ಜನರನ್ನು ನಗಿಸುವುದು ಸುಲಭ ಅಲ್ಲ. ತುಂಬಾನೇ ಕಷ್ಟಕರವಾದ ಕೆಲಸ ಅದು. ಆದರೂ ಕೂಡ ಅನೇಕರು ನಗಿಸುವ ಪ್ರಯತ್ನ ಮಾಡುತ್ತಾರೆ. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವರು ಹಾಸ್ಯದ ರಸದೌತಣವನ್ನು ಉಣಬಡಿಸುವ ಪ್ರಯತ್ನವನ್ನು ಮೇಲಿಂದ ಮೇಲೆ ಮಾಡುತ್ತಾರೆ.
ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರು ತಮ್ಮ ಎಲ್ಲ ಚಿಂತೆ ಮರೆತು ಹೊಟ್ಟೆ ಹುಣ್ಣಾಗುವಂತೆ ನಗಬೇಕೆನ್ನುವುದೇ ಇವರ ಏಕಮಾತ್ರ ಉದ್ದೇಶ ಆಗಿರುತ್ತೆ. ಇದೇ ಉದ್ದೇಶದೊಂದಿಗೆ ನಿನ್ನೆ (ಜುಲೈ 10) ತೆರೆಗೆ ಬಂದಿರುವ ''ಧಮಾಲ್ 4'' ಚಿತ್ರಕ್ಕೆ ಬಾಕ್ಸಾಫೀಸ್‌ನಲ್ಲಿ ಧಮಾಕೇದಾರ್ ಓಪನಿಂಗ್ ಸಿಗದಿದ್ದರೂ ಕೂಡ ಮೊದಲ ದಿನ ಸಮಾಧಾನಕರ ಬಹುಮಾನವಂತೂ ಸಿಕ್ಕಿದೆ.
''ಧಮಾಲ್ -4'' ಬಾಲಿವುಡ್‌ನ ಬ್ಲಾಕ್ ಬಸ್ಟರ್ ಫ್ರಾಂಚೈಸಿಯಲ್ಲಿ ಒಂದಾದ ''ಧಮಾಲ್'' ಚಿತ್ರದ ನಾಲ್ಕನೇ ಭಾಗ. ಇನ್ನು ಈ ಫ್ರಾಂಚೈಸಿಗೆ ಅದರದ್ದೇ ಆದ ಅಭಿಮಾನಿ ವರ್ಗ ಇದೆ. ಇನ್ನು ಅಜಯ್ ದೇವಗನ್ ಬಾಲಿವುಡ್‌ನ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರು. ಈ ಹಿಂದೆ ಇವರ ಚಿತ್ರಗಳನ್ನು ಮುಗಿ ಬಿದ್ದು ನೋಡುವ ಕಾಲವೂ ಇತ್ತು. ಈ ಹಿನ್ನೆಲೆ ''ಧಮಾಲ್-4'' ಮೇಲೆ ಅಪಾರವಾದ ನಿರೀಕ್ಷೆಗಳಿದ್ದವು. ಮೊದಲನೇ ದಿನ 20-25 ಕೋಟಿ ಹತ್ತಿರ ಹತ್ತಿರ ವ್ಯಾಪಾರವಾಗುವ ಲೆಕ್ಕಾಚಾರಗಳಿದ್ದವು. ಆದರೆ ''ಧಮಾಲ್ 4'' ಅಂದುಕೊಂಡಂತೆ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿಲ್ಲ. ಹಾಗಂಥ ಚಿತ್ರದ ಪ್ರದರ್ಶನ ತೀರಾ ಕಳಪೆಯೂ ಇಲ್ಲ. ಬದಲಿಗೆ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಚಿತ್ರ ಡಿಸೆಂಟ್ ಓಪನಿಂಗ್ ಪಡೆದುಕೊಂಡಿದೆ. ಮೊದಲ ದಿನ ₹14.00 ಕೋಟಿಯನ್ನು ಕೊಳ್ಳೆ ಹೊಡೆದಿದೆ. ''ಸ್ಯಾಕ್ನಿಲ್'' ಹಂಚಿಕೊಂಡಿರುವ ವರದಿಯ ಪ್ರಕಾರ ಮೊದಲ ದಿನ ಅಂದರೆ ನಿನ್ನೆ (ಜುಲೈ 10) ''ಧಮಾಲ್ 4'' ಭಾರತದೆಲ್ಲೆಡೆ 10,669 ಪ್ರದರ್ಶನಗಳನ್ನು ಕಂಡಿದೆ. ಆ ಪೈಕಿ ಚೆನ್ನೈನಲ್ಲಿ ಅತೀ ಹೆಚ್ಚಿನ ಜನ ಈ ಚಿತ್ರವನ್ನು ನೋಡಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಚೆನ್ನೈನಲ್ಲಿ ಮೊದಲ ದಿನ (ಜುಲೈ 10) ಚಿತ್ರಮಂದಿರದ ಆವರಣ 49.3% ಪ್ರೇಕ್ಷಕರಿಂದ ತುಂಬಿತ್ತು ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. ನಂತರ ಸ್ಥಾನಗಳಲ್ಲಿ ಲಕ್ನೋ ( 34%) ಮುಂಬೈ (24%) ಇವೆ. ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ 22.8% ಆಕ್ಯುಪೆನ್ಸಿ ಕಂಡು ಬಂದಿದೆ. ಆಗಲೇ ಹೇಳಿದಂತೆ ಅಜಯ್ ದೇವಗನ್ ಹೆಸರಿಗೆ ಮೊದಲೆಲ್ಲಾ ಚಿತ್ರಮಂದಿರ ಭರ್ತಿ ಮಾಡುವ ಶಕ್ತಿ ಇತ್ತು. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಕೂಡ ಹರಿತಿತ್ತು. ಆದರೆ, ಕೊರೊನಾ ನಂತರ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮೊದಲ ದಿನ 40 ಕೋಟಿಯ ಗಡಿಯನ್ನು ಅಜಯ್ ದೇವಗನ್ ಪಾರು ಮಾಡಿದ್ದು ಕೇವಲ ಒಂದು ಬಾರಿ ಮಾತ್ರ. 1. ಸಿಂಗಂ ಅಗೇನ್: 43.70 ಕೋಟಿ ರೂ. 2. ರೇಡ್ 2: 19.71 ಕೋಟಿ ರೂ. 3. ದೃಶ್ಯಂ 2: 15.38 ಕೋಟಿ ರೂ. 4. ಶೈತಾನ್: 14.5 ಕೋಟಿ ರೂ. 5. ಧಮಾಲ್ 4: 14 ಕೋಟಿ ರೂ. 6. ಭೋಲಾ: 11.2 ಕೋಟಿ ರೂ. 7.ದೇ ದೇ ಪ್ಯಾರ್ ದೇ 2: 9.45 ಕೋಟಿ ರೂ 8.ಥ್ಯಾಂಕ್ ಗಾಡ್: 8.1 ಕೋಟಿ ರೂ. 9.ಮೈದಾನ್ ಮತ್ತು ಸನ್ ಆಫ್ ಸರ್ದಾರ್ 2: 7.25 ಕೋಟಿ ರೂ. 10. ರನ್ ವೇ : 3.5 ಕೋಟಿ ರೂ. ಸದ್ಯ ''ಧಮಾಲ್-4'' ಕೊರೊನಾ ನಂತರದ ಕಾಲದಲ್ಲಿ ಮೊದಲ ದಿನ ಅತೀ ಹೆಚ್ಚು ಹಣ ಗಳಿಸಿದ ಅಜಯ್ ದೇವಗನ್ ಚಿತ್ರಗಳ ಸಾಲಿನಲ್ಲಿ ಆರನೇ ಸ್ಥಾನವನ್ನು ಅಲಂಕರಿಸಿದೆ. ಆದರೆ, ''ಟೋಟಲ್ ಧಮಾಲ್'' ಚಿತ್ರಕ್ಕಿಂತ ಈ ''ಧಮಾಲ್'' ಹಿಂದಿದೆ. 2019ರಲ್ಲಿ ಅಂದರೆ ಕೊರೊನಾ ಮೊದಲು ತೆರೆಗೆ ಬಂದಿದ್ದ ''ಟೋಟಲ್ ಧಮಾಲ್'' ಮೊದಲ ದಿನ 16.50 ಕೋಟಿಯನ್ನು ಗಳಿಸಿತ್ತು. ಆದರೆ. ಈ ಗಳಿಕೆಯನ್ನು ''ಧಮಾಲ್ 4'' ಹಿಂದಿಕ್ಕುವಲ್ಲಿ ಸದ್ಯ ವಿಫಲವಾಗಿದೆ. ಇಂದು (ಜುಲೈ 11) ಮತ್ತು ನಾಳೆ (ಜುಲೈ 12) ವಾರಾಂತ್ಯವಾದ ಹಿನ್ನೆಲೆ ಚಿತ್ರದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಅಸಲಿ ಪರೀಕ್ಷೆ ಶುರುವಾಗುವುದು ಮಾತ್ರ ಸೋಮವಾರದಿಂದಲೇ. ಅಂದು ಈ ಚಿತ್ರದ ಹಣೆಬರಹ ಗೊತ್ತಾಗಲಿದೆ. Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.ಅಜಯ್ ದೇವಗನ್ ಸ್ಟಾರ್ ಪವರ್, ಫ್ರಾಂಚೈಸಿ ಫೀವರ್ ; ಆದರೂ..
10,669 ಪ್ರದರ್ಶನ, ಬೆಂಗಳೂರಿನಲ್ಲಿ ಹೇಗಿದೆ ಡಿಮ್ಯಾಂಡ್
ಕೊರೊನಾ ನಂತರ ಅಜಯ್ ದೇವಗನ್ ಚಿತ್ರಗಳ ಮೊದಲ ದಿನದ ಗಳಿಕೆ ಈ ಕೆಳಗಿನಂತೆ ಇದೆ.
5ನೇ ಹೈಯೆಸ್ಟ್ ಓಪನರ್
ಟೋಟಲ್ ಧಮಾಲ್ VS ಧಮಾಲ್ 4
More Articles