ಚಿತ್ರರಂಗದಲ್ಲಿ ಯಾರು ಎಷ್ಟು ದೊಡ್ಡ ಸ್ಟಾರ್ ಎನ್ನುವುದನ್ನು ಇಂದು ಚಿತ್ರದ ಗೆಲುವು ನಿರ್ಧಾರ ಮಾಡಲ್ಲ. ಬದಲಿಗೆ ವ್ಯಕ್ತಿಯ ಹಿಂದಿನ ಜನ ಸಮೂಹ ನಿರ್ಧಾರ ಮಾಡುತ್ತೆ. ಇನ್ನು ಇದು ಸೋಶಿಯಲ್ ಮೀಡಿಯಾ ಜಮಾನ. ಈ ಕಾಲದಲ್ಲಿ ತಮ್ಮ ಮನೆಯಲ್ಲಿ ಒಪ್ಪತ್ತಿನ ಊಟಕ್ಕೂ ತತ್ವಾರ ಇದ್ದರೂ ಕೂಡ ಹಲವರು ಚಿತ್ರರಂಗದ ತಾರೆಯರನ್ನು ದೇವರಂತೆ ಪೂಜೆ ಮಾಡುತ್ತಾರೆ.
ಚೂರು ಯಾಮಾರಿ ಅಪ್ಪಿ ಅಪ್ಪಿ ಏನಾದರೂ ವಿರುದ್ಧವಾಗಿ ಮಾತನಾಡಿದರೆ ಸಾಕು, ಸೋಶಿಯಲ್ ಮೀಡಿಯಾದಲ್ಲಿ ಸಮರಕ್ಕಿಳಿಯುತ್ತಾರೆ. ಸೈಬರ್ ದಾಳಿ ಮಾಡಿ ಎದುರುಗಡೆ ವ್ಯಕ್ತಿಯ ನೆಮ್ಮದಿಗೆ ಕೊಳ್ಳಿ ಇಡುತ್ತಾರೆ.ಅದರಲ್ಲಿಯೂ
ಫೇಸ್‌ಬುಕ್.. ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಕ್ಕಳಿಗಾಗುತ್ತಿರುವ ಹಿಂಸೆಗಳು ಒಂದೆರಡಲ್ಲ.
ಇಲ್ಲಿ ಹೆಸರೇ ಗೊತ್ತಾಗದಂತೆ ಅಶ್ಲೀಲವಾದ ಮೆಸೇಜ್‌ಗಳನ್ನು ಮಾಡುವ ಅನೇಕರು ಹೆಣ್ಣು ಮಕ್ಕಳಿಗೆ ಇಲ್ಲಿ ಥರ ಥರದಲ್ಲಿ ಕಾಡುತ್ತಾರೆ. ಕೆಟ್ಟಾ ಕೊಳಕು ಅಶ್ಲೀಲ ಪದ ಬಳಕೆ ಮಾಡುತ್ತಾರೆ. ವೈಯಕ್ತಿಕ ಬದುಕನ್ನು ಕೆಣಕುತ್ತಾರೆ. ಗಂಡ-ಮಕ್ಕಳು ಯಾರನ್ನೂ ಟಾರ್ಗೆಟ್ ಮಾಡಿ ಕೊಡಬಾರದ ಹಿಂಸೆಯನ್ನೆಲ್ಲಾ ಕೊಡುತ್ತಾರೆ. ಉದಾಹರಣೆಗೆ ಅಂಜನಾ ಸಿಂಗ್ ಪ್ರಕರಣವನ್ನೇ ತೆಗೆದುಕೊಳ್ಳಿ. ಹೌದು, ಅಂಜನಾ ಸಿಂಗ್.. ಲಕ್ನೋದ ಲಡ್ಕಿ. ಭೋಜ್‌ಪುರಿ ಚಿತ್ರರಂಗದ ಬೆಡಗಿ. ಕೇವಲ 21ರ ಹರೆಯದಲ್ಲಿಯೇ ಚಿತ್ರರಂಗಕ್ಕೆ ಬಂದ ಅಂಜನಾ ಮೊದಲ ಚಿತ್ರದಲ್ಲಿಯೇ ಭೋಜ್‌ಪುರಿಯ ಸೂಪರ್ ಸ್ಟಾರ್ ರವಿ ಕಿಶನ್ ಜೊತೆ ತೆರೆ ಹಂಚಿಕೊಂಡರು. ಚಿತ್ರ ರಸಿಕರ ಹೃದಯ ಗೆದ್ದರು. ಇನ್ನು ಇವರ ಅಂದ ಚೆಂದ ಮತ್ತು ಅಭಿನಯ, ಭೋಜ್‌ಪುರಿಯಲ್ಲಿ ಮಾಡಿದ್ದ ಮೋಡಿ ಹೇಗಿತ್ತು ಅಂದರೆ ವೃತ್ತಿ ಬದುಕಿನ ಆರಂಭದ ಕೇವಲ ಎರಡು ವರ್ಷದಲ್ಲಿ 25 ಚಿತ್ರಗಳನ್ನು ಒಪ್ಪಿಕೊಂಡಿದ್ದರು ಅಂಜನಾ ಸಿಂಗ್. ನಿರ್ಮಾಪಕರು ಇವರ ಮನೆ ಎದುರು ಸರತಿ ಸಾಲಿನಲ್ಲಿ ನಿಂತ ಕಾಲ ಅದು. ಭೋಜ್‌ಪುರಿ ಚಿತ್ರರಂಗದಲ್ಲಿ ನಾಯಕಿಯೊಬ್ಬಳು, ಇಷ್ಟೊಂದು ಚಿತ್ರಗಳನ್ನು ಕೇವಲ ಎರಡು ವರ್ಷದಲ್ಲಿ ಒಪ್ಪಿಕೊಂಡ ಉದಾಹರಣೆಗಳಿಲ್ಲ. ''ರಾಜಾ ಜಿ ಐ ಲವ್ ಯೂ''.. ''ಬಿಹಾರಿ ರಿಕ್ಷಾವಾಲಾ''.. ''ತ್ರಿಶೂಲ್''.. ''ಲಾ ಕರೇ ಲೀಲಾ''.. ''ನಾಗರಾಜ್''.. ''ಗುಂಡಾ''.. ಹೀಗೆ ಒಂದಾ, ಎರಡಾ, ಹಲವು ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಅಭಿನಯಿಸಿರುವ ಅಂಜನಾ ಭೋಜ್‌ಪುರಿಯ ಸೂಪರ್ ಸ್ಟಾರ್ ಗಳಾದ ದಿನೇಶ್ ಲಾಲ್ ಯಾದವ್.. ಪವನ್ ಸಿಂಗ್.. ಖೇಸರಿ ಲಾಲ್ ಯಾದವ್.. ಅವರಿಗೆ ಆಗೆಲ್ಲ ಖಾಯಂ ನಾಯಕಿ. ಇಂಥಾ ಅಂಜನಾ ಸಿಂಗ್ ಸದ್ಯ ಖೇಸರಿ ಲಾಲ್ ಯಾದವ್ ವಿರುದ್ಧ ಗುಡುಗಿದ್ದಾರೆ. ಕೇಸರಿ ಲಾಲ್ ಯಾದವ್ ಅಭಿಮಾನಿಗಳಿಗೆ ಚಪ್ಪಲಿಯಲ್ಲಿ ಹೊಡೆಯುವುದಾಗಿ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ''ಸ್ಮೈಲ್ ಅಂಡ್ ಟಾಕ್ ವಿತ್ ಆಯುಷ್'' ಯೂಟ್ಯೂಬ್ ಚಾನೆಲ್‌ಗೆ ಅಂಜನಾ ಸಿಂಗ್ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಹಲವಾರು ವಿಚಾರಗಳ ಕುರಿತು ಮಾತನಾಡಿದ್ದ ಅಂಜನಾ ಸಿಂಗ್ ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್‌ಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರವನ್ನು ಕೂಡ ನೀಡಿದ್ದರು. ಇದೇ ಸಮಯದಲ್ಲಿ ಖೇಸರಿ ಲಾಲ್ ಯಾದವ್ ಹೆಸರನ್ನು ಕೂಡ ಪ್ರಸ್ತಾಪ ಮಾಡಿದ್ದರು. ವ್ಯಂಗ್ಯವಾಡಿದ್ದರು. ಪ್ರಶ್ನೆ : ಪ್ರತಿಯೊಬ್ಬರು ಇಲ್ಲಿ ಕಾಸ್ಟಿಂಗ್ ಕೌಚ್ ಇದೆ ಎನ್ನುತ್ತಾರೆ. ಆದರೆ ನನಗೆ ಆ ಅನುಭವ ಆಗಿದೆ ಎಂದು ಮಾತ್ರ ಯಾರು ಒಪ್ಪಿಕೊಳ್ಳಲ್ಲ ಎಂದು ಖೇಸರಿ ಲಾಲ್ ಯಾದವ್ ಹೇಳುತ್ತಾರೆ. ಇದರ ಕುರಿತು ನಿಮ್ಮ ಅಭಿಪ್ರಾಯವೇನು..? ಉತ್ತರ : ಅವರು ಏನೋ ಹೇಳಲು ಹೋಗುತ್ತಾರೆ. ಆದರೆ ಅವರಲ್ಲಿನ ಶಬ್ದಕೋಶದ ಕೊರತೆಯಿಂದ ಇನ್ನೇನೋ ಹೇಳುತ್ತಾರೆ. ಜನ ಅದನ್ನು ಮತ್ತೇನೋ ಅಂದುಕೊಳ್ಳುತ್ತಾರೆ ಅಂಜನಾ ಅವರ ಈ ಉತ್ತರ ಖೇಸರಿ ಲಾಲ್ ಯಾದವ್ ಅವರ ಅಭಿಮಾನಿಗಳನ್ನು ಕೆರಳಿಸಿತು. ಹೀಗಾಗಿಯೇ ಅಂಜನಾ ಅವರ ಸಾಮಾಜಿಕ ಜಾಲತಾಣದ ಬಾಗಿಲು ಬಡಿದ ಹಲವರು ಅಂಜನಾ ಅವರನ್ನು ನಿಂದಿಸಲು ಶುರು ಮಾಡಿದರು. ಅಶ್ಲೀಲ ಪದಗಳನ್ನು ಪ್ರಯೋಗಿಸಿದರು. ಟ್ರೋಲ್ ಮಾಡಲು ಶುರುಮಾಡಿದರು. ಇಷ್ಟೇ ಅಲ್ಲ ಇನ್ನೂ ಕೆಲವರು ಅಂಜನಾ ಅವರ ಮಗಳನ್ನು ಕೂಡ ಗುರಿಯಾಗಿಸಿಕೊಂಡು ಪೋಸ್ಟ್ ಹಂಚಿಕೊಂಡರು. ಕಾಮೆಂಟ್ ಮಾಡಿದರು. ತಮ್ಮ ಮೇಲೆ ಮತ್ತು ತಮ್ಮ ಮಗಳ ಮೇಲೆ ನಡೆಯುತ್ತಿರುವ ಈ ಸೈಬರ್ ದಾಳಿಯಿಂದ ಕೆರಳಿದ ಅಂಜನಾ ಸದ್ಯ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಗುಡುಗಿದ್ದಾರೆ. ಸುಮಾರು 23 ನಿಮಿಷ ಖೇಸರಿ ಲಾಲ್ ಯಾದವ್ ಅಭಿಮಾನಿಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿರುವ ಅಂಜನಾ ಸಿಂಗ್, ಖೇಸರಿ ಲಾಲ್ ತನ್ನನ್ನು ತಾನು ದೊಡ್ಡ ಸ್ಟಾರ್ ಅಂದುಕೊಂಡಿದ್ದರೆ, ಅವನೇ ಮುಂದೆ ಬರಲಿ, ಅವನ ಫ್ಯಾನ್ಸ್ ನ ಯಾಕೆ ಛೂ ಬಿಡ್ತಿದ್ದಾನೆ ಎಂದು ಕೇಳಿದ್ದಾರೆ. ಮುಂದುವರೆದು ಎಲ್ಲಿಗೆ ಬರಬೇಕು ಹೇಳಿ ಅಲ್ಲಿಯೇ ಬಂದು ಮುಖ ಕೆಂಪಾಗುವ ಹಾಗೇ ಬಾರಿಸ್ತೀನಿ ಎಂದು ಕಿಡಿ ಕಾರಿರುವ ಅಂಜನಾ, ಇಷ್ಟೇ ಅಲ್ಲ ನನ್ನದು ಠಾಕೂರ್ ವಂಶ. ಯಾರ ಮುಂದೆಯೂ ನಾನು ಕೈ ಮುಗಿಯಲ್ಲ. ಭಿಕ್ಷೆ ಬೇಡಲ್ಲ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಹಾಗಂಥ ಈ ವಿವಾದ ಇಲ್ಲಿಗೆ ತಣ್ಣಗಾಗಲಿಲ್ಲ. ಬದಲಿಗೆ ಅಂಜನಾ ಅವರ ಈ ಆಕ್ರೋಶದ ನುಡಿಗಳಿಂದ ಈ ವಿವಾದ ಕಿಡಿ ಇನ್ನೂ ಧಗಧಗಿಸಿತು. ಸುಮ್ಮನೆ ಕೂರದ ಖೇಸರಿ ಲಾಲ್ ಯಾದವ್ ಅವರ ಅಭಿಮಾನಿಗಳು ಅಂಜನಾ ಅವರನ್ನು ಮತ್ತೆ ಟ್ರೋಲ್ ಮಾಡಲು ಶುರು ಮಾಡಿದರು. ಮುದುಕಿ, ಅಂಟಿ ಎಂದೆಲ್ಲ ಕರೆದರು. ಪ್ರಚಾರಕ್ಕೆ ಬೇಕು ಅಂತಲೇ ಈ ವಿವಾದವನ್ನ ಬೆಳೆಸ್ತಾ ಇದ್ದೀಯಾ ಅಂತ ಕಾಲೆಳೆದರು. ಅಭಿಮಾನಿಗಳ ಈ ಅತಿರೇಕದ ವರ್ತನೆಯಿಂದ ಮತ್ತೆ ಕೆರಳಿರುವ ಅಂಜನಾ ಸಿಂಗ್ ನಿಮ್ಮ ಅಣ್ಣ ನಿಮ್ಮ ಅತ್ತಿಗೆಯ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದು ಮರೆತು ಹೋಯ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಬಾಂಗೂರ್‌ನಲ್ಲಿರೋ ಆಫೀಸ್ ಒಂದರಲ್ಲಿ ನಿಮ್ಮ ಅಣ್ಣ ಬೇರೆ ನಟಿಯ ಜೊತೆ ಚಕ್ಕಂದ ಆಡುವ ಸಮಯದಲ್ಲಿ, ನಿಮ್ಮ ಅತ್ತಿಗೆ ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ನೆನಪಿದೆಯಾ..? ಮರೆತೋಯ್ತಾ ಎಂದು ಹೇಳಿರುವ ಅಂಜನಾ ಸಿಂಗ್ ಸುಮ್ಮನೆ ನನ್ನ ಕೆಣಕಬೇಡಿ, ನಾನು ಬಾಯಿ ಬಿಡುವಂತೆ ಮಾಡಬೇಡಿ ಎಂದು ಅಂಜನಾ ಸಿಂಗ್ ಹೇಳಿದ್ಧಾರೆ. ಸದ್ಯ ಅಂಜನಾ ಸಿಂಗ್ ಮತ್ತು ಖೇಸರಿ ಲಾಲ್ ಯಾದವ್ ಅವರ ಈ ವಿವಾದದಿಂದ ಭೋಜ್‌ಪುರಿ ಚಿತ್ರರಂಗ ಇಬ್ಬಾಗವಾಗಿದೆ. ಹಲವು ನಟಿಯರು ಅಂಜನಾ ಸಿಂಗ್ ಪರ ವಕಾಲತ್ತು ವಹಿಸಿದ್ದಾರೆ. ಟ್ರೋಲಿಗರ ವಿರುದ್ಧ ಕಿಡಿ ಕಾರಿದ್ದಾರೆ. ಸದ್ಯಕ್ಕಂತೂ ಈ ಆರೋಪ-ಪ್ರತ್ಯಾರೋಪಗಳು ಮತ್ತು ಲೈವ್ ವಿಡಿಯೋಗಳ ಸರಣಿ ನಿಲ್ಲೋ ತರ ಕಾಣ್ತಿಲ್ಲ. ಈ ವಿವಾದ ಮುಂದೆ ಯಾವ ತಿರುವು ಪಡೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
ಏನಿದು ವಿವಾದ ?ಹೀಗಿತ್ತು ಪ್ರಶ್ನೋತ್ತರ
ಅಂಜನಾ ವಿರುದ್ಧ ರೊಚ್ಚಿಗೆದ್ದ ಖೇಸರಿ ಫ್ಯಾನ್ಸ್
ಗುಡುಗಿದ ಅಂಜನಾ
ಮುಂದುವರೆದ ಟ್ರೋಲ್, ಹೊಸ ಬಾಂಬ್ ಎಸೆದ ಅಂಜನಾ
ಮರೆತು ಹೋಯ್ತಾ ?More Articles