ಯಶ್ ಹಾಗೂ ಕಿಯಾಯಾ ಅದ್ವಾನಿ ಜೋಡಿಯ 'ತಬಾಹಿ' ಸಾಂಗ್ ಸಖತ್ ಸದ್ದು ಮಾಡ್ತಿದೆ. ಇಬ್ಬರ ರೊಮ್ಯಾನ್ಸ್, ಕೆಮೆಸ್ಟ್ರಿ ಹೈಲೆಟ್ ಆಗಿದೆ. ವಿಶಾಲ್ ಮಿಶ್ರಾ ಸಂಗೀತದ ಸಾಂಗ್ 'ಟಾಕ್ಸಿಕ್' ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಕಿಯಾರಾ ಸಿಕ್ಕಾಪಟ್ಟೆ ಬಿಂದಾಸ್ ಆಗಿ ನಟಿಸಿರುವ ಬಗ್ಗೆ ಚರ್ಚೆ ನಡೀತಿದೆ. ಇದರ ಬೆನ್ನಲ್ಲೇ ಕಾಜಲ್ ಅಗರ್‌ವಾಲ್ ಹೇಳಿಕೆಯನ್ನು ಲಿಂಕ್ ಮಾಡಿ ಸೋಶಿಯ್ ಮೀಡಿಯಾದಲ್ಲಿ ವೈರಲ್ ಮಾಡಲಾಗ್ತಿದೆ.

Advertisement

ಮುಂಬೈ ಬೆಡಗಿ ಕಾಜಲ್ ಅಗರ್‌ವಾಲ್ ದಕ್ಷಿಣದ ಸಿನಿಮಾಗಳಲ್ಲಿ ಕೂಡ ನಟಿಸಿ ಗೆದ್ದಿದ್ದಾರೆ. ನಿಜ ಹೇಳಬೇಕು ಅಂದ್ರೆ ಆಕೆಗೆ ಮೊದಲು ಸಕ್ಸಸ್ ಸಿಕ್ಕಿದ್ದೇ ತೆಲುಗು ಸಿನಿಮಾಗಳಲ್ಲಿ. ಬಳಿಕ ತಮಿಳು ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು. ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿದರೂ ಒಂದು ಹಂತದವರಗೆ ಮಾತ್ರ ಮೈಮಾಟ ಪ್ರದರ್ಶಿಸಿದ್ದರು. ಆಕೆ ನಟಿಸಿರುವ 'ದಿ ಇಂಡಿಯಾ ಸ್ಟೋರಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

Advertisement

ಸಿನಿಮಾ ಪ್ರಚಾರದ ಭಾಗವಾಗಿ ಕಾಜಲ್ ಸಾಕಷ್ಟು ಸಂದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಜೂಮ್ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಕಾಜಲ್ ನೀಡಿರುವ ಹೇಳಿಕೆ ವೈರಲ್ ಆಗ್ತದೆ. ಮುಖ್ಯವಾಗಿ ಗ್ಲಾಮರಸ್ ಪಾತ್ರಗಳಲ್ಲಿ ನಟಿಸುವ ಬಗ್ಗೆ ಆಕೆಯ ನಿರ್ಧಾರವನ್ನು ಕೆಲವರು ಮೆಚ್ಚಿಕೊಳ್ಳುತ್ತಿದ್ದಾರೆ. ಮದುವೆ ಬಳಿಕ ಕಿಯಾರಾ ಅದ್ವಾನಿ ಬಹಳ ಗ್ಲಾಮರ್ ಪ್ರದರ್ಶನ ಮಾಡುತ್ತಿದ್ದಾರೆ. 'ಟಾಕ್ಸಿಕ್' ಚಿತ್ರದ 'ತಬಾಹಿ' ಹಾಡಿನಲ್ಲಿ ಅದು ಮತ್ತೊಮ್ಮೆ ಗೊತ್ತಾಗುತ್ತಿದೆ. ಕಾಜಲ್ ಅಗರ್‌ವಾಲ್ ನೋಡಿ ಕಿಯಾರಾ ಕಲಿಯಬೇಕು, ಗ್ಲಾಮರ್ ಪ್ರದರ್ಶನಕ್ಕೂ ಒಂದು ಎಲ್ಲೆ ಇರಬೇಕು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಕಾಜಲ್ ಅಗರ್‌ವಾಲ್ ಮಾತನಾಡಿ "ಬಿಕಿನಿ ಧರಿಸಿ ನಟಿಸುವುದು ನನಗೆ ಇಷ್ಟವಿರಲಿಲ್ಲ. ಅದು ಖಾಸಗಿ ವಿಷಯ.. ಪರದೆಯ ಮೇಲೆ ಪ್ರದರ್ಶಿಸಲು ನನಗೆ ಸಮ್ಮತಿ ಇರಲಿಲ್ಲ.. ಬಹಳ ಹಸಿಬಿಸಿ ದೃಶ್ಯಗಳಲ್ಲಿ ನಟಿಸಲು ಇಷ್ಟಪಡಲಿಲ್ಲ.. ಏಕೆಂದರೆ ನಾನು ವೈಯಕ್ತಿಕವಾಗಿ ಗೆರೆ ಎಳೆದಿದ್ದೇನೆ.. ನನಗೆ ಒಂದಷ್ಟು ಎಲ್ಲೆಗಳಿವೆ. ಆ ಗೆರೆಯನ್ನು ದಾಟಿದರೆ, 'ಕ್ಷಮಿಸಿ, ನಾನು ಈ ಚಿತ್ರದಲ್ಲಿ ನಟಿಸಲು ಸಾಧ್ಯವಿಲ್ಲ ಎನ್ನುತ್ತೇನೆ. ಅದು ಎಷ್ಟೇ ದೊಡ್ಡ ಸಿನಿಮಾ ಅಥವಾ ಪಾತ್ರ ಆಗಿದ್ದರೂ ಸರಿ ನಾನು ಒಪ್ಪಲ್ಲ.. ಒಂದು ಹಂತಕ್ಕೆ ಗೆರೆ ಎಳೆದುಕೊಳ್ಳುವುದು ಅವಶ್ಯಕ" ಎಂದಿದ್ದಾರೆ.

Advertisement

'ತಬಾಹಿ' ಸಾಂಗ್ ಹಿಟ್ ಆಗಿದೆ. ಮದುವೆ ಬಳಿಕ ಇಷ್ಟು ಹಸಿಬಿಸಿ ದೃಶ್ಯದಲ್ಲಿ ಕಿಯಾರಾ ನಟಿಸುವುದು ಸರಿಯಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಪರ- ವಿರೋಧ ಚರ್ಚೆ ನಡೀತಿದೆ. ಅದೆಲ್ಲದರ ಬೆನ್ನಲ್ಲೇ ಕಾಜಲ್ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಹುಟ್ಟಾಕ್ಕಿದೆ. ಕಾಜಲ್ ಹೇಳಿಕೆ ಬೆನ್ನಲ್ಲೇ ಆಕೆ ಗ್ಲಾಮರಸ್ ಆಗಿ ನಟಿಸಿರುವ ವೀಡಿಯೋಗಳನ್ನು ಪೋಸ್ಟ್ ಮಾಡಿ ಕೆಲವರು ವ್ಯಂಗ್ಯವಾಡುತ್ತಿದ್ದಾರೆ. ಹೇಳುವುದು ಒಂದು ಮಾಡುವುದು ಇನ್ನೊಂದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕಿಯಾರಾ ಬಿಂದಾಸ್ ಆಗಿ ನಟಿಸುವ ಬಗ್ಗೆ ಪತಿ ಸಿದ್ದಾರ್ಥ್ ಮಲ್ಹೋತ್ರಾ ಏನು ಹೇಳುತ್ತಿಲ್ಲ. 'ಟಾಕ್ಸಿಕ್' ಟೀಸರ್ ಅನ್ನು ಅವರು ಲೈಕ್ ಮಾಡಿದ್ದರು. ಅವರಿಗೆ ಇಲ್ಲದ ಸಮಸ್ಯೆ ನಿಮಗೇಕೆ? ಎಂದು ತಿರುಗೇಟು ನೀಡುತ್ತಿದ್ದಾರೆ.

Advertisement

ಮದುವೆ ಬಳಿಕ ನಟಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಬಾರದು ಅಂದ್ರೆ ಮದುವೆಯಾಗಿರುವ ನಟ ನಟಿಸಬಹುದೇ ? ಕಿಯಾರಾ ಪತಿ ಸಿದ್ದಾರ್ಥ್ ಕೂಡ ಬಿಂದಾಸ್ ದೃಶ್ಯಗಳಲ್ಲಿ ನಟಿಸುತ್ತಿದ್ದಾರೆ. 'ತಬಾಹಿ' ಹಾಡಿನಲ್ಲಿ ಕಿಯಾರಾ ಜೊತೆ ಕಾಣಿಸಿಕೊಂಡಿರುವ ಯಶ್ ಕೂಡ ಮದುವೆ ಆಗಿದ್ದಾರೆ. ಅವರ ಬಗ್ಗೆ ಈ ಪ್ರಶ್ನೆ ಯಾಕೆ ಕೇಳಲ್ಲ. ಅವರಿಗೆ ಅವರ ಕುಟುಂಬದವರಿಗೆ ಇಲ್ಲದ ಸಮಸ್ಯೆ ನಿಮಗ್ಯಾಕೆ? ಎಂದು ಕೆಲವರು ತಿರುಗೇಟು ನೀಡುತ್ತಿದ್ದಾರೆ.