ರಶ್ಮಿಕಾ-ರಕ್ಷಿತ್ ಬ್ರೇಕ್ ಅಪ್ ಗೆ ಈ ಆರು ಘಟನೆಗಳೇ ಕಾರಣ.!


ರಶ್ಮಿಕಾ ಮಂದಣ್ಣ ಹಾಗು ರಕ್ಷಿತ್ ಶೆಟ್ಟಿ ಬ್ರೇಕ್ ಅಪ್ ಗೆ ಕಾರಣವಾದ 6 ಘಟನೆಗಳು | Filmibeat Kannada

ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಈಗ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ.

ಖುದ್ದು ರಶ್ಮಿಕಾ ಅವರ ತಾಯಿಯೇ ಬ್ರೇಕ್ ಅಪ್ ಕುರಿತು ಮಾತನಾಡಿದ್ದು, ''ಇದು ನಮ್ಮ ಕೌಟುಂಬಿಕ ವಿಚಾರ, ನಾವು ಈಗಾಗಲೇ ಒಂದು ನಿರ್ಧಾರಕ್ಕೆ ಬಂದಾಗಿದೆ'' ಎಂದು ಸ್ಪಷ್ಟಪಡಿಸಿದ್ದಾರೆ. ಆದ್ರೆ, ಬ್ರೇಕ್ ಅಪ್ ಗೆ ನಿಜವಾದ ಕಾರಣವೇನು ಎಂಬುದನ್ನ ಹೇಳುತ್ತಿಲ್ಲ.

ರಶ್ಮಿಕಾ -ರಕ್ಷಿತ್ ಬ್ರೇಕ್ ಅಪ್: ಆಪ್ತ ಮೂಲಗಳಿಂದ ಬಂದ ಬ್ರೇಕಿಂಗ್ ನ್ಯೂಸ್!

ಇನ್ನು ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಅವರ ಆಪ್ತರು, ಇಂಡಸ್ಟ್ರಿಯಲ್ಲಿರುವ ಸ್ನೇಹಿತರು ಬೇರೆ ಬೇರೆ ಕಾರಣಗಳನ್ನೇ ಹೇಳುತ್ತಾರೆ. ಬಟ್, ಇಬ್ಬರ ನಡುವಿನ ಬ್ರೇಕ್ ಅಪ್ ಗೆ ಬಹುಮುಖ್ಯವಾಗಿ ನೋಡುವುದಾರೇ ಆರು ಕಾರಣಗಳು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅವು ಯಾವುದು ಎಂದು ತಿಳಿಯಲು ಮುಂದೆ ಓದಿ....

'ಅಂಜನಿಪುತ್ರ' ಬೈಕ್ ದೃಶ್ಯ

ಮೂಲಗಳ ಪ್ರಕಾರ 'ಅಂಜನಿಪುತ್ರ' ಚಿತ್ರದಲ್ಲಿ ನಾಯಕ ನಟನ ಜೊತೆ ನಾಯಕಿ ಬೈಕ್ ನಲ್ಲಿ ಕುಳಿತುಕೊಂಡು ಹೋಗುವ ದೃಶ್ಯವಿದೆ. ಈ ದೃಶ್ಯದಲ್ಲಿ ರಶ್ಮಿಕಾ, ನಾಯಕನನ್ನ ತಬ್ಬಿಕೊಂಡು ಹೋಗಬೇಕು. ಈ ದೃಶ್ಯವನ್ನ ತೆಗೆಯುವಂತೆ ರಕ್ಷಿತ್ ತಾಕೀತು ಮಾಡಿದ್ದರಂತೆ. ಆದ್ರೆ, ಅದು ಸಾಧ್ಯವಾಗಲಿಲ್ಲ. ಅಲ್ಲಿಂದ ಇಬ್ಬರ ನಡುವಿನ ಸಂಬಂಧದಲ್ಲಿ ಮನಸ್ತಾಪ ಉಂಟಾಗಲು ಶುರುವಾಗಿದೆ.

'ರಶ್ಮಿಕಾರನ್ನ ಮದುವೆ ಆಗಿ' ಎಂದು ವಿಜಯ್ ದೇವರಕೊಂಡಗೆ ಹೇಳಿದ ಅಭಿಮಾನಿ.!

'ಗೀತಾ ಗೋವಿಂದ' ಸಿನಿಮಾ

ತೆಲುಗು ನಟ ವಿಜಯ ದೇವರಕೊಂಡ ಜೊತೆ ರಶ್ಮಿಕಾ ಅಭಿನಯದ 'ಗೀತಾ ಗೋವಿಂದಂ' ಚಿತ್ರ ದೊಡ್ಡ ಹಿಟ್ ಆಗಿದೆ. ಆದ್ರೆ, ಈ ಸಿನಿಮಾ ಬಿಡುಗಡೆಗೂ ಮುಂಚೆ ದೇವರಕೊಂಡ ಜೊತೆ ರಶ್ಮಿಕಾ ಲಿಪ್ ಲಾಕ್ ಮಾಡಿದ್ದ ದೃಶ್ಯ ಬಹಿರಂಗವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ವಿಜಯ ದೇವರಕೊಂಡ, ರಶ್ಮಿಕಾಗೆ ವೈಯಕ್ತಿಕ ಜೀವನದಲ್ಲಿ ಸೂಕ್ತ ಜೋಡಿ ಎನ್ನಲಾಗುತ್ತಿದೆ. ಇದು ಸಹಜವಾಗಿ ರಕ್ಷಿತ್ ಗೆ ಬೇಸರ ಉಂಟು ಮಾಡಿರಬಹುದು.

ರಶ್ಮಿಕಾ ಮಂದಣ್ಣ ಬಗ್ಗೆ ಏನೇನೋ ಸುದ್ದಿ: ಯಾವುದನ್ನೂ ನಂಬಬೇಡಿ.!

ಸಿನಿಮಾ-ದೃಶ್ಯಗಳ ಬಗ್ಗೆ ಆಕ್ಷೇಪ

ರಶ್ಮಿಕಾ ಅವರು ನಟಿಸುತ್ತಿದ್ದ ಸಿನಿಮಾಗಳ ಬಗ್ಗೆ ಮತ್ತು ದೃಶ್ಯಗಳ ಬಗ್ಗೆ ರಕ್ಷಿತ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು ಎನ್ನಲಾಗಿದೆ. ಅಂಜನಿಪುತ್ರ, ಚಮಕ್ ಸಿನಿಮಾದಲ್ಲಿ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದೇಕೆ, ಗೀತಾ ಗೋವಿಂದಂ ಸಿನಿಮಾದಲ್ಲಿ ಲಿಪ್ ಲಾಕ್ ದೃಶ್ಯದ ಬಗ್ಗೆ....ಹೀಗೆ ಪ್ರತಿಯೊಂದು ಚಿತ್ರದ ಬಗ್ಗೆಯೂ, ದೃಶ್ಯಗಳ ಬಗ್ಗೆಯೂ ಅದು ಮಾಡಬಾರದು, ಇದು ಮಾಡಬಾರದು ಎಂದು ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಹಾಗಾಗಿ, ರಶ್ಮಿಕಾ ಅವರ ಸ್ವಂತ ನಿರ್ಧಾರಕ್ಕೆ ಇಲ್ಲಿ ಅಡ್ಡಿಯಾಗಿರಬಹುದು.

ರಕ್ಷಿತ್ ಜೊತೆ ಬ್ರೇಕ್ ಅಪ್ ಅಂದೋರಿಗೆ ಮಾತಲ್ಲೇ ಮಾಂಜ ಕೊಟ್ಟ ರಶ್ಮಿಕಾ

ಸಂಭಾವನೆ ವಿಚಾರ

ರಶ್ಮಿಕಾ ಮಂದಣ್ಣ ಅವರ ಸಂಭಾವನೆ ವಿಚಾರವಾಗಿ ರಕ್ಷಿತ್ ಶೆಟ್ಟಿ ಪ್ರಶ್ನಿಸಿದ್ದರು ಎಂದು ಹೇಳಲಾಗುತ್ತಿದೆ. ರಶ್ಮಿಕಾ ಅವರ ತಾಯಿಯ ಬಳಿ ರಕ್ಷಿತ್ ಶೆಟ್ಟಿ ವಿಚಾರವಾಗಿ ಪ್ರಸ್ತಾಪ ಮಾಡಿದ್ದು, ಸಹಜವಾಗಿ ಅವರಿಗೆ ನೋವು ತಂದಿರಬಹುದು. ಮದುವೆಗೂ ಮುಂಚೆಯೇ ಈ ರೀತಿ ಸಂಭಾವನೆ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂಬ ಆತಂಕ ಕಾಡಿರಬಹುದು.

ರಕ್ಷಿತ್-ರಶ್ಮಿಕಾ ಬ್ರೇಕಪ್: ಅಭಿಮಾನಿಗಳು ಕೊಡುತ್ತಿರುವ ಪ್ರತಿಕ್ರಿಯೆ ಇದು.!

ಕೀಳಿರಿಮೆ ಗುಣ

'ಕಿರಿಕ್ ಪಾರ್ಟಿ' ಚಿತ್ರದ ನಂತರ ರಕ್ಷಿತ್ ಅಭಿನಯದ ಯಾವುದೇ ಸಿನಿಮಾ ತೆರೆಕಂಡಿಲ್ಲ. ಆದ್ರೆ, ರಶ್ಮಿಕಾ ಅಭಿನಯದ ಐದು ಸಿನಿಮಾಗಳು ರಿಲೀಸ್ ಆಗಿ ಎಲ್ಲವೂ ಸೂಪರ್ ಹಿಟ್ ಎನಿಸಿಕೊಂಡಿದೆ. ಇದರಿಂದ ರಶ್ಮಿಕಾ ಅವರಿಗೆ ಹೆಚ್ಚು ಹೆಚ್ಚು ಆಫರ್ ಗಳು ಬಂದಿವೆ. ಇದು ಸಹಜವಾಗಿ ರಕ್ಷಿತ್ ಶೆಟ್ಟಿಗೆ ಕೀಳರಿಮೆಗೆ ಕಾರಣವಾಗಿರಬಹುದು.

ವಯಸ್ಸಿನ ಅಂತರ

ರಕ್ಷಿತ್ ಮತ್ತು ರಶ್ಮಿಕಾ ಜೋಡಿ ನೋಡಿದಾಗ ಅದೇಷ್ಟೋ ಜನ ಅವರ ವಯಸ್ಸಿನ ಅಂತರ ಬಗ್ಗೆ ಕಾಮೆಂಟ್ ಮಾಡಿದ್ದರು. ಬಹುಶಃ ಇವರ ಸಂಬಂಧ ಮುಂದುವರೆಯುವುದಿಲ್ಲ ಎಂದು ಹೇಳಿದ್ದರು. ರಶ್ಮಿಕಾಗೆ ಈಗ 22 ರಕ್ಷಿತ್ ಗೆ 35ರ ಆಸುಪಾಸು. ಎಲ್ಲೋ ಒಂದು ಕಡೆ ಇವರಿಬ್ಬರ ನಡುವಿನ ವಯಸ್ಸಿನ ಅಂತರ ಸಂಬಂಧಕ್ಕೆ ಕುತ್ತು ತಂದಿರಬಹುದಾ.? ಇದೆಲ್ಲವೂ ಇವರಿಬ್ಬರ ಬಗ್ಗೆ ಚರ್ಚೆಯಾಗುತ್ತಿರುವ ಅಂಶಗಳು. ಆದ್ರೆ, ಅಧಿಕೃತ ಮತ್ತು ನಿಖರವಾದ ಕಾರಣ ಅವರೇ ಹೇಳಬೇಕಿದೆ.

Have a great day!
Read more...

English Summary

Rashmika Mandanna and Rakshit Shetty has decided to end their relationship. here is the 6 Reason to why they had break up.