ಕಲ್ಪನೆಗೆ ನಿಲುಕದ ಉದ್ಯಮ ಹಾಲಿವುಡ್. ಬೆಳ್ಳಿತೆರೆಯ ಮೇಲೆ ಅದ್ಭುತ ಸೃಷ್ಟಿಸುವ ಕಲೆ ಇವರಿಗೆ ಚೆನ್ನಾಗಿಯೇ ಕರಗತವಾಗಿರುತ್ತೆ. ಅದರಲ್ಲಿಯೂ ಈಗ ತಂತ್ರಜ್ಞಾನ ಇಂದು ನಮ್ಮ ಜೀವನವನ್ನು ಆವರಿಸಿಕೊಂಡಿದೆ. ಅದನ್ನು ಹೇಗೆ ಬಳಸಬೇಕೆಂಬುದೇ ಜಾಣತನ.
ಈ ಜಾಣತನವನ್ನು ಹೊಂದಿರುವ ಹಾಲಿವುಡ್ ಮಂದಿ ತಮ್ಮ ಪ್ರಯತ್ನ ಮತ್ತು ಪ್ರಯೋಗಗಳ ಮೂಲಕ ಹಲವರನ್ನು ನಿಬ್ಬೇರಗಾಗಿಸುತ್ತಲೇ ಬಂದಿದ್ದಾರೆ. ಅದರಲ್ಲಿಯೂ ಭಾರತದಲ್ಲಿ ಈ ಹಾಲಿವುಡ್‌ನವರ ಕೈಚಳಕಕ್ಕೆ ಮಾರು ಹೋಗುವವರ ಸಂಖ್ಯೆ ತುಸು ಹೆಚ್ಚೇ ಇದೆ. ಹಾಲಿವುಡ್‌ನಲ್ಲಿ ಸೃಷ್ಟಿಯಾಗುವ ಅದ್ಭುತ ಲೋಕ ಕಣ್ತುಂಬಿಕೊಳ್ಳಲು ಇವರು ಸದಾ ಒಂದು ಹೆಜ್ಜೆ ಮುಂದಿರುತ್ತಾರೆ. ಇದಕ್ಕೆ ಸಾಕ್ಷಿ, ''ದಿ ಒಡಿಸ್ಸಿ'' ಚಿತ್ರಕ್ಕೆ ಭಾರತದಲ್ಲಿ ಸಿಕ್ತಿರುವ ರೆಸ್ಫಾನ್ಸ್.
''ಬಾಲಿವುಡ್ ಹಂಗಾಮ'' ವರದಿಯ ಪ್ರಕಾರ ಭಾರತದಲ್ಲಿ ''ದಿ ಒಡಿಸ್ಸಿ'' 2,500ಕ್ಕೂ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಕ್ರಿಸ್ಟೋಫರ್ ನೋಲನ್ ಅವರ ಹಿಂದಿನ ಚಿತ್ರ ''ಓಪನ್‌ಹೈಮರ್'' ಚಿತ್ರಕ್ಕೆ ಭಾರತದಲ್ಲಿ 1,923 ಸ್ಕ್ರೀನ್‌ಗಳು ಮಾತ್ರ ಸಿಕ್ಕಿದ್ದವು. ಆದರೆ ಈ ಬಾರಿ ನೋಲನ್ ಹವಾ ಹಿಂದಿಗಿಂತಲೂ ಭಾರತದಲ್ಲಿ ತುಸು ಹೆಚ್ಚೇ ಇದೆ. 2023ರಲ್ಲಿ ಬಿಡುಗಡೆಯಾಗಿದ್ದ ''ಓಪನ್‌ಹೈಮರ್'' ಭಾರತದಲ್ಲಿ ಮೊದಲ ದಿನ ₹14.45 ಕೋಟಿಯನ್ನು ಗಳಿಸಿತ್ತು. ಈ ಗಳಿಕೆಯನ್ನು ''ದಿ ಒಡಿಸ್ಸಿ'' ಅನಾಯಾಸವಾಗಿ ಹಿಂದಿಕ್ಕಲಿದೆ. ಜೂನ್ 8ರಿಂದಲೇ ಈ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದ್ದು ನೋಲನ್ ಅವರ ಅಸಂಖ್ಯಾತ ಭಕ್ತರು ಈಗಾಗಲೇ ತಮ್ಮ ತಮ್ಮ ಟಿಕೆಟ್ ಕಾಯ್ದಿರಿಸಿದ್ದಾರೆ. ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರದ ಪ್ರಕಾರ ಮೊದಲ ದಿನ ಅಂದರೆ ನಾಳೆ (ಜುಲೈ 17) ₹20 ಕೋಟಿಯನ್ನು ಸಲೀಸಾಗಿ ಗಳಿಸಲಿದೆ. ಐಮ್ಯಾಕ್ಸ್ ಕ್ಯಾಮರಾಗಳಲ್ಲಿ ಚಿತ್ರೀಕರಣಗೊಂಡ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆ ''ದಿ ಒಡಿಸ್ಸಿ'' ಚಿತ್ರದ್ದು. ಈ ಹಿನ್ನೆಲೆ ಐಮ್ಯಾಕ್ಸ್ ಸ್ಕ್ರೀನ್‌ನಲ್ಲೇ ಈ ಚಿತ್ರವನ್ನು ನೋಡಬೇಕೆಂಬ ಹೆಬ್ಬಯಕೆ ಹಲವರಲ್ಲಿದೆ. ಐಮ್ಯಾಕ್ಸ್ ಟಿಕೆಟ್‌ಗೆ ಡಿಮ್ಯಾಂಡ್ ಕೂಡ ಹೆಚ್ಚಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಇಡೀ ಭಾರತದಲ್ಲಿರುವ 34 ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲೇ ಈಗಾಗಲೇ ಸುಮಾರು 91,000 ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಇನ್ನು ಈ ಟಿಕೆಟ್‌ಗಳ ದರ ಕಡಿಮೆ ಏನು ಇಲ್ಲ. ಬೆಂಗಳೂರಿನಲ್ಲಿಯೇ 2000 ರೂಪಾಯಿಗೆ ಟಿಕೆಟ್ ಬಿಕರಿಯಾಗ್ತಿದೆ. ಮುಂಬೈನಲ್ಲಿ ದರ 2600 ರಿಂದ 3000 ಇದೆ. ಕೇವಲ ಐಮ್ಯಾಕ್ಸ್‌ನ ಈ 34 ಸ್ಕ್ರೀನ್‌ಗಳಿಂದಲೇ ಈಗಾಗಲೇ 9.5 ಕೋಟಿ (Gross) ಹಣವನ್ನು ಭಾರತದಲ್ಲಿ ಕೊಳ್ಳೆ ಹೊಡೆದಿದೆ ''ದಿ ಒಡಿಸ್ಸಿ''. ''ಬಾಲಿವುಡ್ ಹಂಗಾಮಾ'' ವರದಿಯ ಪ್ರಕಾರ, ಇಲ್ಲಿಯವರೆಗೆ ಮೊದಲ ದಿನ ದ 1.25 ಲಕ್ಷ ಟಿಕೆಟ್‌ಗಳು ಸೇಲ್ ಆಗಿವೆ. ದೇಶದ ಪ್ರಮುಖ ಮಲ್ಟಿಪ್ಲೆಕ್ಸ್ ಚೈನ್‌ಗಳ ಪೈಕಿ ''ಪಿವಿಆರ್ ಐನಾಕ್ಸ್'' ಒಂದರಲ್ಲೇ 50,000 ಟಿಕೆಟ್‌ಗಳು ಬುಕ್ ಆಗಿದ್ದರೆ, ''ಸಿನೆಪೊಲಿಸ್''ನಲ್ಲಿ 12,000 ಟಿಕೆಟ್‌ಗಳು ಮಾರಾಟವಾಗಿವೆ. ಇನ್ನು ಮೂರು ದಿನದ ಲೆಕ್ಕ ಹಾಕಿದರೆ ಅಂದರೆ ಶುಕ್ರವಾರದಿಂದ ಭಾನುವಾರದವರೆಗೆ 2.50 ಲಕ್ಷ ಟಿಕೆಟ್ ಬುಕ್ ಆಗಿವೆ. ಸಾಮಾನ್ಯವಾಗಿ ಭಾರತದಲ್ಲಿ ಸ್ಟಾರ್ ಗಳಿಗೆ ಅಭಿಮಾನಿಗಳು ಇದ್ದಾರೆ. ಇರುತ್ತಾರೆ. ಆದರೆ, ಕ್ರಿಸ್ಟೋಫರ್ ನೋಲನ್ ವಿಚಾರದಲ್ಲಿ ಮಾತ್ರ ಈ ಅನ್ವಯವಾಗಲ್ಲ. ಯಾವ ಸ್ಟಾರ್ ಹೀರೋಗಿಂತ ಇವರ ಫ್ಯಾನ್ ಬೇಸ್ ಭಾರತದಲ್ಲಿ ಕಡಿಮೆ ಇಲ್ಲ. ''ಇನ್ಸೆಪ್ಷನ್''.. ''ಇಂಟರ್ ಸ್ಟೆಲ್ಲಾರ್''.. ''ಓಪನ್‌ಹೈಮರ್''.. ''ಡನ್‌ಕಿರ್ಕ್''.. ಹೀಗೆ ತಮ್ಮ ಚಿತ್ರಗಳ ಮೂಲಕ ಭಾರತೀಯ ಪ್ರೇಕ್ಷಕರ ಮನ ಗೆದ್ದಿದ್ದಾರೆ ನೋಲನ್. ಇವರ ಸಿನಿಮಾ ಅಂದ್ರೆ ಬರೀ ಎಂಟರ್‌ಟೈನ್‌ಮೆಂಟ್ ಮಾತ್ರ ಅಲ್ಲ, ಅದೊಂದು ಅದ್ಭುತ ಅನುಭವ ಅನ್ಕೊಂಡು ಥಿಯೇಟರ್‌ಗೆ ಬರೋ ಚಿತ್ರಪ್ರೇಮಿಗಳಿಗೆ ಇಲ್ಲಿ ಬರ ಇಲ್ಲ. ಒಟ್ನಲ್ಲಿ ಜುಲೈ 17ರಂದು ಅಂದರೆ ನಾಳೆ ತೆರೆಗೆ ಬರುತ್ತಿರುವ ''ದಿ ಒಡಿಸ್ಸಿ'' ಭಾರತದಲ್ಲಿಯೇ ಐತಿಹಾಸಿಕ ದಾಖಲೆ ಬರೆಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇನ್ನು ಈಗಾಗಲೇ ಪ್ರೀಮಿಯರ್ ಪ್ರದರ್ಶನದಲ್ಲಿ ಚಿತ್ರವನ್ನು ನೋಡಿರುವ ಹಲವರು ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ''ರಾಟನ್ ಟೊಮ್ಯಾಟೋಸ್'' ಎಂಬ ವೆಬ್‌ಸೈಟ್‌ನಲ್ಲಿಯೇ ಸುಮಾರು 79 ವಿಮರ್ಶಕರ ವಿಮರ್ಶೆಗಳ ಆಧಾರದ ಮೇಲೆ ಈ ಚಿತ್ರಕ್ಕೆ ಶೇ. 99 ರಷ್ಟು ರೇಟಿಂಗ್ ಸಿಕ್ಕಿದೆ. ಇಂಥಾ ''ದಿ ಒಡಿಸ್ಸಿ'' ಮೊದಲ ದಿನ ಒಟ್ಟಾರೆಯಾಗಿ ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.ಭಾರತದಲ್ಲಿ ''ದಿ ಒಡಿಸ್ಸಿ''ಗೆ ಸಿಕ್ಕ ಸ್ಕ್ರೀನ್‌ಗಳು ಎಷ್ಟು ?
''ಓಪನ್ ಹೈಮರ್'' ಗಳಿಕೆಯನ್ನು ''ದಿ ಒಡಿಸ್ಸಿ'' ಹಿಂದಿಕ್ಕುವುದು ಖಚಿತ
ಐಮ್ಯಾಕ್ಸ್ ಟಿಕೆಟ್‌ಗೆ ಮುಗಿ ಬಿದ್ದ ಜನ
ಮೊದಲ ದಿನ ಸೇಲ್ ಆಗಿರುವ ಟಿಕೆಟ್‌ಗಳು ಎಷ್ಟು ?
ಯಾಕಿಷ್ಟು ಕ್ರೇಜ್..?
ಗ್ಲೋಬಲ್ ಬಾಕ್ಸಾಫೀಸ್‌ನಲ್ಲಿ ''ದಿ ಒಡಿಸ್ಸಿ'' ಧಗಧಗ
ಕೇವಲ ಭಾರತದಲ್ಲಿ ಮಾತ್ರ ಅಲ್ಲ ವಿಶ್ವವ್ಯಾಪಿ ಸದ್ಯ ''ದಿ ಒಡಿಸ್ಸಿ'' ಜ್ವರ ಹಬ್ಬಿದೆ. ಇದಕ್ಕೆ ಪುರಾವೆ ಎಂಬಂತೆ ''ಡೆಡ್‌ಲೈನ್ '' ವರದಿ ಪ್ರಕಾರ, ''ದಿ ಒಡಿಸ್ಸಿ'' ಸಿನಿಮಾ ತನ್ನ ಮೊದಲ ವೀಕೆಂಡ್‌ನಲ್ಲಿ ಉತ್ತರ ಅಮೆರಿಕಾದಲ್ಲೇ ಸುಮಾರು 90 ಮಿಲಿಯನ್‌ನಿಂದ 100 ಮಿಲಿಯನ್ ಗಳಿಸುವ ನಿರೀಕ್ಷೆಯಿದೆ. ಇನ್ನು ವಿಶ್ವಾದ್ಯಂತ ಒಟ್ಟು ಕಲೆಕ್ಷನ್ 200 ಮಿಲಿಯನ್ ಅಂದರೆ ಸುಮಾರು ₹1,600 ಕೋಟಿಗೂ ಅಧಿಕವಾಗಬಹುದು ಎಂಬ ಲೆಕ್ಕಾಚಾರವನ್ನು ಟ್ರೇಡ್ ಪಂಡಿತರು ಹಾಕುತ್ತಿದ್ದಾರೆ.More Articles