಗಳು...
ಹೀಗೆ ಹಲವು ರೀತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಕೇವಲ ಜನಸಾಮಾನ್ಯರು ಮಾತ್ರ ಅಲ್ಲ. ಈ ಸಾಲಿನಲ್ಲಿ ಸೆಲೆಬ್ರೆಟಿಗಳು ಕೂಡ ಇದ್ದಾರೆ. ಅಲ್ಲೊಬ್ಬರು.. ಇಲ್ಲೊಬ್ಬರು.. ಸರಳವಾಗಿ ವೈವಾಹಿಕ ಬದುಕಿಗೆ ಮುನ್ನುಡಿ ಬರೆಯುತ್ತಾರೆ. ಈ ಸಾಲಿಗೆ ಈಗ ಆಮಿರ್ ಖಾನ್ ಕೂಡ ಸೇರಿಕೊಂಡಿದ್ದಾರೆ. ಆದರೆ ಇದು ಇವರಿಗೆ ಮೂರನೇ ಮದುವೆ ಅನ್ನೋದು ಬೇರೆಯವರ ಮದುವೆಗೂ ಮತ್ತು ಇವರ ಮದುವೆಗೂ ಇರುವ ವ್ಯತ್ಯಾಸ.
ಹೌದು, ಈ ಹಿಂದೆ ಸುದ್ದಿಯಾದಂತೆ ಆಮಿರ್ ಖಾನ್ ಅವರ ಮದುವೆ ಇಂದು (ಜುಲೈ 5) ಸರಳವಾಗಿ ನೆರವೇರಿದೆ. ಮುಂಬೈನ ಪಾಲಿ ಹಿಲ್ಸ್‌ನಲ್ಲಿರುವ ಆಮಿರ್ ಖಾನ್ ಮನೆಯಲ್ಲಿ ಅತ್ಯಂತ ಸರಳವಾಗಿ ಆಮಿರ್ ಖಾನ್ 3ನೇ ಬಾರಿ ತಮ್ಮ ಬದುಕಿನ ಹೊಸ ಅಧ್ಯಾಯಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆಯಾಗಿದ್ದಾರೆ. ಎಲ್ಲರಿಗೆ ಗೊತ್ತಿರುವಂತೆ ಆಮಿರ್ ಖಾನ್ ಅವರದ್ದು ಇಸ್ಲಾಂ ಧರ್ಮ. ಆದರೆ, ಹಲವರು ಗೌರಿ ಎಂಬ ಹೆಸರು ಕೇಳಿ ಆಮಿರ್ ಖಾನ್ ಅವರ 3ನೇ ಪತ್ನಿ ಹಿಂದೂ ಧರ್ಮಕ್ಕೆ ಸೇರಿದವರು ಎಂದುಕೊಂಡಿದ್ಧಾರೆ. ಆದರೆ, Planet Ace ಪ್ರಕಾರ ಬೆಂಗಳೂರು ಮೂಲದ ಗೌರಿ ಸ್ಪ್ರಾಟ್ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು. ಈ ಹಿನ್ನೆಲೆ ಸಂಪ್ರದಾಯಗಳಿಗೆ ಜೋತು ಬೀಳದೇ ವಿಶೇಷ ವಿವಾಹ ಕಾಯ್ದೆಯಡಿ ಆಮಿರ್ ಖಾನ್ ಮತ್ತು ಗೌರಿ ಮದುವೆಯಾಗಿದ್ದಾರೆ. ಮಳೆಯ ಸಿಂಚನದ ನಡುವೆ ನಡೆದ ಈ ಮದುವೆ ಸಮಾರಂಭದಲ್ಲಿ ಆಮಿರ್ ಖಾನ್ ಮನೆಯ ಸದಸ್ಯರು ಸಂಭ್ರಮದಿಂದ ಭಾಗವಹಿಸಿದ್ದರು. ಆಮಿರ್ ಮೊದಲ ಪತ್ನಿ ರೀನಾ ದತ್ತಾ, ಎರಡನೇ ಪತ್ನಿ ಕಿರಣ್ ರಾವ್, ಮಕ್ಕಳಾದ ಇರಾ ಖಾನ್ ನವ ಜೋಡಿಗೆ ಶುಭ ಕೋರಿದರು. ಇರಾ ಖಾನ್ ಗಂಡ ನೂಪುರ್ ಶಿಕರೆ ಕೂಡ ಮದುವೆಗೆ ಬಂದಿದ್ದರು. ಇನ್ನು ಎದೆಯೆತ್ತರಕ್ಕೆ ಬೆಳೆದಿರುವ ಇನ್ನೂ ಬ್ಯಾಚುಲರ್ ಜೀವನ ನಡೆಸುತ್ತಿರುವ 33 ವರ್ಷದ ಮಗ ಜುನೈದ್ ಖಾನ್ ಕೂಡ ತಮ್ಮ ತಂದೆಯ ಮದುವೆಯಲ್ಲಿ ಭಾಗವಹಿಸಿದ್ದರು. ಫೋಟೊದಲ್ಲಿ ಆಮಿರ್ ಖಾನ್ ಅವರ ತಾಯಿ ಜೀನತ್ ಹುಸೇನ್ ಅವರನ್ನು ಕೂಡ ನೀವು ನೋಡಬಹುದು. ಆಮಿರ್ ಸಹೋದರಿಯರು ಕೂಡ ಇದ್ದರು. ಮತ್ತೊಬ್ಬ ಮಗ ಆಜಾದ್ ಕೂಡ ಭಾಗವಹಿಸಿದ್ದರು. ತಮ್ಮ ಈ ಸರಳ ಮದುವೆಗೆ 100 ರಿಂದ 150 ಅತ್ಯಾಪ್ತರಿಗೆ ಆಮಿರ್ ಖಾನ್ ಆಮಂತ್ರಣ ಪತ್ರಿಕೆಯನ್ನು ನೀಡಿದ್ದರು. ಆ ಪೈಕಿ ''ಇಂಡಿಯನ್ ಎಕ್ಸ್‌ಪ್ರೆಸ್'' ವರದಿಯ ಪ್ರಕಾರ ಮುಖೇಶ್ ಅಂಬಾನಿ, ರಾಜ್‌ಠಾಕ್ರೆ, ನಿರ್ದೇಶಕ ಅಶುತೋಷ್ ಗೋವಾರಿಕರ್, ಕ್ರಿಕೆಟರ್ ಇರ್ಫಾನ್ ಪಠಾಣ್, ನಟರಾದ ವೀರ್ ದಾಸ್ ಮತ್ತು ನಟಿ ಎಲ್ಲೀ ಅವ್ರಾಮ್ ಪ್ರಮುಖರು. ಇವರೆಲ್ಲರು ಇಂದು ನಡೆದ ಮದುವೆಯಲ್ಲಿ ಭಾಗವಹಿಸಿದ್ದರು ಎಂದು ಕೂಡ ''ಇಂಡಿಯನ್ ಎಕ್ಸ್‌ಪ್ರೆಸ್'' ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಸದ್ಯ ಆಮಿರ್ ಖಾನ್ ಮತ್ತು ಗೌರಿ ಮದುವೆಯ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವರು ಈ ನವ ಜೋಡಿಗೆ ಶುಭಾಶಯವನ್ನು ಕೋರುತ್ತಿದ್ದಾರೆ. ಚಿತ್ರರಂಗದಿಂದಲೂ ಕೂಡ ಅಭಿನಂದನೆಯ ಮಹಾಪೂರ ಹರಿದು ಬರುತ್ತಿದೆ.ಸ್ಪೆಷಲ್ ಮ್ಯಾರೇಜ್ ಆಕ್ಟ್ ಅಡಿ ಮದುವೆ
ಕುಟುಂಬಸ್ಥರ ಸಂಭ್ರಮ100 ರಿಂದ 150 ಜನರಿಗೆ ಆಹ್ವಾನ
More Articles