ಕನ್ನಡದ ಖ್ಯಾತ ಸ್ಟಂಟ್ ಮಾಸ್ಟರ್ ರವಿವರ್ಮಾ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್‌ ಸಿನಿಮಾಗಳಿಗೆ ಆಕ್ಷನ್ ಕಂಪೋಸ್ ಮಾಡುತ್ತಿದ್ದಾರೆ. ಭಾರತೀಯ ಚಿತ್ರರಂಗದ ದೊಡ್ಡ ದೊಡ್ಡ ಕಲಾವಿದರು ರವಿವರ್ಮಾ ಡೇಟ್ಸ್‌ಗಾಗಿ ಕಾಯುವಂತಾಗಿದೆ. ಆದರೆ ಇವತ್ತಿಗೂ ಕನ್ನಡ ಚಿತ್ರರಂಗ, ಕನ್ನಡ ಸಿನಿಮಾಗಳನ್ನು ರವಿವರ್ಮಾ ಮರೆತ್ತಿಲ್ಲ.

Advertisement

ಒಂದ್ಕಾಲದಲ್ಲಿ ಜೀವನೋಪಾಯಕ್ಕಾಗಿ ಆಟೋ ಡ್ರೈವರ್ ಆಗಿದ್ದ ರವಿವರ್ಮಾ ಇವತ್ತು ಪ್ಯಾನ್ ಇಂಡಿಯಾ ಸ್ಟಾರ್ ಮಾಸ್ಟರ್. ಅಕ್ಷರಶಃ ಬೆವರು, ರಕ್ತ ಸುರಿಸಿ ಈ ಹಂತಕ್ಕೆ ಬೆಳೆದು ಬಂದಿದ್ದಾರೆ. ಈ ಹಾದಿಯಲ್ಲಿ ಸಾಕಷ್ಟು ಏಳುಬೇಳು ಕಂಡಿದ್ದಾರೆ. 'ಮಾಸ್ತಿಗುಡಿ' ದುರಂತದಿಂದ ಎಲ್ಲವೂ ಮುಗಿದೇ ಹೋಯಿತು ಎಂದುಕೊಂಡಿದ್ದ ರವಿ ಮತ್ತೆ ಎದ್ದು ಬಂದರು. ಸ್ಟಂಟ್ ಮಾಸ್ಟರ್ ಅಷ್ಟೇ ಅಲ್ಲದೇ ನಿರ್ದೇಶಕರಾಗಿ ನಿರ್ಮಾಪಕರಾಗಿ ಕೂಡ ರವಿವರ್ಮಾ ಗುರ್ತಿಸಿಕೊಂಡಿದ್ದಾರೆ.

Advertisement

ದರ್ಶನ್, ಸುದೀಪ್, ಪುನೀತ್ ರಾಜ್‌ಕುಮಾರ್, ಶಿವಣ್ಣ ಹೀಗೆ ಕನ್ನಡದ ಎಲ್ಲಾ ಸ್ಟಾರ್ ನಟರ ಜೊತೆಗೆ ಹೊಸ ಕಲಾವಿದರ ಜೊತೆ ರವಿವರ್ಮಾ ಕೆಲಸ ಮಾಡಿದ್ದಾರೆ. ಸಾಮಾನ್ಯ ಫೈಟರ್ ಆಗಿ ಚಿತ್ರರಂಗಕ್ಕೆ ಬಂದ ಅವರು ಹಂತ ಹಂತವಾಗಿ ಬೆಳೆದು ಕೊನೆಗೆ ಸ್ಟಂಟ್ ಮಾಸ್ಟರ್ ಆಗಿಬಿಟ್ಟರು. ಪ್ರಭುದೇವ ನಿರ್ದೇಶನದ 'R.. ರಾಜ್‌ಕುಮಾರ್' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದರು. ಬಳಿಕ ಸಲ್ಮಾನ್ ಖಾನ್, ಶಾರುಖ್ ಖಾನ್, ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಸೇರಿದಂತೆ ಘಟಾನುಘಟಿ ಕಲಾವಿದರಿಗೆ ಆಕ್ಷನ್ ಕಂಪೋಸ್ ಮಾಡಿ ಗೆದ್ದಿದ್ದಾರೆ. ಆದರೆ ದರ್ಶನ್ ಋಣವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ರವಿವರ್ಮಾ ಹೇಳಿದ್ದಾರೆ.

Advertisement

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ಆದರೆ ಅವರ ಸಹಾಯವನ್ನು ಸಾಕಷ್ಟು ಜನ ಮರೆತ್ತಿಲ್ಲ. Kadakk Talks ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ರವಿವರ್ಮಾ ಮಾತನಾಡಿದ್ದಾರೆ. ಈ ವೇಳೆ ದರ್ಶನ್ ಅಂದು ಮಾಡಿದ್ದ ಸಹಾಯವನ್ನು ಮೆಲುಕು ಹಾಕಿದ್ದಾರೆ. ಅದೇ ಕಾರಣಕ್ಕೆ ನನ್ನ ಮಗನಿಗೆ ಅವರ ಹೆಸರು ಇಟ್ಟಿದ್ದೀನಿ ಎಂದು ತಿಳಿಸಿದ್ದಾರೆ.