ಮೊದಲೆಲ್ಲಾ ತಮ್ಮ ನೆಚ್ಚಿನ ನಾಯಕನ ಚಿತ್ರ ಬರುತ್ತಿದೆ ಅಂದರೆ ಅಭಿಮಾನಿಗಳಲ್ಲಿ ಒಂದು ರೀತಿಯ ಉತ್ಸಾಹ ಕಾಣುತ್ತಿತ್ತು. ಕಾತುರದಿಂದ ಕಾಯುತ್ತಾ ಕುಳಿತುಕೊಳ್ಳುತ್ತಿದ್ದರು. ಇನ್ನು ಆಗ ಸೋಶಿಯಲ್ ಮೀಡಿಯಾ ಕೂಡ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಓಟಿಟಿಯ ಅಲೆ ಕೂಡ ಎದ್ದಿರಲಿಲ್ಲ. ಹೀಗಾಗಿ ಚಿತ್ರಮಂದಿರಗಳಲ್ಲಿಯೇ ಚಿತ್ರವನ್ನು ಅಭಿಮಾನಿಗಳು ನೋಡಬೇಕಿತ್ತು.
ಆದರೆ ಈಗ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರದ ಮೊದಲ ಪ್ರದರ್ಶನ ಮುಕ್ತಾಯ ಆಗುತ್ತಿದ್ದಂತೆಯೇ ಚಿತ್ರದ ಹಣೆ ಬರಹ ಗೊತ್ತಾಗಿ ಬಿಡುತ್ತೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಪ್ರಮುಖವಾದ ಸನ್ನಿವೇಶಗಳು ಹರಿದಾಡುತ್ತವೆ. ಇಡೀ ಚಿತ್ರ ಕ್ಷಣಾರ್ಧದಲ್ಲಿಯೇ ಆನ್ ಲೈನ್‌ನಲ್ಲಿ ಸೋರಿಕೆಯಾಗುತ್ತೆ. ಇಂತಹ ವಾತಾವರಣದಲ್ಲಿ ತೆರೆಗೆ ಬಂದ 'ಕಾಕ್‌ಟೇಲ್ 2'' ಸದ್ಯ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ. ನೂರು ಕೋಟಿಯ ಗಡಿಯತ್ತ ತಲುಪಿದೆ.
ಹೌದು, ''ಕಾಕ್‌ಟೇಲ್ 2''.. ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ಅಭಿನಯದ ಚಿತ್ರ. ಬಿಡುಗಡೆಗೆ ಮುನ್ನ ಭಾರೀ ಸದ್ದು ಮಾಡಿದ್ದ ಈ ಚಿತ್ರ ಚಿತ್ರಮಂದಿರಗಳಲ್ಲಿ 12 ದಿನ ಪೂರೈಸಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳಯವ ''ಸ್ಯಾಕ್ನಿಲ್'' ಪ್ರಕಾರ ಕೇವಲ ಭಾರತದಲ್ಲಿ ₹86.75 ಕೋಟಿ ಗಳಿಸಿದೆ. "ಸ್ಯಾಕ್ನಿಲ್" ಪ್ರಕಾರ ಹನ್ನೆರಡನೇ ದಿನ "ಕಾಕ್ ಟೇಲ್ -2" 3,666 ಪ್ರದರ್ಶನಗಳನ್ನು ಭಾರತದಲ್ಲಿ ಕಂಡಿದೆ. ₹1.85 ಕೋಟಿಯನ್ನು ಬಾಕ್ಸಫೀಸ್ ನಲ್ಲಿ ಗಳಿಸಿದೆ. ವಿಶೇಷ ಅಂದರೆ ಈ ವಾರದ ಆರಂಭದಲ್ಲಿ ಅಂದರೆ ಸೋಮವಾರ ಈ ಚಿತ್ರ ₹ 1.75 ಕೋಟಿ ಗಳಿಸಿತ್ತು. ಆದರೆ ನಿನ್ನೆ ಚಿತ್ರದ ಗಳಿಕೆಯಲ್ಲಿ ಶೇಕಡಾ 5% ಏರಿಕೆ ಕಂಡು ಬಂದಿದೆ. ಚಿತ್ರತಂಡದವರ ಪಾಲಿಗಿದು ಸಮಾಧಾನದ ವಿಷಯ. ಅಂದ್ಹಾಗೇ ''ಕಾಕ್‌ಟೇಲ್ 2'' ಸಿನಿಮಾ 2012ರಲ್ಲಿ ತೆರೆಗೆ ಬಂದಿದ್ದ ''ಕಾಕ್‌ಟೇಲ್'' ಚಿತ್ರದ ಸೀಕ್ವೆಲ್. ಆ ಕಾಲದಲ್ಲಿ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ಈ ಚಿತ್ರದಲ್ಲಿ ಅಭಿನಯಿಸಿದ್ದರು. 71ಕೋಟಿಯನ್ನು ಈ ಚಿತ್ರ ಗಳಿಸಿತ್ತು. ಬಾಕ್ಸಾಫೀಸ್ ನ ಈ ಸಮರದಲ್ಲಿ ಸದ್ಯ "ಕಾಕ್‌ಟೇಲ್" ಚಿತ್ರದ ಈ ಗಳಿಕೆಯನ್ನು "ಕಾಕ್‌ಟೇಲ್ 2 " ಹಿಂದಿಕ್ಕಿದೆ. ಹೀಗೆ ಸದ್ಯ ''ಕಾಕ್‌ಟೇಲ್ 2'' ಬಾಕ್ಸಾಫೀಸ್‌ನಲ್ಲಿ ಹಣವನ್ನು ಕೊಳ್ಳೆ ಹೊಡೆಯುತ್ತಾ ಮುನ್ನುಗ್ಗುತ್ತಿದೆ. ಮುಂದಿನ ವಾರ ಬಾಲಿವುಡ್‌ನಲ್ಲಿ ''ಧಮಾಲ್ 4'' ತೆರೆಗೆ ಬರಲಿದೆ. ಈ ಚಿತ್ರದಿಂದ ''ಕಾಕ್‌ಟೇಲ್ 2'' ಮೇಲೆ ಪರಿಣಾಮ ಆಗುತ್ತಾ..? ''ಕಾಕ್‌ಟೇಲ್ 2'' ಒಟ್ಟಾರೆಯಾಗಿ ಎಷ್ಟು ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ಕಾಕ್‌ಟೇಲ್ 2ಕಾಕ್‌ಟೇಲ್ 2 Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.ಹನ್ನೆರಡನೇ ದಿನದ (ಜೂನ್ 30) ಗಳಿಕೆ ಎಷ್ಟು ?
''ಸ್ಯಾಕ್ನಿಲ್'' ಪ್ರಕಾರ ''ಕಾಕ್‌ಟೇಲ್ 2'' ಚಿತ್ರದ 12 ದಿನದ ಗಳಿಕೆ ಈ ಕೆಳಗಿನಂತಿದೆ.
ದಿನ ಭಾರತದ ಒಟ್ಟು ನಿವ್ವಳ ಗಳಿಕೆ (India Net) ದಿನ 1 (ಮೊದಲನೇ ಶುಕ್ರವಾರ) ₹13.50 ಕೋಟಿ ದಿನ 2 (ಮೊದಲನೇ ಶನಿವಾರ) ₹16.25 ಕೋಟಿ ದಿನ 3 (ಮೊದಲನೇ ಭಾನುವಾರ) ₹17.75 ಕೋಟಿ ದಿನ 4 (ಮೊದಲನೇ ಸೋಮವಾರ) ₹6.75 ಕೋಟಿ ದಿನ 5 (ಮೊದಲನೇ ಮಂಗಳವಾರ) ₹6.75 ಕೋಟಿ ದಿನ 6 (ಮೊದಲನೇ ಬುಧವಾರ) ₹5.25 ಕೋಟಿ ದಿನ 7 (ಮೊದಲನೇ ಗುರುವಾರ) ₹4.25 ಕೋಟಿ ಮೊದಲ ವಾರದ ಒಟ್ಟು ಗಳಿಕೆ (Week 1) ₹70.50 ಕೋಟಿ ದಿನ 8 (ಎರಡನೇ ಶುಕ್ರವಾರ) ₹4.00 ಕೋಟಿ ದಿನ 9 (ಎರಡನೇ ಶನಿವಾರ) ₹4.25 ಕೋಟಿ ದಿನ 10 (ಎರಡನೇ ಭಾನುವಾರ) ₹4.40 ಕೋಟಿ ದಿನ 11 (ಎರಡನೇ ಸೋಮವಾರ) ₹1.75 ಕೋಟಿ ದಿನ 12 (ಎರಡನೇ ಮಂಗಳವಾರ) ₹1.85 ಕೋಟಿ ಒಟ್ಟು ಮೊತ್ತದ ಕಲೆಕ್ಷನ್ (Overall Total) ₹86.75 ಕೋಟಿ ಓ ರೋಮಿಯೋ ಹಿಂದಿಕ್ಕಿದ ಕಾಕ್‌ಟೇಲ್- 2
"ಕಬೀರ್ ಸಿಂಗ್" ನಂತರ ಬಹುದೊಡ್ಡ ಗೆಲುವಿಗೆ ಹವಣಿಸುತ್ತಿರುವ ಶಾಹಿದ್ ಕಪೂರ್ ಈ ವರ್ಷದ ಆರಂಭದಲ್ಲಿ "ಓ ರೋಮಿಯೋ" ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಹೆಚ್ಚು ಕಡಿಮೆ 73 ಕೋಟಿ ದೋಚಿದ್ದರು. ಸದ್ಯ ಈ ಗಳಿಕೆಯನ್ನು ಕಾಕ್ ಟೇಲ್ 2 ಹಿಂದಿಕ್ಕಿದೆ. ಈ ಮೂಲಕ ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ ಟಾಪ್ 10 ಚಿತ್ರಗಳ ಪಟ್ಟಿ ಇಲ್ಲಿದೆ.
ಶ್ರೇಣಿ ಚಲನಚಿತ್ರದ ಹೆಸರು ಒಟ್ಟು ಗಳಿಕೆ (ಕೋಟಿಗಳಲ್ಲಿ) 1 ಧುರಂಧರ್ 2 ₹1186.32 ಕೋಟಿ 2 ಬಾರ್ಡರ್ 2 ₹362.76 ಕೋಟಿ 3 ಭೂತ್ ಬಾಂಗ್ಲಾ ₹199.23 ಕೋಟಿ 4 ಕಾಕ್‌ಟೇಲ್ 2 * ₹86.75 ಕೋಟಿ (12 ದಿನಗಳಲ್ಲಿ)* 5 ಓ ರೋಮಿಯೋ ₹83.35 ಕೋಟಿ 6 ವೆಲ್‌ಕಮ್ ಟು ದಿ ಜಂಗಲ್ ₹74.35 ಕೋಟಿ 7 ಹೈ ಜವಾನಿ ತೋ ಇಷ್ಕ್ ಹೋನಾ ಹೈ ₹61.78 ಕೋಟಿ 8 ಪತಿ ಪತ್ನಿ ಔರ್ ವೋ ದೋ ₹59.29 ಕೋಟಿ 9 ಮರ್ದಾನಿ 3 ₹52.99 ಕೋಟಿ 10 ದಿ ಕೇರಳ ಸ್ಟೋರಿ 2 ₹52.25 ಕೋಟಿ
ಕಾಕ್‌ಟೇಲ್ VS ಕಾಕ್‌ಟೇಲ್ 2
More Articles