ಆಲಿಯಾ ಭಟ್ ಕಿಸ್ ಬಗ್ಗೆ ಪ್ರಶ್ನೆ: ಕೌನ್ ಬನೇಗಾ ಕರೋರ್ ಪತಿ ಬಗ್ಗೆ ನೆಟ್ಟಿಗರ ಲೇವಡಿ.!


ಹಿಂದಿ ಕಿರುತೆರೆಯಲ್ಲಿ ಜನಪ್ರಿಯ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋರ್ ಪತಿ' ಮತ್ತೊಮ್ಮೆ ಶುರುವಾಗಿದೆ. ಸೋನಿ ವಾಹಿನಿಯಲ್ಲಿ 'ಕೌನ್ ಬನೇಗಾ ಕರೋರ್ ಪತಿ -10' ಕಾರ್ಯಕ್ರಮ ಪ್ರಸಾರ ಆಗುತ್ತಿದೆ.

ಎಂದಿನಂತೆ ಬಿಗ್ ಬಿ ಅಮಿತಾಬ್ ಬಚ್ಚನ್ ನಿರೂಪಣೆಯಲ್ಲಿ 'ಕೌನ್ ಬನೇಗಾ ಕರೋರ್ ಪತಿ' ಕಾರ್ಯಕ್ರಮ ಮೂಡಿಬರುತ್ತಿದೆ. ನಿರೀಕ್ಷೆಯಂತೆ 'ಕೌನ್ ಬನೇಗಾ ಕರೋರ್ ಪತಿ' ಹತ್ತನೇ ಆವೃತ್ತಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಈ ನಡುವೆ ಕಾರ್ಯಕ್ರಮದಲ್ಲಿ ಕೇಳಲಾದ ಒಂದು ಪ್ರಶ್ನೆ ಟ್ವಿಟ್ಟರ್ ನಲ್ಲಿ ಯದ್ವಾತದ್ವಾ ಟ್ರೋಲ್ ಆಗುತ್ತಿದೆ.

ಹೌದು, ''ಆಯ್ಕೆಗಳಲ್ಲಿ ಇರುವ ಯಾವ ತಾರೆಯ ಜೊತೆ ನಟಿ ಆಲಿಯಾ ಭಟ್ ಇನ್ನೂ ತೆರೆಮೇಲೆ ಕಿಸ್ ಮಾಡಿಲ್ಲ'' ಎಂಬ ಪ್ರಶ್ನೆ 'ಕೌನ್ ಬನೇಗಾ ಕರೋರ್ ಪತಿ' ಕಾರ್ಯಕ್ರಮದಲ್ಲಿ ಕೇಳಲಾಗಿತ್ತು. ಇದಕ್ಕೆ ಅರ್ಜುನ್ ಕಪೂರ್, ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರ, ಸಿದ್ಧಾರ್ಥ್ ಶುಕ್ಲ ಎಂಬ ಆಯ್ಕೆಗಳನ್ನೂ ನೀಡಲಾಗಿತ್ತು.

ಅಷ್ಟಕ್ಕೂ, ಆಲಿಯಾ ಭಟ್ ಕುರಿತ ಈ ಪ್ರಶ್ನೆ ಕೇಳಲಾಗಿದ್ದು 2014 ರಲ್ಲಿ. ಅಂದಿನ ಕಾರ್ಯಕ್ರಮದಲ್ಲಿ ಕೇಳಿದ ಈ ಪ್ರಶ್ನೆ ಇದೀಗ ಟ್ರೋಲಿಗರ ಕಣ್ಣಿಗೆ ಬಿದ್ದಿದೆ. ಇದು ಸಾಮಾನ್ಯ ಜ್ಞಾನದ ಪ್ರಶ್ನೆಯೇ.? ಈ ಪ್ರಶ್ನೆಗೆ ಉತ್ತರ ಕೊಟ್ಟರೆ, ದುಡ್ಡು ಕೊಡುತ್ತಾರೆಯೇ.? ಎಂದು ನೆಟ್ಟಿಗರು ಆಡಿಕೊಂಡು ನಗುತ್ತಿದ್ದಾರೆ. ಮುಂದೆ ಓದಿರಿ...

ಬಿಗ್ ಬಿ ಪ್ರತಿಕ್ರಿಯೆ ಹೇಗಿರುತ್ತೆ.?

ಐಶ್ವರ್ಯ ರೈ ಬಗ್ಗೆ ಹೀಗೆ ಕೇಳಬೇಕಿತ್ತು.!

''ನಟಿ ಐಶ್ವರ್ಯ ರೈ ಬಗ್ಗೆಯೂ ಹೀಗೇ ಪ್ರಶ್ನೆ ಕೇಳಬೇಕು. ಅದಕ್ಕೆ ಅಮಿತಾಬ್ ಬಚ್ಚನ್ ಹೇಗೆ ಪ್ರತಿಕ್ರಿಯೆ ಕೊಡ್ತಾರೆ ಅನ್ನೋದನ್ನ ನೋಡಬೇಕು'' ಎಂದು ಟ್ವೀಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ.

'ಕೋಟ್ಯಧಿಪತಿ'ಯಲ್ಲಿ ಕಮಾಲ್ ಮಾಡಿದ 10ನೇ ಕ್ಲಾಸ್ ಓದಿರುವ ವ್ಯಕ್ತಿ

ಲೈಫ್ ಲೈನ್ ಬಳಕೆ

ಆಡಿಕೊಂಡು ನಗುತ್ತಿದ್ದಾರೆ ಜನ

''ಈ ಪ್ರಶ್ನೆಗೆ ನಾನು ಲೈಫ್ ಲೈನ್ - ಫೋನ್ ಎ ಫ್ರೆಂಡ್ ಹಾಗೂ 50/50 ಬಳಸುತ್ತಿದ್ದೆ. ಫ್ರೆಂಡ್ ಗೆ ಫೋನ್ ಮಾಡಬೇಕು ಅಂದ್ರೆ, ಕಮ್ಮಿ ಅಂದರೂ 50 ಜನಕ್ಕೆ ಫೋನ್ ಮಾಡುತ್ತಿದ್ದೆ. ಇಲ್ಲಾಂದ್ರೆ, ನೇರವಾಗಿ ಕಾರ್ಯಕ್ರಮದ ಪ್ರೊಡ್ಯೂಸರ್ ಗೆ ಫೋನ್ ಮಾಡುತ್ತಿದ್ದೆ'' ಎಂದು ಟ್ವೀಟಿಗರೊಬ್ಬರು ಆಡಿಕೊಂಡು ನಕ್ಕಿದ್ದಾರೆ.

ಅವಕಾಶ ಇದ್ದಿದ್ರೆ ರಕ್ಷಿತ್ ಶೆಟ್ಟಿ 'ಕೋಟ್ಯಧಿಪತಿ'ಯಲ್ಲಿ ಹೆಚ್ಚು ಹಣ ಗೆಲ್ತಿದ್ರು.! ಹಾಗಿದ್ರೆ ಎಷ್ಟು ಗೆದ್ರು.?

ಇದೆಲ್ಲ ಒಂದು ಪ್ರಶ್ನೆನಾ.?

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ತರಹ ಯಾಕೆ ಕೇಳಲ್ಲ.?

''ಇಂತಹ ಪ್ರಶ್ನೆಗಳನ್ನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಾಕೆ ಕೇಳಲ್ಲ.?'' ಅಂತ ಕೆಲವರು ಗೊಳೋ ಅಂತಿದ್ದಾರೆ.

'ಕನ್ನಡದ ಕೋಟ್ಯಧಿಪತಿ'ಯಲ್ಲಿ 1 ಕೋಟಿ ಗೆದ್ದಿದ್ದು ಇವರೊಬ್ಬರೇ.!

ಇದರಲ್ಲಿ ಸಾಮಾನ್ಯ ಜ್ಞಾನ ಎಲ್ಲಿದೆ.?

ಸಾಮಾನ್ಯ ಜ್ಞಾನ ಹೆಚ್ಚಾಗುವುದು ಹೇಗೆ.?

''ಒಂದು ಕಾಲದಲ್ಲಿ ನನ್ನ ತಂದೆ-ತಾಯಿ ಹೇಳ್ತಿದ್ರು - ಕೆಬಿಸಿ ನೋಡಿದ್ರೆ, ಸಾಮಾನ್ಯ ಜ್ಞಾನ ವೃದ್ದಿಯಾಗುತ್ತೆ ಅಂತ.! ಆದ್ರೀಗ..?'' ಎಂದು ಟ್ವೀಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ.

Have a great day!
Read more...

English Summary

Kaun Banega Crorepati trolled over question on Alia Bhatt Kiss.