ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ನಟಿ ರೇಖಾ ದಾಸ್ ಮಗಲು ಶ್ರಾವ್ಯಾ ರಾವ್ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಬಹಳ ಹಿಂದೆಯೇ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದರೂ ಆಕೆಗೆ ದೊಡ್ಡ ಬ್ರೇಕ್ ಸಿಗಲಿಲ್ಲ. ಇದೀಗ ಸಾತ್ವಿಕಾ ರಾವ್ ಎಂದು ಹೆಸರು ಬದಲಿಸಿಕೊಂಡು ಅದೃಷ್ಟ ಪರೀಕ್ಷೆ ಮುಂದುವರೆಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಮೋಡ ಕವಿದ ವಾತಾವರಣ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

Advertisement

ಓಂ ಪ್ರಕಾಶ್ ರಾವ್ ಹಾಗೂ ರೇಖಾ ದಾಸ್ ಡಿವೋರ್ಸ್ ಪಡೆದು ದೂರಾಗಿದ್ದಾರೆ. ಮಗಳು ಹುಟ್ಟಿದ ಕೆಲವೇ ದಿನಗಳಲ್ಲಿ ಭಿನ್ನಾಭಿಪ್ರಾಯಗಳಿಂದ ಬೇರೆ ಆಗಿದ್ದರು. ಆದರೆ ಚಿಕ್ಕಂದಿನಿಂದ ಕೆಲ ವರ್ಷ ತಂದೆ ಜೊತೆ ಶ್ರಾವ್ಯ ಇದ್ದರು. ಅದೇ ಸಮಯದಲ್ಲಿ ಓಂ ಪ್ರಕಾಶ್ ರಾವ್ ಎರಡನೇ ಮದುವೆ ಕೂಡ ಆಗಿದ್ದರು. ಆ ಸಮಯದಲ್ಲಿ ತಂದೆ ಒಂದು ಕಡೆ ಅಮ್ಮ ಒಂದು ಕಡೆ ಎನ್ನುವಂತಾಗಿತ್ತು. ಏನು ಅರಿಯದ ವಯಸ್ಸಿನಲ್ಲಿ ಇದೆಲ್ಲಾ ಯಾಕೆ ಆಗ್ತಿದೆ ಎನ್ನುವುದು ಶ್ರಾವ್ಯಾಗೆ ಗೊತ್ತಾಗುತ್ತಿರಲಿಲ್ಲ. ಇದೇ ವಿಚಾರದ ಬಗ್ಗೆ SumanTv Kannada ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸಾತ್ವಿಕಾ ರಾವ್ ಮಾತನಾಡಿದ್ದಾರೆ.

Advertisement

ಜೊತೆಗಿರೋಕೆ ಆಗಲ್ಲ ಅಂದ್ರೆ ದಯವಿಟ್ಟು ಮಕ್ಕಳು ಮಾಡ್ಕೊಬೇಡಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಚಿಕ್ಕಂದಿನಲ್ಲಿ ಅಪ್ಪ- ಅಮ್ಮ ದೂರಾಗಿದ್ದ ನೋವು ಮರೆಯೋಕೆ ಸಾಧ್ಯವಿಲ್ಲ. ಅದು ನನ್ನ ಮೊದಲ ಹಾರ್ಟ್ ಬ್ರೇಕ್ ಎಂದು ಸಾತ್ವಿಕಾ ರಾವ್ ಹೇಳಿದ್ದಾರೆ. "ಚಿಕ್ಕಂದಿನಲ್ಲಿ ಅದನ್ನೆಲ್ಲಾ ಅರಗಿಸಿಕೊಳ್ಳಲು ಆಗಲಿಲ್ಲ. ಈಗ ಅಂಥದ್ದಕ್ಕೆ ತಲೆ ಕೆಡಿಸಿಕೊಳ್ಳಲ್ಲ. ಇವತ್ತು ಅವರಿಬ್ಬರಿಗೆ ಡಿವೋರ್ಸ್ ಆಗಿದ್ದರೆ ಅದನ್ನು ಬೇರೆ ರೀತಿ ತೆಗೆದುಕೊಳ್ಳಬಹುದು. ಆದ್ರೆ ನಾನು ಚಿಕ್ಕವಳಾಗಿದ್ದಾಗ ಅಕ್ಸೆಪ್ಟ್ ಮಾಡೋಕೆ ಆಗಲಿಲ್ಲ. ತುಂಬಾ ಡಿಸ್ಟರ್ಬ್ ಚೈಲ್ಡ್‌ವುಡ್ ನನ್ನದು" ಎಂದಿದ್ದಾರೆ.

ಅದು ಅರ್ಥ ಆಗದ ವಯಸ್ಸು.. ಯಾಕೆ ನಾನು ಅಪ್ಪನ ಮನೆಯಲ್ಲಿದ್ದೀನಿ, ಯಾಕೆ ಅಮ್ಮನ ಮನೆಗೆ ಹೋಗ್ತಿದ್ದೀನಿ. ಅವರಿಬ್ಬರ ಒಟ್ಟಿಗೆ ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳುವುದು ಕಷ್ಟವಾಗಿತ್ತು. ಬಳಿಕ ಎಲ್ಲವನ್ನು ಸಮಯ ಕಲಿಸಿಬಿಡ್ತು ಎಂದು ಸಾತ್ವಿಕಾ ರಾವ್ ಹೇಳಿದ್ದಾರೆ. "ಅಪ್ಪನ ಜೊತೆಗೂ ಇರಲು ಇಷ್ಟ, ಅಮ್ಮನ ಜೊತೆಗೂ ಇರಲು ಇಷ್ಟಲ.. ಎರಡೂ ಕಡೆ ಕೈ ಹಿಡಿದು ಎಳೆಯುತ್ತಿದ್ರು. ನಾನು ಹೇಳುವುದು ಏನಂದ್ರೆ ಒಟ್ಟಿಗೆ ಇರಲು ಸಾಧ್ಯವಿಲ್ಲ ಅಂದ್ರೆ ಮಕ್ಕಳು ಮಾಡ್ಕೊಬೇಡಿ. ಮಕ್ಕಳ ಮೇಲೆ ಪರಿಣಾಮ ಬೀರುತ್ತೆ. ನೀವಿಬ್ಬರು ದೂರಾಗ್ತೀರಾ, ನಿಮ್ಮಿಬ್ಬರಿಗೆ ಒಬ್ಬರ ಮೇಲೆ ಮತ್ತೊಬ್ಬರಿಗೆ ಏನೋ ಆರೋಪಗಳಿರುತ್ತೆ.. ಎಲ್ಲದರ ನಡುವೆ ಮಕ್ಕಳಿಗೆ ಆಗುವ ಟ್ರೊಮಾ ಅಷ್ಟಿಷ್ಟಲ್ಲ. ಪೋಷಕರೇ ದೇವ್ರು.. ಅಂತಹ ಸಮಯದಲ್ಲಿ ಹೀಗೆ ಆದ್ರೆ ಹೇಗೆ? ನನ್ನ ಮೊದಲ ಹಾರ್ಟ್‌ ಬ್ರೇಕ್ ಅದೇ.. ಅವರಿಬ್ಬರು ದೂರಾಗಿದ್ದು.. ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ" ಎಂದು ಸಾತ್ವಿಕಾ ಭಾವುಕರಾಗಿದ್ದಾರೆ. ಆಕೆಯ ಮಾತು ಕೇಳಿ ನಿರೂಪಕಿ ಕಣ್ಣಾಲಿಗಳಲ್ಲಿ ನೀರು ತುಂಬಿದೆ.

Advertisement

ನನ್ನ ಪ್ರಕಾರ ಇವತ್ತಿನ ಟೀನೇಜ್ ಮಕ್ಕಳ ಪೋಷಕರು ಅಂದ್ರೆ ಹಿಂದಿನ ತಲೆಮಾರಿನವರಿಗೆ ಜ್ಞಾನ ಇರಲಿಲ್ಲ. ಅವರೇ ಎಮೋಷನಲ್ ಆಗಿ ವೀಕ್ ಆಗಿ ಇರ್ತಿದ್ರು.. 20 ವರ್ಷಗಳಿಂದ ಈಚೆಗೆ ಪರವಾಗಿಲ್ಲ. ಇವಾಗ ಪರವಾಗಿಲ್ಲ.. ಆಗ ಹೇಗೆ ಇರ್ತಿದ್ರು ಗೊತ್ತಿಲ್ಲ. ಅಪ್ಪನಿಗೆ ಯಾಕೆ 2ನೇ ಮದುವೆ.. ಇವ್ರು ಯಾರು ಗೊತ್ತಿಲ್ಲ, ನನ್ನ ಹತ್ರ ಯಾಕೆ ಮಾತಾಡ್ತಿದ್ದಾರೆ ಅನ್ನಿಸ್ತಿತ್ತು. ತುಂಬಾ ಅಳ್ತಿದ್ದೆ.. ಯಾರ ಹತ್ರ ಕೂಡ ಹೇಳಿಕೊಳ್ಳಲು ಆಗ್ತಿರ್ಲಿಲ್ಲ. 15 ದಿನ ಇಲ್ಲಿ 15 ದಿನ ಅಲ್ಲಿ.. ಅದೇ ಸಮಯದ್ಲಿ ಸ್ಕೂಲ್, ಓದು, ಎಕ್ಸಾಂ.. ಅವ್ರು(ಓಂ ಪ್ರಕಾಶ್ ರಾವ್ 2ನೇ ಪತ್ನಿ) ಹೊಡಿತ್ತಿದ್ರು, ಅಮ್ಮನ ಹತ್ರ ಹೋಗಿ ಹೇಳ್ತಿದ್ದೆ ಅಷ್ಟೆ ನೆನಪಿರೋದು" ಎಂದು ಸಾತ್ವಿಕಾ ತಿಳಿಸಿದ್ದಾರೆ.