ಕಲ್ಪನೆಗೆ ನಿಲುಕದ ಉದ್ಯಮ ಹಾಲಿವುಡ್. ಬೆಳ್ಳಿತೆರೆಯ ಮೇಲೆ ಅದ್ಭುತ ಸೃಷ್ಟಿಸುವ ಕಲೆ ಇವರಿಗೆ ಚೆನ್ನಾಗಿಯೇ ಕರಗತವಾಗಿರುತ್ತೆ. ಅದರಲ್ಲಿಯೂ ಈಗ ತಂತ್ರಜ್ಞಾನ ಇಂದು ನಮ್ಮ ಜೀವನವನ್ನು ಆವರಿಸಿಕೊಂಡಿದೆ. ಅದನ್ನು ಹೇಗೆ ಬಳಸಬೇಕೆಂಬುದೇ ಜಾಣತನ. ಈ ಜಾಣತನವನ್ನು ಹೊಂದಿರುವ ಹಾಲಿವುಡ್ ಮಂದಿ ತಮ್ಮ ಪ್ರಯತ್ನ ಮತ್ತು ಪ್ರಯೋಗಗಳ ಮೂಲಕ ಹಲವರನ್ನು ನಿಬ್ಬೇರಗಾಗಿಸುತ್ತಲೇ ಬಂದಿದ್ದಾರೆ.

Advertisement

ಆದರೆ, ಕಾಲ ಎಷ್ಟೇ ಬದಲಾದರು, ತಂತ್ರಜ್ಞಾನ ಎಷ್ಟೇ ಮುಂದುವರೆದರು ಕೂಡ ಇಲ್ಲಿ ಕೆಲವರು ತಂತ್ರಜ್ಞಾನವೂ ನೀಡದ ಅನುಭವವನ್ನು ತಮ್ಮ ಕೈಚಳಕ, ಕ್ರೀಯಾಶೀಲತೆ, ಬುದ್ದಿವಂತಿಕೆಯಿಂದ ಚಿತ್ರಮಂದಿರಗಳಲ್ಲಿ ನೀಡುತ್ತಾರೆ. ಗ್ರಾಫಿಕ್ಸ್ ಮೇಲೆ ಹೆಚ್ಚು ಅವಲಂಬಿತರಾಗದೇ, ಪ್ರೇಕ್ಷಕರಿಗೆ ನೈಜ ದೃಶ್ಯಾನುಭವ ನೀಡಬೇಕೆಂದು ಹಠಕ್ಕೆ ಬಿದ್ದವರಂತೆ ಕೆಲಸ ಮಾಡುತ್ತಾರೆ. ಆ ಪೈಕಿ ಜಗದ್ವಿಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಪ್ರಮುಖರು.

Advertisement

ಹೌದು, ಕ್ರಿಸ್ಟೋಫರ್ ನೋಲನ್. ಸೈನ್ಸ್ ಫಿಕ್ಷನ್ ಕಥೆಯಾಧಾರಿತ ಚಿತ್ರಗಳ ಸರದಾರ. ಬ್ರಿಟನ್ ಮೂಲದ ಅಮೆರಿಕನ್ ಆಗಿರುವ ನೋಲನ್ ಇಲ್ಲಿಯವರೆಗೆ 12 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನ ಅನುಭವ ನೀಡುವ ಚಿತ್ರಗಳು. ವಿಶ್ವವ್ಯಾಪಿ ಇವರ ಕ್ರೇಜ್ ಹೇಗಿದೆ ಅಂದರೆ ಮಾಧ್ಯಮಗಳ ವರದಿಯ ಪ್ರಕಾರ ಇವರ ಹಿಂದಿನ ಎಲ್ಲ ಚಿತ್ರಗಳ ಗಳಿಕೆ ಕೂಡಿಸಿದರೆ 157 ಸಾವಿರ ಕೋಟಿಯಾಗುತ್ತೆ.

ಸಿನಿಮಾ ನಿರ್ಮಾಣದ ವಿಚಾರದಲ್ಲಿ ಇವತ್ತಿಗೂ ಕೂಡ ಸಂಪ್ರದಾಯವಾದಿ ಆಗಿಯೇ ಉಳಿದಿರುವ ಕ್ರಿಸ್ಟೋಫರ್ ನೋಲನ್, ತಮ್ಮ ಚಿತ್ರದಲ್ಲಿನ ದೃಶ್ಯಗಳನ್ನು ಸಾಧ್ಯವಾದಷ್ಟು ಸ್ವಾಭಾವಿಕವಾಗಿ ಚಿತ್ರೀಕರಿಸಬೇಕು ಎಂಬ ನಿಲುವಿನವರು. ವಿಶೇಷ ಅಂದರೆ ಇವರ ಈ ನಿಲುವಿನಲ್ಲಿಯೇ ಇವರ ಗೆಲುವಿನ ರಹಸ್ಯವೂ ಅಡಗಿದೆ.

Advertisement

ಇಂಥಾ ಕ್ರಿಸ್ಟೋಫರ್ ನೋಲನ್ ಈಗ ತಮ್ಮ 13ನೇ ಚಿತ್ರದ ಜೊತೆ ಪ್ರೇಕ್ಷಕರೆದುರು ಬರುತ್ತಿದ್ದಾರೆ. ಈಗಾಗಲೇ ಹಲವರಿಗೆ ಗೊತ್ತಿರುವಂತೆ ಆ ಚಿತ್ರದ ಹೆಸರು ''ದಿ ಒಡಿಸ್ಸಿ''. ಇದೇ ಜುಲೈ 17ರಂದು ವಿಶ್ವದೆಲ್ಲೆಡೆ ಈ ಚಿತ್ರ ತೆರೆಗೆ ಅಪ್ಪಳಿಸಲಿದೆ. ಇನ್ನು '' ದಿ ಒಡಿಸ್ಸಿ'' ನೋಡುವ ಆತುತ ಕಾತುರ ಹಲವಾರು ಭಾರತೀಯರಲ್ಲಿಯೂ ಇದೆ. ನಿಮ್ಮಲ್ಲಿಯೂ ಈ ಚಿತ್ರ ನೋಡುವ ಬಯಕೆ ಇದ್ದರೆ, ಸಿನಿಮಾ ನೋಡುವ ಮುನ್ನ ನೀವು ತಿಳಿದುಕೊಳ್ಳಬೇಕಾದ ಆರು ಪ್ರಮುಖ ಅಂಶಗಳು ಇಲ್ಲಿವೆ.

ಏನಿದು '' ದಿ ಒಡಿಸ್ಸಿ'' ?

ಟ್ರೋಜನ್ ಯುದ್ಧದ ನಂತರ ಇಥಾಕಾದ ರಾಜ ಒಡಿಸ್ಸಿಯಸ್ ತನ್ನ ಮನೆಗೆ ಮರಳುತ್ತಾನೆ. ಆದರೆ, ಈ ಪ್ರಯಾಣಕ್ಕೆ ತಗಲುವುದು ಒಂದೆರಡು ವರ್ಷ ಅಲ್ಲ. ಬದಲಿಗೆ ಹತ್ತು ವರ್ಷ. ಹತ್ತು ವರ್ಷದ ಕಲ್ಲು-ಮುಳ್ಳಿನ ಈ ಹಾದಿಯಲ್ಲಿ ಒಡಿಸ್ಸಿಯಸ್‌ಗೆ ನರರಾಕ್ಷಸರು ಎದುರಾಗುತ್ತಾರೆ. ಜಾದೂಗಾರ್ತಿರು ಕೂಡ ಸಿಗುತ್ತಾರೆ. ಮತ್ತೊಂದು ಕಡೆ ಒಡಿಸ್ಸಿಯಸ್ ಪತ್ನಿ ಪೆನೆಲೋಪ್‌ನ ಮದುವೆಯಾಗಲು ನೂರಾರು ಜನ ತುದಿಗಾಲಿನಲ್ಲಿ ಕಾಯುತ್ತಿರುತ್ತಾರೆ.

Advertisement

'' ದಿ ಒಡಿಸ್ಸಿ'' ನೈಜ ಕಥೆನಾ ?

ಇತಿಹಾಸಕಾರರ ಪ್ರಕಾರ ಒಡಿಸ್ಸಿಯಸ್ ಎಂಬ ಪಾತ್ರ ಸಂಪೂರ್ಣ ಕಾಲ್ಪನಿಕವಾದದ್ದು. ಆದರೆ..13ನೇ ಶತಮಾನದಲ್ಲಿ ವ್ಯಾಪಾರ ಮತ್ತು ರಾಜಕೀಯದ ಹಿನ್ನೆಲೆ ಟ್ರೋಜನ್ ಯುದ್ಧ ನಡೆದಿರಬಹುದು ಎನ್ನುವ ಶಂಕೆ ಹಲವರು ವ್ಯಕ್ತಪಡಿಸುತ್ತಾರೆ. ಇನ್ನು ಬೃಹತಾಕಾರದ ಕುದುರೆಯ ಮರದಲ್ಲಿ(Trojan Horse)ಸೈನಿಕರು ಅಡಗಿ ಕುಂತಿದ್ದರು ಎನ್ನುವ ವಾದಕ್ಕೂ ಕೂಡ ಯಾವುದೇ ಪುರಾವೆ ಇಲ್ಲ.


ಚಿತ್ರದ ಪಾತ್ರವರ್ಗದಲ್ಲಿ ಯಾರೆಲ್ಲಾ ಇದ್ದಾರೆ..?

ಮ್ಯಾಟ್ ಡಾಮನ್ (ಒಡಿಸ್ಸಿಯಸ್), ಆ್ಯನ್ ಹ್ಯಾಥ್‌ವೇ (ಪೆನೆಲೋಪ್), ಟಾಮ್ ಹಾಲೆಂಡ್ (ಮಗ ಟೆಲಿಮ್ಯಾಕಸ್) ಆಗಿ ನಟಿಸಿದ್ದಾರೆ. ಜೊತೆಗೆ ರಾಬರ್ಟ್ ಪ್ಯಾಟಿನ್ಸನ್, ಲುಪಿತಾ ನ್ಯಾಂಗೋ ಮತ್ತು ಝೇಂಡೆಯಾ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ರ್ಯಾಪರ್ ಟ್ರಾವಿಸ್ ಸ್ಕಾಟ್ ಕೂಡ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರಲ್ಲದೆ ಚಿತ್ರದಲ್ಲಿ ದೊಡ್ಡ ತಾರಾಬಳಗ ಇದೆ.

Advertisement

''ದಿ ಒಡಿಸ್ಸಿ''ಯಲ್ಲಿ ರ್ಯಾಪರ್ ಟ್ರಾವಿಸ್ ಸ್ಕಾಟ್‌ಗೇನು ಕೆಲಸ ?

ಹಿಂದಿನ ಕಾಲದಲ್ಲಿ ಈ ಕಥೆ ಹಾಡಿನ ಮೂಲಕ ಜನಜನಿತವಾಗಿತ್ತು. ಒಬ್ಬರಿಂದ ಒಬ್ಬರಿಗೆ ಹಾಡಿನ ಮೂಲಕವೇ ಈ ಕಥೆ ತಲುಪುತ್ತಿತ್ತು. ಈ ಹಿನ್ನೆಲೆ ತಮ್ಮ ಚಿತ್ರದಲ್ಲಿಯೂ ಒಬ್ಬ ಹಾಡುಗಾರ ಇರಬೇಕೆಂಬ ಉದ್ದೇಶದಿಂದ ಕ್ರಿಸ್ಟೋಫರ್ ನೋಲನ್ ರ್ಯಾಪರ್ ಟ್ರಾವಿಸ್ ಸ್ಕಾಟ್‌ನ ಆಯ್ಕೆ ಮಾಡಿಕೊಂಡಿದ್ದಾರಂತೆ.

ಸಿನಿಮಾದ ಅವಧಿ ಎಷ್ಟು ?

ಹೊಮರ್ ಎಂಬ ಕವಿ ಈ ಮಹಾಕಾವ್ಯದ ಕಥೆಯಲ್ಲಿ 24 ಭಾಗಗಳಿವೆ. ಈ 24 ಭಾಗಗಳನ್ನು ಸುಮಾರು 3 ಗಂಟೆಯ ಚಿತ್ರರೂಪಕವನ್ನಾಗಿಸಿದ್ದಾರೆ ಕ್ರಿಸ್ಟೋಫರ್ ನೋಲನ್. ವಿಶೇಷ ಅಂದರೆ ಇದು ಇವರ ವೃತ್ತಿ ಬದುಕಿನಲ್ಲಿ ಅತೀ ಹೆಚ್ಚು ಅವಧಿ ಇರುವ ಎರಡನೇ ಸಿನಿಮಾ.

Advertisement

''ದಿ ಒಡಿಸ್ಸಿ''ಕುರಿತು ಯಾವ ಪುಸ್ತಕ ಓದಬಹುದು ?

2017ರಲ್ಲಿ ''ದಿ ಒಡಿಸ್ಸಿ'' ಕಥೆಯನ್ನು ಎಮಿಲಿ ವಿಲ್ಸನ್ ಇಂದಿನ ಜೆನ್‌ಜೀಗೂ ಅರ್ಥವಾಗುವಂತೆ ಅನುವಾದ ಮಾಡಿದ್ದಾರೆ. ಕ್ರಿಸ್ಟೋಫರ್ ನೋಲನ್ ಈ ಚಿತ್ರ ಮಾಡಿದ್ದು ಈ ಪುಸ್ತಕದ ಆಧಾರದ ಮೇಲೆಯೇ. ಇದನ್ನು ಹೊರತು ಪಡಿಸಿದರೆ 1965ರಲ್ಲಿ ರಿಚ್ಮಂಡ್ ಲ್ಯಾಟಿಮೋರ್ ಕೂಡ ಈ ವಿಚಾರಕ್ಕೆ ಸಂಬಂಧಿಸಿದ ಪುಸ್ತಕ ಬರೆದಿದ್ದರು. ಆಸಕ್ತರು ಈ ಬುಕ್ ಕೂಡ ಓದಬಹುದು.