ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಚಿತ್ರರಂಗದ ತಾರೆಯರ ಸಂಬಂಧಕ್ಕೆ ಕೈಗನ್ನಡಿ ಹಿಡಿಯಲು ಸಾಮಾಜಿಕ ಜಾಲತಾಣವೊಂದೇ ಸಾಕು. ಲವ್-ಬ್ರೇಕಪ್ ಇಷ್ಟೇ ಯಾಕೆ ಅನೈತಿಕ ಸಂಬಂಧದ ಕುರುಹು ಈಗ ಹಲವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿಯೇ ಸಿಕ್ಕಿ ಬಿಡುತ್ತೆ. ಯಾರನ್ನು ಯಾರು ಫಾಲೋ ಮಾಡುತ್ತಿದ್ದಾರೆ, ಯಾರ ಪೋಸ್ಟ್‌ಗೆ ಯಾರು ಲೈಕ್ ಒತ್ತಿದ್ದಾರೆ ಎನ್ನುವುದೇ ಬ್ರೇಕಿಂಗ್ ನ್ಯೂಸ್ ಆಗಿರುವ ಕಾಲ ಇದು. ಇದಕ್ಕೆ ಮತ್ತೊಂದು ಉದಾಹರಣೆಯೇ ಮೃಣಾಲ್ ಠಾಕೂರ್ ಮತ್ತು ರಿಷಭ್ ಪಂತ್ ಕುರಿತು ಹಬ್ಬಿರುವ ಸುದ್ದಿ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ ಇದೆ. ಮೊಹಮ್ಮದ್ ಅಜರುದ್ದೀನ್ ಅವರಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ, ಅಜಯ್ ಜಡೇಜಾ ಅವರಿಂದ ಹಿಡಿದು ಕೆ.ಎಲ್.ರಾಹುಲ್‌ವರೆಗೆ.. ಯುವರಾಜ್ ಸಿಂಗ್ ಅವರಿಂದ ಹಿಡಿದು ಜಹೀರ್ ಖಾನ್‌ವರೆಗೆ..
ಹೀಗೆ ಅನೇಕರು ನಾಯಕಿಯರ ಬೆಡಗು-ಭಿನ್ನಾಣಕ್ಕೆ ಮನ ಸೋತಿದ್ದಾರೆ. ಕೆಲವರು ಪ್ರೀತಿಯಲ್ಲಿ ಬಿದ್ದು ಎದ್ದರೆ, ಇನ್ನೂ ಕೆಲವರು ಮದುವೆಯ ಬಂಧನಕ್ಕೊಳಗಾಗಿದ್ದಾರೆ. ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಈ ಸಾಲಿಗೀಗ ಮೃಣಾಲ್ ಠಾಕೂರ್ ಮತ್ತು ರಿಷಭ್ ಪಂತ್ ಕೂಡ ಸೇರಲಿದ್ದಾರೆ ಎನ್ನುವ ಸುದ್ದಿ ಸದ್ಯ ಉತ್ತರದಿಂದ ದಕ್ಷಿಣದವರೆಗೆ ಗುಲ್ಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಮೃಣಾಲ್ ಠಾಕೂರ್ ಅವರಿಗೆ ನಿನ್ನೆ-ಮೊನ್ನೆಯವರೆಗೆ 16,395,125 ಜನ ಫಾಲೋವರ್ಸ್ ಇದ್ದರು. ಇನ್ನು ರಿಶಭ್ ಅವರ ದಿನಚರಿ ನೋಡಲು 16,059,948 ಜನ ಇದ್ದರು. ಇಬ್ಬರು ಯಾವತ್ತಾದರು ಮುಖಾಮುಖಿ ಆಗಿದ್ದರಾ ಗೊತ್ತಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿಯಂತೂ ಅಪರಿಚಿತರಂತೆಯೇ ಇದ್ದರು. ಆದರೆ.. ಏಕಾಏಕಿ ಈಗ ಇನ್‌ಸ್ಟಾದಲ್ಲಿ ಫ್ರೆಂಡ್ಸ್ ಆಗಿದ್ದಾರೆ. ಪರಸ್ಪರ ಫಾಲೋ ಮಾಡುತ್ತಿದ್ದಾರೆ. ವಿಶೇಷ ಅಂದರೆ ರಿಶಭ್ ಪಂತ್ ಕೇವಲ 31ಜನರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಆ ಪೈಕಿ ಮಹಿಳೆಯರಲ್ಲಿ ಒಬ್ಬರು ಅವರ ಸಹೋದರಿಯಾದರೆ ಇನ್ನೊಬ್ಬರು ಮೃಣಾಲ್ ಠಾಕೂರ್. ಇವರ ಈ ಇನ್‌ಸ್ಟಾಗ್ರಾಮ್ ಆಕ್ಟಿವಿಟಿ ಸದ್ಯ ಹಲವು ಪ್ರಶ್ನೆಗಳಿಗೆ ಎಡೆ ಮಾಡಿ ಕೊಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಸಂಬಂಧದ ಕುರಿತು ವ್ಯಾಪಕವಾದ ಚರ್ಚೆ ಕೂಡ ನಡೆಯುತ್ತಿದೆ. ಇಂಟ್ರೆಸ್ಟಿಂಗ್ ಅಂದರೆ ಈ ಚರ್ಚೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ರಿಷಭ್ ಪಂತ್ ಫಾಲೋವರ್ಸ್ ಲಿಸ್ಟ್‌ನಲ್ಲಿ ಸಾರ್ವಜನಿಕವಾಗಿ ಮೃಣಾಲ್ ಕಾಣ್ತಿಲ್ಲ. ಮೃಣಾಲ್ ಫಾಲೋವರ್ಸ್ ಪಟ್ಟಿಯಲ್ಲಿಯೂ ರಿಷಭ್ ಹೆಸರಿಲ್ಲ. ಮೃಣಾಲ್ ಠಾಕೂರ್ ಮತ್ತು ರಿಷಭ್ ಪಂತ್ ಸಂಬಂಧದ ಕುರಿತು ಜನ ಎಷ್ಟರ ಮಟ್ಟಿಗೆ ತಲೆ ಕೆಡಿಸಿಕೊಂಡಿದ್ದಾರೆ ಅಂದರೆ, ಸದ್ಯ ಹಲವರು ಇವರ ನಡುವೆ ಇರುವ ವಯಸ್ಸಿನ ಅಂತರದ ಕುರಿತು ಚರ್ಚೆ ಮಾಡುತ್ತಿದ್ದಾರೆ. ರಿಷಭ್ ಪಂತ್‌ಗೆ ಈಗ 28 ವರ್ಷ ವಯಸ್ಸಾಗಿದ್ರೆ, ಮೃಣಾಲ್ ಠಾಕೂರ್‌ಗೆ 33 ವರ್ಷ. ಇಬ್ಬರ ನಡುವೆ ಸುಮಾರು ಐದು ವರ್ಷ ವಯಸ್ಸಿನ ವ್ಯತ್ಯಾಸವಿದೆ. ಇದೇ ಪಾಯಿಂಟ್ ಇಟ್ಕೊಂಡು ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ಜೋಡಿಯ ಉದಾಹರಣೆ ಕೊಟ್ಟು ಹಲವರು ನೀವು ಕೂಡ ಮದುವೆ ಮಾಡಿಕೊಳ್ಳಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ನಿಮ್ಮ ಇಬ್ಬರದ್ದು ಬೆಸ್ಟ್ ಜೋಡಿಯಾಗುತ್ತೆ ಎನ್ನುತ್ತಿದ್ದಾರೆ. ಮತ್ತೂ ಕೆಲವರು ಯಪ್ಪಾ... ಸುಮ್ಮನೆ ಒಬ್ಬರನ್ನೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡಿದ ತಕ್ಷಣ ಡೇಟಿಂಗ್ ಅಂತ ಹೆಂಗೆ ಹೇಳ್ತೀರಾ..? ಸುಮ್ಮನೆ ಇಬ್ಬರು ಒಳ್ಳೆ ಫ್ರೆಂಡ್ಸ್ ಇರಬಹುದು ಅಂತ ಲಾಜಿಕ್ ಮಾತುಗಳನ್ನಾಡುತ್ತಿದ್ದಾರೆ. ಅಂದ್ಹಾಗೇ ಮೃಣಾಲ್ ಠಾಕೂರ್ ಅವರ ವೈಯಕ್ತಿಕ ಬದುಕು ಹೀಗೆ ಚರ್ಚೆಗೀಡಾಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಕಿರುತೆರೆಯ ಚೆಲುವ ಶರದ್ ತ್ರಿಪಾಠಿ ಜೊತೆ ಮೃಣಾಲ್ ಹೆಸರು ಕೇಳಿ ಬಂದಿತ್ತು. ಆ ನಂತರ ಅರ್ಜಿತ್ ತನೇಜಾ ಜೊತೆ ಮೃಣಾಲ್ ಮದುವೆಯಾಗಲಿದ್ದಾರೆ ಎಂದು ಹೇಳಲಾಯ್ತು. ಸಿದ್ದಾಂತ್ ಚತುರ್ವೇದಿ ಹೆಸರು ಕೂಡ ಕೇಳಿ ಬಂತು. ಕೊನೆಗೆ ಕಾಲಿವುಡ್ ಸ್ಟಾರ್ ರಜನಿಕಾಂತ್ ಮಾಜಿ ಅಳಿಯ ಧನುಷ್ ಜೊತೆ ಕೂಡ ಸಂಬಂಧ ಕಲ್ಪಿಸಲಾಯ್ತು. ಈಗ ರಿಷಭ್ ಪಂತ್ ಸರದಿ. ಒಟ್ನಲ್ಲಿ ಸದ್ಯ ಮೃಣಾಲ್ ಠಾಕೂರ್ ಮತ್ತು ರಿಷಭ್ ಪಂತ್ ಸಂಬಂಧ ಚರ್ಚೆಯಲ್ಲಿದೆ. ಇದು ನಾರ್ಮಲ್ ಇನ್‌ಸ್ಟಾಗ್ರಾಮ್ ಆಕ್ಟಿವಿಟಿನಾ ಅಥವಾ ನಿಜಕ್ಕೂ ಹೊಸ ಪ್ರೇಮಕಥೆಯೊಂದರ ಆರಂಭನಾ..? ಎನ್ನುವುದನ್ನು ಕಾದು ನೋಡಬೇಕಿದೆ. ಇಬ್ಬರ ಸಂಬಂಧದ ಸುತ್ತ ಕುತೂಹಲದ ಹುತ್ತ
ಇಬ್ಬರ ನಡುವೆ ಇರುವ ವಯಸ್ಸಿನ ಅಂತರದ ಚರ್ಚೆ
ಮೃಣಾಲ್ ಠಾಕೂರ್ ಡೇಟಿಂಗ್ ಹಿಸ್ಟರಿ
More Articles