ಫಸ್ಟ್ ಡೇ ಫಸ್ಟ್ ಶೋ 'ಟಾಕ್ಸಿಕ್' ಸಿನಿಮಾ ನೋಡೋಕೆ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯ್ತಿದ್ದಾರೆ. ಈಗಾಗಲೇ 4 ಟೀಸರ್‌ಗಳು ಹಾಗೂ 'ತಬಾಹಿ' ಸಾಂಗ್ ಬಂದು ಗಮನ ಸೆಳೆದಿದೆ. ವಾಟ್ ನೆಕ್ಟ್ಸ್ ಎಂದು ಎಲ್ಲರೂ ಕಾಯುತ್ತಿದ್ದಾರೆ. ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿ ಬ್ಯುಸಿಯಾಗಿದೆ. ಸದ್ಯ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಹೊಸ ಪೋಸ್ಟ್ ಕುತೂಹಲ ಮೂಡಿಸಿದೆ.
ಜೀ ಸಂಸ್ಥೆಗೆ 'ಟಾಕ್ಸಿಕ್' ಆಡಿಯೋ ರೈಟ್ಸ್ ಮಾರಾಟವಾಗಿದೆ. ರವಿ ಬಸ್ರೂರು ಜೊತೆ 4 ಜನ ಸಂಗೀತ ನಿರ್ದೇಶಕರು ಸೇರಿ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಒಂದು ಸಾಂಗ್ ಜೊತೆಗೆ ಹಿನ್ನೆಲೆ ಸಂಗೀತ ಜವಾಬ್ದಾರಿಯನ್ನು ರವಿ ಬಸ್ರೂರು ವಹಿಸಿಕೊಂಡಿದ್ದಾರೆ. 'ತಬಾಹಿ' ಸೇರಿ 4 ಹಾಡುಗಳನ್ನು ವಿಶಾಲ್ ಮಿಶ್ರಾ ಕಟ್ಟಿಕೊಡುತ್ತಿದ್ದಾರೆ. ಮತ್ತೊಂದು ಹಾಡಿಗೆ ಅವರೊಟ್ಟಿಗೆ ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಕೈ ಜೋಡಿಸಿದ್ದಾರೆ.
'ತಬಾಹಿ' ಆಡಿಯೋ ಸಾಂಗ್ ದೊಡ್ಡದಾಗಿ ಸದ್ದು ಮಾಡದೇ ಇದ್ದರೂ ವೀಡಿಯೋ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಅದ್ಭುತ ವಿಷ್ಯುವಲ್ಸ್, ಯಶ್ ಹಾಗೂ ಕಿಯಾರಾ ಅದ್ವಾನಿ ಕೆಮೆಸ್ಟ್ರಿ ನೋಡಿ ಮೆಚ್ಚಿಕೊಂಡಿದ್ದಾರೆ. ಮುಂದೆ ಯಾವ ಸಾಂಗ್ ಬರಬಹುದು ಎಂದು ಅಭಿಮಾನಿಗಳು ಕಾಯುವಂತಾಗಿದೆ. ಸದ್ಯ ವಿಶಾಲ್ ಮಿಶ್ರಾ ಮಾಡಿರುವ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದೆ. ಮುಂದೆ ಯಾವ ಸಾಂಗ್ ಬರುತ್ತೆ ಎನ್ನುವ ಕುತೂಹಲ ಹೆಚ್ಚಿಸಿದೆ. ಸದ್ಯ ಸಂಗೀತ ಕಾರ್ಯಕ್ರಮಕ್ಕಾಗಿ ವಿಶಾಲ್ ಮಿಶ್ರಾ ಕ್ಯಾಲಿಫೋರ್ನಿಯಾದಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲೇ 'ಟಾಕ್ಸಿಕ್' ಸಿನಿಮಾ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿ ಅಪ್‌ಡೇಟ್ ಕೊಟ್ಟಿದ್ದಾರೆ. ಎಡಿಟಿಂಗ್ ಸಿಸ್ಟಮ್ ಎದುರು ಇರುವ ಫೋಟೊ ಕ್ಲಿಕ್ಕಿಸಿ ಹಂಚಿಕೊಂಡಿದ್ದಾರೆ. "Toxic - PBS 4" ಎಂದು ಬರೆದುಕೊಂಡಿದ್ದಾರೆ. ಅಂದರೆ ಚಿತ್ರದ 4ನೇ ಹಾಡಿನ ಕೆಲಸ ನಡೆಯುತ್ತಿದೆ ಎಂದು ಸುಳಿವು ನೀಡಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. 'ತಬಾಹಿ' ಚಿತ್ರದ ವೀಡಿಯೋ ಸಾಂಗ್ ಬಿಡುಗಡೆ ಬೆನ್ನಲ್ಲೇ ಯಶ್ ಜೊತೆ ವಾಟ್ಸಪ್ ಕಾಲ್‌ನಲ್ಲಿ ಚರ್ಚೆ ನಡೆಸಿರುವ ಬಗ್ಗೆ ವಿಶಾಲ್ ಮಿಶ್ರಾ ಹಂಚಿಕೊಂಡಿದ್ದರು. ಯಶ್ ಹಾಗೂ ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆಗೆ 4 ಭಾಷೆಗಳಲ್ಲಿ ಸಾಹಿತ್ಯ ಬರೆದವರ ಜೊತೆ ವಾಟ್ಸಪ್ ಕಾಲ್‌ನಲ್ಲಿ ಚರ್ಚೆ ನಡೆಸಿದ್ದರ ಬಗ್ಗೆ ಮಾಹಿತಿ ನೀಡಿದ್ದರು. ಎಲ್ಲಾ ಭಾಷೆಗಳಲ್ಲಿ 'ತಬಾಹಿ' ಸಾಂಗ್ ಸದ್ದು ಮಾಡಲು ಇದೇ ಕಾರಣ ಎಂದು ಬರೆದುಕೊಂಡಿದ್ದರು.More Articles